ನಮಗೆಲ್ಲ ಗೊತ್ತಿರುವಂತೆ ಹೃದಯ ನಮ್ಮ ದೇಹದ ಬಹುಮುಖ್ಯ ಅಂಗ. ಹೃದಯದ ಲಬ್-ಡಬ್ ಮಿಡಿತವೇ ನಮ್ಮನ್ನು ಜೀವಂತವಾಗಿಡುವುದು ಮತ್ತು ದೇಹದ ಇನ್ನಿತರ ಅಂಗಗಳಿಗೆಲ್ಲ ಚೈತನ್ಯ ನೀಡುವುದು. ಹಾಗಾಗಿ ಹೃದಯಕ್ಕಿರುವ ಮಹತ್ವ ಮತ್ತು ಮನ್ನಣೆ ಉಳಿದ ಅಂಗಗಳಿಗಿಂತಲೂ ಕೊಂಚ ಹೆಚ್ಚೇ ಅಂದರೆ ಅತಿಶಯೋಕ್ತಿಯೇನಲ್ಲ.

ಈ ಹೃದಯ ನಿಮಿಷಕ್ಕೆ ಸರಾಸರಿ 70-80 ಬಾರಿ ಬಡಿಯುತ್ತದೆ. ನಾವು ನಮ್ಮ ಎದೆಯ ಎಡಭಾಗಕ್ಕೆ ಹಸ್ತವನ್ನಿರಿಸಿ ಅಥವಾ ಮಣಿಕಟ್ಟಿನ ಹತ್ತಿರದ ನಾಡಿ (ಪಲ್ಸ್) ಹಿಡಿದು ಹೃದಯದ ಬಡಿತವನ್ನು ಸುಲಭವಾಗಿ ಲೆಕ್ಕಹಾಕಬಹುದು. ಹೃದಯದ ಪ್ರತಿಯೊಂದು ಬಡಿತವೂ ಸುಮಾರು 70 ಎಂಎಲ್ಗಳಷ್ಟು ರಕ್ತವನ್ನು ರಕ್ತನಾಳಗಳಿಗೆ ಚಿಮ್ಮಿಸುತ್ತದೆ. ಈ ರಕ್ತವು ರಕ್ತನಾಳಗಳಲ್ಲಿ ಒಂದು ರೀತಿಯ ಅಲೆಯಂತೆ ಸರಿಯುತ್ತ ದೇಹದ ತುತ್ತತುದಿಯವರೆಗೂ ಸಾಗುತ್ತದೆ. ಈ ರೀತಿ ರಕ್ತಪರಿಚಲನೆ ಸರಾಗವಾಗಿ ಆಗದಿದ್ದರೆ ಅಂಗಗಳಿಗೆ ಸಾಕಷ್ಟು ಪೋಷಕಾಂಶಗಳು ತಲುಪುವುದೇ ಇಲ್ಲ.

ಹೃದಯಬಡಿತ ಒಂದು ಅನೈಚ್ಛಿಕ ಕ್ರಿಯೆ. ಅಂದರೆ ನಾವು ಹುಟ್ಟಿದ ಕ್ಷಣದಿಂದ ಸಾಯುವವರೆಗೂ ಅದು ತಂತಾನೇ ಲಯಬದ್ಧವಾಗಿ ಬಡಿದುಕೊಳ್ಳುತ್ತ ಒಂದು ಸಕ್ಷಮ ಪಂಪ್ ರೀತಿ ಕೆಲಸ ಮಾಡುತ್ತದೆ. ಅದಕ್ಕೆಂದೇ ಹೃದಯದಲ್ಲೊಂದು ಪುಟ್ಟ ಎಲೆಕ್ಟ್ರಿಕ್ ವ್ಯವಸ್ಥೆಯಿದೆ. ಹೃದಯದಲ್ಲಿರುವ SA ನೋಡ್ ಎಂಬ ಪುಟ್ಟ ಜನರೇಟರ್ನಿಂದ ಹೊರಡುವ ವಿದ್ಯುತ್ ಸಂಕೇತಗಳು ಹೃದಯವನ್ನು ವ್ಯವಸ್ಥಿತವಾಗಿ ಹಿಗ್ಗಿಸುವುದು-ಕುಗ್ಗಿಸುವುದನ್ನು ಮಾಡುತ್ತವೆ. ಈ ವಿದ್ಯುತ್ ಸಂಕೇತಗಳನ್ನು ಕಾಗದದ ಮೇಲೆ ಛಾಪಿಸಿ ಹೃದಯದ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ಈ ಕಾಗದವನ್ನೇ ECG ಎಂದು ಕರೆಯುತ್ತಾರೆ!

ಹೃದಯಬಡಿತ ನಿಯಮಿತವಾಗಿರದಿದ್ದರೆ ಹಲವಾರು ತೊಂದರೆಗಳು ಉದ್ಭವಿಸುತ್ತವೆ. ಎದೆ ಒಮ್ಮೆಲೆ ಢವಢವ ಬಡಿದುಕೊಂಡಿತು, ಹೃದಯದ ಬಡಿತವೇ ನಿಂತಂತೆ ಅನ್ನಿಸಿತು, ಕಣ್ಣು ಕತ್ತಲೆ ಬಂತು, ತಲೆ ತಿರುಗಿದಂತಾಯಿತು ಎಂಬ ಉದ್ಗಾರಗಳನ್ನು ನಾವು ಅನೇಕಬಾರಿ ಕೇಳಿರ್ತೀವಿ. ಇದು ಕೇವಲ ಉತ್ಪ್ರೇಕ್ಷೆಯಲ್ಲ. ಹೃದಯಬಡಿತದ ತಾಳ ತಪ್ಪಿದಾಗ ಆಗುವ ಅನುಭವಗಳೂ ಕೂಡ. ಹೇಗೆ ತಪ್ಪಿದ ತಾಳ ರಾಗದ ಸುಶ್ರಾವ್ಯತೆಗೆ ಭಂಗ ತರಬಹುದೋ ಅದೇ ರೀತಿ ಹೃದಯದ ತಾಳವು ತಪ್ಪಿದಾಗ ನಮ್ಮ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಹಾಗಾದರೆ ಈ ಅನಿಯಮಿತ ಹೃದಯಬಡಿತದ ಬಗ್ಗೆ ಕೊಂಚ ತಿಳಿದುಕೊಳ್ಳೋಣ.

ಅನಿಯಮಿತ ಹೃದಯಬಡಿತವನ್ನು (ವೈದ್ಯಕೀಯ ಭಾಷೆಯಲ್ಲಿ ಅರಿಧ್ಮಿಯಾ ಎನ್ನುತ್ತಾರೆ) ಸಾಮಾನ್ಯವಾಗಿ ಇದನ್ನು ಬ್ರ್ಯಾಡಿಅರಿಧ್ಮಿಯಾ (ಅತಿಕಡಿಮೆ ಹೃದಯಬಡಿತ) ಮತ್ತು ಟ್ಯಾಕಿಅರಿಧ್ಮಿಯಾ (ಅತಿಜಾಸ್ತಿ ಹೃದಯಬಡಿತ) ಎಂದು ವಿಂಗಡಿಸಬಹುದು. ಅಲ್ಲದೇ ಹೃದಯಬಡಿತದ ವೇಗ ಸರಿ ಇದ್ದು ಅನವಶ್ಯಕ ಬಡಿತಗಳು, ಅವಧಿಪೂರ್ವ ಬಡಿತಗಳು ಮತ್ತು ತಪ್ಪಿದ ಬಡಿತಗಳು ಎಂದು ಕೂಡ ವರ್ಗೀಕರಣ ಮಾಡಬಹುದು. ಫಿಬ್ರಿಲೇಷನ್ ಎಂಬ ಅಪಾಯಕಾರಿ ವಿಧವೂ ಉಂಟು. ಇಸಿಜಿಯಲ್ಲೇ ಈ ಎಲ್ಲ ತೊಂದರೆಗಳನ್ನು ಕಂಡುಹಿಡಿಯಬಹುದಾದರೂ ಕೆಲವೊಮ್ಮೆ ಹೃದಯದ ಸ್ಕ್ಯಾನ್, ಇನ್ನಿತರೆ ಪರೀಕ್ಷೆಗಳು ಬೇಕಾಗುತ್ತವೆ.

ಈ ಅನಿಯಮಿತ ಹೃದಯಬಡಿತಗಳು ಶೇ 1.5 -5 ರಷ್ಟು ಜನರಲ್ಲಿ ಮಾತ್ರ ಕಂಡುಬರುತ್ತವೆ. ಇವು ಸಾಮಾನ್ಯವಾಗಿ ಸೌಮ್ಯಸ್ವರೂಪದ್ದಾಗಿದ್ದರೂ ಕೆಲವೊಮ್ಮೆ ಮಾರಣಾಂತಿಕವೂ ಆಗಬಹುದು. ಅನಿಯಮಿತ ಹೃದಯಬಡಿತದ ಮುಖ್ಯ ಸಮಸ್ಯೆಯೆಂದರೆ ಹೃದಯ ಲಯಬದ್ಧವಾಗಿ ಬಡಿದುಕೊಳ್ಳುವುದಿಲ್ಲ. ಹಾಗಾಗಿ ದೇಹದ ಅಂಗಾಗಗಳಿಗೆ ನಿಯಮಿತವಾಗಿ ರಕ್ತಚಲನೆಯಾಗದೇ ಆಮ್ಲಜನಕ ಮತ್ತಿತರ ಪೋಷ್ಟಿಕಾಂಶಗಳು ಸಿಗದೇ ಹೋಗುತ್ತವೆ. ಆಗ ವ್ಯಕ್ತಿ ತನ್ನ ದಿನನಿತ್ಯದ ಕೆಲಸಕಾರ್ಯಗಳನ್ನು ಮಾಡಿಕೊಳ್ಳಲು ಹೆಣಗಾಡಬೇಕಾಗುತ್ತದೆ. ಎದೆ ತೀವ್ರವಾಗಿ ಬಡಿದುಕೊಂಡಂತೆ, ಉಸಿರಾಡಲು ಕಷ್ಟವಾದಂತೆ ಆಗಬಹುದು. ಕೆಲವೊಮ್ಮೆ ಮೂರ್ಛೆ ಹೋಗಬಹುದು. ಹೃದಯಾಘಾತ ಕೂಡ ಆಗಬಹುದು. ರಕ್ತದ ಚಲನೆ ತೀರಾ ನಿಧಾನವಾದಾಗ ರಕ್ತ ಹೆಪ್ಪುಗಟ್ಟಬಹುದು. ಹೆಪ್ಪುಗಟ್ಟಿದ ರಕ್ತದ ಕಣಗಳು ತೇಲಿಹೋಗಿ ಚಿಕ್ಕಚಿಕ್ಕ ರಕ್ತನಾಳಗಳನ್ನೇ ಮುಚ್ಚಿಬಿಡಬಹುದು.

ಅನಿಯಮಿತ ಹೃದಯಬಡಿತಕ್ಕೆ ಹಲವಾರು ಕಾರಣಗಳಿವೆ. ಯಾವುದೇ ಹೃದಯಸಂಬಂಧಿ ರೋಗವಿದ್ದರೆ, ಹೆಚ್ಚಿನ ಬಿಪಿ ಇದ್ದರೆ ಹೃದಯದ ಮೇಲೆ ಒತ್ತಡ ಹೆಚ್ಚಿ ವಿದ್ಯುತ್ ಸಂಕೇತಗಳು ಏರುಪೇರಾಗುವ ಸಾಧ್ಯತೆಗಳಿರುತ್ತವೆ. ಹಳೆಯ ಹೃದಯಾಘಾತದಿಂದಾದ ಗಾಯ ಕೆಲವೊಮ್ಮೆ ಜನರೇಟರ್ ತರಹ ಅನವಶ್ಯಕ ವಿದ್ಯುತ್ ಸಂಕೇತಗಳನ್ನು ನೀಡಲಾರಂಭಿಸುತ್ತದೆ. ಆಹಾರದಲ್ಲಿನ ಖನಿಜಗಳ ಅಸಮತೋಲನ ಕೂಡ ವಿದ್ಯುತ್ ಸಂಕೇತಗಳ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ. ಧೂಮ್ರಪಾನ, ಮದ್ಯಪಾನ ಮತ್ತು ಕೆಲ ಔಷಧಿಗಳು ಕೂಡ ಅನಿಯಮಿತ ಹೃದಯಬಡಿತಕ್ಕೆ ಕಾರಣವಾಗಬಲ್ಲವು. ಯಾವುದೇ ರೀತಿಯ ಮಾನಸಿಕ ಅಥವಾ ದೈಹಿಕ ಒತ್ತಡ ಕೂಡ ಹೃದಯದ ಬಡಿತವನ್ನು ಏರುಪೇರು ಮಾಡಬಲ್ಲದು.

ಅನಿಯಮಿತ ಹೃದಯಬಡಿತವನ್ನು ತಡೆಗಟ್ಟಲು ಅನೇಕ ಮಾರ್ಗಗಳಿವೆ. ಹೃದಯಸಂಬಂಧಿ ರೋಗವಿದ್ದರೆ ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಕೊಡಿಸಿ ಹೃದಯ ಆದಷ್ಟು ಸುಸ್ಥಿತಿಯಲ್ಲಿರುವಂತೆ ಕಾಪಾಡಿಕೊಳ್ಳಬೇಕು. ಉಪ್ಪು ಮತ್ತು ಕೊಬ್ಬಿನ ಅಂಶ ಕಡಿಮೆ ಇರುವ, ವಿಟಮಿನ್, ಖನಿಜಯುಕ್ತ ಸಮತೋಲಿತ ಆಹಾರ ಸೇವನೆ ನಮ್ಮ ಗುರಿಯಾಗಬೇಕು. ದುಶ್ಚಟಗಳನ್ನು ವರ್ಜಿಸುವುದು, ನಿಯಮಿತ ವ್ಯಾಯಾಮ, ಯೋಗ ಅಥವಾ ಧ್ಯಾನದಿಂದ ಮಾನಸಿಕ ಮತ್ತು ಶಾರೀರಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಹೃದಯದ ದೃಷ್ಟಿಯಿಂದ ಬಹುಮುಖ್ಯ.

ಹೃದಯಬಡಿತವನ್ನು ತಹಬಂದಿಗೆ ತರಲು ಹಲವಾರು ಔಷಧಿಗಳು ಇವೆ. ಅಲ್ಲದೇ ಪೇಸ್ಮೇಕರ್ ಅಳವಡಿಕೆ, ಹೃದಯದಲ್ಲೇ ಪುಟ್ಟ ಜನರೇಟರ್ (ICD) ಅಳವಡಿಕೆಯಂತಹ ಅತ್ಯಾಧುನಿಕ ಚಿಕಿತ್ಸೆಯಿಂದಲೂ ಹೃದಯಬಡಿತವನ್ನು ನಿಯಂತ್ರಿಸಬಹುದು. ತಜ್ಞವೈದ್ಯರು ಅನಿಯಮಿತ ಹೃದಯಬಡಿತವನ್ನು ಪತ್ತೆ ಮಾಡಿ ಸೂಕ್ತ ಚಿಕಿತ್ಸೆಯನ್ನು ನೀಡಬಲ್ಲರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.