ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಮಾರ್ಗದರ್ಶಿ: ಹೊಸ ಕಾರ್ಟಿಸಿಯನ್ ಸಾಂಪ್ರದಾಯಿಕ ಸಂಕೇತಗಳು

Last Updated 7 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಭೌತಶಾಸ್ತ್ರ
ದರ್ಪಣದ ಧ್ರುವ (p) ಯನ್ನು ಮೂಲ ಬಿಂದುವಾಗಿ ತೆಗೆದುಕೊಳ್ಳಲಾಗುತ್ತದೆ.ವಸ್ತುವನ್ನು ಯಾವಾಗಲೂ ದರ್ಪಣದ ಎಡಭಾಗದಲ್ಲಿ ಇಡಲಾಗುತ್ತದೆ. ದರ್ಪಣದ ಮೇಲೆ ವಸ್ತುವಿನಿಂದ ಬೀಳುವ ಬೆಳಕು ಎಡಗಡೆಯಿಂದ ಬೀಳುತ್ತದೆ ಎಂದು ಸೂಚಿಸುತ್ತದೆ.

ಪ್ರಧಾನ ಅಕ್ಷಕ್ಕೆ ಸಮಾಂತರವಾಗಿರುವ ಎಲ್ಲಾ ದೂರಗಳನ್ನು ದರ್ಪಣದ ಧ್ರುವದಿಂದ ಅಳೆಯಲಾಗುತ್ತದೆ.

ಮೂಲ ಬಿಂದುವಿನ ಬಲಭಾಗದಲ್ಲಿ (+X -ಅಕ್ಷದ ಉದ್ದಕ್ಕೂ) ಅಳೆಯಲಾದ ಎಲ್ಲಾ ದೂರಗಳನ್ನು ಧನಾತ್ಮಕವಾಗಿಯೂ ಮತ್ತು ಮೂಲ ಬಿಂದುವಿನ ಎಡಭಾಗದಲ್ಲಿ (- X -ಅಕ್ಷದ ಉದ್ದಕ್ಕೂ) ಅಳೆಯಲಾದ ದೂರಗಳನ್ನು ಋಣಾತ್ಮಕವಾಗಿ ತೆಗೆದುಕೊಳ್ಳಲಾಗುತ್ತದೆ.

ಪ್ರಧಾನ ಅಕ್ಷಕ್ಕೆ ಲಂಬವಾಗಿ ಮೇಲಿನ ಕಡೆಗೆ (+Y -ಅಕ್ಷದ ಉದ್ದಕ್ಕೂ) ಅಳೆಯಲಾದ ದೂರಗಳನ್ನು ಧನಾತ್ಮಕವಾಗಿಯೂ ಮತ್ತು ಪ್ರಧಾನ ಅಕ್ಷಕ್ಕೆ ಲಂಬವಾಗಿ ಕೆಳಗಿನ ಬದಿಯ ಕಡೆಗೆ (-Y- ಅಕ್ಷದ ಉದ್ದಕ್ಕೂ) ಅಳೆಯಲಾದ ದೂರಗಳನ್ನು ಋಣಾತ್ಮಕವಾಗಿಯೂ ತೆಗದುಕೊಳ್ಳಲಾಗುತ್ತದೆ.

(ಚಿತ್ರಕ್ಕಾಗಿ ದರ್ಪಣ ಸೂತ್ರ ಮತ್ತು ವರ್ಧನೆಯಲ್ಲಿ ಕೊಟ್ಟಿರುವ ಚಿತ್ರವನ್ನು ಅನುಕರಿಸಿ)

ದರ್ಪಣ ಸೂತ್ರ ಮತ್ತು ವರ್ಧನೆ
ಗೋಳೀಯ ದರ್ಪಣದಲ್ಲಿ,ದರ್ಪಣದ ಧ್ರುವದಿಂದ ವಸ್ತುವಿಗೆ ಇರುವ ದೂರವನ್ನು ವಸ್ತು ದೂರ (u) ಎನ್ನುವರು

ದರ್ಪಣದ ಧ್ರುವದಿಂದ ಪ್ರತಿಬಿಂಬಕ್ಕೆ ಇರುವ ದೂರವನ್ನು ಪ್ರತಿಬಿಂಬ ದೂರ(v) ಎನ್ನುವರು.

ಸಂಗಮದೂರ (f) , ವಸ್ತುದೂರ (u) ಮತ್ತು ಪ್ರತಿಬಿಂಬ ದೂರ (v) ನಡುವಿನ ಸಂಬಂಧ

ಈ ಮೇಲಿನ ಸಮೀಕರಣವನ್ನು ದರ್ಪಣ ಸೂತ್ರ ಎನ್ನುವರು.

ವರ್ಧನೆ (m)
ವರ್ಧನೆಯು ಸಾಪೇಕ್ಷವಾಗಿ ಗೋಳೀಯ ದರ್ಪಣದಿಂದ ಉಂಟಾದ ಪ್ರತಿಬಿಂಬವು ವಸ್ತುವಿನ ಗಾತ್ರಕ್ಕಿಂತ ಎಷ್ಟು ವರ್ಧನೆಯಾಗಿದೆ ಎಂಬುದನ್ನು ತಿಳಿಸುತ್ತದೆ.

ವಸ್ತುವಿನ ಎತ್ತರ h ಹಾಗೂ ಪ್ರತಿಬಿಂಬದ ಎತ್ತರ h1 ಆದರೆ ವರ್ಧನೆ m ಯು

ಇಲ್ಲಿ ವಸ್ತುವಿನ ಎತ್ತರವನ್ನು ಧನಾತ್ಮಕವಾಗಿ, ಮಿಥ್ಯ ಪ್ರತಿಬಿಂಬವನ್ನು ಧನಾತ್ಮಕವಾಗಿಯೂ ಮತ್ತು ಸತ್ಯ ಪ್ರತಿಬಿಂಬವನ್ನು ಋಣಾತ್ಮಕವಾಗಿಯೂ ತೆಗೆದುಕೊಳ್ಳಲಾಗುತ್ತದೆ.

ಬೆಳಕಿನ ವಕ್ರೀಭವನ
ಬೆಳಕು ಒಂದು ಸಾಂದ್ರತೆಯ ಮಾಧ್ಯಮದಿಂದ ಇನ್ನೊಂದು ಸಾಂದ್ರತೆಯ ಮಾಧ್ಯಮಕ್ಕೆ ಓರೆಯಾಗಿ ಚಲಿಸುವಾಗ ಎರಡನೇ ಮಾಧ್ಯಮದಲ್ಲಿ ಪ್ರಸರಣ ದಿಕ್ಕು ಬದಲಾಗುವ ಪ್ರಕ್ರಿಯೆಯನ್ನು ಬೆಳಕಿನ ವಕ್ರೀಭವನ ಎನ್ನುವರು.

ಬೆಳಕಿನ ವಕ್ರೀಭವನ ನಿಯಮಗಳು

1) ಪತನ ಕಿರಣ, ವಕ್ರೀಭವನ ಕಿರಣ ಮತ್ತು ಎರಡು ಮಾಧ್ಯಮಗಳ ಸಂಪರ್ಕ ಮೇಲ್ಮೈಗೆ ಪತನ ಬಿಂದುವಿನಲ್ಲಿ ಎಳೆದ ಲಂಬ ಎಲ್ಲವೂ ಒಂದೇ ಸಮತಲದಲ್ಲಿರುತ್ತದೆ.

2) ಸ್ನೆಲ್ಸ್‌ನ ವಕ್ರೀಭವನ ನಿಯಮ

ಕೊಟ್ಟಿರುವ ಬೆಳಕಿನ ನಿರ್ದಿಷ್ಟ ಬಣ್ಣ ಮತ್ತು ನೀಡಿರುವ ಜೋಡಿ ಮಾಧ್ಯಮಗಳಿಗೆ ಪತನಕೋನದ ಸೈನು ಮತ್ತು ವಕ್ರಿಮ ಕೋನದ ಸೈನುಗಳ ಅನುಪಾತ ಸ್ಥಿರವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT