ನವದೆಹಲಿ: ದೇಶದಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದಂತೆ ಸಂಶೋಧನೆಗೆ ನೆರವಾಗುವ ಉದ್ದೇಶದಿಂದ ಮದ್ರಾಸ್ನ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ವಂಶವಾಹಿ ದತ್ತಾಂಶ ಮಾಹಿತಿ ಕೋಶವನ್ನು ಆರಂಭಿಸಿದೆ.

‘ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ. ಜಾಗತಿಕ ಕ್ಯಾನ್ಸರ್ ವಂಶವಾಹಿ ಅಧ್ಯಯನದಲ್ಲಿ ಭಾರತದ ಪ್ರಾತಿನಿಧ್ಯ ತೀರಾ ಕಡಿಮೆ ಇದೆ. ಭಾರತದಲ್ಲಿ ಪ್ರಚಲಿತದಲ್ಲಿರುವ ಕ್ಯಾನ್ಸರ್ಗಳ ವಂಶವಾಹಿ ರಚನೆಯು ಲಭ್ಯವಿಲ್ಲ. ಹೀಗಾಗಿ ಔಷಧ ತಯಾರಿಕಾ ಕಂಪನಿಗಳ ಬಳಿಯೂ ಭಾರತದಲ್ಲಿರುವ ಕ್ಯಾನ್ಸರ್ ವಿಧಗಳ ಕುರಿತು ಹೆಚ್ಚಿನ ವಿವರಗಳಿಲ್ಲ’ ಎಂದು ಐಐಟಿ ಮದ್ರಾಸ್ನ ನಿರ್ದೇಶಕ ವಿ. ಕಾಮಕೋಟಿ ಹೇಳಿದ್ದಾರೆ.

‘ಭಾರತದಲ್ಲಿರುವ ಕ್ಯಾನ್ಸರ್ ಪ್ರಕರಣಗಳಿಗೂ ಮತ್ತು ಜಾಗತಿಕ ದತ್ತಾಂಶಕ್ಕೂ ಇರುವ ಅಂತರವನ್ನು ಗಮನಿಸಿ 2020ರಲ್ಲಿ ಐಐಟಿ ಮದ್ರಾಸ್ ಈ ಕಾರ್ಯಕ್ಕೆ ಕೈಹಾಕಿತ್ತು. ಭಾರತ್ ಕ್ಯಾನ್ಸರ್ ವಂಶವಾಹಿ ಅಟ್ಲಾಸ್ (BCGA) ಎಂಬ ಯೋಜನೆ ಇದಾಗಿದೆ. ಈ ಕಾರ್ಯಕ್ರಮದಡಿಯಲ್ಲಿ, ದೇಶವ್ಯಾಪಿ 480 ಸ್ತನ ಕ್ಯಾನ್ಸರ್ಗೆ ಸಂಬಂಧಿಸಿದಂತೆ 960 ವಂಶವಾಹಿಯ ಎಕ್ಸೋಮ್ಗಳನ್ನು ಸಂಗ್ರಹಿಸಲಾಗಿದೆ. ಮಿದುಳಿನ ಮಾಹಿತಿಯ ಸಂಗ್ರಹದ ನಂತರ ಕ್ಯಾನ್ಸರ್ ವಂಶವಾಹಿಯ ಮಾಹಿತಿ ದಾಖಲಿಸಲಾಗುತ್ತಿದೆ. ಇದರ ಮಾಹಿತಿಯನ್ನೂ ಶೀಘ್ರದಲ್ಲಿ ಹಂಚಿಕೊಳ್ಳಲಾಗುವುದು. ಈ ಎಲ್ಲಾ ಮಾಹಿತಿ ಆಧರಿಸಿ ಕ್ಯಾನ್ಸರ್ನಂಥ ಭಯಾನಕ ಕಾಯಿಲೆಗೆ ಕಾರಣ, ಶೀಘ್ರ ಪತ್ತೆ ಮತ್ತು ಅದರ ಚಿಕಿತ್ಸೆಗೆ ಇದು ಸಹಕಾರಿಯಾಗಲಿದೆ’ ಎಂದಿದ್ದಾರೆ.

‘ಸ್ತನ ಕ್ಯಾನ್ಸರ್ನಲ್ಲಿ ಅನುವಂಶೀಯ ರೂಪಾಂತರಗಳ ಮಾಹಿತಿಯನ್ನು ಬಿಸಿಜಿಎ ನೀಡುತ್ತದೆ. ಇದರಿಂದ ಈ ರೋಗದ ಗುಣಲಕ್ಷಣವನ್ನು ಬೇಗನೆ ಪತ್ತೆ ಮಾಡಬಹುದು, ರೋಗದ ಬೆಳವಣಿಗೆಯನ್ನು ಗ್ರಹಿಸಿ ಸೂಕ್ತ ಚಿಕಿತ್ಸೆ ನೀಡಬಹುದಾಗಿದೆ. ಈ ಸಂಶೋಧನೆಯಲ್ಲಿ ಮುಂಬೈನ ಕಾರ್ಕಿನೊಸ್ ಹೆಲ್ತ್ಕೇರ್, ಚೆನ್ನೈನ ಬ್ರೆಸ್ಟ್ ಕ್ಲಿನಿಕ್ ಮತ್ತು ಕ್ಯಾನ್ಸರ್ ರಿಸರ್ಚ್ ಮತ್ತು ರಿಲೀಫ್ ಟ್ರಸ್ಟ್ಗಳು ಐಐಟಿ ಮದ್ರಾಸ್ ಜತೆ ಕೈಜೋಡಿಸಿವೆ. ಈ ಸಂಸ್ಥೆಗಳು ಭಾರತದಲ್ಲಿ ಕಂಡುಬರುವ ಸ್ತನ ಕ್ಯಾನ್ಸರ್ ಪ್ರಕರಣಗಳ ಅನುವಂಶೀಯ ರೂಪಾಂತರಗಳನ್ನು ಪತ್ತೆ ಮಾಡಿ, ಅವುಗಳನ್ನು ಸಂಯೋಜಿಸಿ ಮಾಹಿತಿ ಸಿದ್ಧಪಡಿಸಿವೆ’ ಎಂದು ಕಾಮಕೋಟಿ ಮಾಹಿತಿ ನೀಡಿದ್ದಾರೆ.

‘ಬಿಸಿಜಿಎ ಮೂಲಕ ಸಂಶೋಧಕರು ಸಂಗ್ರಹಿಸಿ, ವಿಶ್ಲೇಷಿಸುವ ಮಾಹಿತಿಯನ್ನು ಆಧರಿಸಿ ಕ್ಯಾನ್ಸರ್ಗೆ ಕಾರಣವಾಗುವ ವಂಶವಾಹಿಯನ್ನು ಹೊತ್ತೊಯ್ಯುವ ಅಂಶವನ್ನು ಪತ್ತೆ ಮಾಡಲಾಗುತ್ತದೆ. ಹೀಗೆ ಬೇಗ ಪತ್ತೆ ಮಾಡಿದಲ್ಲಿ ನಿರ್ದಿಷ್ಟ ಔಷಧ ಸಂಶೋಧನೆಗೂ ನೆರವಾಗಲಿದೆ. ಇದು ಭಾರತೀಯರಿಗೆ ಹೆಚ್ಚು ಪ್ರಯೋಜನವಾಗಲಿದೆ’ ಎಂದು ಐಐಟಿ ಮದ್ರಾಸ್ನ ಕ್ಯಾನ್ಸರ್ ಜಿನಾಮಿಕ್ಸ್ ವಿಭಾಗದ ಮುಖ್ಯಸ್ಥ ಎಸ್. ಮಹಾಲಿಂಗಮ್ ಹೇಳಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ವರದಿಯ ಪ್ರಕಾರ ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ಏರುಗತಿಯಲ್ಲೇ ಸಾಗುತ್ತಿದೆ ಎಂದಿದೆ. ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮದ ವರದಿಯ ಪ್ರಕಾರ, ಪ್ರತಿ ಒಂಭತ್ತು ಜನರಲ್ಲಿ ಒಬ್ಬರಿಗೆ ಕ್ಯಾನ್ಸರ್ ಕಾರಕ ಕೋಶಗಳು ಅಭಿವೃದ್ಧಿಯಾಗುವ ಸಾಧ್ಯತೆ ಇದೆ ಎಂದಿದೆ. ಸದ್ಯ ದೇಶದಲ್ಲಿ 14,61,427 ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. 2022ರಿಂದ ಈಚೆಗೆ ಶೇ 12.8ರ ದರದಲ್ಲಿ ಇದು ಹೆಚ್ಚಳವಾಗುತ್ತಿದೆ ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.