ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

Health: ನಿದ್ರೆ ಬಾರದಿರೆ ಏನಂತೀರಿ? ಸುಖ ನಿದ್ರೆಗೆ ಇಲ್ಲಿದೆ ಸರಳೋಪಾಯಗಳು

ಡಾ. ಸುಜ್ಞಾನಿ ದೇವಿ ಪಾಟೀಲ್ ಲೇಖನ
ಡಾ. ಸುಜ್ಞಾನಿ ದೇವಿ ಪಾಟೀಲ್
Published : 21 ಅಕ್ಟೋಬರ್ 2024, 16:12 IST
Last Updated : 21 ಅಕ್ಟೋಬರ್ 2024, 16:12 IST
ಫಾಲೋ ಮಾಡಿ
0
Health: ನಿದ್ರೆ ಬಾರದಿರೆ ಏನಂತೀರಿ? ಸುಖ ನಿದ್ರೆಗೆ ಇಲ್ಲಿದೆ ಸರಳೋಪಾಯಗಳು

Health: ನಿದ್ರೆ ಬಾರದಿರೆ ಏನಂತೀರಿ? ಸುಖ ನಿದ್ರೆಗೆ ಇಲ್ಲಿದೆ ಸರಳೋಪಾಯಗಳು

ಮಾನವನು ಆರೋಗ್ಯವಾಗಿರಲು ನಿದ್ರೆ ಮುಖ್ಯ ಪಾತ್ರ ವಹಿಸುತ್ತದೆ. ನಿದ್ರೆಯಿಂದ ಶರೀರದ ಅಂಗಾಂಗಗಳಿಗೆ ವಿಶ್ರಾಂತಿ ಮತ್ತು ಹೊಸ ಚೈತನ್ಯ ದೊರಕುತ್ತದೆ. ನಿದ್ರಾಹೀನತೆಯ ಸಮಸ್ಯೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿದ್ರೆ ಕಡಿಮೆಯಾದರೆ ಕೆಲಸದ ಮೇಲೆ ಗಮನವಿಡಲು ಸಾಧ್ಯವಾಗುವುದಿಲ್ಲ. ಜ್ಞಾಪಕಶಕ್ತಿ ಕಡಿಮೆಯಾಗುತ್ತದೆ. ಆಯಾಸವಾಗುತ್ತದೆ. ದೈಹಿಕ ಕೆಲಸದಲ್ಲಿ ಸಾಮರ್ಥ್ಯ ಕಡಿಮೆಯಾಗುತ್ತದೆ. ಪ್ರತಿ ವಯಸ್ಕರ ವ್ಯಕ್ತಿಗೆ ದಿನಕ್ಕೆ 6ರಿಂದ 8 ಗಂಟೆಗಳ ಸುಖನಿದ್ರೆ ಅವಶ್ಯಕತೆ ಇದೆ.

ADVERTISEMENT
ADVERTISEMENT

ನಿದ್ರಾಹೀನತೆಗೆ ಹಲವು ದೈಹಿಕ ಮತ್ತು ಮಾನಸಿಕ ತೊಂದರೆಗಳು ಕಾರಣ. ಖಿನ್ನತೆ, ಆತಂಕ, ದೈಹಿಕ ಕಾಯಿಲೆಗಳಾದ ಶ್ವಾಸಕೋಶದ ತೊಂದರೆ, ನರರೋಗಗಳು, ‘ಸ್ಲೀಪ್‌ ಅಪ್ನೀಯ’ ಮತ್ತು ದೈಹಿಕ ನೋವು ಸೇರಿದೆ.

ಸುಖ ನಿದ್ರೆಗೆ ಏನು ಮಾಡಬೇಕು?

* ರಾತ್ರಿ ವೇಳೆ ಮಲಗಿಕೊಳ್ಳಲು ಮತ್ತು ಬೆಳಿಗ್ಗೆ ಏದ್ದೇಳುವ ನಿರ್ದಿಷ್ಟ ಅವಧಿಯನ್ನು ನಿಗದಿಪಡಿಸಿಕೊಳ್ಳಬೇಕು.

ADVERTISEMENT

* ಮಲಗಿಕೊಳ್ಳುವ ಅರ್ಧಗಂಟೆಗೂ ಮೊದಲು ನಮ್ಮ ಕೆಲಸಗಳನ್ನು ಮುಗಿಸಿಕೊಳ್ಳಬೇಕು. ಉದಾಹರಣೆಗೆ ಹೊಟ್ಟೆ ತುಂಬ ಊಟ ಮಾಡುವುದು, ಟಿ.ವಿ, ಮೊಬೈಲ್‌ ನೋಡುವುದು, ಅಧಿಕ ದೈಹಿಕ ವ್ಯಾಯಾಮ ಮಾಡಬಾರದು.

* ಸಂಜೆಯ ನಂತರ ಕಾಫಿ, ಟೀ, ಸೋಡಾ, ಧೂಮಪಾನ, ಮದ್ಯಪಾನ ಮಾಡಬಾರದು. ಇವೆಲ್ಲ ನಿದ್ರೆಗೆ ಅಡ್ಡಿಪಡಿಸುತ್ತವೆ.

* ಮಲಗುವ ಕೊಠಡಿ ಸ್ವಚ್ಛವಾಗಿರಬೇಕು. ಕತ್ತಲೆ ಮತ್ತು ಶಬ್ದ ಕಡಿಮೆ ಇರುವ ಜಾಗವನ್ನು ಆಯ್ಕೆ ಮಾಡಿಕೊಳ್ಳಬೇಕು. ರಾತ್ರಿ ವೇಳೆ ಒಂದು ಲೋಟ ಹಾಲನ್ನು ಕುಡಿಯುವುದು, ಉಗುರು ಬೆಚ್ಚನೆಯ ನೀರಿನಿಂದ ಸ್ನಾನ ಮಾಡುವುದು, ಲಘು ವಾಯುವಿಹಾರ ಮತ್ತು ಸಂಗೀತ ಕೇಳುವುದು ಸುಖನಿದ್ರೆಗೆ ಉಪಯುಕ್ತ.

* ನಿದ್ರೆ ಬಾರದೇ ಇದ್ದಾಗ ಗಡಿಯಾರ ನೋಡುವುದು, ಮೊಬೈಲ್‌ ಬಳಸುವುದು, ಸಮಸ್ಯೆಗಳ ಬಗ್ಗೆ ಚಿಂತಿಸುವುದು ಮಾಡಬಾರದು.

* ನಿದ್ರೆ ಬರದಿದ್ದ ಪಕ್ಷದಲ್ಲಿ ಹಾಸಿಗೆ ಮೇಲೆ ಹೊರಳಾಡಬೇಡಿ. ಹಾಸಿಗೆ ಪಕ್ಕ ಕುಳಿತುಕೊಂಡು ನಿಮಗಿಷ್ಟವಾದ ಪುಸ್ತಕ ಓದಿ, ಸಂಗೀತ ಕೇಳಿ, ನಿದ್ರೆ ಬರುವ ವೇಳೆ ಹಾಸಿಗೆಗೆ ಹೋಗಬೇಕು.

* ಖಿನ್ನತೆ, ಆತಂಕ ಮತ್ತು ದೈಹಿಕ ನೋವುಗಳಿಂದ ಬಳಲುತ್ತಿದ್ದರೆ ನಿದ್ರೆಗೆ ಸಮಸ್ಯೆ ಉಂಟಾಗುತ್ತದೆ. ಆಗ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

* ವೈದ್ಯರ ಸಲಹೆ ಇಲ್ಲದೆ ನಿದ್ರೆ ಗುಳಿಗೆಗಳನ್ನು ಸೇವಿಸಬಾರದು

* ಆದಷ್ಟು ನಿತ್ಯ ಒಂದೇ ಸ್ಥಳದಲ್ಲಿ ಮಲಗುವುದನ್ನು ರೂಢಿಸಿಕೊಳ್ಳಬೇಕು

* ಸಡಿಲವಾದ, ಹಗುರವಾದ, ವಾತಾವರಣಕ್ಕೆ ಅನುಕೂಲವಾಗುವ ಉಡುಪುಗಳನ್ನು ಧರಿಸಬೇಕು

* ನಿದ್ರೆಯಿಂದ ಬಳಲುತ್ತಿರುವವರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬಾರದು

* ಈ ಮೇಲಿನ ಸಲಹೆಗಳನ್ನು ಪಾಲಿಸಿದರೂ ಕೂಡ ನಿದ್ರೆ ಬರದಿದ್ದಾಗ ತಜ್ಞ ವೈದ್ಯರನ್ನು ಕಾಣಬೇಕು.

ನಿದ್ರಾಹೀನತೆಯ ಲಕ್ಷಣಗಳು...

* ನಿದ್ರೆಗೆ ಜಾರಲು ತೊಂದರೆ ಅನುಭವಿಸುವುದು

* ನಿದ್ರೆಯಿಂದ ಪದೇ ಪದೇ ಎಚ್ಚರವಾಗುವುದು

* ಬೆಳಗಿನ ಜಾವ ಬೇಗ ಎಚ್ಚರವಾಗುವುದು

* ಬೆಳಿಗ್ಗೆ ಎದ್ದ ನಂತರ ಉತ್ಸಾಹ ಇಲ್ಲದಿರುವುದು

* ಕೆಲಸದಲ್ಲಿ ಗಮನ ಕಡಿಮೆಯಾಗುವುದು

* ಹಗಲಿನಲ್ಲಿ ತೂಕಡಿಕೆ ಬರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0