ಮಂಗಳವಾರ, ಫೆಬ್ರವರಿ 18, 2020
18 °C

ಬೊಜ್ಜು ಕರಗಿಸಲು ಇಂಟರ್‌ಮಿಟೆಂಟ್ ಉಪವಾಸ

ಮುರಲೀಧರ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ತೂಕ ಕಡಿಮೆ ಮಾಡಿಕೊಳ್ಳಲು ಸಾಮಾನ್ಯವಾಗಿ ಡಯಟ್‌ ಮಾಡುವುದು ರೂಢಿ. ಕೊಬ್ಬಿನ ಪದಾರ್ಥಗಳನ್ನು ಮತ್ತು ಸಿಹಿತಿಂಡಿಗಳನ್ನು ವರ್ಜಿಸುವುದು, ಅನ್ನವನ್ನು ತ್ಯಜಿಸುವುದು ಸಾಮಾನ್ಯ. ಆದರೆ ತೂಕ ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ಒಂದು ಸುಲಭ ವಿಧಾನ. ಅದೇ ಇಂಟರ್‌ಮಿಟೆಂಟ್ ಉಪವಾಸ.

ಇದು ನಮ್ಮ ತೂಕ ಕಡಿಮೆ ಮಾಡುವುದಲ್ಲದೆ ನಮ್ಮ ಪಚನ ಶಕ್ತಿಯನ್ನು ಉದ್ದೀಪನಗೊಳಿಸುತ್ತದೆ. ಇಂಟರ್‌ಮಿಟೆಂಟ್ ಉಪವಾಸ ಎಂದರೆ ಒಂದು ದಿನದಲ್ಲಿ 16– 18 ಗಂಟೆಗಳ ಕಾಲ ಉಪವಾಸವಿರುವುದು; ಉಳಿದ 6–8 ಗಂಟೆಗಳ ಅವಧಿಯಲ್ಲಿ ಆಹಾರವನ್ನು ಸೇವಿಸುವುದು; ಉಪವಾಸವಿರುವ ಸಮಯದಲ್ಲಿ ನೀರು ಮತ್ತು ಗ್ರೀನ್ ಟೀ ಮಾತ್ರ ಸೇವಿಸುವುದು. ರಾತ್ರಿ 9 ಗಂಟೆಗೆ ಊಟ ಮಾಡಿದರೆ ಮರುದಿನ ಮಧ್ಯಾಹ್ನ ಒಂದು ಗಂಟೆಗೆ ಊಟ ಮಾಡಬಹುದು. ಈ ಮಧ್ಯದಲ್ಲಿ ಯಾವ ಆಹಾರವನ್ನೂ ಸೇವಿಸುವಂತಿಲ್ಲ.

ಆದರೆ ಇಷ್ಟು ದೀರ್ಘಕಾಲ ಉಪವಾಸವಿರುವುದು ಹೇಗೆ ಸಾಧ್ಯ ಎಂದು ಕೆಲವರಿಗೆ ಅನಿಸಬಹುದು. ಆದರೆ ಅಭ್ಯಾಸದಿಂದ ಏನು ಬೇಕಾದರೂ ಸಾಧಿಸಬಹುದು. ಇದನ್ನು ಬಳಸಿಕೊಳ್ಳಬೇಕೆನ್ನುವವರು ಮೊದಲು 12 ಗಂಟೆಗಳ ಉಪವಾಸದಿಂದ ಆರಂಭಿಸಬೇಕು.

ಇಂಟರ್‌ಮಿಟೆಂಟ್ ಉಪವಾಸವು ತೂಕ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂಬುದು ಹಲವು ಅಧ್ಯಯನಗಳಿಂದ ಸಾಬೀತಾಗಿರುವುದರಿಂದ ಇತ್ತೀಚಿಗೆ ಅನೇಕ ಜನರು ಇದನ್ನು ಅನುಸರಿಸುತ್ತಿದ್ದಾರೆ.

ಈ ಉಪವಾಸದಿಂದ ಆಗುವ ಪ್ರಮುಖ ಲಾಭವೆಂದರೆ ಅದು ಪಚನ ಕ್ರಿಯೆಯನ್ನು ವೃದ್ಧಿಸುತ್ತದೆ. ನಾವು ದೀರ್ಘಕಾಲದವರೆಗೆ ಉಪವಾಸ ಮಾಡಿದಾಗ ನಮ್ಮ ಶರೀರದಲ್ಲಿ ಕೆಲವು ಬದಲಾವಣೆಯಾಗುತ್ತದೆ. ಈ ಸ್ಥಿತಿಯಲ್ಲಿ ನಮ್ಮ ಜೀರ್ಣಾಂಗಗಳಿಗೆ ಆಹಾರವನ್ನು ಪಚನ ಮಾಡಲು ಹೆಚ್ಚಿನ ಸಮಯ ಹಾಗೂ ಹೆಚ್ಚಿನ ಶ್ರಮ ಬೇಕಾಗುವುದಿಲ್ಲ. ಈ ಸ್ಥಿತಿಯಲ್ಲಿ ಜಠರದಲ್ಲಿ ಆಹಾರದ ಅಭಾವದಿಂದಾಗಿ ನಮ್ಮ ಶರೀರ ನಮ್ಮ ಕೊಬ್ಬನ್ನು ಕರಗಿಸುತ್ತದೆ. ವಿಶೇಷವಾಗಿ ನಾವು ಊಟ ಮಾಡಿದಾಗ ಮತ್ತು ಆಹಾರ ಜಠರದಲ್ಲಿ ಉಳಿದಾಗ ಈ ಸ್ಥಿತಿ ಉಂಟಾಗುತ್ತದೆ.

ಇಂಟರ್‌ಮಿಟೆಂಟ್ ಉಪವಾಸವು ಎರಡು ಊಟಗಳ ನಡುವಿನ ಸಮಯವನ್ನು ಹೆಚ್ಚಿಸುತ್ತದೆಯೇ ಹೊರತು ಊಟದ ಪ್ರಮಾಣವನ್ನು ಬದಲಾಯಿಸುವುದಿಲ್ಲ.

ಈ ಪದ್ಧತಿಯನ್ನು ಅನುಸರಿಸಿದಾಗ ನಾವು ಯಾವ ಆಹಾರ ಪದಾರ್ಥವನ್ನೂ ತ್ಯಜಿಸಬೇಕಾಗಿಲ್ಲ. ಇದರಿಂದ ನಾವು ಏನನ್ನಾದರೂ ಕಳೆದುಕೊಂಡಿದ್ದೇವೆ ಎಂಬ ಭಾವನೆ ನಮ್ಮ ಮನಸ್ಸಿನಲ್ಲಿ ಮೂಡುವುದೇ ಇಲ್ಲ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)