ಪೆಪ್ಪರ್ ಡ್ರೈ

ಸಾಮಗ್ರಿ: ಬೆಳ್ಳುಳ್ಳಿ 100 ಗ್ರಾಂ, ಈರುಳ್ಳಿ 250 ಗ್ರಾಂ, ಹಸಿಮೆಣಸು 20 ಗ್ರಾಂ, 2 ಮೊಟ್ಟೆ, ಕಾರ್ನ್‌ಫ್ಲೋರ್, ಚಿಲ್ಲಿ ಸಾಸ್, ಸೋಯಾ ಸಾಸ್ , ಪೆಪ್ಪರ್ ಎರಡು ಚಮಚ.

ವಿಧಾನ: ಒಂದು ಕೆ.ಜಿ. ಬೇಯಿಸಿದ ಮಾಂಸ, ಕಾರ್ನ್‌ಫ್ಲೋರ್ (ಮುಸುಕಿನಜೋಳದ ಪುಡಿ), ಮೊಟ್ಟೆ, ಉಪ್ಪು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಬೇಯಿಸಿದ
ಮಾಂಸದ ತುಂಡುಗಳನ್ನು ಈ ಪೇಸ್ಟ್‌ನಲ್ಲಿ ಅದ್ದಿ ಎಣ್ಣೆಯಲ್ಲಿ ಹುರಿಯಿರಿ. ಈರುಳ್ಳಿ, ಬೆಳ್ಳುಳ್ಳಿ, ಹಸಿ ಮೆಣಸನ್ನು ಎಣ್ಣೆಯಲ್ಲಿ ಫ್ರೈ ಮಾಡಿ. ಅದಕ್ಕೆ ಹುರಿದ ಮಾಂಸ ಸೇರಿಸಿ ಎರಡು ಚಮಚ ಚಿಲ್ಲಿ ಸಾಸ್, ಒಂದು ಚಮಚ ಸೋಯಾ ಸಾಸ್, ಒಂದು ಚಮಚ ಕಾಳುಮೆಣಸುಪುಡಿ ಸೇರಿಸಿ.
ರುಚಿಗೆ ತಕ್ಕಷ್ಟು ಉಪ್ಪು. ಎಣ್ಣೆಯಲ್ಲಿ ಕರಿದ ಕರಿಬೇವು ಸೇರಿಸಬೇಕು.

ಮಟನ್ ಫ್ರೈ

ಸಾಮಗ್ರಿಗಳು: ಒಂದು ಕೆ.ಜಿ. ಕುರಿ ಮಾಂಸ, ಈರುಳ್ಳಿ 200 ಗ್ರಾಂ, ಟೊಮೆಟೊ 150 ಗ್ರಾಂ, ಕ್ಯಾಪ್ಸಿಕಂ ಎರಡು, ತಲಾ ಅರ್ಧ ಕಟ್ಟು ಪುದಿನ ಮತ್ತು ಕೊತ್ತಂಬರಿ ಸೊಪ್ಪು, ಖಾರದ ಪುಡಿ 2 ಚಮಚ, ಧನಿಯಾ ಪುಡಿ 2 ಚಮಚ, ಗರಂ ಮಸಾಲ 1 ಚಮಚ, ಅರಿಶಿಣ, ಮಟನ್ ಮಸಾಲಾ ಪುಡಿ 3 ಚಮಚ, ಎಣ್ಣೆ, ಕರಿಬೇವು.

ವಿಧಾನ: ಮಾಂಸವನ್ನು ಸ್ವಲ್ಪ ಬೇಯಿಸಿಕೊಳ್ಳಿ. ಬಾಣಲೆಯಲ್ಲಿ 50 ಮಿಲಿ ಎಣ್ಣೆ ಹಾಕಿ, ಹಸಿ ಮೆಣಸು, ಈರುಳ್ಳಿ, ಟೊಮೆಟೊ, ಕ್ಯಾಪ್ಸಿಕಂ, ಹೆಚ್ಚಿದ ಪುದೀನಾ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿ. ನಂತರ ಬೇಯಿಸಿದ ಮಾಂಸ ಹಾಕಿ. ಅರಿಶಿಣ, ಖಾರದ ಪುಡಿ, ದನಿಯಾ ಪುಡಿ, ಮಸಾಲ ಪೌಡರ್, ಗರಂ ಮಸಾಲ, ಉಪ್ಪು ಹಾಕಿ. ಚೆನ್ನಾಗಿ ಫ್ರೈ ಮಾಡಿ. ನಂತರ ಕರಿಬೇವಿನ ಸೊಪ್ಪು ಉದುರಿಸಿ.

ಮಟನ್ ಸುಕ್ಕ

ಸಾಮಗ್ರಿ: ಬ್ಯಾಡಗಿ ಮೆಣಸು 50 ಗ್ರಾಂ, ಧನಿಯಾ 4 ಟೀ ಚಮಚ, ಕಾಳು ಮೆಣಸು 2 ಚಮಚ, ಜೀರಿಗೆ 1 ಚಮಚ, ಮೆಂತೆ ಐದಾರು ಕಾಳು, ಅರಿಶಿಣ 1 ಚಮಚ, ಬೆಳ್ಳುಳ್ಳಿ 50 ಗ್ರಾಂ (ಹುರಿದು ರುಬ್ಬಿಕೊಳ್ಳಬೇಕು), ಒಂದು ತೆಂಗಿನಕಾಯಿಯನ್ನು ತುರಿದು, ಹುರುದಿಟ್ಟುಕೊಳ್ಳಬೇಕು.

ವಿಧಾನ: ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ, ಹಸಿಮೆಣಸು, ಟೊಮೆಟೊ ಹಾಕಿ ಚೆನ್ನಾಗಿ ಫ್ರೈ ಮಾಡಿ. ಮೊದಲೇ ಬೇಯಿಸಿಟ್ಟುಕೊಂಡ ಒಂದು ಕೆ.ಜಿ ಮಾಂಸವನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನಂತರ ರುಬ್ಬಿಕೊಂಡ ಮಸಾಲೆ ಹಾಕಿ, ಚೆನ್ನಾಗಿ ಬೆರೆತುಕೊಂಡು ನಂತರ ಹುರಿದ ತೆಂಗಿನ ತುರಿ ಸೇರಿಸಿ. ಹೊಂದಿಕೊಂಡ ನಂತರ ಸ್ವಲ್ಪ ತುಪ್ಪ, ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ.

ಮಟನ್ ಸುಕ್ಕ

ಬೇಕಾಗುವ ಸಾಮಗ್ರಿ: ಬ್ಯಾಡಗಿ ಮೆಣಸು 50 ಗ್ರಾಂ, ದನಿಯ ನಾಲ್ಕು ಟೀ ಚಮಚ, ಕಾಳು 2 ಚಮಚ, ಜೀರಿಗೆ 1 ಚಮಚ, ಮೆಂತೆ ಐದಾರು ಕಾಳು, ಅರಿಶಿಣ 1ಚಮಚ, ಬೆಳ್ಳುಳ್ಳಿ 50 ಗ್ರಾಂ (ಹುರಿದು ರುಬ್ಬಿಕೊಳ್ಳಬೇಕು) ಒಂದು ತೆಂಗಿನ ಕಾಯಿ ತುರಿ ಹುರಿದಿಟ್ಟುಕೊಳ್ಳಬೇಕು.

ಮಾಡುವ ವಿಧಾನ: ಬಾಣಲಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಹೆಚ್ಚಿದ 250 ಗ್ರಾಂ ಈರುಳ್ಳಿ, ಹಸಿ ಮೆಣಸು, ಎರಡು ಹೆಚ್ಚಿದ ಟೊಮೆಟೊ ಹಾಕಿ ಚೆನ್ನಾಗಿ ಫ್ರೈ ಮಾಡಿ. ಮೊದಲೇ ಬೇಯಿಸಿಟ್ಟುಕೊಂಡ ಒಂದು ಕೆ.ಜಿ ಮಾಂಸವನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನಂತರ ರುಬ್ಬಿಕೊಂಡ ಮಸಾಲೆ ಹಾಕಿ ಚೆನ್ನಾಗಿ ಮಿಕ್ಸ್ ಆದ ನಂತರ ಹುರಿದಿಟ್ಟ ತೆಂಗಿನ ತುರಿ ಸೇರಿಸಿ. ಚೆನ್ನಾಗಿ ಹೊಂದಿಕೊಂಡ ನಂತರ ಸ್ವಲ್ಪ ತುಪ್ಪ, ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.