ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಕುಡಿಯಲು ಉಂಟು ಕ್ರಮ

Last Updated 9 ಜುಲೈ 2020, 10:53 IST
ಅಕ್ಷರ ಗಾತ್ರ

ನೀರು ಮಾನವ ದೇಹಕ್ಕೆ ಬೇಕಾಗುವ ಅತೀ ಅಗತ್ಯಗಳಲ್ಲಿ ಒಂದು. ನೀರಿಲ್ಲದೆ ನಾವು ಬದುಕುವುದೂ ಕಷ್ಟ. ಆ ಕಾರಣಕ್ಕೆ ನೀರು ಕುಡಿಯುವುದು ಅತೀ ಅವಶ್ಯ. ಚಯಾಪಚಯ ಕ್ರಿಯೆಗೂ ನೀರು ಬೇಕು. ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಆಯಾಸ, ತಲೆ ಸುತ್ತುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆ ಕಾರಣಕ್ಕೆ ಸಾಕಷ್ಟು ನೀರು ಕುಡಿಯಬೇಕು. ದಿನದಲ್ಲಿ ಕಡಿಮೆ ಎಂದರೂ ನಾಲ್ಕು ಲೀಟರ್‌ನಷ್ಟು ನೀರು ಕುಡಿಯಬೇಕು.

ನೀರು ಕುಡಿಯಲು ಕೆಲವೊಂದು ಕ್ರಮಗಳಿವೆ. ಆ ಕ್ರಮಗಳನ್ನು ಅನುಸರಿಸುವುದು ತುಂಬಾ ಮುಖ್ಯ. ನಾವು ಅನೇಕರು ನೀರು ಕುಡಿಯುವಾಗ ಸಾಮಾನ್ಯವಾಗಿ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ. ಅವು ನಮಗೇ ತಿಳಿಯದಂತೆ ನಮ್ಮ ದೇಹಕ್ಕೆ ಹಾನಿ ಮಾಡುತ್ತಿರುತ್ತವೆ. ಹಾಗಾದರೆ ನೀರು ಕುಡಿಯುವಾಗ ನಾವು ಮಾಡುವ ಸಾಮಾನ್ಯ ತಪ್ಪುಗಳು ಯಾವುವು ತಿಳಿಯೋಣ.

ನಿಂತುಕೊಂಡು ನೀರು ಕುಡಿಯುವುದು

ನಿಂತುಕೊಂಡು ನೀರು ಕುಡಿಯುವುದು ಅನೇಕರ ಅಭ್ಯಾಸ. ಆದರೆ ಇದು ತಪ್ಪು ಕ್ರಮ. ಮನೆಯಲ್ಲಿ ಹಿರಿಯರು ನಿಂತುಕೊಂಡು ನೀರು ಕುಡಿದರೆ ಬೈಯಬಹುದು. ನಿಂತುಕೊಂಡು ನೀರು ಕುಡಿದರೆ ಬೇಕಾಗುವ ಪೋಷಕಾಂಶಗಳು ನೇರವಾಗಿ ಉದರಕ್ಕೆ ಸೇರುವುದಿಲ್ಲ. ದೇಹಕ್ಕೆ ಬೇಕಾಗುವ ಆಮ್ಲಜನಕದ ಮಟ್ಟದಲ್ಲೂ ತೊಂದರೆಯಾಗಬಹುದು. ಅಲ್ಲದೇ ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.

ಒಂದೇ ಗುಟುಕಿಗೆ ಗಡಿಬಿಡಿಯಲ್ಲಿ ನೀರು ಕುಡಿಯುವುದು

ಒಂದೇ ಗುಟುಕಿಗೆ ಗಡಿಬಿಡಿಯಲ್ಲಿ ನೀರು ಕುಡಿಯುವುದರಿಂದ ಮೂತ್ರಕೋಶದ ತೊಂದರೆಗೆ ಕಾರಣವಾಗಬಹುದು. ಆ ಕಾರಣಕ್ಕೆ ನಿಧಾನವಾಗಿ ಒಂದೊಂದೇ ಗುಟುಕು ನೀರು ಕುಡಿಯಬೇಕು ಎನ್ನುತ್ತಾರೆ ತಜ್ಞರು. ಅಲ್ಲದೇ ಗುಟುಕು ಗುಟುಕಾಗಿ ನೀರು ಕುಡಿಯುವುದರಿಂದ ದೇಹಕ್ಕೆ ಹಲವು ಉಪಯೋಗಗಳಿವೆ. ನಿಧಾನಕ್ಕೆ ಒಂದೊಂದೇ ಗುಟುಕು ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯು ಉತ್ತಮವಾಗಿ ಚಯಾಪಚಯ ಪ್ರಕ್ರಿಯೆಗೆ ನೆರವಾಗುತ್ತದೆ.


ಊಟಕ್ಕೆ ಮುಂಚೆ ಹಾಗೂ ಊಟ ಮಾಡಿದ ತಕ್ಷಣ

ಊಟಕ್ಕೆ ಕುಳಿತ ತಕ್ಷಣ ನೀರು ಕುಡಿಯಬಾರದು. ಹೀಗೆ ಮಾಡುವುದರಿಂದ ಹೊಟ್ಟೆ ತುಂಬಿದಂತಾಗುತ್ತದೆ. ಆಗ ಹೊಟ್ಟೆಗೆ ಬೇಕಾದಷ್ಟು ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಅಲ್ಲದೇ ಇದರಿಂದ ದೇಹಕ್ಕೆ ಬೇಕಾಗುವ ಪೌಷ್ಟಿಕಾಂಶಗಳು ಸಿಗುವುದಿಲ್ಲ. ಅಲ್ಲದೇ ಊಟ ಆದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೂ ತೊಂದರೆಯಾಗುತ್ತದೆ. ಅಲ್ಲದೇ ಇದು ಮಲಬದ್ಧತೆ, ವಾಕರಿಕೆಯಂತಹ ಸಮಸ್ಯೆಗಳಿಗೂ ಕಾರಣವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT