ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಳಪಾಕ | ಅಲಲೆ ಕಳಲೆ ರುಚಿ!

Published 29 ಜುಲೈ 2023, 1:19 IST
Last Updated 29 ಜುಲೈ 2023, 1:19 IST
ಅಕ್ಷರ ಗಾತ್ರ

ಕರಾವಳಿ, ಮಲೆನಾಡು ಭಾಗಗಳಲ್ಲಿ ಮಳೆಗಾಲದಲ್ಲಿ ಕಳಲೆಯ(ಎಳೆಬಿದಿರು) ಖಾದ್ಯಗಳದ್ದೇ ಸುದ್ದಿ. ಇದರಿಂದ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸುತ್ತಾರೆ. ಅದರಲ್ಲಿ ಕೆಲವು ಖಾದ್ಯಗಳ ರೆಸಿಪಿಗಳನ್ನು ಪವಿತ್ರಾ ಭಟ್ ಇಲ್ಲಿ ಪರಿಚಯಿಸಿದ್ದಾರೆ.  

ಕಳಲೆ ಬೋಂಡ
ಕಳಲೆ ಬೋಂಡ

ಬೋಂಡಾ

ಬೇಕಾಗುವ ಸಾಮಗ್ರಿ:

ಸಣ್ಣ ತುಂಡುಗಳಾಗಿ ಕತ್ತರಿಸಿದ ಕಳಲೆ- 2 ಕಪ್‌

ಕಡಲೆಹಿಟ್ಟು ಒಂದು ಕಪ್‌,

ಓಂಕಾಳು 1 ಚಮಚ

ಕೆಂಪುಮೆಣಸಿನ ಪುಡಿ ½ ಚಮಚ

ಉಪ್ಪು ರುಚಿಗೆ ತಕ್ಕಷ್ಟು

ಸೋಡಾ- ಒಂದು ಚಿಟಿಕೆ

ಮಾಡುವ ವಿಧಾನ

ಕಡಲೆಹಿಟ್ಟಿಗೆ ಓಂಕಾಳು, ಕೆಂಪುಮೆಣಸಿನ ಪುಡಿ, ಉಪ್ಪು, ಕಳಲೆ ಚೂರುಗಳನ್ನು ಸೇರಿಸಿ ನೀರನ್ನು ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ. ಚಿಟಿಕೆ ಸೋಡಾ ಸೇರಿಸಿ ಮಿಶ್ರಣ ಕೊಂಚ ಗಟ್ಟಿಯಾಗಿರುವಂತೆ ಬೆರೆಸಿಟ್ಟುಕೊಳ್ಳಿ. ಅದನ್ನು ಅರ್ಧಗಂಟೆ ಹಾಗೆಯೇ ಇಡಿ. ಬಾಣೆಲೆಗೆ ಎಣ್ಣೆ ಹಾಕಿ ಚೆನ್ನಾಗಿ ಕಾಯಿಸಿಕೊಳ್ಳಿ. ನಂತರ ಚಿಕ್ಕ ಚಿಕ್ಕ ಉಂಡೆಗಳಾಗಿ ಕಾದ ಎಣ್ಣೆಗೆ ಹಾಕಿ, ಕೆಂಬಣ್ಣ ಬರುವವರೆಗೆ ಕರಿದು ತೆಗೆದರೆ ಬಿಸಿ ಬಿಸಿ ಕಳಲೆ ಬೋಡಾ ಸವಿಯಲು ಸಿದ್ಧ.

ಕಳಲೆ ಮಜ್ಜಿಗೆ ಬಜ್ಜಿ
ಕಳಲೆ ಮಜ್ಜಿಗೆ ಬಜ್ಜಿ

ಕಳಲೆ ಮಜ್ಜಿಗೆ ಬಜ್ಜಿ

ಬೇಕಾಗುವ ಸಾಮಗ್ರಿ

ಒಂದು ಕಪ್‌ ಕತ್ತರಿಸಿದ ಕಳಲೆ

ಎರಡು ಹಸಿಮೆಣಸಿನ ಕಾಯಿ

ತೆಂಗಿನ ತುರಿ ಒಂದು ಕಪ್‌

ಒಗ್ಗರಣೆಗೆ- ಎಣ್ಣೆ, ಸಾಸಿವೆ ಅರ್ಧ ಚಮಚ, ಚಿಟಿಕೆ ಇಂಗು, ಉದ್ದಿನ ಬೇಳೆ ಒಂದು ಚಮಚ

ಮೊಸರು ಒಂದು ಕಪ್‌

ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ
ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಉದ್ದಿನ ಬೇಳೆ, ಹಸಿ ಮೆಣಸಿನ ಕಾಯಿ, ಸಾಸಿವೆ, ಇಂಗು ಹಾಕಿ ಒಗ್ಗರಣೆ ಮಾಡಿ. ಅದಕ್ಕೆ ಹೆಚ್ಚಿದ ಕಳಲೆಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಕಾಯಿತುರಿಗೆ ಒಂದು ಹಸಿಮೆಣಸಿನ ಕಾಯಿ ಹಾಕಿ ರುಬ್ಬಿಕೊಂಡು ಮಿಶ್ರಣ ತಣ್ಣಗಾದ ಮೇಲೆ ಸೇರಿಸಿ. ನಂತರ ಮೊಸರು ಸೇರಿಸಿದರೆ ರುಚಿಯಾದ ಕಳಲೆ ಮಜ್ಜಿಗೆ ಗೊಜ್ಜು ತಯಾರು.

ಕಳಲೆ ಪಲಾವ್‌
ಕಳಲೆ ಪಲಾವ್‌

ಕಳಲೆ ಪಲಾವ್‌

ಬೇಕಾಗುವ ಸಾಮಗ್ರಿ

ದೊಡ್ಡದಾಗಿ ಕತ್ತರಿಸಿದ ಕಳಲೆ ಒಂದು ಬಟ್ಟಲು

ಈರುಳ್ಳಿ, ಟೊಮಾಟೊ ತಲಾ ಒಂದು

ಶುಂಠಿ, ಬೆಳ್ಳುಳ್ಳಿ ಪೇಸ್ಟ್‌

ಕೊತ್ತಂಬರಿಸೊಪ್ಪು, ಕರಿಬೇವಿನ ಎಲೆ

ಒಗ್ಗರಣೆಗೆ- ಎಣ್ಣೆ, ಚಿಟಿಕೆ ಜೀರಿಗೆ, ಸಾಸಿವೆ, ಪಲಾವ್‌ ಎಲೆ, ಒಂದು ಚಮಚ ಸೋಂಪಿನ ಕಾಳು, ಚಕ್ಕೆ, ಅರಿಶಿನ ಒಂದು ಚಮಚ, ಅಚ್ಚ ಖಾರದ ಪುಡಿ 2 ಚಮಚ

ರುಚಿಗೆ ತಕ್ಕಷ್ಟು ಉಪ್ಪು

ಹುಣಸೆ ರಸ ಎರಡು ಚಮಚ

ಅಕ್ಕಿ 2 ಕಪ್‌

ಮಾಡುವ ವಿಧಾನ

ಮೊದಲಿಗೆ ಕುಕ್ಕರ್‌ ಪಾತ್ರೆಗೆ ಎಣ್ಣೆ ಹಾಕಿ ಚಿಟಿಕೆ ಜೀರಿಗೆ, ಸಾಸಿವೆ, ಪಲಾವ್‌ ಎಲೆ, ಒಂದು ಚಮಚ ಸೋಂಪಿನ ಕಾಳು, ಚಕ್ಕೆ, ಅರಿಶಿನ, ಸಣ್ಣಗೆ ಕತ್ತರಿಸಿದ ಈರುಳ್ಳಿ, ಟೊಮಾಟೊ, ಶುಂಠಿ, ಬೆಳ್ಳುಳ್ಳಿ ಪೇಸ್ಟ್‌,ಕರಿಬೇವಿನ ಎಲೆ, ಅಚ್ಚ ಖಾರದ ಪುಡಿ ಹಾಕಿ ಹುರಿದುಕೊಳ್ಳಿ ನಂತರ ಅದಕ್ಕೆ ಕತ್ತರಿಸಿಟ್ಟುಕೊಂಡ ಕಳಲೆ ಹಾಕಿ ಉಪ್ಪು, ಹುಣಸೆ ರಸ, ಚಿಟಿಕೆ ಸಕ್ಕರೆ (ಅಗತ್ಯವಿದ್ದರೆ) ಹಾಕಿ ತೊಳೆದಿಟ್ಟ ಅಕ್ಕಿಯನ್ನು ಸೇರಿಸಿ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕುಕ್ಕರ್‌ 2 ವಿಶಲ್‌ ಆದ ಮೇಲೆ ಗ್ಯಾಸ್‌ ಆಫ್‌ ಮಾಡಿ. ರುಚಿಯಾದ ಕಳಲೆ ಪಲಾವ್‌ ತಿನ್ನಬಹುದು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT