ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣುಗಳ ಕಾಳಜಿ: ಆರೈಕೆಗೆ ಆದ್ಯತೆ ನೀಡುವುದೂ ಅಗತ್ಯ

Published 18 ಆಗಸ್ಟ್ 2023, 22:35 IST
Last Updated 18 ಆಗಸ್ಟ್ 2023, 22:35 IST
ಅಕ್ಷರ ಗಾತ್ರ

ಅತಿ ಸೂಕ್ಷ್ಮಅಂಗ ಎನಿಸಿರುವ ಕಣ್ಣುಗಳ ಹೊಳಪು ದೇಹದ ಆರೋಗ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ಗ್ಯಾಜೆಟ್‌ ಯುಗದಲ್ಲಿ ಕಣ್ಣುಗಳ ಆರೈಕೆಗೆ ಆದ್ಯತೆ ನೀಡುವುದೂ ಅಗತ್ಯ. 

ಸೂಕ್ತ ಬೆಳಕಿನ ಆಯ್ಕೆ ಇರಲಿ: ಕಚೇರಿಯಾಗಲಿ, ಅಧ್ಯಯನ ಮಾಡುವ ಕೊಠಡಿಯಿರಲಿ ಪೂರೈಕೆಯಾಗುವ ಬೆಳಕು ಸೂಕ್ತವಾಗಿರಲಿ. ಮಬ್ಬಾದ ಬೆಳಕಿನಲ್ಲಿ ಕೆಲಸ ಮಾಡುವುದರಿಂದ ಕಣ್ಣು ತ್ರಾಸಗೊಳ್ಳುತ್ತದೆ. 

ವಿಟಮಿನ್‌ಯುಕ್ತ ಆಹಾರ ಸೇವಿಸಿ: ವಿಟಮಿನ್‌ ಎ, ಸಿ ಮತ್ತು ಇ ಪೋಷಕಾಂಶಗಳು ಕಣ್ಣಿಗೆ ಸಂಬಂಧಿಸಿದ ಕಾಯಿಲೆ ಬಾರದಂತೆ ರಕ್ಷಿಸುತ್ತವೆ.  ಸಿಟ್ರಸ್ ಜಾತಿಯ ಹಣ್ಣುಗಳು, ಅಂದರೆ, ನಿಂಬೆ, ಕಿತ್ತಳೆ, ಮೂಸಂಬಿ, ಕಿವಿ ಮೊದಲಾದ ಹುಳಿ ರುಚಿಯ ಹಣ್ಣುಗಳು, ಒಮೆಗಾ 3 ಕೊಬ್ಬಿನ ಆಮ್ಲಯುಕ್ತ ಮೀನು , ಹಸಿರು ತರಕಾರಿಗಳು, ಕ್ಯಾರೆಟ್‌, ಸಿಹಿ ಆಲೂಗಡ್ಡೆ ಕಣ್ಣಿನ ಆರೋಗ್ಯಕ್ಕೆ ಬೇಕಾದ ವಿಟಮಿನ್‌ ಒದಗಿಸುತ್ತದೆ. 

ಆಗಾಗ್ಗೆ ನೀರು ಕುಡಿಯಿರಿ: ಬಾಯಾರಿಕೆ ಆಗುವವರೆಗೂ ಕಾಯದೇ ಆಗಾಗ ನೀರು ಸೇವಿಸಿ. ನಿರ್ಜಲೀಕರಣದ ಸಮಸ್ಯೆಯಾದರೆ ಕಣ್ಣಿಗೂ ತೊಂದರೆಯಾಗಬಹುದು. 

ಉತ್ತಮ ಮಸಾಜ್‌: ವ್ಯಾಯಾಮದಲ್ಲಿ ಕಣ್ಣಿನ ಚಲನೆ ಬಳಸಿ ಮಾಡುವ ವ್ಯಾಯಾಮಕ್ಕೆ ಪ್ರಾಮುಖ್ಯ ನೀಡಿ. ಕಣ್ಣುಗಳನ್ನು ಮುಚ್ಚಿ ಒಂದು ನಿಮಿಷ  ಅಥವಾ ಎರಡು ನಿಮಿಷಗಳ ಕಾಲ ಅವುಗಳನ್ನು ಮಸಾಜ್‌ ಮಾಡಿ. ವೃತ್ತಾಕಾರದ ಚಲನೆಯನ್ನು ಅನ್ವಯಿಸಿ. 

ಆ್ಯಂಟಿಗ್ಲೇರ್‌ ಬಳಸಿ:  ಫೋನ್‌, ಐಪ್ಯಾಡ್‌, ಕಂಪ್ಯೂಟರ್‌ ಹೀಗೆ ಹಲವು ಗ್ಯಾಜೆಟ್‌ ಬಳಕೆಯಿಂದ ಕಣ್ಣಿನ ಮೇಲೆ ಅಗಾಧ ಒತ್ತಡ ಬೀಳುತ್ತದೆ. ಮೊಬೈಲ್‌ ಡಿಸ್‌ಪ್ಲೇ ಅನ್ನು ದೀರ್ಘಕಾಲದವರೆಗೆ ನೋಡುವುದರಿಂದ ದೃಷ್ಟಿ ಮಸುಕಾಗುತ್ತದೆ. ಹಾಗಾಗಿ ಲ್ಯಾಪ್‌ಟಾಪ್‌ ಮತ್ತು ಕಂಪ್ಯೂಟರ್‌ ಬಳಸುವಾಗ ಆ್ಯಂಟಿಗ್ಲೇರ್‌ ಪರದೆಯನ್ನು ಬಳಸಿ. 

ಅತಿಯಾದ ಮೇಕಪ್‌ ಸಲ್ಲ: ಐಶ್ಯಾಡೋ, ಐಲ್ಯಾಶ್‌ನಂಥ ಪ್ರಸಾಧನಗಳ ಅತಿಯಾದ ಬಳಕೆ ಸಲ್ಲದು. ಆದಷ್ಟು ನೈಸರ್ಗಿಕ ಪ್ರಸಾಧನಗಳನ್ನು ಬಳಸಿ. ಇದರಿಂದ ಕಣ್ಣಿನ ಸುತ್ತ ಇರುವ ಸೂಕ್ಷ್ಮ ಚರ್ಮಕ್ಕೆ ಹಾನಿಯಾಗುವುದು ತಪ್ಪುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT