ಕೆಂಪಕ್ಕಿ ಹಪ್ಪಳ

ಬೇಕಾಗುವ ಸಾಮಗ್ರಿ:ಕೆಂಪಕ್ಕಿ 2 ಕಪ್, ರಾಗಿ ಹಿಟ್ಟು 1/4 ಕಪ್, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಕೆಂಪಕ್ಕಿಯನ್ನು 4-5 ಗಂಟೆ ನೆನೆಸಿ ರುಬ್ಬಿ, 6 ಲೋಟ ನೀರು ರಾಗಿಹಿಟ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಸಣ್ಣ ಉರಿಯಲ್ಲಿ ಬೇಯಿಸಿ. ಬೆಂದ ದ್ರಾವಣವನ್ನು ಸೌಟಿನಲ್ಲಿ ಪ್ಲಾಸ್ಟಿಕ್ ಹಾಳೆಯ ಮೇಲೆ ಸಮವಾಗಿ ಹಪ್ಪಳ ಹರಡಿ ಬಿಸಿಲಿನಲ್ಲಿ ಒಣಗಿಸಿ.

ಸಬ್ಬಕ್ಕಿ ಖಾರದ ಹಪ್ಪಳ

ಬೇಕಾಗುವ ಸಾಮಗ್ರಿ: ಸಬ್ಬಕ್ಕಿ 1 ಕಪ್, ಒಣ ಮೆಣಸಿನಕಾಯಿ 4-5, ಜೀರಿಗೆ 1 ಚಮಚ ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಸಬ್ಬಕ್ಕಿಯನ್ನು 5-6 ಗಂಟೆ ನೆನೆಸಿ. ಒಣಮೆಣಸಿನಕಾಯಿ, ಜೀರಿಗೆ ಪುಡಿ ಮಾಡಿಕೊಳ್ಳಿ. ನೆನೆದ ಸಬ್ಬಕ್ಕಿಗೆ, ಮಸಾಲೆ ಪುಡಿ, ಉಪ್ಪು, 6 ಲೋಟ ನೀರು ಸೇರಿಸಿ ಸಣ್ಣ ಉರಿಯಲ್ಲಿಟ್ಟು ಮಿಶ್ರಣ ತಳಹಿಡಿಯದಂತೆ ಕೈಯಾಡುತ್ತ ಗಂಜಿಯ ಹದಕ್ಕೆ ಬೇಯಿಸಿ. ಬಿಸಿಯಿರುವಾಗಲೇ ಪ್ಲಾಸ್ಟಿಕ್ ಹಾಳೆಯ ಮೇಲೆ ಹಪ್ಪಳ ಹರಡಿ ಬಿಸಿಲಲ್ಲಿ ನಾಲ್ಕೈದು ದಿನ ಒಣಗಿಸಿ.

ಅವಲಕ್ಕಿ ಹಪ್ಪಳ

ಬೇಕಾಗುವ ಸಾಮಗ್ರಿ: ಮೀಡಿಯಂ ಅವಲಕ್ಕಿ 1 ಕಪ್, ಸಬ್ಬಕ್ಕಿ ಪುಡಿ 1/2 ಕಪ್, ಜೀರಿಗೆ 1 ಚಮಚ, ಇಂಗು 1/2 ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಅವಲಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಸಬ್ಬಕ್ಕಿ ಪುಡಿಯನ್ನು ಬೆರೆಸಿ ಸ್ವಲ್ಪ ನೀರು ಹಾಕಿ ಅರೆದುಕೊಳ್ಳಿ. ದಪ್ಪ ತಳದ ಪಾತ್ರೆಯಲ್ಲಿ ಅರೆದ ಮಿಶ್ರಣ ಜೀರಿಗೆ, ಇಂಗು, ಉಪ್ಪು ,6 ಕಪ್ ನೀರು ಬೆರೆಸಿ ಬೇಯಿಸಿ. ಬಿಸಿಯಿದ್ದಾಗಲೇ ಪ್ಲಾಸ್ಟಿಕ್ ಹಳೆಯ ಮೇಲೆ ಸೌಟಿನಿಂದ ತೆಳ್ಳಗೆ ಹರಡಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ.

ಹಬೆ ಹಪ್ಪಳ

ಬೇಕಾಗುವ ಸಾಮಗ್ರಿ: ಅಕ್ಕಿ 1 ಕಪ್, ಜೀರಿಗೆ 1 ಚಮಚ, ರುಚಿಗೆ ತಕ್ಕಸ್ಟು ಉಪ್ಪು.

ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು ನೆನೆಸಿ ಗಟ್ಟಿಯಾಗಿ ರುಬ್ಬಿಕೊಂಡು 5-6 ಗಂಟೆ ಹುದುಗಲು ಬಿಡಿ. ಹುದುಗಿದ ಹಿಟ್ಟಿಗೆ ಜೀರಿಗೆ ಉಪ್ಪು, ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಮಿಶ್ರಣ ಮಾಡಿಕೊಳ್ಳಿ. ನಂತರ ಸಣ್ಣ ಸಣ್ಣ ತಟ್ಟೆಗಳಲ್ಲಿ ತೆಳ್ಳಗೆ ಹುಯ್ದು ಒಂದು ನಿಮಿಷ ಹಬೆಯಲ್ಲಿ ಬೇಯಿಸಿ ತೆಗೆದು ಮನೆಯೊಳಗೇ ಫ್ಯಾನ್ ಗಾಳಿಯಲ್ಲಿ ಒಣಗಿಸಿ. ಇದಕ್ಕೆ ನೇರ ಬಿಸಿಲಿನ ಅವಶ್ಯಕತೆ ಇರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.