ನವದೆಹಲಿ: ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ದೈಹಿಕ ಚಟುವಟಿಕೆ ಅತ್ಯಗತ್ಯವಾಗಿದೆ. ದಿ ಲ್ಯಾನ್ಸೆಟ್ ಪಬ್ಲಿಕ್ ಹೆಲ್ತ್ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ಪ್ರತಿದಿನ 7 ಸಾವಿರ ಹೆಜ್ಜೆ ನಡೆಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದಿದೆ.
.ಕ್ಷೇಮ–ಕುಶಲ: ನೇತ್ರರಕ್ಷಣೆಯ ಕಡೆಗೆ ನಿಮ್ಮ ನೋಟ ಇರಲಿ.
ವರದಿಯ ಪ್ರಕಾರ, ಶೇ 47ರಷ್ಟು ಸಾವಿನ ಅಪಾಯವನ್ನು ತಡೆಗಟ್ಟಬಹುದು, ಅದೇ ರೀತಿ ಶೇ 38ರಷ್ಟು ಮನೋವೈಕಲ್ಯ ಮತ್ತು ಶೇ 22ರಷ್ಟು ಮಾನಸಿಕ ಖಿನ್ನತೆಯಿಂದ ಹೊರಬರಬಹುದು ಎಂದು ತಿಳಿಸಿದೆ.

2024–2025ರಲ್ಲಿ ಪ್ರಕಟವಾದ 88 ಅಧ್ಯಯನಗಳ ಅಂಕಿ ಅಂಶದ ವಿಶ್ಲೇಷಣೆಯ ಪ್ರಕಾರ ಪ್ರತಿದಿನ 7 ಸಾವಿರ ಹೆಜ್ಜೆ ನಡೆಯುವುದು ಉತ್ತಮ ಎಂದು ಕಂಡುಕೊಳ್ಳಲಾಗಿದೆ.
.ಕ್ಷೇಮ ಕುಶಲ | ಅನ್ನ–ನೀರುಗಳಲ್ಲಿದೆ ಆರೋಗ್ಯದ ಗುಟ್ಟು.
ಈ ಅಧ್ಯಯನವು 1.6 ಲಕ್ಷ ವಯಸ್ಕರನ್ನು ಒಳಗೊಂಡಿದೆ.

ದಿನನಿತ್ಯ ಎದುರಾಗುವ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳ ಮೇಲೆ ನಡಿಗೆ ಹೇಗೆ ಪರಿಣಾಮ ಬೀರಲಿದೆ, ಹೃದಯದ ಆರೋಗ್ಯವನ್ನು ಹೇಗೆ ಉತ್ತಮಗೊಳಿಸಬಲ್ಲದು ಹಾಗೂ ಒಟ್ಟಾರೆ ಮರಣ ಪ್ರಮಾಣದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಮೇಲೆ ಅಧ್ಯಯನ ಕೇಂದ್ರೀಕೃತವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
.ಕ್ಷೇಮ–ಕುಶಲ: ಬದುಕನು ಬೆಳಗಲಿ ಉತ್ಸಾಹದ ಹಣತೆ.
ಯುನಿವರ್ಸಿಟಿ ಆಫ್ ಸಿಡ್ನಿ. ಆಸ್ಟ್ರೇಲಿಯಾ, ಬ್ರಿಟನ್ (ಯುಕೆ), ಸ್ಪೇನ್ ಮತ್ತು ನಾರ್ವೆಯ ವಿವಿಧ ಶಿಕ್ಷಣ ಸಂಸ್ಥೆಗಳ ಸಂಶೋಧಕರು ಅಧ್ಯಯನದಲ್ಲಿ ಪಾಲ್ಗೊಂಡಿದ್ದರು.

ಪ್ರತಿನಿತ್ಯ ಎರಡು ಸಾವಿರ ಹೆಜ್ಜೆಗಳಿಗಿಂತ 7 ಸಾವಿರ ಹೆಜ್ಜೆಗಳನ್ನು ನಡೆಯುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಶೇ 6ರಷ್ಟು ಕಡಿಮೆ ಇರುತ್ತದೆ, ಹೃದ್ರೋಗ ಬರುವ ಸಾಧ್ಯತೆ ಶೇಕಡಾ 25 ರಷ್ಟು ಕಡಿಮೆ ಮಾಡುತ್ತದೆ, ಅದೇ ತರಹ ಮಧುಮೇಹ ಶೇ 14ರಷ್ಟು, ಕುಸಿದು ಬೀಳುವ ಸಾಧ್ಯತೆ ಶೇ 28ರಷ್ಟು ಕಡಿಮೆ ಇರುತ್ತದೆ ಎಂದು ವರದಿ ತಿಳಿಸಿದೆ.
.ಕ್ಷೇಮ ಕುಶಲ: ‘ಮರೆವು’ ಮೈಮರೆಯದಿರಿ .ಭೂಮಿಕ: ಮದುವೆಯ ಈ ಬಂಧ.. ಇವನಲ್ಲ ಅವನು!.ಕ್ಷೇಮ ಕುಶಲ: ನಳನಳಿಸುತ್ತಿರಲಿ ಬಾಂಧವ್ಯ.. ಕೆಲ ಸಲಹೆಗಳು ಇಲ್ಲಿವೆ.ಭೂಮಿಕ | ಭಾವನೆ ನಿಯಂತ್ರಿಸಿ; ಪ್ರಬುದ್ಧರಾಗಿ.. .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.