ನವದೆಹಲಿ: ವೈದ್ಯರು ಶಿಫಾರಸ್ಸು ಮಾಡಿದ ರಕ್ತದೊತ್ತಡ ಔಷಧಿಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿರುತ್ತವೆ ಎಂಬುದನ್ನು ಲೆಕ್ಕಹಾಕುವ ಆನ್ಲೈನ್ ಸಾಧನವನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಈ ಸಾಧನದಿಂದ ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಲು ಈ ಸಾಧನ ನೇರವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಭಾರತ ಮೂಲದ ಸಂಶೋಧಕರನ್ನೂ ಒಳಗೊಂಡ ಆಸ್ಟ್ರೇಲಿಯಾದ ಜಾರ್ಜ್ ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ ಸಂಸ್ಥೆಯ ತಜ್ಞರು ಈ ಸಾಧನವನ್ನು ಅಭಿವೃದ್ಧಿ ಪಡಿಸಿದ್ದಾರೆ. 1 ಲಕ್ಷ ಜನರ ಮಾಹಿತಿಯನ್ನು ಒಳಗೊಂಡ ಸುಮಾರು 500 ವೈಜ್ಞಾನಿಕ ಲೇಖನಗಳನ್ನು ಆಧಾರಿಸಿ ಈ ಸಾಧನವನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ದಿ ಲ್ಯಾನ್ಸೆಟ್ ಜರ್ನಲ್ ಎಂಬ ಪತ್ರಿಕೆಯಲ್ಲಿ ಪ್ರಕಟವಾದ 'ರಕ್ತದೊತ್ತಡ ಚಿಕಿತ್ಸೆಯ ಮೌಲ್ಯಮಾಪನ ಸಾಧನ’ ಎಂಬ ವೈಜ್ಞಾನಿಕ ಲೇಖನದಲ್ಲಿ ಸಾಧನದ ಬಗ್ಗೆ ಹೇಳಲಾಗಿದೆ. ರೋಗಿಯ ರಕ್ತದೊತ್ತಡಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಲು ವೈದ್ಯರಿಗೆ ಈ ಸಾಧನ ಸಹಕಾರಿಯಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಸಿಸ್ಟೊಲಿಕ್ ರಕ್ತದೊತ್ತಡದಲ್ಲಿ ಪ್ರತಿ 1 ಎಂಎಂಎಚ್ಜಿ ಕಡಿಮೆಯಾಗುವುದರಿಂದ ಹೃದಯಾಘತ ಹಾಗೂ ಪಾಶ್ವವಾಯುವಿಗೆ ತುತ್ತಾಗುವ ಅಪಯಾವು ಶೇ 2ರಷ್ಟು ಕಡಿಮೆಯಾಗುತ್ತದೆ ಎಂದು ಆಸ್ಟ್ರೇಲಿಯಾದ ಜಾರ್ಜ್ ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ನ ಹೃದ್ರೋಗ ತಜ್ಞ ಮತ್ತು ಸಂಶೋಧನಾ ವಿದ್ಯಾರ್ಥಿ, ಬರಹಗಾರರಾಗಿರುವ ನೆಲ್ಸನ್ ವಾಂಗ್ ಹೇಳಿದ್ದಾರೆ.

ರಕ್ತದೊತ್ತಡವನ್ನು ಕಡಿಮೆ ಮಾಡಲು ಮಾರುಕಟ್ಟೆಯಲ್ಲಿ ಹಲವು ಔಷಧಿಗಳು ಲಭ್ಯ. ಕೆಲವರಿಗೆ ದಿನಕ್ಕೆ ಒಂದು ಸಾಕು. ಇನ್ನೂ ಕೆಲವರಿಗೆ ಒಂದಕ್ಕಿಂತ ಹೆಚ್ಚು ಪ್ರಮಾಣದ ಔಷಧಿಯನ್ನು ನೀಡಬೇಕು ಎಂಬುದನ್ನು ತಿಳಿಸಲು ವೈದ್ಯರಿಗೆ ನೇರವಾಗಲಿದೆ.

ಅವರಿಗೆಲ್ಲರಿಗೂ ಎಷ್ಟು ಪ್ರಮಾಣದಲ್ಲಿ ಔಷಧಿಯನ್ನು ನೀಡಬೇಕು ಎಂಬುದನ್ನು ಈ ಸಾಧನವು ತಿಳಿಸುತ್ತದೆ ಎಂದು ಇದನ್ನು ಅಭಿವೃದ್ಧಿ ಪಡಿಸಿದವರು ಹೇಳುತ್ತಾರೆ. ರಕ್ತದೊತ್ತಡವನ್ನು ಸಹಜ ಸ್ಥಿತಿಗೆ ತರಲು ಕೆಲವರಲ್ಲಿ 15 ರಿಂದ 30 ಎಂಎಂಎಚ್ಜಿ ಅಷ್ಟು ಕಡಿಮೆ ಮಾಡಬೇಕಾಗಿರುತ್ತದೆ. ಇನ್ನೂ ಕೆಲವರಲ್ಲಿ 8 ರಿಂದ 9 ಎಂಎಂಎಚ್ಜಿ ಅಷ್ಟು ಇಳಿಸಬೇಕಾಗುತ್ತದೆ. ಈ ಸಾಧನವು ಯಾರ್ಯಾರಿಗೆ ಎಷ್ಟು ಪ್ರಮಾಣದ ಔಷಧಿ ನೀಡಬೇಕು ಎಂಬುದನ್ನು ಈ ಸಾಧನ ತಿಳಿಸುವಲ್ಲಿ ನೇರವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.