ಸ್ಯಾಂಡ್‌ವಿಚ್‌ನಲ್ಲೂ ನಾನಾ ಬಗೆಗಳಿವೆ. ತರಕಾರಿಗಳಿರುವ ವೆಜ್ ಸ್ಯಾಂಡ್‌ವಿಚ್‌ನಂತೆಯೇ ನಾನ್‌ವೆಜ್ ಸ್ಯಾಂಡ್‌ವಿಚ್‌ಗಳೂ ಸಿಗುತ್ತವೆ. ಸಂಜೆ ಹೊತ್ತು ಕೊರೆವ ಚಳಿಗೆ ಬಿಸಿ ಬಿಸಿ ಸ್ಯಾಂಡ್‌ವಿಚ್ ತಿಂದರೆ ಎಷ್ಟು ಚೆನ್ನಾಗಿರುತ್ತದೆ ಗೊತ್ತಾ? ಇದು ಬೇಸಿಗೆ ಕಾಲ ಈಗೇಕೆ ಸ್ಯಾಂಡ್‌ವಿಚ್ ಕಥೆ ಎನ್ನುವಿರಾ? ಜಲಂಧರ್‌ನಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ಸೋಮವಾರ 30 ಅಡಿ ಉದ್ದದ ಸ್ಯಾಂಡ್‌ವಿಚ್ ತಯಾರಿಸಿದ್ದಾರೆ. ಇದನ್ನು ಒಬ್ಬರೇ ತಿನ್ನಲಂತೂ ಸಾಧ್ಯವಿಲ್ಲ. ಮನೆಯವರೆಲ್ಲ ಕೂತು ಸವಿಯಬಹುದು - ಪಿಟಿಐ ಚಿತ್ರ