ಇತ್ತೀಚಿನ ದಿನಗಳಲ್ಲಿ ಆ್ಯಂಟಿಬಯೊಟಿಕ್ಗಳ ಅತಿಯಾದ ಬಳಕೆ ಒಂದು ದೊಡ್ಡ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಅಗತ್ಯವಿಲ್ಲದ ಸಂದರ್ಭಗಳಲ್ಲಿ ಅಥವಾ ವೈದ್ಯರ ಸಲಹೆ ಇಲ್ಲದೆ ಬಳಸುವುದು ಅಪಾಯಕಾರಿಯಾಗಿದೆ.

ವೈರಾಣು ಜ್ವರ, ಸಾಮಾನ್ಯ ಶೀತ, ಕೆಮ್ಮಿನಂತಹ ಆರೋಗ್ಯ ಸಮಸ್ಯೆಗಳಿಗೆ ಆ್ಯಂಟಿಬಯೊಟಿಕ್ಗಳು ಪರಿಣಾಮಕಾರಿಯಾಗಿರುವುದಿಲ್ಲ. ಆದರೂ ಜನರು ಬೇಗ ಗುಣವಾಗಬೇಕೆಂಬ ನಿರೀಕ್ಷೆಯಲ್ಲಿ ಅವುಗಳನ್ನು ಬಳಸುವುದು ಸಾಮಾನ್ಯ ಎನ್ನುವಂತಾಗಿದೆ.
.ಮಾನಸಿಕ ಕಾಯಿಲೆ | ತಜ್ಞರ ಸಲಹೆ ಅಗತ್ಯ: ಡಾ. ಮೋಹನ.ಮಹಿಳೆಗೆ ಅಪರೂಪದ ಕಾಯಿಲೆ: ಸ್ಪರ್ಶ್ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಚಿಕಿತ್ಸೆ.
ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕುಗಳು ಮತ್ತು ಕಾಯಿಲೆಗಳ ಚಿಕಿತ್ಸೆಗೆ ಆ್ಯಂಟಿಬಯೊಟಿಕ್ಗಳು ಅತ್ಯಂತ ಪರಿಣಾಮಕಾರಿ ಔಷಧಗಳಾಗಿವೆ. ಉದಾಹರಣೆಗೆ ನ್ಯೂಮೋನಿಯಾ, ಮೂತ್ರನಾಳದ ಸೋಂಕು, ಟೈಫಾಯ್ಡ್, ಬ್ಯಾಕ್ಟೀರಿಯಲ್ ಮೆನಿಂಜೈಟಿಸ್ ಮತ್ತು ಕೆಲವು ಚರ್ಮದ ಸೋಂಕುಗಳು.

ಇಂತಹ ಸಂದರ್ಭಗಳಲ್ಲಿ ವೈದ್ಯರ ಸಲಹೆಯೊಂದಿಗೆ ಸರಿಯಾದ ಡೋಸ್ ಮತ್ತು ಸರಿಯಾದ ಅವಧಿಗೆ ಆ್ಯಂಟಿಬಯೊಟಿಕ್ ಬಳಸುವುದು ಜೀವ ಉಳಿಸುವಂತಿರುತ್ತದೆ. ಆದರೆ ಅನಗತ್ಯ ಬಳಕೆಯಿಂದ ಆ್ಯಂಟಿಬಯೊಟಿಕ್ ಪ್ರತಿರೋಧ (Antibiotic Resistance) ಉಂಟಾಗುತ್ತದೆ.

ಆ್ಯಂಟಿಬಯೊಟಿಕ್ ಪ್ರತಿರೋಧ ಎಂದರೇನು?

ಆ್ಯಂಟಿಬಯೊಟಿಕ್ ಪ್ರತಿರೋಧವನ್ನು ಅರ್ಥಮಾಡಿಕೊಳ್ಳಲು, ಆ್ಯಂಟಿಬಯೊಟಿಕ್ಗಳು ಕೆಲಸ ಮಾಡುವ ವಿಧಾನದ ಬಗ್ಗೆ ತಿಳಿದಿರಬೇಕು.

ಬ್ಯಾಕ್ಟೀರಿಯಾಗಳು ತಮ್ಮ ಸುತ್ತ ಸಂರಕ್ಷಣಾ ಪದರನ್ನು (ಗೋಡೆಗಳನ್ನು) ನಿರ್ಮಿಸಿಕೊಳ್ಳುತ್ತವೆ. ಆ್ಯಂಟಿಬಯೊಟಿಕ್ಗಳು ಬ್ಯಾಕ್ಟೀರಿಯಾಗಳ ಗೋಡೆ ರಚನೆಗೆ ಅಡ್ಡಿಪಡಿಸಿ, ಅವುಗಳ ಬೆಳವಣಿಗೆಯನ್ನು ತಡೆದು ಅಥವಾ ಅವುಗಳನ್ನು ನೇರವಾಗಿ ನಾಶಮಾಡುವ ಮೂಲಕ ಸೋಂಕನ್ನು ನಿಯಂತ್ರಿಸುತ್ತವೆ. ಆದರೆ ಪ್ರತಿಬಾರಿ, ಅವಶ್ಯಕತೆ ಇಲ್ಲದೆ ಔಷಧ ಸೇವಿಸುವುದು, ಪೂರ್ಣ ಕೋರ್ಸ್ ಮುಗಿಸದೇ ನಿಲ್ಲಿಸುವುದು, ಅಥವಾ ವೈದ್ಯರ ಸಲಹೆಯಿಲ್ಲದೆ ಆ್ಯಂಟಿಬಯೊಟಿಕ್ ಬಳಸುವುದರಿಂದ ಎಲ್ಲ ಬ್ಯಾಕ್ಟೀರಿಯಾಗಳು ಸಾಯುವುದಿಲ್ಲ.

ಬದುಕುಳಿದ ಕೆಲವು ಬ್ಯಾಕ್ಟೀರಿಯಾಗಳು ಕಾಲಕ್ರಮೇಣ ಔಷಧಗಳಿಗೆ ಹೊಂದಿಕೊಳ್ಳುತ್ತವೆ. ಭವಿಷ್ಯದಲ್ಲಿ ಅದೇ ಅರೋಗ್ಯ ಸಮಸ್ಯೆ ಮತ್ತೊಮ್ಮೆ ಸಂಭವಿಸಿದ್ದಲ್ಲಿ, ಆ್ಯಂಟಿಬಯೊಟಿಕ್ನ ಪರಿಣಾಮ ಕ್ಷೀಣಿಸುತ್ತದೆ. ಇಂತಹ ಸಮಯದಲ್ಲಿ ಔಷಧದ ಪ್ರಮಾಣವನ್ನು ಹೆಚ್ಚಿಸಬೇಕಾಗುತ್ತದೆ ಅಥವಾ ಔಷಧವನ್ನೇ ಬದಲಿಸಬೇಕಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಸಾಮಾನ್ಯ ಸೋಂಕುಗಳಿಗೂ ಪರಿಣಾಮಕಾರಿ, ದುಬಾರಿ ಔಷಧಗಳು ಅಥವಾ ದೀರ್ಘ ಚಿಕಿತ್ಸೆಯ ಅಗತ್ಯತೆ ಕಾಡಬಹುದು. ಕ್ರಮೇಣವಾಗಿ ಇದು ಕೇವಲ ವ್ಯಕ್ತಿಗತ ಸಮಸ್ಯೆಯಾಗಿ ಉಳಿಯುವುದಿಲ್ಲ. ಆರೋಗ್ಯ ರಕ್ಷಣಾ ಕ್ಷೇತ್ರಕ್ಕೂ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ.
.ಬಾಣಂತಿಯರ ಸಾವು | ಕೇಂದ್ರ ತಂಡ ಕಳುಹಿಸಿ ಪರಿಶೀಲನೆ ನಡೆಸಿ: ಸಂಸದ ಸುಧಾಕರ್ ಪತ್ರ .ಆರೋಗ್ಯ ವಿಮೆ: ಕ್ಲೇಮ್ ತಿರಸ್ಕಾರಗೊಳ್ಳದಿರಲು ಮಾಡಬೇಕಿರುವುದೇನು?.
ಆ್ಯಂಟಿಬಯೊಟಿಕ್ ತಪ್ಪಾದ ಬಳಕೆ ಮತ್ತು ಅಡ್ಡಪರಿಣಾಮಗಳು

ಆ್ಯಂಟಿಬಯೊಟಿಕ್ಗಳ ಅತಿಯಾದ ಅಥವಾ ತಪ್ಪಾದ ಬಳಕೆ ಹಲವು ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು.

ಸಾಮಾನ್ಯವಾಗಿ ಅಜೀರ್ಣ, ವಾಂತಿ, ಎಡಿಮಾ (ದೇಹದ ಭಾಗದಲ್ಲಿ ದ್ರವ ಪದಾರ್ಥ ಶೇಖರಣೆ) ಕಾಡುತ್ತದೆ.

ಜೀರ್ಣಕ್ರಿಯೆಗೆ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಕೆಲವರಲ್ಲಿ ಅಲರ್ಜಿ, ಚರ್ಮದ ಉರಿ ಅಥವಾ ದದ್ದುಗಳು ಉಂಟಾಗುವ ಸಾಧ್ಯತೆಯೂ ಇದೆ.

ದೀರ್ಘಕಾಲ ಅಥವಾ ಅಗತ್ಯವಿಲ್ಲದ ಬಳಕೆಯಿಂದ ಯಕೃತ್ ಮತ್ತು ಮೂತ್ರಪಿಂಡಗಳ ಕಾರ್ಯಕ್ಷಮತೆ ಮೇಲೆ ಒತ್ತಡ ಬಿದ್ದು ಹಾನಿ ಸಂಭವಿಸಬಹುದು.

ಇದಕ್ಕಿಂತ ಮುಖ್ಯವಾಗಿ, ಅನಗತ್ಯವಾಗಿ ಸೇವಿಸುವ ಆ್ಯಂಟಿಬಯೊಟಿಕ್ಗಳು ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ಮಾತ್ರವಲ್ಲದೆ, ದೇಹಕ್ಕೆ ಉಪಕಾರ ಮಾಡುವ ಒಳ್ಳೆಯ ಬ್ಯಾಕ್ಟೀರಿಯಾಗಳನ್ನೂ ನಾಶಮಾಡುತ್ತವೆ. ಇದರಿಂದ ಆಂತರಿಕ ಸಮತೋಲನ ಹದಗೆಟ್ಟು ರೋಗನಿರೋಧಕ ಶಕ್ತಿ ಕುಂದುವ ಸಾಧ್ಯತೆ ಇದೆ.

ಔಷಧಗಳನ್ನು ಅನಾರೋಗ್ಯದಿಂದ ಬೇಗ ಗುಣವಾಗಲು ಅಲ್ಲ, ಪರಿಣಾಮಕಾರಿಯಾಗಿ ಗುಣವಾಗಲು ತೆಗೆದುಕೊಳ್ಳಬೇಕಾಗುತ್ತದೆ. ವೈದ್ಯರ ಸಲಹೆ ಪಡೆದು ಆ್ಯಂಟಿಬಯೊಟಿಕ್ ಬಳಸುವುದು ಒಳಿತು.

(ಲೇಖಕರು: ಡಾ.ಸಿಂಧು ಪಿ ಮದನಶೆಟ್ಟಿ, ಕನ್ಸಲ್ಟೆಂಟ್ - ಇಂಟರ್ನಲ್ ಮೆಡಿಸಿನ್, ಮಣಿಪಾಲ್ ಹಾಸ್ಪಿಟಲ್ ಸರ್ಜಾಪುರ್ ರೋಡ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.