ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಿದೆ. ಭಾರೀ ಚಳಿಯಿಂದ ಜನರು ಮನೆಯಿಂದ ಹೊರ ಬರಲು ಪರದಾಡುವಂತಾಗಿದೆ. ಮುಂದಿನ ದಿನಗಳಲ್ಲಿ ಈ ಚಳಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ಜನರು ಕೂಡ ಈ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ನಾನಾ ರೀತಿಯ ಆಹಾರಗಳ ಮೊರೆ ಹೋಗುತ್ತಾರೆ. ಹಾಗಿದ್ದರೆ, ಕೇವಲ 10 ನಿಮಿಷದಲ್ಲಿ ಸುಲಭವಾಗಿ ಆರೋಗ್ಯಕರ ಸೂಪ್ ಮಾಡುವುದು ಹೇಗೆ ಎಂಬುದನ್ನು ನೋಡೋಣ.

ಟೊಮೆಟೊ ಸೂಪ್

ಬೇಕಾಗುವ ಸಾಮಾಗ್ರಿಗಳು:

ಟೊಮೆಟೊಗಳು, ಈರುಳ್ಳಿ, ಬೆಳ್ಳುಳ್ಳಿ, ಕ್ಯಾರೆಟ್, ಉಪ್ಪು, ಕರಿಮೆಣಸು, ಸಕ್ಕರೆ, ಬೆಣ್ಣೆ ಅಥವಾ ಆಲಿವ್ ಎಣ್ಣೆ, ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ:

ಮೊದಲು ಒಂದು ಬಾಣಲೆಯಲ್ಲಿ ಬೆಣ್ಣೆ ಅಥವಾ ಎಣ್ಣೆ ಬಿಸಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾದ ಬಳಿಕ ಉದ್ದವಾಗಿ ಕತ್ತರಿಸಿದ ಈರುಳ್ಳಿ ಮತ್ತು ಬೆಳ್ಳುಳ್ಳಿ ಐದು ನಿಮಿಷ ಹುರಿಯಿರಿ. ಬಳಿಕ ಸಣ್ಣಗೆ ಹೆಚ್ಚಿದ ಟೊಮೆಟೊಗಳು, ಕ್ಯಾರೆಟ್ ಮತ್ತು ಸ್ವಲ್ಪ ಉಪ್ಪು ಸೇರಿಸಿ. ಬಳಿಕ ಅದಕ್ಕೆ ಸ್ವಲ್ಪ ನೀರು ಟೊಮೆಟೊಗಳು ಮೆತ್ತಗಾಗುವರೆಗೂ 10ರಿಂದ 15 ನಿಮಿಷದವರೆಗೆ ಬೇಯಿಸಿ. ನಂತರ ಈ ಮಿಶ್ರಣ ತಣ್ಣಗಾಗುತ್ತಿದ್ದಂತೆ ನುಣ್ಣಗೆ ರುಬ್ಬಿಕೊಳ್ಳಿ. ಅಂತಿಮವಾಗಿ ಸಣ್ಣವಾಗಿ ಕುದಿಸಿ, ಅದಕ್ಕೆ ಕೊಂಚ ಸಕ್ಕರೆ ಮತ್ತು ಕರಿಮೆಣಸು ಸೇರಿಸಿ. ಕೊನೆಯಲ್ಲಿ ಸೂಪ್ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ. ಈಗ ಚಳಿಗಾಲದಲ್ಲಿ ಬಿಸಿ ಬಿಸಿ ಸೂಪ್ ಸವಿಯಲು ಸಿದ್ಧ.

ರೆಸ್ಟೋರೆಂಟ್ ಸ್ಟೈಲ್ನಲ್ಲಿ ತಯಾರಿಸಿ ತರಕಾರಿ ಸೂಪ್

ಬೇಕಾಗುವ ಸಾಮಾಗ್ರಿಗಳು:

ಎಣ್ಣೆ, ಬೆಳ್ಳುಳ್ಳಿ, ಲವಂಗ, ಶುಂಠಿ, ಈರುಳ್ಳಿ, ಕ್ಯಾರೆಟ್, ಬೀನ್ಸ್, ದೊಣ್ಣೆ ಮೆಣಸಿನಕಾಯಿ, ಎಲೆಕೋಸು, ಬಟಾಣಿ, ಸ್ವೀಟ್ ಕಾರ್ನ್, ನೀರು, ಸೋಯಾ ಸಾಸ್, ವಿನೆಗರ್, ಉಪ್ಪು, ಕಪ್ಪು ಮೆಣಸಿನ ಪುಡಿ, ಗ್ರೀನ್ ಚಿಲ್ಲಿ ಸಾಸ್.

ಮಾಡುವ ವಿಧಾನ:

ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಹಾಕಿ, ಅದಕ್ಕೆ ಹೆಚ್ಚಿದ ಬೆಳ್ಳುಳ್ಳಿ, ಶುಂಠಿ ಮತ್ತು ಈರುಳ್ಳಿ ಹಾಕಿ 30 ಸೆಕೆಂಡುಗಳ ಕಾಲ ಹುರಿಯಿರಿ. ನಂತರ ಕ್ಯಾರೆಟ್, ಬೀನ್ಸ್, ದೊಡ್ಡ ಮೆಣಸಿನಕಾಯಿ, ಎಲೆಕೋಸು ಮತ್ತು ಉಪ್ಪು ಸೇರಿಸಿ 2-3 ನಿಮಿಷ ಹಸಿ ವಾಸನೆ ಹೋಗುವವರೆಗೂ ಬೇಯಿಸಿ.

(ಗಮನಿಸಿ ಇಲ್ಲಿ ತರಕಾರಿಗಳು ಸಂಪೂರ್ಣವಾಗಿ ಮೆತ್ತಗಾಗಬಾರದು. ಸ್ವಲ್ಪ ಗರಿಗರಿಯಾಗಿರಬೇಕು)

ಇದಾದ ಬಳಿಕ ಸೋಯಾ ಸಾಸ್, ವಿನೆಗರ್, ಕಪ್ಪು ಮೆಣಸಿನ ಪುಡಿ ಸೇರಿಸಿ ಮಿಶ್ರಣ ಮಾಡಿ. ನಂತರ ಒಂದು ಬಟ್ಟಲಿನಲ್ಲಿ ಕಾರ್ನ್ಫ್ಲೋರ್ ಮತ್ತು ನೀರನ್ನು ಸೇರಿಸಿ ಉಂಡೆಗಳಿಲ್ಲದಂತೆ ಮಿಶ್ರಣ ಮಾಡಿ. ಇದನ್ನು ಕುದಿಯುತ್ತಿರುವ ಸೂಪಿಗೆ ನಿಧಾನವಾಗಿ ಸುರಿಯಿರಿ ಮತ್ತು ಸೂಪ್ ದಪ್ಪವಾಗುವವರೆಗೆ 3ರಿಂದ 4 ನಿಮಿಷ ಕುದಿಸಿ. ಈಗ ರೆಸ್ಟೋರೆಂಟ್ ಸ್ಟೈಲ್ನಲ್ಲಿ ಬಿಸಿಯಾದ ತರಕಾರಿ ಸೂಪ್ ಸವಿಯಲು ಸಿದ್ಧ.

ಕುಂಬಳಕಾಯಿ ಸೂಪ್

ಬೇಕಾಗುವ ಸಾಮಾಗ್ರಿಗಳು:

ಕುಂಬಳಕಾಯಿ, ಆಲಿವ್ ಎಣ್ಣೆ, ಉಪ್ಪು, ಮೆಣಸು, ತೆಂಗಿನ ಹಾಲು ಅಥವಾ ಗೋಡಂಬಿ ಹಾಲು, ದಾಲ್ಚಿನ್ನಿ, ಏಲಕ್ಕಿ.

ಮಾಡುವ ವಿಧಾನ:

ಮೊದಲು ಕುಂಬಳಕಾಯಿಯನ್ನು ಕತ್ತರಿಸಿಕೊಳ್ಳಿ. ಒಂದು ಬಾಣಲೆಗೆ ಆಲಿವ್ ಎಣ್ಣೆ, ಉಪ್ಪು, ಮೆಣಸು ಸೇರಿಸಿ ಹುರಿಯಿರಿ. ಬಳಿಕ ಮತ್ತೊಂದು ಪಾತ್ರೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ಹುರಿದುಕೊಳ್ಳಿ, ಕುಂಬಳಕಾಯಿ, ತರಕಾರಿ, ದಾಲ್ಚಿನ್ನಿ, ಏಲಕ್ಕಿ ಸೇರಿಸಿ ಕುದಿಸಿರಿ. ಕುಂಬಳಕಾಯಿ ಮೃದುವಾದಾಗ, ಬ್ಲೆಂಡರ್ ಬಳಸಿ ಇನ್ನೂ ನಯವಾಗಿ ಮಾಡಿಕೊಳ್ಳಿ. ಬಳಿಕ ಇದಕ್ಕೆ ತೆಂಗಿನ ಹಾಲು ಅಥವಾ ಗೋಡಂಬಿ ಹಾಲು ಮಿಶ್ರಣ ಮಾಡಿ. ಈಗ

ಬಾರ್ಲಿ ಸೂಪ್

ಬೇಕಾಗುವ ಸಾಮಾಗ್ರಿಗಳು:

ಬಾರ್ಲಿ, ಕ್ಯಾರೆಟ್, ಬೀನ್ಸ್, ಬಟಾಣಿ, ಜೀರಿಗೆ ಪುಡಿ, ಅರಿಶಿನ, ತುಪ್ಪ ಅಥವಾ ಬೆಣ್ಣೆ, ಉಪ್ಪು.

ಮಾಡುವ ವಿಧಾನ:

ಬಾರ್ಲಿಯನ್ನು ಎರಡು ಬಾರಿ ಚೆನ್ನಾಗಿ ತೊಳೆಯಿರಿ. ಕನಿಷ್ಠ 2ರಿಂದ 4 ಗಂಟೆ ನೆನೆಸಿಡಿ. ಬಳಿಕ ಕುಕ್ಕರ್ಗೆ ನೆನೆಸಿಟ್ಟ ಬಾರ್ಲಿ, ಬೇಕಾದ ತರಕಾರಿ ಹಾಕಿ. ಅದಕ್ಕೆ ಒಂದೂವರೆ ಕಪ್ ನೀರು ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ. ಬೇಯಿಸಿದ ಬಾರ್ಲಿ ಹಾಗೂ ತರಕಾರಿ ಮಿಶ್ರಣವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಬಳಿಕ ಬಾಣಲೆ ಬಿಸಿ ಮಾಡಿ ತುಪ್ಪ ಅಥವಾ ಬೆಣ್ಣೆ ಹಾಕಿ ಜೀರಿಗೆ ಪುಡಿ ಹಾಕಿ. ರುಬ್ಬಿಕೊಂಡ ಮಿಶ್ರಣವನ್ನು ಬಾಣಲೆಗೆ ಹಾಕಿ. ಮಕ್ಕಳು ಇಷ್ಟ ಪಡುವುದಿದ್ದರೆ ಕಾಳುಮೆಣಸಿನ ಪುಡಿ, ಇನ್ನಷ್ಟು ಜೀರಿಗೆ ಪುಡಿ, ಅರಿಶಿನ ಪುಡಿ, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಬಿಸಿ ಇರುವಾಗಲೇ ಸವಿಯಲು ಕೊಡಿ.

ನಿಂಬೆ ಕೊತ್ತಂಬರಿ ಸೂಪ್

ಬೇಕಾಗುವ ಸಾಮಗ್ರಿಗಳು:

ಎಣ್ಣೆ, ಶುಂಠಿ, ಬೆಳ್ಳುಳ್ಳಿ, ಸ್ಪ್ರಿಂಗ್ ಈರುಳ್ಳಿ, ಕ್ಯಾರೆಟ್, ಬಟನ್ ಅಣಬೆ, ಹಸಿಮೆಣಸು, ಕಾಳುಮೆಣಸಿನ ಪುಡಿ, ಉಪ್ಪು, ನೀರು, ನಿಂಬೆರಸ, ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ:

ಸ್ಪ್ರಿಂಗ್ ಈರುಳ್ಳಿ ಹಾಗೂ ಅಣಬೆಯನ್ನು ಚೆನ್ನಾಗಿ ತೊಳೆದು ಕತ್ತರಿಸಿ. ಕ್ಯಾರೆಟ್ ಸಿಪ್ಪೆ ತೆಗೆದು ಹೆಚ್ಚಿಕೊಳ್ಳಿ. ಕೊತ್ತಂಬರಿ ಸೊಪ್ಪು ಹಾಗೂ ಹಸಿಮೆಣಸನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿಯಾದ ಮೇಲೆ ಶುಂಠಿ, ಬೆಳ್ಳುಳ್ಳಿ ಹಾಗೂ ಹಸಿಮೆಣಸು ಹಾಕಿ ಕೊಂಚ ಪರಿಮಳ ಬರುವವರೆಗೂ ಹುರಿದುಕೊಳ್ಳಿ. ಅದಕ್ಕೆ ಕಾಲು ಕಪ್ ಸ್ಪ್ರಿಂಗ್ ಈರುಳ್ಳಿ ಸೇರಿಸಿ ಸ್ವಲ್ಪ ಹೊತ್ತು ಕೈಯಾಡಿಸಿ. ಅದಕ್ಕೆ ಹೆಚ್ಚಿದ ಅಣಬೆ, ಕ್ಯಾರೆಟ್, ಬೇಬಿ ಕಾರ್ನ್, ಹಸಿರುಬಟಾಣಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಮಧ್ಯಮ ಉರಿಯಲ್ಲಿ 3 ನಿಮಿಷ ಬೇಯಿಸಿ. ಅದಕ್ಕೆ 4 ಕಪ್ ನೀರು ಸೇರಿಸಿ ಕುದಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕಾಳುಮೆಣಸು ಸೇರಿಸಿ. ತರಕಾರಿ ಎಲ್ಲಾ ಚೆನ್ನಾಗಿ ಬೇಯುವವರೆಗೂ ಕುದಿಸಿ. ತರಕಾರಿ ಬೆಂದ ಮೇಲೆ ಕೊತ್ತಂಬರಿ ಸೊಪ್ಪು ಹಾಗೂ 2 ಚಮಚ ನಿಂಬೆರಸ ಸೇರಿಸಿ ಮಿಶ್ರಣ ಮಾಡಿ ಕುದಿಸಿ ಗ್ಯಾಸ್ ಆಫ್ ಮಾಡಿ. ಅದಕ್ಕೆ ಸ್ಪ್ರಿಂಗ್ ಈರುಳ್ಳಿ ಎಲೆಯನ್ನು ಹೆಚ್ಚಿ ಹಾಕಿ. ಸೂಪ್ ಬಿಸಿ ಇರುವಾಗಲೇ ಕುಡಿಯಲು ಕೊಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.