ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಸ್ವಾದ: ಬಿರು ಬಿಸಿಲಿಗೆ ಐಸ್‌ಕ್ರೀಂ

Published 23 ಫೆಬ್ರುವರಿ 2024, 23:30 IST
Last Updated 23 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬಿಸಿಲಿನ ಧಗೆಗೆ ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಸವಿಯಬಹುದಾದ ಐಸ್ ಕ್ರೀಮ್‌ಗಳ ರೆಸಿಪಿಯನ್ನು ವೇದಾವತಿ ಎಚ್‌.ಎಸ್. ನೀಡಿದ್ದಾರೆ.

ಎಳೆನೀರು ಗಂಜಿಯ ಐಸ್ ಕ್ರೀಮ್

ಸಾಮಗ್ರಿ: ಎಳೆನೀರು ತಿರುಳು 3/4 ಕಪ್ ( 75 ಗ್ರಾಂ), 500 ಗ್ರಾಂ ( 2 ಕಪ್) ಫ್ರೇಶ್ ಕ್ರೀಮ್, ಕಂಡೆನ್ಸ್ಡ್ ಮಿಲ್ಕ್ 400 ಎಂ. ಎಲ್.

ತಯಾರಿಸುವ ವಿಧಾನ: ಎಳೆನೀರು ತಿರುಳನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬೌಲಿಗೆ ಫ್ರೆಶ್‌ ಕ್ರೀಮ್ ಹಾಕಿ ಹತ್ತು ನಿಮಿಷ ಬೀಟ್ ಮಾಡಿ. ಬಳಿಕ ರುಬ್ಬಿಕೊಂಡ ಎಳೆನೀರು ಮಿಶ್ರಣ ಮತ್ತು ಕಂಡೆನ್ಸ್ಡ್ ಮಿಲ್ಕ್ ಸೇರಿಸಿ ಐದು ನಿಮಿಷ ಬೀಟ್ ಮಾಡಿ. ಈ ಮಿಶ್ರಣವನ್ನು ಒಂದು ಬಾಕ್ಸಿಗೆ ಹಾಕಿ ಮುಚ್ಚಳ ಮುಚ್ಚಿ 8 ರಿಂದ 10 ಗಂಟೆ ಫ್ರೀಜರ‍್ ನಲ್ಲಿಡಿ. ಬಳಿಕ ಫ್ರೀಜರ‍್ ನಿಂದ ತೆಗೆದು ಸವಿಯಿರಿ.

ಕಾಫಿ ಐಸ್ ಕ್ರೀಮ್

ಸಾಮಗ್ರಿ: ಬಿಸಿ ನೀರು 2 ಟೇಬಲ್ ಚಮಚ, 1 ಟೀ ಚಮಚ ಇನ್‌ಸ್ಟೆಂಟ್‌ ಕಾಫಿ ಪುಡಿ, ಫ್ರೆಶ್ ಕ್ರೀಮ್ 1 ಕಪ್, ಕೋಕೋ ಪೌಡರ‍್ 1 ಟೀ ಚಮಚ, ಕಂಡೆನ್ಸ್ಡ್ ಮಿಲ್ಕ್ 1/2 ಕಪ್.

ತಯಾರಿಸುವ ವಿಧಾನ: ಬಿಸಿನೀರಿಗೆ ಕಾಫಿ ಪುಡಿಯನ್ನು ಹಾಕಿ ಕರಗಿಸಿಕೊಳ್ಳಿ. ಬೌಲಿಗೆ ಕ್ರೀಮ್ ಹಾಕಿ 5 ನಿಮಿಷ ಚೆನ್ನಾಗಿ ಬೀಟ್ ಮಾಡಿ. ಬಳಿಕ ಕೋಕೋ ಪೌಡರ್, ಕಂಡೆಸ್ಸ್ಡ್ ಮಿಲ್ಕ್ ಮತ್ತು ನೀರಿನಲ್ಲಿ ಕರಗಿಸಿದ ಕಾಫಿ ಪುಡಿಯನ್ನು ಸೇರಿಸಿ 5 ನಿಮಿಷ ಚೆನ್ನಾಗಿ ಬೀಟ್ ಮಾಡಿ. ಈ ಮಿಶ್ರಣವನ್ನು ಒಂದು ಬಾಕ್ಸಿಗೆ ಹಾಕಿ ಮುಚ್ಚಳ ಮುಚ್ಚಿ ಫ್ರೀಜರ‍್ ನಲ್ಲಿ 8 ಗಂಟೆ ಇಡಿ. ಬಳಿಕ ಸವಿಯಿರಿ.

ಮಾವಿನ ಹಣ್ಣಿನ ಐಸ್ ಕ್ರೀಮ್

ಸಾಮಗ್ರಿ: ಫ್ರೆಶ್ ಕ್ರೀಮ್ 1/2 ಲೀಟರ‍್, 300 ಗ್ರಾಂ ಕಂಡೆನ್ಸ್ಡ್ ಮಿಲ್ಕ್, ಸಿಹಿ ಮಾವಿನ ಹಣ್ಣಿನ ರಸ 1/2 ಕೆಜಿ.

ವಿಧಾನ: ಫ್ರೆಶ್ ಕ್ರೀಮ್ ಅನ್ನು 1 ಗಂಟೆ ಫ್ರೀಜರ್‌ನಲ್ಲಿಡಿ. ಬಳಿಕ ಅದನ್ನು ಬೌಲಿಗೆ ಹಾಕಿ ಹತ್ತು ನಿಮಿಷ ಚೆನ್ನಾಗಿ ಬೀಟರ್ ನಿಂದ ಬೀಟ್ ಮಾಡಿ. ನಂತರ ಸಿಹಿಯಾದ ಕಂಡೆನ್ಸ್ಡ್‌ ಮಿಲ್ಕ್, ಮಾವಿನ ಹಣ್ಣಿನ ರಸವನ್ನು ಸೇರಿಸಿ ಹತ್ತು ನಿಮಿಷ ಬೀಟ್ ಮಾಡಿ. ನಂತರ ಒಂದು ಮಾವಿನ ಹಣ್ಣನ್ನು ಚಿಕ್ಕದಾಗಿ ಕತ್ತರಿಸಿ ಮಿಶ್ರಣಕ್ಕೆ ಹಾಕಿ. ತಯಾರಿಸಿದ ಮಿಶ್ರಣವನ್ನು ಒಂದು ಬಾಕ್ಸಿಗೆ ಹಾಕಿ ಮುಚ್ಚಳ ಮುಚ್ಚಿ 6 ರಿಂದ 8 ಗಂಟೆಗಳ ಫ್ರೀಜರ‍್ ನಲ್ಲಿಡಿ. ಬಳಿಕ ಐಸ್ ಕ್ರೀಮ್ ಮುಚ್ಚಳ ತೆಗೆದು ಐಸ್ ಕ್ರೀಮ್ ಸ್ಕೂಪ್ ನಲ್ಲಿ ನಿಧಾನವಾಗಿ ತೆಗೆದು ಸರ್ವಿಂಗ್ ಬೌಲಿಗೆ ಹಾಕಿ. ರುಚಿಕರವಾದ ಮಾವಿನಹಣ್ಣಿನ ಐಸ್ ಕ್ರೀಮ್ ಸಿದ್ಧ.

ವೆನಿಲ್ಲಾ ಕಸ್ಟರ್ಡ್ ಐಸ್ ಕ್ರೀಮ್

ಸಾಮಗ್ರಿ: ಹಾಲು 1 ಲೀಟರ್, ಕಸ್ಟರ್ಡ್ ಪೌಡರ್ 2 ಟೇಬಲ್ ಚಮಚ, ಸಕ್ಕರೆ 1/2 ಕಪ್, ವೆನಿಲ್ಲಾ ಎಸೆನ್ಸ್‌ 1 ಟೀ ಚಮಚ, 200 ಎಂ.ಎಲ್ ಫ್ರೆಶ್ ಕ್ರೀಮ್.

ವಿಧಾನ: ಬಾಣಲೆಗೆ ಹಾಲನ್ನು ಹಾಕಿ ಅದು ಮುಕ್ಕಾಲು ಲೀಟರ್ ಬರುವರೆಗೆ ಕುದಿಸಿ. ಬೌಲಿಗೆ ಕಸ್ಟರ್ಡ್ ಪೌಡರ್ ಹಾಕಿ ಅದಕ್ಕೆ 6 ಟೇಬಲ್ ಚಮಚ ಬೆಚ್ಚಗಿನ ಹಾಲನ್ನು ಸೇರಿಸಿ ಗಂಟಾಗದ ರೀತಿಯಲ್ಲಿ ಮಿಶ್ರಣ ಮಾಡಿ ಕುದಿಯುತ್ತಿರುವ ಹಾಲಿಗೆ ಸೇರಿಸಿ. ಬಳಿಕ ಸಕ್ಕರೆಯನ್ನು ಸೇರಿಸಿ ಕರಗುವರೆಗೂ ಮಿಶ್ರಣ ಮಾಡಿ. ಹಾಲು ದಪ್ಪವಾಗುತ್ತಾ ಬಂದಾಗ ಒಲೆಯನ್ನು ಆರಿಸಿ ವೆನಿಲ್ಲಾ ಎಸೆನ್ಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಆರಲು ಬಿಡಿ. ಪೂರ್ತಿ ಆರಿದ ಬಳಿಕ ಫ್ರೆಶ್ ಕ್ರೀಮ್ ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಯಾವುದಾದರೂ ಗ್ಲಾಸ್ ಅಥವಾ ಪ್ಲಾಸ್ಟಿಕ್ ಬಾಕ್ಸಿಗೆ ಹಾಕಿ ಅದರ ಮೇಲೆ ಬಟರ್ ಪೇಪರ್ ಮುಚ್ಚಿ. ಇದನ್ನು 3 ರಿಂದ 4 ಗಂಟೆ ಕಾಲ ಫ್ರೀಜರ್ ನಲ್ಲಿಡಿ. ಬಳಿಕ ಫೀಜರಿನಿಂದ ತೆಗೆದು ಮಿಶ್ರಣ ಮಾಡಿ ಮಿಕ್ಸಿ ಜಾರಿಗೆ ಹಾಕಿ 2 ರಿಂದ 3 ನಿಮಿಷ ತಿರುಗಿಸಿ. ನಂತರ ಅದೇ ಬಾಕ್ಸಿಗೆ ಹಾಕಿ ಮುಚ್ಚಳ ಮುಚ್ಚಿ 8 ರಿಂದ 10 ಗಂಟೆ ಕಾಲ ಫ್ರೀಜರ್ ನಲ್ಲಿಡಿ. ಈಗ ರುಚಿಕರವಾದ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.

ಚಾಕೊಲೆಟ್ ಐಸ್ ಕ್ರೀಮ್

ಸಾಮಗ್ರಿ: 1/2 ಲೀಟರ್‌ ಫ್ರೆಶ್ ಕ್ರೀಮ್, 400 ಗ್ರಾಂ ಕಂಡೆನ್ಸ್ಡ್ ಮಿಲ್ಕ್, ಸಿಹಿ ಇಲ್ಲದ ಕೊಕೊ ಪೌಡರ‍್ 4 ಟೇಬಲ್ ಚಮಚ.

ವಿಧಾನ: ಫ್ರೆಶ್ ಕ್ರೀಮ್ ಅನ್ನು ಒಂದು ಗಂಟೆ ಫ್ರೀಜರ್‌ನಲ್ಲಿಡಿ. ಬಳಿಕ ಬೌಲಿಗೆ ಹಾಕಿ 10 ರಿಂದ 15 ನಿಮಿಷ ಚೆನ್ನಾಗಿ ಬೀಟರ‍್ ನಲ್ಲಿ ಬೀಟ್ ಮಾಡಿ. ಈಗ ಕಂಡೆನ್ಸ್ಡ್ ಮಿಲ್ಕ್ ಮತ್ತು ಕೊಕೊ ಪೌಡರ‍್ ಸೇರಿಸಿ. 8 ರಿಂದ 10 ನಿಮಿಷ ಕಡಿಮೆ ಸ್ಪೀಡ್ ನಲ್ಲಿ ಬೀಟ್ ಮಾಡಿ. ಈ ಮಿಶ್ರಣವನ್ನು ಒಂದು ಬಾಕ್ಸಿಗೆ ಹಾಕಿ ಗಟ್ಟಿಯಾಗಿ ಮುಚ್ಚಳದಿಂದ ಮುಚ್ಚಿ. ಇದನ್ನು 6 ರಿಂದ 8 ಗಂಟೆಗಳ ಕಾಲ ಫೀಜರ‍್ ನಲ್ಲಿಡಿ. ಬಳಿಕ ಸ್ಕೂಪ್ ನಲ್ಲಿ ತೆಗೆದು ಸವಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT