ನವದೆಹಲಿ: ದೇಶದಲ್ಲಿ ಬಹುತೇಕ ಜನರು ಪೌಷ್ಟಿಕಾಂಶಯುಕ್ತ ಆಹಾರ ಸೇವನೆಗೆ ಗಮನ ಕೊಡದೇ ಹೆಚ್ಚೆಚ್ಚು ಆಹಾರವನ್ನು ಸೇವಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ದೆಹಲಿಯ ಏಮ್ಸ್ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತೀಯರಲ್ಲಿ ಶೇ 56 ರಷ್ಟು ರೋಗಗಳು ಕೆಟ್ಟ ಆಹಾರ ಪದ್ದತಿಯಿಂದಲೇ ಕಾಣಿಸಿಕೊಳ್ಳುತ್ತಿವೆ ಎಂದು ಏಮ್ಸ್ನ ಮುಖ್ಯ ಆಹಾರತಜ್ಞೆ ಪರಮೀತ್ ಕೌರ್ ಅವರು ಸ್ಥೂಲಕಾಯತೆಯ ಪರಿಣಾಮದ ಬಗೆಗಿನ ಮಾಧ್ಯಮ ಸಂವಾದದಲ್ಲಿ ಹೇಳಿದ್ದಾರೆ.

ಹೆಚ್ಚುತ್ತಿರುವ ಸ್ಥೂಲಕಾಯವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಕ್ಯಾನ್ಸರ್ಗೂ ಪ್ರಮುಖ ಕಾರಣವಾಗಿ ಬದಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮುಂದುವರೆದ ಹಾಗೂ ಇತರ ಕೆಲ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತೀಯರು ಅತಿ ಹೆಚ್ಚು ಆಹಾರ ಸೇವಿಸುತ್ತಾರೆ. ಅಗತ್ಯ ಇಲ್ಲದಿದ್ದರೂ ತಿನ್ನುತ್ತಾರೆ. ಅದರಲ್ಲೂ ಬಹುತೇಕರು ಹೀಗೆ ತಿನ್ನುವಾಗ ಸಮತೋಲಿತ ಆಹಾರಕ್ಕೆ ಗಮನ ಕೊಡುವುದಿಲ್ಲ ಎಂದು ಹೇಳಿದ್ದಾರೆ.

ಧಾನ್ಯಗಳು, ಸೊಪ್ಪು, ತರಕಾರಿ, ಹಣ್ಣನ್ನು ಆಹಾರವಾಗಿ ಬಳಸುವವರ ಹಾಗೂ ಪ್ರೊಟೀನ್ ಅನ್ನು ಸಮರ್ಪಕವಾಗಿ ಬಳಸುವವ ಭಾರತೀಯರ ಪ್ರಮಾಣ ಇತ್ತೀಚೆಗೆ ತೀರಾ ಕಡಿಮೆಯಾಗುತ್ತಿದೆ. ಇದರಿಂದ ಭಾರತೀಯರಲ್ಲಿ ಶೇ 56 ರಷ್ಟು ರೋಗಗಳು ಕೆಟ್ಟ ಆಹಾರ ಪದ್ದತಿಯಿಂದಲೇ ಕಾಣಿಸಿಕೊಳ್ಳುತ್ತಿವೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.