ಚಿತ್ರದುರ್ಗ ಕೋಟೆಯಲ್ಲಿ ಬಿರು ಬೇಸಿಗೆಯಿಂದ ಒಣಗಿದ್ದ ಹುಲ್ಲು, ಗಿಡಗಳು ಮುಂಗಾರು ಮಳೆಗೆ ಜೀವ ಪಡೆದಿವೆ. ಹಚ್ಚಹಸುರಿನ ಜತೆಗೆ ಮುಸ್ಸಂಜೆ ಸೂರ್ಯ ಕಿರಣವೂ ಕಲ್ಲಿನ ಕೋಟೆ ಮೇಲೆ ಬೀಳುತ್ತಿದ್ದರೆ ನೋಡುಗರ ಕಣ್ಣಿಗೆ ಹಬ್ಬವೇ ಸರಿ. ಭಾನುವಾರ ಸಂಜೆ ಕ್ಯಾಮೆರಾ ಕಣ್ಣಿಗೆ ಕೋಟೆ ಕಂಡಿದ್ದು ಹೀಗೆ.- ಪ್ರಜಾವಾಣಿ ಚಿತ್ರ