ಭಾನುವಾರ, ಜೂಲೈ 12, 2020
29 °C

ಹುಣಸೆ ಹಣ್ಣಿನಿಂದ ಸೌಂದರ್ಯೋಪಸಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹುಣಸೆ ಹಣ್ಣಿನ ರಸ ತ್ವಚೆಯ ಕಾಂತಿ ವರ್ಧಿಸಲು ಸಹಕಾರಿ. ಈ ಹಣ್ಣಿನಲ್ಲಿ ಟಾರ್ಟಾರಿಕ್ ಆಮ್ಲ, ವಿಟಮಿನ್‎ಗಳು, ಆಂಟಿ ಆಕ್ಸೈಡ್‎ಗಳು ಹಾಗೂ ಖನಿಜಗಳಿದ್ದು, ಇವು ಮುಖದ ಅಂದವನ್ನು ವೃದ್ಧಿಸಲು ನೆರವಾಗುತ್ತವೆ.

ಹುಣಸೆ ಹಣ್ಣಿನ ಸ್ಕ್ರಬ್

ಹುಣಸೆ ಹಣ್ಣಿನಲ್ಲಿ ಆಲ್ಫಾ ಹೈಡ್ರಾಕ್ಸಿ ಆಮ್ಲ‎ಗಳು ಇದ್ದು, ಇದು ಚರ್ಮದ ಮೃತಕೋಶಗಳನ್ನು(ಡೆಡ್‌ ಸೆಲ್ಸ್‌) ತೆಗೆದುಹಾಕುತ್ತದೆ. ಕುದಿಸಿದ ನೀರಿನಲ್ಲಿ ಹುಣಸೆ ಹಣ್ಣನ್ನು ಹಾಕಿ ರಸ ಬೇರ್ಪಡಿಸಿಕೊಳ್ಳಿ. ಇದಕ್ಕೆ ಒಂದು ಚಮಚ ಉಪ್ಪು ಮತ್ತು ಒಂದು ಚಮಚ ಮೊಸರನ್ನು ಸೇರಿಸಿ ಮೃದುವಾದ ಪೇಸ್ಟ್ ತಯಾರಿಸಿಕೊಳ್ಳಿ. ಇದರಿಂದ ವೃತ್ತಾಕಾರವಾಗಿ ಮುಖವನ್ನು ಸ್ಕ್ರಬ್‌ ಮಾಡಬಹುದು.

ಫೇಸ್‌ ಪ್ಯಾಕ್

ನೀರಿನಲ್ಲಿ ಕುದಿಸಿದ ಹುಣಸೆ ಹಣ್ಣಿನ ರಸಕ್ಕೆ ಅರ್ಧ ಚಮಚ ಅರಿಶಿನವನ್ನು ಬೆರಸಿ ಮುಖಕ್ಕೆ ಹಚ್ಚಿಕೊಂಡು 20 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ. ಇದು ಮುಖದ ಕಾಂತಿ ವೃದ್ಧಿಸಿ, ಕಪ್ಪು ಕಲೆ, ಮೊಡವೆ, ಜಿಡ್ಡನ್ನು ಕಡಿಮೆ ಮಾಡುತ್ತದೆ. ವಾರಕ್ಕೆ ಮೂರು ಬಾರಿ ಇದನ್ನು ಬಳಸಬಹುದು.

ಹುಣಸೆ ಬ್ಲೀಚ್

1 ಚಮಚ ಹುಣಸೆ ತಿರುಳು, ಒಂದು ಚಮಚ ಜೇನು ಮತ್ತು ಲಿಂಬೆ ರಸವನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಮುಖಕ್ಕೆ ಹಚ್ಚಿಕೊಂಡು 20 ನಿಮಿಷಗಳ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ(ಬ್ಲೀಚ್‌). ಇದು ಮುಖದಲ್ಲಿನ ಸಣ್ಣ ಕೂದಲನ್ನು ನಿವಾರಿಸುತ್ತದೆ. ಬ್ಲೀಚ್‌ ಮಾಡಿಕೊಂಡ ನಂತರ ಆರು ಗಂಟೆ ಸೋಪ್‌ ಅಥವಾ ಯಾವುದೇ ಕ್ರೀಂ ಅನ್ನು ಬಳಸಬಾರದು. ಹೀಗಾಗಿ ರಾತ್ರಿ ಮಲಗುವ ಮುನ್ನ ಈ ಬ್ಲೀಚ್‌ ಮಾಡಿಕೊಳ್ಳುವುದು ಸೂಕ್ತ. 

ಹುಣಸೆ ಗ್ಲೊ ಫೇಶಿಯಲ್

2 ಚಮಚದಷ್ಟು ಗೋಧಿ ಹಾಗೂ ಅಕ್ಕಿ ಹಿಟ್ಟಿಗೆ ಒಂದು ಚಮಚ ಜೇನು, ಹುಣಸೆ ಹಣ್ಣಿನ ರಸ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ತೆಳುವಾದ ಹತ್ತಿ ಬಟ್ಟೆಯೊಳಗೆ ಈ ಮಿಶ್ರಣವನ್ನು ತುಂಬಿಕೊಳ್ಳಿ. ಇದನ್ನು ಹಬೆಯಲ್ಲಿ ಐದು ನಿಮಿಷ ಇಟ್ಟು ಬಿಸಿ ಮಾಡಿಕೊಳ್ಳಿ. ನಂತರ ಇದರಿಂದ ಮುಖವನ್ನು ಮಸಾಜ್‌ ಮಾಡಿ. ಮುಖಕ್ಕೆ ನೇರವಾಗಿ ಬಳಸುವುದರಿಂದ ಬಟ್ಟೆ ಶುಚಿಯಾಗಿರಬೇಕು. ಬಿಸಿ ಕಡಿಮೆಯಾಗುವವರೆಗೂ ಮಸಾಜ್ ಮಾಡಿ ನಂತರ ಮಿಶ್ರಣವನ್ನು ಹೊರ ತೆಗೆದು ಮುಖಕ್ಕೆ ಮಾಸ್ಕ್‌ನಂತೆ ಹಾಕಿಕೊಳ್ಳಿ. 20 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ.

ಫೇಸ್ ಟೋನರ್ 

ಹುಣಸೆಹಣ್ಣನ್ನು ತ್ವಚೆಯ ಬಣ್ಣವನ್ನು ತಿಳಿಗೊಳಿಸಲು ಬಳಸುವುದರ ಜೊತೆಗೆ, ಇದನ್ನು ತ್ವಚೆಯ ಪರಿಪೂರ್ಣ ಟೋನರ್ ಆಗಿ ಸಹ ಬಳಸಬಹುದು. ಹುಣಸೆ ಹಣ್ಣನ್ನು ರೋಸ್ ವಾಟರ್ ಜೊತೆ ಮಿಶ್ರಣ ಮಾಡಿ ಮತ್ತು ಬೇಸಿಗೆಯಲ್ಲಿ ಟೋನರ್ ಆಗಿ ಬಳಸಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು