ಕೋವಿಡ್ -19ಗೆ ಲಸಿಕೆ ಹಾಕುವ ಕಾರ್ಯಕ್ರಮ ಜನವರಿ 16 ರಂದು ಭಾರತದಲ್ಲಿ ಪ್ರಾರಂಭವಾಗಲಿದ್ದು, ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎಂಬ ಲಸಿಕೆಯನ್ನು ಬಳಸಲಾಗುತ್ತಿದೆ. ಹೊಸ ಲಸಿಕೆ ಹೇಗೊ ಏನೋ, ಎಷ್ಟು ಬಾರಿ ಪಡೆಯಬೇಕು, ಅದರಿಂದ ತೊಂದರೆಯಾದರೆ.. ಹೀಗೆ ಜನಸಾಮಾನ್ಯರಲ್ಲಿ ಆತಂಕ, ಪ್ರಶ್ನೆಗಳಿವೆ. ಈ ಆತಂಕವನ್ನು ನಿವಾರಿಸುವ ಪ್ರಯತ್ನ ಮಾಡಿದ್ದಾರೆ ಬೆಂಗಳೂರಿನ ವೈದ್ಯ ಡಾ. ಎಂ.ಡಿ. ಸೂರ್ಯಕಾಂತ.

ಕೋವಿಡ್ ಲಸಿಕೆ ಯಾರಿಗೆ?

18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ನಿರ್ಬಂಧಿತ ಬಳಕೆಗಾಗಿ ಕೋವಿಡ್ ಲಸಿಕೆಯನ್ನು ಅನುಮೋದಿಸಲಾಗಿದೆ.

ಪ್ರಮಾಣ, ಡೋಸ್ ಎಷ್ಟು?

ನಾಲ್ಕು ವಾರಗಳ ಅಂತರದಲ್ಲಿ ೦.5 ಎಂ.ಎಲ್. ನ ಎರಡು ಚುಚ್ಚುಮದ್ದು.

ಎರಡನೇ ಡೋಸ್ ಪಡೆಯಲು ಮರೆತರೆ ಏನು ಮಾಡಬೇಕು?

ಆರೋಗ್ಯ ಕಾರ್ಯಕರ್ತರ/ ವೈದ್ಯರ ಸಲಹೆ ಪಡೆಯಿರಿ. ನಿಗದಿತ ಸಮಯದಲ್ಲಿ ಎರಡನೇ ಡೋಸ್ ಪಡೆದರೆ ಮಾತ್ರ ನಿರೀಕ್ಷಿತ ರಕ್ಷಣೆ ಸಾಧ್ಯ.

ರೋಗದಿಂದ ರಕ್ಷಣೆ ಯಾವಾಗ ಆರಂಭವಾಗುತ್ತದೆ?

ಎರಡನೇ ಡೋಸ್ ಪಡೆದ ನಾಲ್ಕು ವಾರಗಳ ನಂತರ ಆರಂಭವಾಗುತ್ತದೆ.

ಲಸಿಕೆ ಪಡೆಯುವ ಮೊದಲು ಆರೋಗ್ಯ ಕಾರ್ಯಕರ್ತರಿಗೆ/ ವೈದ್ಯರಿಗೆ ಯಾವ ಮಾಹಿತಿ ನೀಡಬೇಕು?

ಯಾವುದೆ ಔಷಧಿ, ಆಹಾರ, ಲಸಿಕೆ ಪಡೆದ ನಂತರ ತೀವ್ರವಾದ ಅಲರ್ಜಿ (ಅನಾಫಿಲ್ಯಾಕ್ಸಿಸ್) ಅನುಭವಿಸಿದ್ದರೆ, ಜ್ವರ, ರಕ್ತಸ್ರಾವದ ಕಾಯಿಲೆ ಇದ್ದರೆ ಅಥವಾ ರಕ್ತಸ್ರಾವ ತಡೆಯಲು ಔಷಧಿ ಬಳಸುತ್ತಿದ್ದರೆ, ರೋಗನಿರೋಧಕ ಶಕ್ತಿ ಸಂಬಂಧ ಕಾಯಿಲೆ ಇದ್ದರೆ ಅಥವಾ ನಿಮ್ಮ ರೋಗನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಮಾಹಿತಿ ನೀಡಬೇಕು. ಗರ್ಭಿಣಿಯಾಗಿದ್ದರೆ ಅಥವಾ ಗರ್ಭಿಣಿಯಾಗಲು ಯೋಜಿಸುತ್ತಿದ್ದರೆ, ಸ್ತನ್ಯಪಾನ ಮಾಡಿಸುತ್ತಿದ್ದರೆ ಲಸಿಕೆ ಹಾಕಿಸಿಕೊಳ್ಳುವ ಹಾಗಿಲ್ಲ. ಮತ್ತೊಂದು ಕೋವಿಡ್ -19 ಲಸಿಕೆ (ಕೋವ್ಯಾಕ್ಸಿನ್ ಅಥವಾ ವಿದೇಶದಲ್ಲಿ ಕೆಲವರು ಪಡೆದುಕೊಂಡಿದ್ದಾರೆ) ಪಡೆದಿದ್ದರೆ ತಿಳಿಸಬೇಕು.

ಅಡ್ಡ ಪರಿಣಾಮಗಳು ಕಾಣಿಸಿಕೊಂಡಾಗ ಏನು ಮಾಡಬೇಕು?

ನಿಮ್ಮ ಆರೋಗ್ಯ ಕಾರ್ಯಕರ್ತರು/ ವೈದ್ಯರು, ಹತ್ತಿರದ ಆಸ್ಪತ್ರೆ ಸಂಪರ್ಕಿಸಿ. ಕೋವಿಶೀಲ್ಡ್ ಲಸಿಕೆಯ ತಯಾರಕರಾದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಗೆ ವರದಿ ಮಾಡಬಹುದು- 24/7 ಕಾಲ್ ಸೆಂಟರ್

ಟೋಲ್-ಫ್ರೀ: 91–1800 1200124 ಅಥವಾ pharmacovigilance@seruminstitute.com ಸಂಪರ್ಕಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.