ನೀರು ಮುಟ್ಟಿಸದೇ ಒಣ ಬಟ್ಟೆಯಿಂದ ಒರಿಸಿ ಬಳಿಕ ತೊಕ್ಕುಗಳನ್ನು ತಯಾರಿಸಿ.ಗಾಳಿಯಾಡದ ಡಬ್ಬಿಯಲ್ಲಿ ಇವುಗಳನ್ನು ಹಾಕಿಟ್ಟರೆ ಮೂರರಿಂದ ಆರುತಿಂಗಳವರೆಗೆ ಬಳಸಬಹುದು. ಇವುಗಳ ರೆಸಿಪಿ ನೀಡಿದ್ದಾರೆ ವೇದಾವತಿ ಎಚ್.ಎಸ್.

ಮಾವಿನ ಕಾಯಿ ತೊಕ್ಕು

ಬೇಕಾಗುವ ಸಾಮಗ್ರಿಗಳು: ಮಾವಿನಕಾಯಿ 1/2 ಕೆಜಿ ಅಥವಾ ಮಾವಿನಕಾಯಿ ತುರಿ 3 ಕಪ್, ಸಾಸಿವೆ 1 ಟೇಬಲ್ ಚಮಚ, ಜೀರಿಗೆ 1 ಟೇಬಲ್ ಚಮಚ, ಮೆಂತ್ಯ 1/2 ಟೇಬಲ್ ಚಮಚ, ಪುಡಿ ಉಪ್ಪು 1/2 ಕಪ್, ಅಚ್ಚಖಾರದ ಪುಡಿ 1/2 ಕಪ್, ಅರಿಶಿನ 1 ಟೇಬಲ್ ಚಮಚ.

ಒಗ್ಗರಣೆಗೆ: ಅಡುಗೆ ಎಣ್ಣೆ 1/2 ಕಪ್, ಇಂಗು 1/2 ಟೀ ಚಮಚ, ಸಾಸಿವೆ 1 ಟೀ ಚಮಚ, ಬೆಳ್ಳುಳ್ಳಿ ಎಸೆಳು 15 ರಿಂದ 20, ಒಣಮೆಣಸಿನಕಾಯಿ 3 ತುಂಡು ಮಾಡಿ ಹಾಕಿ.

ತಯಾರಿಸುವ ವಿಧಾನ: ಹುಳಿ ಇರುವ ಮಾವಿನಕಾಯಿಯನ್ನು ತೆಗೆದುಕೊಂಡು ಅದರ ಸಿಪ್ಪೆಯನ್ನು ತೆಗೆದು ತುರಿದುಕೊಳ್ಳಿ. ಬಾಣಲೆಗೆ ಸಾಸಿವೆ, ಜೀರಿಗೆ, ಮೆಂತ್ಯ ಹಾಕಿ ಬಣ್ಣ ಬದಲಾಗಿ ಸಾಸಿವೆ ಸಿಡಿಯುವರೆಗೆ ಹುರಿಯಿರಿ. ಬಳಿಕ ನುಣ್ಣಗೆ ಪುಡಿ ಮಾಡಿಕೊಳ್ಳಿ. ತಯಾರಿಸಿಕೊಂಡ ಮಸಾಲೆ ಪುಡಿಯನ್ನು ತುರಿದ ಮಾವಿನಕಾಯಿ ಜೊತೆಗೆ ಸೇರಿಸಿ. ನಂತರ ಉಪ್ಪು, ಅಚ್ಚ ಖಾರದಪುಡಿ, ಅರಿಶಿನವನ್ನು ಸೇರಿಸಿ ಮಿಶ್ರಣ ಮಾಡಿ.

ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಂಡು ತಿಳಿಸಿರುವ ಒಗ್ಗರಣೆ ಸಾಮಗ್ರಿಗಳನ್ನು ಹಾಕಿ. ಸಾಸಿವೆ ಸಿಡಿದು, ಬೆಳ್ಳುಳ್ಳಿ ಕೆಂಬಣ್ಣ ಬರುವರೆಗೆ ಹುರಿಯಿರಿ. ಈ ಒಗ್ಗರಣೆಯನ್ನು ಮಾವಿನಕಾಯಿ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಗಾಳಿಯಾಡದ ಡಬ್ಬಿಯಲ್ಲಿ ತುಂಬಿಸಿಡಿ.

ನೆಲ್ಲಿಕಾಯಿ

ಬೇಕಾಗುವ ಸಾಮಗ್ರಿಗಳು: ನೆಲ್ಲಿಕಾಯಿ 20, ಎಣ್ಣೆ 3 ಟೇಬಲ್ ಚಮಚ, ಸಾಸಿವೆ 1 ಟೀ ಚಮಚ, ಅರಶಿನ 1 ಟೀ ಚಮಚ, ಜೀರಿಗೆ ಪುಡಿ 1 ಟೀ ಚಮಚ, ಇಂಗು 1/2 ಟೀ ಚಮಚ, ಮೆಂತ್ಯ ಹುರಿದು ಪುಡಿ ಮಾಡಿ ಕೊಂಡಿದ್ದು 2 ಟೀ ಚಮಚ, ಉಪ್ಪು ಒಂದೂವರೆ ಟೇಬಲ್ ಚಮಚ (ನೆಲ್ಲಿಕಾಯಿಯ ಹುಳಿ ನೋಡಿ ಹಾಕಿ), ಅಚ್ಚ ಖಾರದ ಪುಡಿ ಒಂದೂವರೆ ಟೇಬಲ್ ಚಮಚ.

ತಯಾರಿಸುವ ವಿಧಾನ: ಕುಕ್ಕರ್ ಬಟ್ಟಲಿನಲ್ಲಿ ನೆಲ್ಲಿಕಾಯಿಯನ್ನು ಹಾಕಿ ಮೂರು ವಿಷಲ್ ಕೂಗಿಸಿ. ವಿಷಲ್ ಇಳಿದ ಮೇಲೆ ಪೂರ್ತಿ ಅರಿದ ನಂತರ ಬೀಜದಿಂದ ಬಿಡಿಸಿಕೊಳ್ಳಿ. ಮಿಕ್ಸಿ ಜಾರಿಗೆ ನೆಲ್ಲಿಕಾಯಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಬಿಸಿ ಎಣ್ಣೆಗೆ ಸಾಸಿವೆ, ಇಂಗು, ಅರಿಶಿನ, ಜೀರಿಗೆ ಪುಡಿ, ಮೆಂತ್ಯ ಪುಡಿಯನ್ನು ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ರುಬ್ಬಿಕೊಂಡ ನೆಲ್ಲಿಕಾಯಿಯನ್ನು ಹಾಕಿ. ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ಉಪ್ಪನ್ನು ಸೇರಿಸಿ. ನಂತರ ಖಾರದಪುಡಿಯನ್ನು ಹಾಕಿ. ಸಣ್ಣ ಉರಿಯಲ್ಲಿ ಹತ್ತು ನಿಮಿಷ ನೀರಿನಾಂಶ ಹೋಗುವರೆಗೆ ಹುರಿಯಿರಿ. ಬಳಿಕ ಒಲೆಯನ್ನು ಆರಿಸಿ. ಪೂರ್ತಿ ತಣ್ಣಗಾದ ನಂತರ ಒಂದು ಗಾಜಿನ ಬಾಟಲಿಯಲ್ಲಿ ಹಾಕಿಡಿ. ರುಚಿಕರವಾದ ತೊಕ್ಕನ್ನು ತಯಾರಿಸಿ ಅನ್ನ, ರೊಟ್ಟಿ, ಚಪಾತಿಯೊಂದಿಗೆ ಸವಿಯಿರಿ.

ಟೊಮೆಟೊ

ಬೇಕಾಗುವ ಸಾಮಗ್ರಿಗಳು: ನಾಟಿ ಟೊಮೆಟೊ ಹಣ್ಣು 1 ಕೆಜಿ, ಹುಣಸೆಹಣ್ಣು 50 ಗ್ರಾಂ, ಸಾಸಿವೆ 1 ಟೇಬಲ್ ಚಮಚ ಮತ್ತು ಮೆಂತ್ಯ 1 ಟೇಬಲ್ ಚಮಚ ಹುರಿದು ಪುಡಿ ಮಾಡಿಕೊಳ್ಳಿ, ಎಣ್ಣೆ 1/4 ಕಪ್. ಸಾಸಿವೆ 1 ಟೀ ಚಮಚ, ಜೀರಿಗೆ 1 ಟೀ ಚಮಚ, ಕಡಲೆಬೇಳೆ 1 ಟೀ ಚಮಚ, ಉದ್ದಿನಬೇಳೆ 1 ಟೀ ಚಮಚ, ಇಂಗು 1/4 ಟೀ ಚಮಚ, ಕರಿಬೇವು 15 ರಿಂದ 20, ಬೆಳ್ಳುಳ್ಳಿ 20 ರಿಂದ 25, 50 ಗ್ರಾಂ ಅಚ್ಚಖಾರದಪುಡಿ, 50 ಗ್ರಾಂ ಉಪ್ಪು, 2 ಒಣಮೆಣಸು.

ತಯಾರಿಸುವ ವಿಧಾನ: ಟೊಮೆಟೊ ತೊಳೆದು ನೀರು ಇರದಂತೆ ಚೆನ್ನಾಗಿ ಬಟ್ಟೆಯಿಂದ ಒರಸಿಕೊಳ್ಳಿ. ಬಳಿಕ ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಬಾಣಲೆಗೆ 2 ಟೇಬಲ್ ಚಮಚ ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಕತ್ತರಿಸಿದ ಟೊಮೆಟೊ ಹಾಕಿ ಮಿಶ್ರಣ ಮಾಡಿ. ಇದಕ್ಕೆ ಹುಣಸೆಹಣ್ಣನ್ನು ಸೇರಿಸಿ. ಬಳಿಕ ಮುಚ್ಚಳ ಮುಚ್ಚಿ ಮೆತ್ತಗಾಗುವರೆಗೆ ಬೇಯಿಸಿ. ಬೆಂದ ನಂತರ ಆರಲು ಬಿಡಿ. ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಗೆ ಉಳಿದ ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಬಳಿಕ ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ, ಇಂಗು, ಕರಿಬೇವಿನ ಎಲೆ, ಬೆಳ್ಳುಳ್ಳಿ, ಒಣಮೆಣಸನ್ನು ತುಂಡು ಮಾಡಿ ಹಾಕಿ. ಇವುಗಳು ಕೆಂಬಣ್ಣ ಬರುವರೆಗೆ ಹುರಿಯಿರಿ. ನಂತರ ರುಬ್ಬಿಕೊಂಡ ಮಿಶ್ರಣ, ಪುಡಿ ಮಾಡಿದ ಮಿಶ್ರಣ, ಅಚ್ಚಖಾರದಪುಡಿ, ಉಪ್ಪು ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮಧ್ಯಮ ಉರಿಯಲ್ಲಿ ಕುದಿಸಿ. ಮಿಶ್ರಣವು ಎಣ್ಣೆಯನ್ನು ಬಿಟ್ಟುಕೊಂಡು ಗಟ್ಟಿಯಾಗುತ್ತಾ ಬರುವಾಗ ಒಲೆಯನ್ನು ಆರಿಸಿ. ಈಗ ರುಚಿಕರವಾದ ಟೊಮೆಟೊ ತೊಕ್ಕು ನಿಮಗೆ ಇಷ್ಟವಾದ ಪದಾರ್ಥಗಳೊಂದಿಗೆ ಸವಿಯಬಹುದು.

ಹುಣಸೆಕಾಯಿ

ಬೇಕಾಗುವ ಸಾಮಗ್ರಿ: ಹಸಿರು ಹುಣಸೆಕಾಯಿ 1/2 ಕೆಜಿ, ಉಪ್ಪು 1/2 ಕೆಜಿ, 2 ಟೇಬಲ್ ಚಮಚ ಮೆಂತ್ಯ, 1 ಟೇಬಲ್ ಚಮಚ ಅರಿಶಿನಪುಡಿ, 50 ಹಸಿಮೆಣಸಿನಕಾಯಿ.

ಒಗ್ಗರಣೆಗೆ: ಎಣ್ಣೆ 1 ಟೇಬಲ್ ಚಮಚ, ಸಾಸಿವೆ 1 ಟೀ ಚಮಚ, ಇಂಗು 1/4 ಟೀ ಚಮಚ.

ತಯಾರಿಸುವ ವಿಧಾನ: ಮೆಂತ್ಯ ಹುರಿದು ಪುಡಿಮಾಡಿಕೊಳ್ಳಿ. ಮೆಣಸಿನಕಾಯಿ ತೊಟ್ಟು ಬಿಡಿಸಿಕೊಳ್ಳಿ. ಹುಣಸೆಕಾಯಿಯನ್ನು ತೊಳೆದು ಒರಸಿಟ್ಟುಕೊಳ್ಳಿ. ಹುಣಸೆಕಾಯಿ ಮತ್ತು ಮೆಣಸಿನಕಾಯಿಯನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ನೀರನ್ನು ಮುಟ್ಟಿಸಬೇಡಿ. ಹುಣಸೆ ನಾರು ಇದ್ದರೆ ತೆಗೆದು ಹಾಕಿ. ರುಬ್ಬಿದ ಮಿಶ್ರಣಕ್ಕೆ ಅರಿಶಿನ, ಉಪ್ಪು, ಮೆಂತ್ಯ ಸೇರಿಸಿ ಮಿಶ್ರಣ ಮಾಡಿ. ಗಾಳಿಯಾಡದ ಜಾಡಿಯಲ್ಲಿ ಅಥವಾ ಸೀಸೆಗಳಲ್ಲಿ ತುಂಬಿಸಿಡಿ. ಬೇಕೆಂದಾಗ ಸ್ವಲ್ಪ ಸ್ವಲ್ಪ ತೆಗೆದು ಒಗ್ಗರಣೆ ಹಾಕಿಕೊಂಡು ಸವಿಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.