ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜೆತನ | ದಂಪತಿಗಳಲ್ಲಿ ಹೆಚ್ಚುತ್ತಿರುವ ಆತಂಕ...

Last Updated 8 ಮೇ 2020, 10:14 IST
ಅಕ್ಷರ ಗಾತ್ರ

ಭಾರತದಲ್ಲಿ ಅನೇಕ ದಂಪತಿಗಳು ಅನೇಕ ಕಾರಣಗಳಿಗಾಗಿ ಬಂಜೆತನದಿಂದ ನರಳುತ್ತಿದ್ದು, ಇದನ್ನು ಭಾರತೀಯ ಸಮಾಜದಲ್ಲಿ ಕಳಂಕವೆಂದು ಭಾವಿಸಲಾಗಿದೆ. ಅನೇಕ ಆರೋಗ್ಯದ ಸಮಸ್ಯಗಳಂತೆ ಬಂಜೆತನವೂ ಭಾರತದಲ್ಲಿ ಅಸಾಂಕ್ರಾಮಿಕ ರೋಗಗಳಂತೆ ಹೆಚ್ಚುತ್ತಿದೆ.

ಅದೇ ರೀತಿ, ಬೆಂಗಳೂರಿನಂತಹ ಮೆಟ್ರೊ ನಗರಗಳಲ್ಲಿಯೂ ಬಂಜೆತನದ ಪ್ರಮಾಣವು ಹೆಚ್ಚುತ್ತಿದೆ. ನನ್ನ ವೈದ್ಯಕೀಯ ಅನುಭವದಲ್ಲಿ, ಕಳೆದ ದಶಕಕ್ಕೆ ಹೋಲಿಸಿದರೆ ಬಂಜೆತನವು ಗಣನೀಯವಾಗಿ ಏರಿಕೆಯಾಗಿದೆ. ಭಾರತೀಯ ನೆರವಿನ ಸಂತಾನೋತ್ಪತ್ತಿ ಸಂಘದ ಪ್ರಕಾರ, ಬಂಜೆತನವು ಈಗ ಬಹಳ ವೇಗವಾಗಿ ಹೆಚ್ಚುತ್ತಿರುವ ಸಮಸ್ಯೆಯಾಗಿದ್ದು, 10–-14% ಭಾರತೀಯರನ್ನು ಕಾಡುತ್ತಿದೆ.

ಹೆಚ್ಚುತ್ತಿರುವ ಬಂಜೆತನಕ್ಕೆ ಕಾರಣಗಳು

* ಮಾನಸಿಕ ಒತ್ತಡ: ಒತ್ತಡವು ಸ್ತ್ರೀಯರಲ್ಲಿ ಅಂಡಾಣುವಿನ ಮತ್ತು ಪುರುಷರ ವೀರ್ಯಾಣುವಿನ ಮೇಲೆ ಪ್ರಭಾವ ಬೀರುತ್ತದೆ, ಮತ್ತು ಲೈಂಗಿಕ ಕ್ರೀಯೆಯನ್ನು ಕುಂಠಿತಗೊಳಿಸಬಹುದು.

*ಆಹಾರದ ಅಭ್ಯಾಸಗಳು: ಜಂಕ್ ಆಹಾರ ಮತ್ತು ತಕ್ಷಣದ ಪ್ಯಾಕೇಜ್ ಆಹಾರಗಳ ಮೇಲೆ ಅವಲಂಬನೆಯು ದಂಪತಿಗಳಲ್ಲಿ ಹೆಚ್ಚುತ್ತಿದೆ. ಈ ಆಹಾರಗಳಲ್ಲಿ ಬಳಸಲಾಗುವ ತೈಲವು ಪ್ರತಿ ಬಳಕೆಯಲ್ಲೂ ಕಲುಷಿತಗೊಳ್ಳುತ್ತದೆ ಮತ್ತು ಈ ಆಹಾರದಲ್ಲಿ ಕೃತಕ ವರ್ಣಗಳು ಮತ್ತು ರುಚಿಗಳು ಇರುತ್ತದೆ. ಆದ್ದರಿಂದ ಇವು ಸಂತಾನೋತ್ಪತ್ತಿ ಶಕ್ತಿಯ ಮೇಲೆ ದುಷ್ಪರಿಣಾಮ ಬೀರುವುದರಿಂದ ಇವುಗಳನ್ನು ದೂರವಿಡಬೇಕು.

*ಸರಿಯಾದ ನಿದ್ರೆ ಇಲ್ಲದಿರುವುದು: ಯುವಕರು ತಮ್ಮ ವೃತ್ತಿಯ ಗುರಿಗಳನ್ನು ಬೆನ್ನೇರುತ್ತಾ ಸರಿಯಾಗಿ ನಿದ್ರಿಸುವುದಿಲ್ಲ. ಅದರಲ್ಲಿಯೂ ಬಿಪಿಓ ಅಥವಾ ಅಂತರರಾಷ್ಟ್ರಿಯ ಪಾಳಿಯ ಉದ್ಯೋಗಿಗಳು ಅಸಹಜವಾದ ಕೆಲಸದ ಸಮಯವನ್ನು ಹೊಂದಿರುತ್ತಾರೆ. ಇದನ್ನು ಪರಿಹರಿಸಿಕೊಳ್ಳಲು ಅವರು ಧೂಮಪಾನ ಮಾಡುತ್ತಾರೆ, ಮತ್ತು ಹೆಚ್ಚಾಗಿ ಕೆಫೀನ್ ಕುಡಿಯುವುದರಿಂದ ಇದು ಸಂತಾನೋತ್ಪತ್ತಿಯ ಮೇಲೆ ಪ್ರಭಾವ ಬೀರುತ್ತದೆ.

*ದೀರ್ಘವಾದ ಪ್ರಯಾಣಗಳು: ನಗರದಲ್ಲಿ ಎಂದೂ ಮುಗಿಯದ ಸಂಚಾರಿ ಸಮಸ್ಯೆಗಳಿಂದ, ಬೆಂಗಳೂರಿಗರು ಪ್ರತಿ ದಿನ 30–-40 ಕಿಮೀಗಳು ಸಂಚರಿಸುತ್ತಾರೆ. ಇದು ಅವರ ಹಾರ್ಮೋನ್ ಮಟ್ಟದ ಮೇಲೆ ಪ್ರಭಾವ ಬೀರುತ್ತದೆ, ಇದರಿಂದ ಅಂಡಾಣು ಮತ್ತು ವೀರ್ಯಾಣುವಿನ ಗುಣಮಟ್ಟ ಕಡಿಮೆಯಾಗುತ್ತದೆ.

*ವಿದ್ಯುತ್ ಉಪಕರಣಗಳ ತೀವ್ರ ಬಳಕೆ: ಮೊಬೈಲ್, ಟ್ಯಾಬ್ಲೆಟ್, ಬ್ಲುಟೂತ್ ಇತ್ಯಾದಿಗಳು ವಿಕಿರಣಗಳನ್ನು ಸೂಸುತ್ತದೆ ಮತ್ತು ಇದು ಹಾರ್ಮೋನ್ ಮೇಲೆ ಪ್ರಭಾವ ಬೀರುತ್ತದೆ. ಈ ಉಪಕರಣಗಳನ್ನು ತೀವ್ರವಾಗಿ ಬಳಸಿದಾಗ, ಇದರಿಂದ ನಿದ್ರೆಯು ಕಡಿಮೆಯಾಗುತ್ತದೆ, ಮತ್ತು ಹಾರ್ಮೋನ್ ಮೇಲೆ ಪ್ರಭಾವ ಬೀರುತ್ತದೆ.

*ಅನುವಂಶೀಯತೆ: ಹಾರ್ಮೋನ್ ಗಳ ಅನುವಂಶೀಯ ಗುಣಗಳಲ್ಲಿ ನಾವು ಬದಲಾವಣೆ ಕಂಡಿದ್ದು, ಇದರಿಂದ ಇದು ಈಗ ಮಹಿಳೆಯರ ಮೇಲೆ 35 ವರ್ಷಗಳಿಗೇ ಪ್ರಭಾವ ಬೀರುತ್ತದೆ, ಹಿಂದೆ ಇದು 40 ವರ್ಷಗಳಲ್ಲಿ ಆಗುತ್ತಿತ್ತು.

ಚಿಕಿತ್ಸೆಯ ಆಯ್ಕೆಗಳು...
ದಂ
ಪತಿಗಳ ಆರಂಭಿಕ ಸಮಾಚೋಲನಾ ಚಿಕಿತ್ಸೆಯಿಂದ ಬಂಜೆತನ/ವಿಳಂಬಕ್ಕೆ ಕಾರಣವಾದ ಅನೇಕ ಅಂಶಗಳನ್ನು ಪತ್ತೆಮಾಡಬಹುದು. ಬಂಜೆತನಕ್ಕೆ ಕಾರಣವಾದ ಅಂಶಕ್ಕೆ ಚಿಕಿತ್ಸೆ ನೀಡುವುದು ಉತ್ತಮ ಆಯ್ಕೆ. ಮಹಿಳೆಯರಲ್ಲಿ ಸರಳ ಪರೀಕ್ಷೆಗಳಾದ ವಜೀನಲ್ ಸ್ಕಾನ್, ಫಾಲ್ಲೋಪಿಯನ್ ಟ್ಯೂಬ್ ಪರೀಕ್ಷೆ, ಹಾರ್ಮೋನ ಪರೀಕ್ಷೆ ಮತ್ತು ಪುರುಷರಲ್ಲಿ ವೀರ್ಯಾಣು ಪರೀಕ್ಷೆಯಿಂದ ಸಮಸ್ಯೆಯನ್ನು ಗುರುತಿಸಿ, ಚಿಕಿತ್ಸೆ ನೀಡುವುದು ಸಾಧ್ಯ. ಫಾಲ್ಲೊಪಿಯನ್ ಟ್ಯೂಬ್ ನಲ್ಲಿ ತಡೆಯಿದ್ದರೆ, ನಾವು ಐವಿಎಫ್‌ ಸಲಹೆ ನೀಡುತ್ತೇವೆ. ನಾವು ಕಂಡಂತೆ 13-18% ಪ್ರಕರಣಗಳಲ್ಲಿ ಕಾರಣ ಪತ್ತೆಯಾಗುವುದಿಲ್ಲ.

ಇಂತಹ ಸಂದರ್ಭಗಳಲ್ಲಿ ಅಥವಾ ವೈದ್ಯಕೀಯ ಅಥವಾ ಶಸ್ತ್ರಚಿಕಿತ್ಸೆಯ ಆಯ್ಕೆಗಳು ಸರಿಯಿಲ್ಲದಿದ್ದರೆ, ನಾವು IUI (ಇಂಟ್ರಾ ಯುಟೆರೈನ್ ಇನ್ಸೆಮಿನೇಶನ್), IVF (ಇನ್ವಿಟ್ರೊ ಫರ್ಟಿಲೈಶನ್‌) ಅಥವಾ ICSI (ಇಂಟ್ರಾ ಸೈಟೊಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಶನ್) ಚಿಕಿತ್ಸೆಯ ಸಲಹೆ ನೀಡುತ್ತೇವೆ. IUI ಗರ್ಭಧಾರಣೆಯ ಸಾಧ್ಯತೆಗಳನ್ನು 4 ಪಟ್ಟು ಹೆಚ್ಚಿಸುತ್ತದೆ.

ಜೀವನಶೈಲಿಯ ಬದಲಾವಣೆ
ಇಂದು ಕಂಡುಬರುವ ಬಹಳಷ್ಟು ಬಂಜೆತನದ ಸಮಸ್ಯೆಗಳನ್ನು ಕೆಲವು ಜೀವನಶೈಲಿಯ ಬದಲಾವಣೆಗಳಿಂದ ನಿಲ್ಲಿಸಬಹುದು ಅಥವಾ ನಿಯಂತ್ರಿಸಬಹುದು. ಮದ್ಯಪಾನ ಮಾಡದಿರುವುದು, ಧೂಮಪಾನ ಬಿಡುವುದು, ಅರೋಗ್ಯಕರ ಆಹಾರ, ತೂಕ ನಿರ್ವಹಣೆ ಮತ್ತು ಒತ್ತಡ ನಿರ್ವಹಣೆಯನ್ನು ನಾನು ಬಲವಾಗಿ ಶಿಫಾರಸು ಮಾಡುತ್ತೇನೆ. ಬಂಜೆತನದ ನಿರ್ವಹಣೆ ಈಗ ಒಂದು ಕದನವಾಗಿಲ್ಲ. ಸಮಯೋಚಿತ ಕ್ರಮದಿಂದ ಅದನ್ನು ಪರಿಣಾಮಕಾರಿಯಾಗಿ ಪರಿಹರಿಸಬಹುದು.

-ಡಾ.ಶಿಲ್ಪಾ ಜಿಬಿ, ಸ್ತ್ರೀರೋಗತಜ್ಞರು, ಬ್ಲೂಂ ಕ್ಲಿನಿಕ್ ಮತ್ತು ಸಮಾಲೋಚಕ ಸ್ತ್ರೀರೋಗತಜ್ಞರು, ಶಾಂತಿ ಶೆಲ್ ಫರ್ಟಿಲಿಟಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT