ಮಹಾತ್ಮ ಗಾಂಧಿ ರಸ್ತೆಯ ಟ್ರಿನಿಟಿ ಸರ್ಕಲ್‌ನ ತಾಜ್ ಹೋಟೆಲ್ ಸಂಪೂರ್ಣ ಹೊಸ ರೂಪದೊಂದಿಗೆ ಶೃಂಗಾರಗೊಂಡಿದೆ.

ಶತಮಾನಗಳ ಇತಿಹಾಸ ಹೊಂದಿರುವ ಪ್ರತಿಷ್ಠಿತ ಟಾಟಾ ಸಂಸ್ಥೆಯ ಹೋಟೆಲ್ ಸಮೂಹಕ್ಕೆ ಸೇರಿದ ಐಷಾರಾಮಿ ಹೋಟೆಲ್‌ನ್ನು ಕಾಸ್ಮೊಪಾಲಿಟನ್ ಸಂಸ್ಕೃತಿಯ ಅಭಿರುಚಿಗೆ ತಕ್ಕಂತೆ ಮರು ವಿನ್ಯಾಸಗೊಳಿಸಲಾಗಿದೆ. ವಿನ್ಯಾಸಕ್ಕೆ ತಕ್ಕಂತೆ ಹೆಸರನ್ನೂ ಬದಲಿಸಲಾಗಿದ್ದು, ತಾಜ್ ವಿವಾಂತ ಇನ್ನು ಮುಂದೆ ತಾಜ್ ಎಂ.ಜಿ. ರಸ್ತೆ ಎಂದಾಗಲಿದೆ.

ಜಾಗತಿಕ ಹೋಟೆಲ್ ಮತ್ತು ಆತಿಥ್ಯ ವಲಯದ ಬದಲಾವಣೆಗೆ ತಕ್ಕಂತೆ ಆಧುನಿಕ ಸ್ಪರ್ಷ ನೀಡಲಾಗಿದೆ. ಬೆಂಗಳೂರು ಮತ್ತು ಬ್ರಿಟಿಷ್ ಶೈಲಿಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಸಿಂಗಾಪುರ ಶೈಲಿ

ಸಿಂಗಾಪುರದ ಪ್ರಸಿದ್ಧ ಆರ್ಕಿಟೆಕ್ಟ್ ಕಂಪನಿಗೆ ಮರು ವಿನ್ಯಾಸ ಡಿಸೈನ್ ಕೆಲಸ ವಹಿಸಲಾಗಿತ್ತು.ಎಲ್ಲ ಹೋಟೆಲ್ ಕೋಣೆಗಳ ಬಾಲ್ಕನಿಗಳನ್ನು ಮುಚ್ಚಿದ್ದರಿಂದ ಹೆಚ್ಚು ಸ್ಥಳಾವಕಾಶ ಲಭ್ಯವಾಗಿದೆ. ಆಧುನಿಕ ಐಷಾರಾಮಿಸೌಲಭ್ಯಗಳನ್ನು ಕಲ್ಪಿಸಲು ಪ್ರತಿ ಕೊಠಡಿಯ ನವೀಕರಣಕ್ಕೆ ಅಂದಾಜು ₹40 ಲಕ್ಷ ವೆಚ್ಚ ಮಾಡಲಾಗಿದೆ.

ಅತಿಥಿಗಳ ಆಗಮಿಸುವ ಹೋಟೆಲ್ ಲಾಬಿಯ ನೆಲದ ಫ್ಲೋರಲ್ ಡಿಸೈನ್ ಮತ್ತುಗೋಡೆಗಳ ಬಣ್ಣಗಳು ಮೆರಗು ನೀಡುತ್ತವೆ. ನೆಲ ಮಹಡಿಯಲ್ಲಿರುವ ತಾಮರ ಗಾರ್ಡನ್ ಮತ್ತು ಮೊದಲ ಮಹಡಿಯಲ್ಲಿದ್ದ ಪುಟ್ಟ ಉದ್ಯಾನವನ್ನು ಆಕರ್ಷಣೀಯವಾಗಿ ಮರು ರೂಪಿಸಲಾಗಿದೆ. ಮದುವೆ, ಆರತಕ್ಷತೆ ಮತ್ತು ಬಿಸಿನೆಸ್ ಡಿನ್ನರ್, ಪಾರ್ಟಿಗಳಿಗೆ ಸೂಕ್ತವಾಗಿದೆ. ಅಂದಾಜು 200 ಅತಿಥಿಗಳಿಗೆ ಜಾಗದ ಅವಕಾಶವಿದೆ.ವಿಶೇಷವಾಗಿ ಕಂಪನಿ ಕೆಲಸಗಳ ನಿಮಿತ್ತ ಭೇಟಿ ನೀಡುವವರಿಗೆ ಹೇಳಿಮಾಡಿಸಿದಂತಿದೆ ಎನ್ನುವುದುಸೇಲ್ಸ್ ವಿಭಾಗದ ನಿರ್ದೇಶಕ ಅಶಿಕ್ ಜೋಸೆಫ್ ಅಭಿಪ್ರಾಯ.

ಆಕರ್ಷಣ ಒಳಾಂಗಣ ವಿನ್ಯಾಸ

ಹೋಟೆಲ್ ಮತ್ತು ಬಾರ್ ವಿಸ್ತರಿಸಲಾಗಿದ್ದು ಆಕರ್ಷಕ ಒಳಾಂಗಣ ವಿನ್ಯಾಸ ಮನೆ ಸೆಳೆಯುತ್ತದೆ. ಅಥೆಂಟಿಕ್ ಚೈನೀಸ್ ಫುಡ್ ಕೋರ್ಟ್ ’ಮೆಮೊರೈಸ್ ಆಫ್ ಚೈನಾ’ದಲ್ಲಿ ಬಗೆಬಗೆಯ ರುಚಿಕರವಾದ ಚೀನಾ ತಿಂಡಿ, ತಿನಿಸು, ಖಾದ್ಯಗಳನ್ನು ಹೊಸದಾಗಿ ಪರಿಚಯಿಸಲಾಗಿದೆ.

ಇದಕ್ಕೆ ಹೊಂದಿಕೊಂಡಿರುವ ಬಾರ್‌ನಲ್ಲಿ ಮಾರ್ಟಿನಿ ಮತ್ತು ಚೇ ಗುವೇರಾ ಸಿಗ್ನೇಚರ್‌ಕಾಕ್‌ಟೇಲ್ ಪರಿಚಯಿಸಲಾಗಿದೆ.ಸಂತೋಷದಿಂದ ಕಾಲಕಳೆಯಲು, ವೈವಿಧ್ಯಮಯ ಊಟೋಪಚಾರಗಳ ಸೇವೆ ಸೇರಿದಂತೆ ಅತ್ಯಾಧುನಿಕ ಸೌಕರ್ಯಗಳೂ ಇಲ್ಲಿವೆ.

ದೇಶೀಯ ವಿದೇಶ ಆಹಾರ ಪದ್ಧತಿ ಸೇರಿದಂತೆ ವಿದೇಶೀ ಆಹಾರಗಳೂ ಇಲ್ಲಿ ಲಭ್ಯ. ಇದಲ್ಲದೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ಆಧುನಿಕ ಮಸಾಜ್ ಸೆಂಟರ್, ಅತ್ಯಾಧುನಿಕ ಜಿಮ್, ಈಜುಕೊಳನ್ನು ನವೀಕರಣಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.