ಪತ್ರೊಡೆ

ಬೇಕಾಗುವ ಸಾಮಗ್ರಿಗಳು: ಅಕ್ಕಿ – 1 ಕಪ್, ತಗಟೆ ಸೊಪ್ಪು – 3 ಕಪ್, ಜೀರಿಗೆ – 1/2 ಚಮಚ, ಕಡಲೆಬೇಳೆ – 1 ಚಮಚ, ಉದ್ದಿನಬೇಳೆ – 1 ಚಮಚ, ಧನಿಯಾ – 3 ಚಮಚ, ಒಣಮೆಣಸು – 10, ಹುಣಸೆಹಣ್ಣು – ನೆಲ್ಲಿಕಾಯಿ ಗಾತ್ರದ್ದು, ಬೆಲ್ಲ – 1/2 ಚಮಚ, ಉಪ್ಪು – ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ:ತಗಟೆ ಎಲೆಗಳನ್ನು ಬಿಡಿಸಿ, ತೊಳೆದು ಹೆಚ್ಚಿಟ್ಟುಕೊಳ್ಳಿ. ಮೊದಲು ಬಾಣಲೆಯಲ್ಲಿ ಎಣ್ಣೆ ಹಾಕದೇ ಅಕ್ಕಿ ಹುರಿಯಿರಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಮೇಲೆ ಹೇಳಿದ ಎಲ್ಲ ಮಸಾಲೆ ಪದಾರ್ಥಗಳನ್ನು ಕ್ರಮವಾಗಿ ಹುರಿದುಕೊಳ್ಳಿ. ತಣ್ಣಗಾದ ಮೇಲೆ ಅಕ್ಕಿ, ಮಸಾಲೆ, ಹುಣಸೆಹಣ್ಣು, ಉಪ್ಪು, ಬೆಲ್ಲ ಸೇರಿಸಿ ತರಿ-ತರಿಯಾಗಿ ರುಬ್ಬಿ. ಈಗ ಸೊಪ್ಪಿಗೆ ರುಬ್ಬಿದ ಮಿಶ್ರಣ ಸೇರಿಸಿ. ಕುಕ್ಕರ್ ಅಥವಾ ಇಡ್ಲಿ ಪಾತ್ರೆಯಲ್ಲಿ ಬಾಳೆಲೆಯಲ್ಲಿ ಹಾಕಿ ಉಗಿಯಲ್ಲಿ ಬೇಯಿಸಿ. ಕುಕ್ಕರಿನಲ್ಲಾದರೆ ವಿಷಲ್ ತೆಗೆದು 15 ನಿಮಿಷ ಬೇಯಿಸಿ. ಉಗಿಯಲ್ಲಿ ಬೆಂದ ಮಿಶ್ರಣವನ್ನು ಪುಡಿ ಮಾಡಿ. ಎಣ್ಣೆ ಅಥವಾ ತುಪ್ಪದಲ್ಲಿ ಫ್ರೈ ಮಾಡಿ. ರುಚಿ-ಶುಚಿಯಾದ ಸ್ಪೆಷಲ್ ಪತ್ರೊಡೆ ನಿಮಗಾಗಿ.

ಪಲ್ಯ

ಬೇಕಾಗುವ ಸಾಮಗ್ರಿಗಳು: ತಗಟೆ ಸೊಪ್ಪು – 1 ಕಪ್, ತೆಂಗಿನತುರಿ – 1/4 ಕಪ್,
ಈರುಳ್ಳಿ – 1, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ – 1 ಚಮಚ, ಉದ್ದಿನಬೇಳೆ – 1/2 ಚಮಚ, ಕಡಲೆಬೇಳೆ – 1/2 ಚಮಚ, ಸಾಸಿವೆ – 1/2 ಚಮಚ, ಒಣಮೆಣಸು – 2, ಕರಿಬೇವು – 4 ಎಲೆ, ಅರಿಸಿನಪುಡಿ – 1 ಚಿಟಿಕೆ.

ತಯಾರಿಸುವ ವಿಧಾನ:ಮೊದಲಿಗೆ ತಗಟೆ ಸೊಪ್ಪು ತೊಳೆದು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ.
ಬಾಣಲೆಗೆ ಎಣ್ಣೆ ಹಾಕಿ ಒಗ್ಗರಣೆ ಮಾಡಿ. ತಗಟೆ ಸೊಪ್ಪು, ಈರುಳ್ಳಿ ಹಾಕಿ ಬಾಡಿಸಿ. ನೀರು ಮತ್ತು ಉಪ್ಪು ಹಾಕಿ ಬೇಯಿಸಿಕೊಳ್ಳಿ. ನಂತರ ತೆಂಗಿನತುರಿ ಹಾಕಿ ಕೆಳಗಿಳಿಸಿ. ಸೊಪ್ಪು ಬೇಗನೇ ಬಾಡಿ ಬಹಳ ಕಮ್ಮಿ ಪಲ್ಯ ಆಗುತ್ತದೆ. ಅದಕ್ಕಾಗಿ ಹಲಸಿನ ಬೀಜ ಸೇರಿಸಿ ಪಲ್ಯ ಮಾಡಿದರೆ ಬಲು ರುಚಿ.

ತಗಟೆ ಸೊಪ್ಪಿನ ತಂಬುಳಿ

ಬೇಕಾಗುವ ಸಾಮಗ್ರಿಗಳು: ತಗಟೆ ಸೊಪ್ಪು – 1 ಕಪ್, ತುಪ್ಪ – 1 ಚಮಚ, ಜೀರಿಗೆ – 1 ಚಮಚ, ಕಾಳುಮೆಣಸು – 4, ತೆಂಗಿನತುರಿ – 1/4 ಕಪ್, ಮೊಸರು 1 ಕಪ್.

ತಯಾರಿಸುವ ವಿಧಾನ:ತಗಟೆ ಸೊಪ್ಪು, ಜೀರಿಗೆ, ಕಾಳುಮೆಣಸು ಮತ್ತು ತುಪ್ಪ ಹಾಕಿ ಹುರಿದು ಅದಕ್ಕೆ ತೆಂಗಿನತುರಿ, ಉಪ್ಪು, ಮೊಸರು ಹಾಕಿ ರುಬ್ಬಿ ತಂಬುಳಿ ಹದ ಮಾಡಿ. ತಣ್ಣಗೆ ಊಟ ಮಾಡಿ.

ತಗಟೆ ಸೊಪ್ಪಿನ ಪಕೋಡ

ಬೇಕಾಗುವ ಸಾಮಗ್ರಿಗಳು: ತಗಟೆ ಸೊಪ್ಪು – 1 ಕಪ್, ಕಾರ್ನ್ ಪ್ಲೋರ್ – 2 ಚಮಚ, ಕಡಲೆಹಿಟ್ಟು – 1/2 ಕಪ್, ಅಕ್ಕಿಹಿಟ್ಟು – 2 ಚಮಚ, ಅರಿಸಿನಪುಡಿ – ಚಿಟಿಕೆ, ಮೆಣಸಿನ ಪುಡಿ – 3 ಚಮಚ,ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು ಸಾಕಷ್ಟು

ತಯಾರಿಸುವ ವಿಧಾನ:ತಗಟೆ ಸೊಪ್ಪನ್ನು ಹೆಚ್ಚಿಕೊಂಡು ಕಡಲೆಹಿಟ್ಟು, ಕಾರ್ನ್‌ಪ್ಲೋರ್, ಅರಿಶಿನ ಪುಡಿ, ಅಕ್ಕಿಹಿಟ್ಟು, ಉಪ್ಪು, ನೀರು ಹಾಕಿ ಹದವಾಗಿ ಕಲೆಸಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಚೆನ್ನಾಗಿ ಕಾದ ನಂತರ ಪಕೋಡಗಳನ್ನು ಉಂಡೆ ಕಟ್ಟಿ ಎಣ್ಣೆಯಲ್ಲಿ ಬಿಡಿ. ಎರಡೂ ಕಡೆ ಗರಿ ಗರಿಯಾಗಿ ಬೆಂದ ನಂತರ ತೆಗೆಯಿರಿ. ಸಾಸ್ ಅಥವಾ ಚಟ್ನಿ ಜೊತೆಗೆ ಸವಿಯಿರಿ. ಟೀ -ಕಾಫಿ ಜೊತೆಗೆ ಅದ್ಭುತ ಆರೋಗ್ಯಕರ ಸ್ನ್ಯಾಕ್ಸ್ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.