ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತನ್ಯಪಾನದಿಂದ ಕ್ಯಾನ್ಸರ್‌ ದೂರ

Last Updated 4 ಫೆಬ್ರುವರಿ 2020, 1:56 IST
ಅಕ್ಷರ ಗಾತ್ರ

30 ವರ್ಷ ದಾಟಿದ ಮಹಿಳೆಯರಲ್ಲಿ ಈಗ ಸ್ತನ ಕ್ಯಾನ್ಸರ್‌ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಸ್ತನದಲ್ಲಿ ಗಂಟು, ಆಕಾರ ಬದಲಾವಣೆ, ಚರ್ಮದ ಮೇಲೆ ಕೆಂಪು ಚಿಪ್ಪುಗಳುಳ್ಳ ಪ್ಯಾಚ್, ತೊಟ್ಟುಗಳಲ್ಲಿ ದ್ರವ ವಿಸರ್ಜನೆ ಮತ್ತು ಸ್ತನಗಳ ಕುಗ್ಗುವಿಕೆ ಇವುಗಳು ಸ್ತನ ಕ್ಯಾನ್ಸರ್ ಚಿಹ್ನೆಗಳು. ಈ ಕ್ಯಾನ್ಸರ್ ಇತರ ಭಾಗಗಳಿಗೆ ಹರಡಿದರೆ ನೋವು, ಉಸಿರಾಟದ ತೊಂದರೆ, ಅಥವಾ ಹಳದಿ ಚರ್ಮ ಕಾಣಿಸಿಕೊಳ್ಳಬಹುದು.

ಇತ್ತೀಚಿನ ಅಧ್ಯಯನಗಳ ಪ್ರಕಾರ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ ದಕ್ಷಿಣ ಏಷ್ಯಾದ ದೇಶಗಳಲ್ಲಿ ಸ್ತನ್ಯಪಾನ ಪದ್ಧತಿಯಲ್ಲಿ ಭಾರತ ಅತ್ಯಂತ ಕಡಿಮೆ ಸ್ಥಾನದಲ್ಲಿದೆ. ಹುಟ್ಟಿದ ಒಂದು ಗಂಟೆಯೊಳಗೆ ಕೇವಲ ಶೇಕಡ 44ರಷ್ಟು ಮಹಿಳೆಯರು ಶಿಶುವಿಗೆ ಹಾಲುಣಿಸುತ್ತಾರೆ. ಶೇಕಡಾ 55ರಷ್ಟು ಮಕ್ಕಳು ಮೊದಲ ಆರು ತಿಂಗಳಲ್ಲಿ ಎದೆಹಾಲು ಪಡೆಯುತ್ತಾರೆ.

ಆದರೆ ಸ್ತನ್ಯಪಾನದಿಂದ ಕ್ಯಾನ್ಸರ್‌ ಬರುವ ಸಾಧ್ಯತೆ ತೀರಾ ಕಡಿಮೆ. ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಹಾಗೂ ಮಗುವಿಗೆ ಎದೆಹಾಲು ಕೊಡುವುದರಿಂದ ಆಕ್ಸಿಟೋಸಿನ್ ಬಿಡುಗಡೆ ಮಾಡುತ್ತದೆ. ಇದು ಕ್ಯಾನ್ಸರ್ ಉಂಟುಮಾಡುವ ರೂಪಾಂತರಗಳಿಗೆ ಹೆಚ್ಚು ನಿರೋಧಕವಾಗಿರುವುದರಿಂದ ಸ್ತನ ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ. ಅಲ್ಲದೆ, ಸ್ತನ್ಯಪಾನ ಮಾಡುವ ಮಹಿಳೆಯರು ಆರೋಗ್ಯಕರ ಆಹಾರಕ್ರಮವನ್ನು ಅನುಸರಿಸುವುದರ ಜೊತೆಗೆ ಆಲ್ಕೊಹಾಲ್ ಮತ್ತು ಧೂಮಪಾನದಿಂದ ದೂರವಿರುವುದರಿಂದ ಕ್ಯಾನ್ಸರ್‌ ಅಪಾಯ ಕಡಿಮೆ.

ಸಾಮಾನ್ಯವಾಗಿ ಹಾಲು ಕುಡಿಯುವ ಮಗುವಿರುವಾಗ ತಾಯಿಗೆ ಕಡಿಮೆ ಮುಟ್ಟಾಗುತ್ತದೆ. ಅದು ಈಸ್ಟ್ರೊಜೆನ್ ಮಟ್ಟವನ್ನು ಕಡಿಮೆ ಮಾಡುವುದರಿಂದ ಸ್ತನ ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ. ರೋಗದ ಕುಟುಂಬದ ಇತಿಹಾಸ ಹೊಂದಿರುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯವು ಶೇಕಡ 60 ಕಡಿಮೆಯಾಗುತ್ತದೆ. ಸಂಶೋಧನೆಯ ಪ್ರಕಾರ, 18 ತಿಂಗಳವರೆಗೆ ಸ್ತನ್ಯಪಾನ ಮಾಡಿಸಿದ ಮಹಿಳೆಯರಿಗೆ ಹೋಲಿಸಿದರೆ, ಎಂದಿಗೂ ಸ್ತನ್ಯಪಾನ ಮಾಡಿಸದ ಮಹಿಳೆಯರಲ್ಲಿ ಅಂಡಾಶಯದ ಕ್ಯಾನ್ಸರ್ ಅಪಾಯವು ಶೇಕಡ 1.5 ಹೆಚ್ಚಾಗಿದೆ.

ಸ್ತನ ಕ್ಯಾನ್ಸರ್ ಬಾರದಂತೆ ಅನುಸರಿಸಬಹುದಾದ ಕ್ರಮಗಳು:ಸ್ತನ ಕ್ಯಾನ್ಸರ್ ಇರುವ ಕುಟುಂಬದ ಸ್ತ್ರೀಯರು ಈ ಕಾಯಿಲೆಯ ಬಗ್ಗೆ ಜಾಗರೂಕರಾಗಿರಬೇಕು. ತಮ್ಮ ಮಕ್ಕಳಿಗೆ ದೀರ್ಘಕಾಲ ಸ್ತನಪಾನ ಮಾಡಬೇಕು

ಸ್ವಯಂ ಸ್ತನ ಪರೀಕ್ಷೆ:ಮಹಿಳೆಯರು ತಾವೇ ಸ್ವತಃ ಸ್ತನ ಪರೀಕ್ಷೆ ಮಾಡಬಹುದು. ಇದು ಸ್ತನ ಕ್ಯಾನ್ಸರಿನ ಪ್ರಾರಂಭಿಕ ಪತ್ತೆಗೆ ಸಹಕಾರಿ. ಪ್ರಾರಂಭದಲ್ಲೇ ಪತ್ತೆ ಹಚ್ಚಿದರೆ ಆಧುನಿಕ ಚಿಕಿತ್ಸೆಯಿಂದ ಪೂರ್ಣವಾಗಿ ಗುಣಪಡಿಸಬಹುದು. ಸ್ತನಗಳ ಪ್ರತಿನಿತ್ಯದ ಬದಲಾವಣೆಗಳ ಮೇಲೆ ದೇಹದ ಲೈಂಗಿಕ ಹಾರ್ಮೋನು ಗಳ ಪ್ರಭಾವವಿರುವುದರಿಂದ, ಸಾಮಾನ್ಯ ವಾಗಿ ಮುಟ್ಟು ಆಗುವ ಮೊದಲು ಪ್ರತಿ ಸ್ತ್ರೀಯರ ಸ್ತನಗಳು ಗಟ್ಟಿಯಾಗಿಯೂ ಮತ್ತು ನೋವು ಭರಿತವಾಗಿಯೂ ಇರುವುದರಿಂದ ಈ ಪರೀಕ್ಷೆಯನ್ನು ಮುಟ್ಟು ಆದ ನಂತರ ಅಂದರೆ 4-5 ದಿನಗಳ ನಂತರ ಮಾಡಬೇಕು. ಮುಟ್ಟು ನಿಂತ ಹೆಂಗಸರಲ್ಲಿ ಪ್ರತಿ ತಿಂಗಳ ನಿರ್ದಿಷ್ಟ ದಿನ ಉದಾಹರಣೆಗೆ ಮೊದಲನೇ ವಾರ ಈ ಪರೀಕ್ಷೆ ಮಾಡಬಹುದ

(ಲೇಖಕರ ಪರಿಚಯ:ಸೀನಿಯರ್ ಕನ್ಸಲ್ಟೆಂಟ್ ಸ್ತ್ರೀರೋಗತಜ್ಞ ಮತ್ತು ಪ್ರಸೂತಿ, ಅಪೊಲೊ ಕ್ರೆಡಲ್ - ಬ್ರೂಕ್‌ಫೀಲ್ಡ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT