ಗುರುವಾರ , ಜೂನ್ 24, 2021
22 °C

ಯುಗಾದಿ ಹಬ್ಬದ ವಿಶೇಷ ಅಡುಗೆ

ಸರಸ್ವತಿ.ಎಸ್.ಭಟ್ Updated:

ಅಕ್ಷರ ಗಾತ್ರ : | |

ಕ್ಯಾರೆಟ್ ಒಬ್ಬಟ್ಟು

ಬೇಕಾಗುವ ವಸ್ತುಗಳು : ½ ಕೆ.ಜಿ. ಕ್ಯಾರೆಟ್, 1 ಕಪ್ ತೆಂಗಿನ ತುರಿ, ½ ಕೆ.ಜಿ. ಮೈದಾ ಹಿಟ್ಟು, 50 ಗ್ರಾಂ ಅಕ್ಕಿ ಹಿಟ್ಟು, 100 ಗ್ರಾಂ ಗೋಧಿ ಹಿಟ್ಟು, 10 ಗ್ರಾಂ ಏಲಕ್ಕಿ, ¼ ಲೀಟರ್ ಎಣ್ಣೆ.

ಮಾಡುವ ವಿಧಾನ : ಮೈದಾ ಹಿಟ್ಟಿಗೆ ಸ್ವಲ್ಪ ಎಣ್ಣೆ, ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಗೋಧಿ ಹಿಟ್ಟನ್ನು ಕೆಂಪಗೆ ಸ್ವಲ್ಪ ಹುರಿಯಿರಿ. ಕ್ಯಾರೆಟನ್ನು ಚೆನ್ನಾಗಿ ತೊಳೆದು ಕುಕ್ಕರಿನಲ್ಲಿಟ್ಟೂ ಒಂದು ವಿಷಲ್ ಕೂಗಿಸಿ. ತಣ್ಣಗಾದ ನಂತರ ತೆಂಗಿನ ತುರಿ ಸೇರಿಸಿ ನ್ಣ್ಣಗೆ ರುಬ್ಬಿ. ಬೆಲ್ಲ ಹಾಕಿ ಒಲೆಯ ಮೇಲಿಟ್ಟೂ ತೊಳಸಿ. ಗಟ್ಟಿಯಾದ ನಂತರ ಹುರಿದ ಗೋಧಿ ಹಿಟ್ಟು ಹಾಕಿ ತಿರುಗಿಸಿ. ನಂತರ ಕೆಳಗೆ ಇಳಿಸಿ ಏಲಕ್ಕಿ ಪುಡಿ ಹಾಕಿ. ಆರಿದ ನಂತರ ಉಂಡೆ ಮಾಡಿ. ಮೈದಾ ಹಿಟ್ಟನ್ನು ಸ್ವಲ್ಪ ತಟ್ಟಿ ಮಾಡಿಟ್ಟ ಉಂಡೆ ಅದರೊಳಗಿಟ್ಟು ಮುಚ್ಚಿ. ಸ್ವಲ್ಪ ಅಕ್ಕಿ ಹಿಟ್ಟನ್ನು ಚಪಾತಿ ಮಣೆಯ ಮೇಲೆ ಹಾಕಿ ತೆಳುವಾಗಿ ಲಟ್ಟಿಸಿ. ಕಾದ ತವಾದ ಮೇಲೆ ಹಾಕಿ ಕೆಂಪಗೆ ಬೇಯಿಸಿ. ಬಿಸಿಯಿರುವಾಗ ತುಪ್ಪ ಹಾಕಿ ತಿಂದರೆ ಬಲು ರುಚಿ.

ಹಲಸಿನ ಹಣ್ಣಿನ ಕರಿಕಡುಬು

ಬೇಕಾಗುವ ವಸ್ತುಗಳು : 10 ಹಲಸಿನ ಹಣ್ಣಿನ ಸೊಳೆ, 1 ಕಪ್ ಬೆಲ್ಲ, ½ ಕಪ್ ತೆಂಗಿನತುರಿ, 3 ಕಪ್ ಮೈದಾ ಹಿಟ್ಟು, 1 ಚಮಚ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಹಣ್ಣಿನ ಸೊಳೆಯನ್ನು ಉಗಿಯಲ್ಲಿ ಬೇಯಿಸಿ. ನಂತರ ಬೆಲ್ಲ ಬೆರೆಸಿ. ಕಾಯಿತುರಿ ಹಾಕಿ ನೀರ ಪಸೆ ಆರುವ ವರೆಗೆ ಬಾಣಲೆಯಲ್ಲಿ ಹಾಕಿ ತೊಳಸಿ. ನಂತರ ನೀರು ಹಾಕದೆ ನುಣ್ಣಗೆ ರುಬ್ಬಿ. ಮೈದಾ ಹಿಟ್ಟಿಗೆ ತುಪ್ಪ, ಉಪ್ಪು ಬೆರೆಸಿ 10 ನಿಮಿಷ ನೆನೆಸಿ. ನಂತರ ಸಣ್ಣ ಸಣ್ಣ ಉಂಡೆ ಮಾಡಿ ಪೂರಿಯ ಹದಕ್ಕೆ ಕಲಸಿ. ನಂತರ ಪೂರಿಯಂತೆ ಲಟ್ಟಿಸಿ. ಅದರ ಮೇಲೆ ಹಲಸಿನ ಹಣ್ಣಿನ ಹೂರಣವಿಟ್ಟು ಅರ್ಧ ಚಂದ್ರಾಕಾರವಾಗಿ ಮಡಚಿ ಸುತ್ತಲೂ ತಿರುವಿ ಅಂಟಿಸಿ. ನಂತರ ಕಾದ ಎಣ್ಣೆಗೆ ಹಾಕಿ ಹದವಾದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈಗ ರುಚಿಯಾದ ಕರಿಕಡುಬು ಸವಿಯಲು ಸಿದ್ಧ.

ಡ್ರೈಫ್ರೂಟ್ ಲಡ್ಡು

ಬೇಕಾಗುವ ವಸ್ತುಗಳು : 1 ಕಪ್ ಖರ್ಜೂರ, ¼ ಕಪ್ ಬಾದಾಮಿ, ¼ ಕಪ್ ಗೋಡಂಬಿ, ¼ ಕಪ್ ದ್ರಾಕ್ಷೆ, ¼ ಕಪ್ ತುರಿದ ಕೊಬ್ಬರಿ, ¼ ಕಪ್ ತುಪ್ಪ, ½ ಕಪ್ ಸಕ್ಕರೆ, ¼ ಚಮಚ ಏಲಕ್ಕಿ ಪುಡಿ.

ಮಾಡುವ ವಿಧಾನ : ಬಾದಾಮಿ, ಗೋಡಂಬಿ, ಪಿಸ್ತಾ ಮಿಕ್ಸಿಗೆ ಹಾಕಿ ಸರಿಯಾಗಿ ಪುಡಿ ಮಾಡಿ. ಬಾಣಲೆಗೆ ತುಪ್ಪ ಹಾಕಿ. ಬಿಸಿಯಾದಾಗ ಬಾದಾಮಿ, ಗೋಡಂಬಿ, ಪಿಸ್ತಾ ಪುಡಿ ಹಾಕಿ ಹುರಿಯಿರಿ. ತುರಿದ ಕೊಬ್ಬರಿ, ದ್ರಾಕ್ಷೆ, ಖರ್ಜೂರ ಹಾಕಿ ತೊಳಸಿ. ಒಲೆಯ ಮೇಲೆ ಪಾತ್ರೆಯಿಟ್ಟು ಸಕ್ಕರೆ ಮತ್ತು ಸ್ವಲ್ಪ ನೀರು ಹಾಕಿ. ಸಕ್ಕರೆ ಕರಗಿ ಎಳೆ ಪಾಕವಾದಾಗ ಮೇಲಿನ ಡ್ರೈಪ್ರೂಟ್ ಮಿಶ್ರಣಕ್ಕೆ ಹಾಕಿ. ಏಲಕ್ಕಿ ಪುಡಿ ತುಪ್ಪ ಹಾಕಿ ತೊಳೆಸಿ ಒಲೆಯಿಂದ ಕೆಳಗಿಳಿಸಿ. ನಂತರ ಉಂಡೆ ಕಟ್ಟಿ. ಈಗ ಪುಷ್ಟಿದಾಯಕ ಡ್ರೈಫ್ರೂಟ್ಸ್ ಲಡ್ಡು ಸವಿಯಲು ಸಿದ್ಧ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು