ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿನ್, ಆರೋಗ್ಯ ಸೇತು ಸರ್ವರ್ ಡೌನ್: ನೋಂದಣಿಗೆ ಮುಂದಾದವರಿಗೆ ಕಾಡಿದ ಸಮಸ್ಯೆ

Last Updated 28 ಏಪ್ರಿಲ್ 2021, 12:21 IST
ಅಕ್ಷರ ಗಾತ್ರ

ನವದೆಹಲಿ: ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಕೋವಿಡ್ ಲಸಿಕೆ ಪಡೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಮಧ್ಯೆ, ಲಸಿಕೆ ಪಡೆಯಲು ನೋಂದಣಿಗೆ ಮುಂದಾದವರಿಗೆ ತಾಂತ್ರಿಕ ದೋಷದ ಸಮಸ್ಯೆ ಕಾಡಿದೆ.

ಹೌದು, ಕೋವಿಡ್ ಲಸಿಕೆ ಪಡೆಯಲು ಸರ್ಕಾರ ನಿಗದಿಪಡಿಸಿರುವ ಕೋವಿನ್ ಮತ್ತು ಆರೋಗ್ಯ ಸೇತು ಆ್ಯಪ್‌ಗಳಲ್ಲಿ ನೋಂದಣಿಗೆ ಮುಂದಾದವರಿಗೆ ತಾಂತ್ರಿಕ ದೋಷದ ಸಮಸ್ಯೆ ಎದುರಾಗಿದೆ.

ಹಲವು ಬಳಕೆದಾರರು ಆ್ಯಪ್ ಸರ್ವರ್ ಡೌನ್ ಆದ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದರೆ, ಮತ್ತೆ ಕೆಲವರು ನೋಂದಣಿಯ ಮೊದಲ ಮತ್ತು ಪ್ರಮುಖ ಹಂತದ ಒಟಿಪಿ ಪಡೆಯುವ ಪ್ರಕ್ರಿಯೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಮೇ 1 ರಿಂದ ಆರಂಭವಾಗಲಿರುವ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಅಭಿಯಾನದ ಭಾಗವಾಗಿ ಇಂದಿನಿಂದ ಕಡ್ಡಾಯ ನೋಂದಣಿ ಆರಂಭವಾಗಿದೆ. ಇತರೆ ಹಂತಗಳ ಲಸಿಕೆ ಅಭಿಯಾನದ ವೇಳೆ ಇದ್ದ ವಾಕ್-ಇನ್ ನೋಂದಣಿಯನ್ನು ಜನಸಂದಣಿಯನ್ನು ತಡೆಗಟ್ಟಲು 3ನೇ ಹಂತದ ಲಸಿಕೆ ವಿತರಣೆಯಲ್ಲಿ ನಿಲ್ಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT