ಭಾನುವಾರ, ನವೆಂಬರ್ 27, 2022
26 °C

ಗರಿ ಗರಿ ಕುರುಕಲು: ಅವಲಕ್ಕಿ ಕಟ್ಲೆಟ್

ಹಂಸಿಣಿ ಎಸ್ ಮುಲ್ಕಿ Updated:

ಅಕ್ಷರ ಗಾತ್ರ : | |

ಅವಲಕ್ಕಿ ಕಟ್ಲೆಟ್

ಬೇಕಾಗುವ ಸಾಮಗ್ರಿಗಳು:

ಒಂದು ಕಪ್‌ ತೆಳು ಅವಲಕ್ಕಿ, ಎರಡು ಬೇಯಿಸಿದ ಆಲೂಗಡ್ಡೆ, ತಲಾ ಕಾಲು ಚಮಚ ಅರಿಶಿನ, ಖಾರದ ಪುಡಿ, ಗರಂ ಮಸಾಲ, ಆಮ್ ಚೂರ್, ಚಾಟ್ ಮಸಾಲ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕಾಳು ಮೆಣಸಿನ ಪುಡಿ, 3 ಚಮಚ ಕಾರ್ನ್‌ ಫ್ಲೋರ್‌, 3 ಚಮಚ ಬ್ರೆಡ್‌ ಪುಡಿ, ಎರಡು ಚಮಚ ಕೊತ್ತಂಬರಿ ಸೊಪ್ಪು, ಒಂದು ಚಮಚ ಮೈದಾ ಹಿಟ್ಟು, ಅರ್ಧ ಲೀಟರ್‌ ಎಣ್ಣೆ, ಉಪ್ಪು ರುಚಿಗೆ ತಕ್ಕಷ್ಟು.  
 ತಯಾರಿಸುವ ವಿಧಾನ: ತೆಳು ಅವಲಕ್ಕಿಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ತೊಳೆದ ತಕ್ಷಣವೇ ಒಂದು ಅಗಲವಾದ ಪಾತ್ರೆಗೆ ಹಾಕಿಕೊಳ್ಳಬೇಕು. ಅದೇ ಪಾತ್ರೆಗೆ ಎರಡು ಬೇಯಿಸಿದ ಆಲೂಗಡ್ಡೆ, ಅರಿಶಿನ, ಖಾರದ ಪುಡಿ, ಗರಂ ಮಸಾಲ, ಆಮ್ ಚೂರ್ ಪುಡಿ (ಮಾವಿನಹಣ್ಣಿನ ಪುಡಿ), ಚಾಟ್ ಮಸಾಲ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಕಾಳು ಮೆಣಸಿನ ಪುಡಿ ಹಾಕಬೇಕು. ನೀರು ಹಾಕದೇ ಚಪಾತಿ ಹಿಟ್ಟಿನ ಹದಕ್ಕಿಂತ ಕಡಿಮೆ ಹದದಲ್ಲಿ ಕಲೆಸಿಕೊಳ್ಳಬೇಕು.  ಮತ್ತೊಂದು ಪಾತ್ರೆಗೆ  ಕಾರ್ನ್ ಫ್ಲೋರ್,   ಮೈದಾಹಿಟ್ಟು,   ಮೆಣಸಿನ ಪುಡಿ, ಉಪ್ಪು, ನೀರು ಹಾಕಿ ನೀರು ದೋಸೆ ಹಿಟ್ಟಿನ ಹದಕ್ಕೆ ಮಿಶ್ರಣ ಮಾಡಿಕೊಳ್ಳಬೇಕು. ಇದೇ ಮಿಶ್ರಣಕ್ಕೆ ಈ ಹಿಂದೆ ಮಾಡಿದ್ದ ಮಿಶ್ರಣವನ್ನು ದಪ್ಪವಾಗಿ ಚಪ್ಪಟೆ ಆಕಾರದಲ್ಲಿ ಮಾಡಿ ಹಾಕಬೇಕು. ತಕ್ಷಣವೇ ತೆಗೆದು ಬ್ರೆಡ್ ಪುಡಿಯೊಳಗೆ ಅದ್ದಿ ಸ್ವಲ್ಪವೇ ಎಣ್ಣೆ ಹಾಕಿಕೊಂಡು ಬಂಗಾರದ ಬಣ್ಣ ಬರುವವರೆಗೆ ಕರಿಯಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು