ಕೊಲೆಸ್ಟ್ರಾಲ್ ಎನ್ನುವ ಪದ ಕೇಳಿದ ಕೂಡಲೇ ಕೆಲವರಿಗೆ ಆತಂಕ; ಹಲವರಿಗೆ ಗಾಬರಿ; ಒಟ್ಟಿನಲ್ಲಿ ಎಲ್ಲರಿಗೂ ಕುತೂಹಲ.

ಜೀವರಸಾಯನವಿಜ್ಞಾನವನ್ನು ಅಧ್ಯಯನ ಮಾಡುವವರು ‘ಶರೀರದ ಹಲವಾರು ಪ್ರಮುಖ ರಾಸಾಯನಿಕಗಳ, ಹಾರ್ಮೋನ್ಗಳ ಉತ್ಪತ್ತಿಕ್ಕೆ ಕೊಲೆಸ್ಟ್ರಾಲ್ ಮುಖ್ಯ ಕಚ್ಚಾವಸ್ತು’ ಎನ್ನುತ್ತಾರೆ. ಆದರೆ ವೈದ್ಯರು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಪತ್ತೆ ಮಾಡಿ, ಔಷಧವನ್ನು ನೀಡಿ, ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವಂತೆ ಸಲಹೆ ಮಾಡುತಾರೆ; ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದರೆ ಆಗುವ ಹಲವಾರು ಸಮಸ್ಯೆಗಳ ಬಗ್ಗೆ ವಿವರಿಸುತ್ತಾರೆ. ‘ಕೊಲೆಸ್ಟ್ರಾಲ್ ಎನ್ನುವುದು ಶತ್ರುವೆಂದು ಭಾವಿಸಲಾದ ಗೆಳೆಯನೋ ಅಥವಾ ಮಿತ್ರನ ವೇಷದ ವೈರಿಯೋ’ ಎನ್ನುವ ಪ್ರಶ್ನೆ ಬಹಳ ಜನರ ಮನಸ್ಸಿನಲ್ಲಿದೆ. ವೈದ್ಯಕೀಯ ಅಧ್ಯಯನದ ಆಸಕ್ತಿಕರ ವಿಷಯಗಳಲ್ಲಿ ಕೊಲೆಸ್ಟ್ರಾಲ್ ಒಂದು. ಕೊಲೆಸ್ಟ್ರಾಲ್ ಅಧ್ಯಯನಕ್ಕೆ ಇದುವರೆಗೆ ಲಭಿಸಿರುವ ನೊಬೆಲ್ ಬಹುಮಾನಗಳು ಹತ್ತಕ್ಕಿಂತ ಹೆಚ್ಚು.

ಕೊಲೆಸ್ಟ್ರಾಲ್ ಎಂದರೇನು?

ನಮ್ಮ ಆಯುರ್ವೇದದಲ್ಲಿ ವಾತ, ಪಿತ್ತ, ಕಫ ಎಂಬ ಮೂರು ದೋಷಗಳಿವೆ. ಇದೇ ರೀತಿಯಲ್ಲಿ ಗ್ರೀಕ್ ವೈದ್ಯರೂ ಶರೀರದಲ್ಲಿ ನಾಲ್ಕು ರೀತಿಯ ‘ಹ್ಯೂಮರ್’ ಇರುತ್ತವೆ ಎಂದು ನಂಬಿದ್ದರು. ಆ ನಾಲ್ಕರಲ್ಲಿ ‘ಖೋಲ್’ ಎಂದರೆ ಪಿತ್ತ; ‘ಸ್ಟೀರೊಸ್’ ಎಂದರೆ ಗಟ್ಟಿಯಾದ ಎಂದರ್ಥ. ಪಿತ್ತಕೋಶದ ಕಲ್ಲಿಗಳಲ್ಲಿ ದೊರೆಯುವ ಜಿಡ್ಡಿನಂತಹ ಅಂಶವನ್ನು ಗ್ರೀಕರು ‘ಗಟ್ಟಿಯಾದ ಪಿತ್ತ’ ಅಥವಾ ‘ಕೊಲೆಸ್ಟ್ರಾಲ್’ ಎಂದು ಕರೆದಿದ್ದರು.

ಕೊಲೆಸ್ಟ್ರಾಲ್ ಎಂಬುದು ಶರೀರದ ಅನೇಕ ಆವಶ್ಯಕತೆಗಳಿಗೆ ಅಗತ್ಯವಾಗಿ ಬೇಕಾದ ಒಂದು ಕೊಬ್ಬಿನ ಅಣು. ಇದು ಸಾಮಾನ್ಯವಾಗಿ ನಮ್ಮ ಯಕೃತ್ನಲ್ಲಿ ಉತ್ಪತ್ತಿ ಆಗುತ್ತಲೇ ಇರುತ್ತದೆ. ದಪ್ಪಗಾತ್ರದ ಅಣು ಆಗಿರುವುದರಿಂದ ಕೊಲೆಸ್ಟ್ರಾಲ್ ತಾನೇ ತಾನಾಗಿ ರಕ್ತದಲ್ಲಿ ಮುಕ್ತವಾಗಿ ಓಡಾಡಲು ಕಷ್ಟ. ಹಾಗಾಗಿ ಇದನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಒಯ್ಯಲು ‘ಲೈಪೋ-ಪ್ರೊಟೀನ್’ ಎಂಬ ವಾಹಕಗಳು ಇರುತ್ತವೆ. ಸಾಂದ್ರತೆಯ ಆಧಾರದ ಮೇಲೆ ‘ಕಡಿಮೆ ಸಾಂದ್ರತೆಯ ಲೈಪೋ-ಪ್ರೊಟೀನ್ (LDL) ಮತ್ತು ಹೆಚ್ಚು ಸಾಂದ್ರತೆಯ ಲೈಪೋ-ಪ್ರೊಟೀನ್ (HDL)’ ಎಂಬ ಎರಡು ಪ್ರಮುಖ ಕೊಲೆಸ್ಟ್ರಾಲ್ ವಾಹಕಗಳಿವೆ. ರಕ್ತದಲ್ಲಿ ಲೈಪೋ-ಪ್ರೊಟೀನ್ಗಳ ಪ್ರಮಾಣವನ್ನು ಅಳೆದರೆ ಅದು ಕೊಲೆಸ್ಟ್ರಾಲ್ನ ಪರೋಕ್ಷ ಅಳತೆ ಆಗುತ್ತದೆ. ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಅಳೆಯುವಾಗ ಸಂಬಂಧಿಸಿದ ಲೈಪೋ-ಪ್ರೋಟೀನ್’ಗಳ ಮಟ್ಟವನ್ನೂ ಅಳೆಯಲಾಗುತ್ತದೆ. ‘LDL’ ಮಾದರಿಯ ಕೊಲೆಸ್ಟ್ರಾಲ್ ವಾಹಕ ಅಧಿಕವಾಗಿ ಇರುವಂತಹವರಲ್ಲಿ ಹೃದಯಾಘಾತಗಳಂತಹ ಸಮಸ್ಯೆ ಹೆಚ್ಚಾಗಿ ಕಾಣುತ್ತದೆ. ಅಂತೆಯೇ, ‘ HDL’ ವಾಹಕ ಅಧಿಕವಾಗಿ ಇರುವವರಲ್ಲಿ ಹೃದಯಾಘಾತ ಕಡಿಮೆ ಎಂದು ಅಧ್ಯಯನಗಳು ತಿಳಿಸಿವೆ.

ಶರೀರದ ಪ್ರತಿಯೊಂದು ಪ್ರಮುಖ ಕಾರ್ಯಗಳಿಗೂ ರಕ್ತದ ಅಗತ್ಯವಿದೆ. ದೇಹದ ಅಂಗಗಳ ಕೆಲಸಕ್ಕೆ ಬೇಕಾದ ಆಕ್ಸಿಜನ್, ಪೋಷಕಾಂಶಗಳನ್ನು ಒದಗಿಸಿ, ಅವುಗಳ ತ್ಯಾಜ್ಯವನ್ನು ನಿವಾರಿಸುವುದು ರಕ್ತವೇ. ಯಾವುದೇ ಅಂಗಕ್ಕೆ ರಕ್ತ ಹರಿಯುವುದು ಟೊಳ್ಳಾದ ರಕ್ತನಾಳಗಳ ಮೂಲಕ. ಇಡೀ ಶರೀರಕ್ಕೆ ರಕ್ತವನ್ನು ಸರಬರಾಜು ಮಾಡುವ ಹೃದಯವೂ ತನ್ನ ವೈಯಕ್ತಿಕ ಅಗತ್ಯಗಳಿಗೆ ಬೇಕಾದ ರಕ್ತವನ್ನು ಪಡೆದುಕೊಳ್ಳುವುದು ಇಂತಹ ರಕ್ತನಾಳಗಳ ಮೂಲಕವೇ. ಹೃದಯಕ್ಕೆ ರಕ್ತವನ್ನು ಪೂರೈಸುವ ಮೂರು ಪ್ರಮುಖ ನಾಳಗಳನ್ನು ‘ಕರೊನರಿ ರಕ್ತನಾಳಗಳು’ ಎನ್ನುತ್ತಾರೆ. ಇವುಗಳ ಒಳಗೋಡೆಗಳಲ್ಲಿ ಕೆಲವೊಮ್ಮೆ ರಾಳದಂತಹ ವಸ್ತುಗಳು ಜಮೆಯಾಗಿ, ರಕ್ತನಾಳಗಳ ಆಂತರಿಕ ವ್ಯಾಸವನ್ನು ಕಿರಿದಾಗಿಸುತ್ತವೆ. ಇದರಿಂದ ರಕ್ತನಾಳಗಳ ಒಳಗೆ ರಕ್ತದ ಹರಿಯುವಿಕೆಗೆ ಅಡ್ಡಿಯಾಗುತ್ತದೆ. ಇಂತಹ ಯಾವುದೇ ರಕ್ತನಾಳದಲ್ಲಿನ ಸಂಚಾರ ಸಂಪೂರ್ಣ ನಿಂತುಹೋದರೆ, ಅದು ಸರಬರಾಜು ಮಾಡುತ್ತಿದ್ದ ಭಾಗದಲ್ಲಿ ರಕ್ತ ಪೂರೈಕೆ ಆಗದೆ ಹೃದಯಾಘಾತವಾಗುತ್ತದೆ. ರಕ್ತನಾಳದ ಆಂತರಿಕ ವ್ಯಾಸ ಎಷ್ಟು ಕಡಿಮೆಯಾಗದೆ ಎಂದು ಅರಿಯಲು ‘ಆ್ಯಂಜಿಯಗ್ರಾಮ್’ ಎನ್ನುವ ಪರೀಕ್ಷೆ ಬೇಕಾಗುತ್ತದೆ.

ರಕ್ತನಾಳಗಳ ಆಂತರಿಕ ವ್ಯಾಸವನ್ನು ಕಿರಿದಾಗಿಸುವ ರಾಳದಲ್ಲಿ ಪ್ರಮುಖವಾಗಿ ಕಾಣುವುದು ಕೊಲೆಸ್ಟ್ರಾಲ್ ಅಂಶ. ನಾವು ಸೇವಿಸುವ ಆಹಾರದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿದ್ದರೆ, ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕೂಡ ಏರುತ್ತದೆ ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ. ಅಂದರೆ, ನಮ್ಮ ದೇಹದ ಅಗತ್ಯಗಳಿಗೆ ಬೇಕಾಗುವಷ್ಟು ಪ್ರಮಾಣದ ಕೊಲೆಸ್ಟ್ರಾಲ್ ಅನ್ನು ನಮ್ಮ ಶರೀರವೇ ಉತ್ಪತ್ತಿ ಮಾಡುತ್ತದೆ. ಇದಕ್ಕೆ ಬೇಕಾಗುವ ಕಚ್ಚಾವಸ್ತುಗಳು ನಮ್ಮ ಸಹಜ ಆಹಾರದ ಮೂಲಕ ಒದಗುತ್ತವೆ. ಇದರ ಮೇಲೆ ನಾವು ಆಹಾರದಲ್ಲಿ ಒಂದು ಮಟ್ಟದವರೆಗೆ ಕೊಲೆಸ್ಟ್ರಾಲ್ ಅನ್ನು ಸೇವಿಸಿದರೂ ಶರೀರ ಅದನ್ನು ನಿಭಾಯಿಸುತ್ತದೆ. ಆದರೆ ಒಂದು ನಿಯಮಿತ ಮಟ್ಟಕ್ಕಿಂತ ಹೆಚ್ಚಿನ ಕೊಲೆಸ್ಟ್ರಾಲ್ ಸೇವನೆಯಾದರೆ ಅದು ಅಪಾಯಕಾರಿ ಆಗಬಲ್ಲದು. ಈ ಸುರಕ್ಷಿತ ಸೇವನೆಯ ಮಟ್ಟ ಪ್ರತಿಯೊಬ್ಬರಲ್ಲೂ ವಿಭಿನ್ನ. ಕೆಲವರ ಶರೀರ ಬಹಳ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಸೇವನೆ ನಿಭಾಯಿಸಬಲ್ಲದಾದರೆ, ಇನ್ನು ಕೆಲವರಲ್ಲಿ ಅಲ್ಪಸ್ವಲ್ಪ ಕೊಲೆಸ್ಟ್ರಾಲ್ ಸೇವನೆ ಕೂಡ ಸರಿಯಾಗಿ ನಿರ್ವಹಣೆಯಾಗದೆ ಸಮಸ್ಯೆ ಆಗಬಹುದು. ಇಲ್ಲಿ ಎಲ್ಲರಿಗೂ ಅನ್ವಯಿಸುವ ಏಕಸೂತ್ರತೆ ಇಲ್ಲ. ಅವರವರ ಜೆನೆಟಿಕ್ ರಚನೆಯ ಮೇಲೆ, ಕೊಲೆಸ್ಟ್ರಾಲ್ ನಿರ್ವಹಣೆಯಲ್ಲಿ ಅಗತ್ಯವಿರುವ ಕಿಣ್ವಗಳ ಉತ್ಪಾದನೆಯ ಮೇಲೆ ಇವೆಲ್ಲವೂ ನಿರ್ಧಾರವಾಗುತ್ತವೆ. ಯಾರೋ ಒಬ್ಬರು ವರ್ಷಗಳ ಕಾಲ ಯದ್ವಾತದ್ವಾ ಜಿಡ್ಡಿನ ಅಂಶವನ್ನು ತಿಂದೂ ಆರೋಗ್ಯವಾಗಿದ್ದಾರೆ ಎನ್ನುವ ಉದಾಹರಣೆ ಹಿಡಿದು ಎಲ್ಲರೂ ಅದನ್ನೇ ಮಾಡಲು ಹೋಗಬಾರದು.

ಯಕೃತ್ನಲ್ಲಿ ಕೊಲೆಸ್ಟ್ರಾಲ್ ಉತ್ಪತ್ತಿಯನ್ನು ನಿಯಂತ್ರಿಸಬಲ್ಲ ಔಷಧಗಳನ್ನು ಹೃದಯಾಘಾತ ಸಂಬಂಧಿ ಕಾಯಿಲೆ ಇರುವವರಲ್ಲಿ ಬಳಸಲಾಗುತ್ತದೆ. ಇದರ ಬಗ್ಗೆ ವಿವಾದಗಳು ಇವೆಯಾದರೂ, ಹೃದಯಾಘಾತದ ಅಪಾಯ ಹೆಚ್ಚಾಗಿ ಇರುವವರಲ್ಲಿ ಇವುಗಳ ಬಳಕೆಯನ್ನು ಅನುಮೋದಿಸಲಾಗಿದೆ.

ಕೊಲೆಸ್ಟ್ರಾಲ್ ಎಂಬ ಎರಡಲುಗಿನ ಕತ್ತಿ ನಮ್ಮ ಯುಗದ ಅತ್ಯಂತ ಕುತೂಹಲಕಾರಿ ಜಿಜ್ಞಾಸೆಗಳಲ್ಲಿ ಒಂದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.