ಬುಧವಾರ, ಏಪ್ರಿಲ್ 14, 2021
29 °C

ದ್ವಿತೀಯ ಪಿಯುಸಿ ಭೌತಶಾಸ್ತ್ರ: ಸೌರಕೋಶಗಳ ಉಪಯೋಗಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೌತಶಾಸ್ತ್ರ

1) ಉಪಗ್ರಹ ಮತ್ತು ವ್ಯೋಮ ನೌಕೆಗಳಲ್ಲಿ ಬಳಸುತ್ತಾರೆ

2) ಮನೆಗಳಲ್ಲಿ ಬಳಸುತ್ತಾರೆ

3) ಕೆಲ ಕ್ಯಾಲ್ಕುಲೇಟರ್‌ಗಳಲ್ಲಿ ಬಳಸುತ್ತಾರೆ.

ಡಿಜಿಟಲ್ ಎಲೆಕ್ಟ್ರಾನಿಕ್ಸ್ ಮತ್ತು ಲಾಜಿಕ್ ಗೇಟ್‌ಗಳು
ದ್ವಿಮಾನ ಸಂಖ್ಯೆಯಲ್ಲಿ ಎರಡು ಸ್ಥಾನಗಳು ಮಾತ್ರ ಇದ್ದು  ಅವು o(oV) ಮತ್ತು 1(5V) ಇದ್ದು ಇವುಗಳನ್ನು ಡಿಜಿಟಲ್ ಎಲೆಕ್ಟ್ರಾನಿಕ್ಸ್‌ನಲ್ಲಿ ಎರಡು ವೋಲ್ಟೇಜ್‌ನ ಮಟ್ಟಗಳನ್ನಾಗಿ ಉಪಯೋಗಿಸುತ್ತಾರೆ. ಇಂತಹ ಸಂಜ್ಞೆಗಳನ್ನು ಡಿಜಿಟಲ್ ಸಂಖ್ಯೆಗಳು ಎನ್ನುವರು. ಅಂದರೆ ಡಿಜಿಟಲ್ ಮಂಡಲದಲ್ಲಿ ಇನ್‌ಪುಟ್ ಮತ್ತು ಔಟ್‌ಪುಟ್‌ಗಳನ್ನು ಎರಡು ಬೆಲೆಗಳಲ್ಲಿ ಮಾತ್ರ ಅನುಮತಿಸಲಾಗುವುದು.

ಲಾಜಿಕ್ ಗೇಟ್‌ಗಳು

ಭುಕ್ತ ಮತ್ತು ನಿರ್ಗತ ವೋಲ್ಟೇಜ್‌ಗಳ ನಡುವಿನ ಕೆಲವೊಂದು ತಾರ್ಕಿಕ ಸಂಬಂಧಗಳನ್ನು ಕಲ್ಪಿಸುವ ಮಂಡಲವೇ ಗೇಟ್‌.

1) NOT ಗೇಟ್‌

ಭುಕ್ತ ಇದ್ದಾಗ 0 ನಿರ್ಗತ 1 ಮತ್ತು ಭುಕ್ತ 1 ಇದ್ದಾಗ ನಿರ್ಗತ 0 ಇರುತ್ತದೆ. ಆದ್ದರಿಂದ NOT ಗೇಟ್‌ ಅನ್ನು ವಿದ್ಯುತ್ ಪರಿವರ್ತಕ ಸಾಧನವಾಗಿ ಬಳಸುತ್ತಾರೆ.

ನಿರ್ಗತ

2) OR ಗೇಟ್‌

OR ಗೇಟಿನಲ್ಲಿ 2 ಅಥವಾ ಹೆಚ್ಚಿನ ಭುಕ್ತಗಳು ಮತ್ತು 1 ನಿರ್ಗತವಿರುತ್ತದೆ. ಭುಕ್ತ A ಅಥವಾ ಭುಕ್ತ B ಎರಡೂ ಭುಕ್ತಗಳು 1 ಆಗಿದ್ದಾಗ ನಿರ್ಗತ Y ಯು 1 ಬರುತ್ತದೆ. ಅಂದರೆ ಯಾವುದೇ ಭುಕ್ತ ಹೆಚ್ಚು ಇದ್ದಾಗ ನಿರ್ಗತವು ಹೆಚ್ಚು ಇರುತ್ತದೆ.

ನಿರ್ಗತ: Y = A + B

3) AND ಗೇಟ್‌

AND ಗೇಟ್‌ನಲ್ಲಿ ಎರಡು ಅಥವಾ ಹೆಚ್ಚಿನ ಭುಕ್ತಗಳು ಮತ್ತು ಒಂದು ನಿರ್ಗತವಿರುತ್ತದೆ. ಭುಕ್ತ A ಮತ್ತು B ಗಳೆರಡು 1 ಆಗಿದ್ದಾಗ ಮಾತ್ರ ನಿರ್ಗತ Y ಯು 1 ಆಗಿರುತ್ತದೆ. ಅಂದರೆ ಭುಕ್ತಗಳೆಲ್ಲವೂ ಹೆಚ್ಚಿದ್ದಾಗ ಮಾತ್ರ ನಿರ್ಗತ ಹೆಚ್ಚಿರುತ್ತದೆ.

ನಿರ್ಗತ: Y = A.B

4) NAND ಗೇಟ್‌

ಇದು NOT ಗೇಟ್‌ ಅನ್ನು ಅನುಸರಿಸಿರುವ ಒಂದು AND ಗೇಟ್‌ ಆಗಿದ್ದು A ಭುಕ್ತ ಮತ್ತು B ಗಳೆರಡು 1 ಆಗಿದ್ದಾಗ ಬರುವ ನಿರ್ಗತ Y ಯು 0 ಆಗಿರುತ್ತದೆ.

ನಿರ್ಗತ

5) NOR ಗೇಟ್‌

ಇದು NOT ಗೇಟ್ ಅನ್ನು ಅನುಸರಿಸಿರುವ ಒಂದು OR ಗೇಟ್‌ ಆಗಿದ್ದು ಭುಕ್ತ A ಮತ್ತು B ಗಳೆರೆಡು 0 ಆಗಿದ್ದಾಗ NOR ಗೇಟ್‌ನ ನಿರ್ಗತ Y ಯು 1 ಆಗಿರುತ್ತದೆ.

ನಿರ್ಗತ:

NAD ಮತ್ತು NDR ಗೇಟ್‌ಗಳು ಸಾರ್ವತ್ರಿಕ ಗೇಟ್‌ಗಳಾಗಿದ್ದು, ಇವುಗಳನ್ನು ಬಳಸಿಕೊಂಡು ಮೂಲಭೂತ ಗೇಟ್‌ಗಳಾದ OR, AND ಮತ್ತು NOT ಗೇಟುಗಳನ್ನು ಪಡೆಯಬಹುದು.

(ಪಾಠಗಳ ಸಂಯೋಜನೆ: ಆಕಾಶ್‌ ಇನ್‌ಸ್ಟಿಟ್ಯೂಟ್‌, ಬೆಂಗಳೂರು)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು