ಪ್ರಪಂಚದಾದ್ಯಂತ ಶೇ 10ರಷ್ಟು ಜನರು ತಮ್ಮ ಜೀವಮಾನದ ಒಂದಲ್ಲ ಒಂದು ಕಾಲಘಟ್ಟದಲ್ಲಿ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯಿಂದ ತೊಂದರೆಯನ್ನು ಅನುಭವಿಸುತ್ತಾರೆ. ಸಾಮಾನ್ಯವಾಗಿ ನೂರರಲ್ಲಿ ಒಬ್ಬರು ಆಸ್ಪತ್ರೆಗೆ ದಾಖಲಾಗಲು ಮೂತ್ರಪಿಂಡದ ಕಲ್ಲುಗಳ ಕಾರಣದಿಂದ ಬರುವ ಹೊಟ್ಟೆಯ ನೋವು ಕಾರಣವಾಗಿರುತ್ತದೆ. ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಸಮಾನ ಪ್ರಮಾಣದಲ್ಲಿ ಕಂಡುಬರುವ ಈ ಕಾಯಿಲೆಯು ಭಾರತದಂತಹ ಉಷ್ಣ ತಾಪಮಾನವಿರುವ ದೇಶದ ಜನರನ್ನು ಹೆಚ್ಚಿನ ಪ್ರಮಾಣದಲ್ಲಿ ಬಾಧಿಸುತ್ತದೆ. ಬದಲಾಗುತ್ತಿರುವ ಜೀವನಶೈಲಿಯಿಂದ ಹೆಚ್ಚಾಗುತ್ತಿರುವ ಕಾಯಿಲೆಗಳಾದ ರಕ್ತದೊತ್ತಡ, ಸಕ್ಕರೆಕಾಯಿಲೆ ಮತ್ತು ಬೊಜ್ಜುತನದ ಸಾಲಿಗೆ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನೂ ಸೇರಿಸಬಹುದು. ನೀರಿನ ಬದಲಿಗೆ ತಂಪು ಪಾನೀಯಗಳನ್ನು ಹೆಚ್ಚು ಸೇವಿಸುವವರಲ್ಲಿ ಮತ್ತು ಹಣ್ಣು ಮತ್ತು ಹಸಿರು ತರಕಾರಿಗಳ ಬದಲಿಗೆ ಸಂಸ್ಕರಿಸಿದ ಅಹಾರ ಪದಾರ್ಥಗಳನ್ನು ಸೇವಿಸುವವರಲ್ಲಿ ಮೂತ್ರಪಿಂಡಗಳ ಕಲ್ಲುಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ. ಅಗತ್ಯಕ್ಕಿಂತ ಹೆಚ್ಚು ಉಪ್ಪನ್ನು ಸೇವಿಸುವವರಲ್ಲಿ ಮತ್ತು ಮಾಂಸಾಹಾರಪ್ರಿಯರಲ್ಲಿಯೂ ಮೂತ್ರಪಿಂಡದ ಕಲ್ಲುಗಳು ಹೆಚ್ಚಾಗಿ ಕಂಡುಬರುತ್ತದೆ.

ಹೆಣ್ಣುಮಕ್ಕಳು ಹೆರಿಗೆಯ ಸಂದರ್ಭದಲ್ಲಿ ಅನುಭವಿಸುವ ನೋವಿನ ತೀವ್ರತೆ ಪುರುಷರಿಗೂ ಗೊತ್ತಾಗಲಿ ಎಂದು ದೇವರು ಕಿಡ್ನಿಸ್ಟೋನ್ ಸಮಸ್ಯೆಯನ್ನು ಸೃಷ್ಟಿ ಮಾಡಿದ್ದಾನೆಂದು ಈ ನೋವನ್ನು ಅನುಭವಿಸಿ ಬಲ್ಲವರು ತಮಾಷೆಗೆ ನುಡಿಯುತ್ತಾರೆ. ಮೂತ್ರಪಿಂಡದ ಕಲ್ಲುಗಳು ಕೆಳಜಾರಿ ಮೂತ್ರದ ಚಲನೆಗೆ ಅಡ್ಡಿಯುಂಟುಮಾಡಿದಾಗ ಉಂಟಾಗುವ ನೋವು ಇತರ ಕಾರಣಗಳಿಂದ ಬರುವ ಹೊಟ್ಟೆನೋವುಗಳಿಗಿಂತ ತೀವ್ರವಾಗಿರುತ್ತದೆ. ಹೇಳದೆ ಕೇಳದೆ ಬರುವ ಈ ತೀವ್ರವಾದ ಹೊಟ್ಟೆನೋವು ಕಾಣಿಸಿಕೊಳ್ಳುವ ಹಲವು ತಿಂಗಳುಗಳ ಮೊದಲೇ ಇಂಥ ರೋಗಿಗಳ ಮೂತ್ರಪಿಂಡದ ಕಾರ್ಯಶೈಲಿಯಲ್ಲಿ ಮತ್ತು ಮೂತ್ರದ ಲಕ್ಷಣದಲ್ಲಿ ಕೆಲವು ಬದಲಾವಣೆಗಳು ಉಂಟಾಗಿರುತ್ತವೆ.

ಅಂತಹ ಬದಲಾವಣೆಗಳಿಂದಾಗಿ ಮೂತ್ರದಲ್ಲಿ ಕಲ್ಲುಗಳ ಹುಟ್ಟಿಕೊಳ್ಳಲು ಪ್ರಾರಂಭವಾಗಿರುತ್ತದೆ. ತಮ್ಮ ಮೂತ್ರಪಿಂಡದಲ್ಲಿ ಕಲ್ಲುಗಳಿವೆಯೆಂಬ ಸಮಸ್ಯೆ ರೋಗಿಗೆ ಅರಿವಾಗುವುದು ಕಲ್ಲೊಂದು ಕೆಳಜಾರಿ ಮೂತ್ರದ ಹರಿವಿಗೆ ಅಡ್ಡಿಯುಂಟು ಮಾಡಿದಾಗ ಮಾತ್ರ. ಬಹಳಷ್ಟು ಜನರು ಬೇರೆ ಯಾವುದೋ ಸಮಸ್ಯೆಗೆ ತಮ್ಮ ದೇಹದ ಸ್ಕ್ಯಾನಿಂಗ್ ಮಾಡಿಸಿದಾಗ ಮೂತ್ರಪಿಂಡದಲ್ಲಿ ಕಲ್ಲುಗಳಿರುವುದು ಗೋಚರವಾಗಬಹುದು. ಮೂತ್ರಪಿಂಡದ ಕಲ್ಲುಗಳಿಂದ ಮೂತ್ರದ ಹರಿವಿಗೆ ದೀರ್ಘಕಾಲದ ಅಡ್ಡಿಯುಂಟಾದಾಗ ಮೂತ್ರಪಿಂಡದ ಸೋಂಕು ಮತ್ತು ಮೂತ್ರಪಿಂಡದ ವೈಫಲ್ಯವೂ ಕಾಣಿಸಿಕೊಳ್ಳಬಹುದು.

ಮೂತ್ರಪಿಂಡವು ಮಾನವದೇಹದಲ್ಲಿ ಮೂತ್ರದ ಮೂಲಕ ದೇಹಕ್ಕೆ ಅಗತ್ಯವಿಲ್ಲದ ವಸ್ತುಗಳನ್ನು ಹೊರಗೆ ಹಾಕುವುದು. ಮಾತ್ರವಲ್ಲ, ದೇಹದಲ್ಲಿ ಇರಬೇಕಾದ ತೇವಾಂಶ ಮತ್ತು ವಿವಿಧ ಲವಣಗಳ ಪ್ರಮಾಣಗಳನ್ನೂ ಅದು ನಿಯಂತ್ರಿಸುತ್ತದೆ. ನಮ್ಮ ದೇಹದೊಳಗೆ ಪ್ರವೇಶಿಸುವ ಹೆಚ್ಚಿನ ಔಷಧಗಳು ತಮ್ಮ ಕೆಲಸವನ್ನು ಮುಗಿಸಿದ ನಂತರ ಮೂತ್ರಪಿಂಡಗಳ ಮೂಲಕ ಮೂತ್ರದಲ್ಲಿ ದೇಹದಿಂದ ಹೊರಗಡೆ ಹೋಗುತ್ತದೆ. ದೇಹದಲ್ಲಿ ನೀರಿನ ಪ್ರಮಾಣ ಮತ್ತು ಕ್ಯಾಲ್ಸಿಯಂ, ಪಾಸ್ಫರಸ್, ಆಕ್ಸಲೇಟ್ ಮುಂತಾದ ಲವಣಗಳ ಪ್ರಮಾಣವು ಹೆಚ್ಚು ಕಡಿಮೆಯಾದಾಗ ಮೂತ್ರದಲ್ಲಿ ಕಲ್ಲುಗಳು ಹುಟ್ಟಿಕೊಳ್ಳುತ್ತವೆ.

ನೀರನ್ನು ಕಡಿಮೆ ಕುಡಿಯುವವರಲ್ಲಿ ಮೂತ್ರದ ಸಾಂದ್ರತೆಯು ಹೆಚ್ಚಾಗುತ್ತದೆ; ಜೊತೆಗೆ ಮೂತ್ರದ ಚಲನೆಯೂ ನಿಧಾನಗತಿಯಲ್ಲಿ ಸಾಗುತ್ತದೆ. ಈ ಬದಲಾವಣೆಗಳು ಕಲ್ಲುಗಳು ಹುಟ್ಟಿಕೊಳ್ಳಬಹುದಾದ ವಾತಾವರಣವನ್ನು ನಿರ್ಮಾಣ ಮಾಡುತ್ತದೆ. ಮಾಂಸಾಹಾರಿಗಳಲ್ಲಿ ಆಕ್ಸಲೇಟ್, ಯೂರಿಕ್ ಅಮ್ಲ ಮತ್ತು ಅಮೈನೊ ಅಮ್ಲದ ಕಲ್ಲುಗಳು ಕಾಣಿಸಿಕೊಂಡರೆ, ಹೆಚ್ಚು ಉಪ್ಪನ್ನು ಸೇವಿಸುವವರಲ್ಲಿ ಮತ್ತು ಕ್ಯಾಲ್ಸಿಯಂ ಅಂಶಗಳನ್ನು ನಿಯಂತ್ರಿಸುವ ಹಾರ್ಮೋನುಗಳ ಸಮಸ್ಯೆಯಿರುವವರಲ್ಲಿ ಕ್ಯಾಲ್ಸಿಯಂ ಕಲ್ಲುಗಳು ಕಾಣಿಸಿಕೊಳ್ಳುತ್ತವೆ. ಮೊದಲು ಒಂದು ಮಿಲಿಮೀಟರ್ ಗಾತ್ರಕ್ಕೂ ಚಿಕ್ಕ ಆಕಾರದಲ್ಲಿ ಹುಟ್ಟುವ ಈ ಕಲ್ಲುಗಳು, ಅನಂತರದಲ್ಲಿ ಕೆಲವು ಸೆಂಟಿಮೀಟರ್ಗಳ ಗಾತ್ರದ ತನಕ ಬೆಳೆಯಬಲ್ಲವು. ಕಲ್ಲಿನ ಗಾತ್ರ ಮತ್ತು ಅವು ಸಿಕ್ಕಿ ಹಾಕಿಕೊಂಡ ಜಾಗದ ಆಧಾರದಮೇಲೆ ವ್ಯಕ್ತಿಯಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಎಕ್ಸ್–ರೇ ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೂಲಕ ಎಲ್ಲ ಮಾದರಿಯ ಕಲ್ಲುಗಳನ್ನೂ ಪತ್ತೆ ಹಚ್ಚಲಾಗುವುದಿಲ್ಲ. ಕೆಲವು ಕಲ್ಲುಗಳನ್ನು ಸಿಟಿ ಸ್ಕ್ಯಾನ್ ಮೂಲಕವೇ ಪತ್ತೆ ಹಚ್ಚಬಹುದು. ಮೂತ್ರಪಿಂಡದಲ್ಲಿ ಉಂಟಾದ ಕಲ್ಲುಗಳಲ್ಲಿ ಇರುವ ಲವಣಾಂಶವನ್ನು ಕಂಡುಹಿಡಿದ ನಂತರ ಮೂತ್ರವನ್ನು ವಿವಿಧ ಪರೀಕ್ಷೆಗೆ ಒಳಪಡಿಸಬೇಕು. ರಕ್ತದಲ್ಲಿ ಮತ್ತು ಮೂತ್ರದಲ್ಲಿ ವಿವಿಧ ಲವಣಾಂಶದ ಏರುಪೇರುಗಳು ಗೊತ್ತಾದಲ್ಲಿ ಮಾತ್ರ ಕಲ್ಲುಗಳು ಹುಟ್ಟಿಕೊಳ್ಳಲು ಇರುವ ಮೂಲಕಾರಣವನ್ನು ಪತ್ತೆ ಹಚ್ಚಬಹುದು. ಕಲ್ಲುಗಳು ಇವೆ ಎಂದು ಗೊತ್ತಾದ ಬಳಿಕವಾದರೂ ಆಹಾರಸೇವನೆಯೂ ಸೇರಿದಂತೆ ವ್ಯಕ್ತಿಯ ಜೀವನಶೈಲಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಐದು ಮಿಲಿಮೀಟರ್ ಗಾತ್ರಕ್ಕಿಂತ ಸಣ್ಣದಿರುವ ಕಲ್ಲುಗಳು ಮೂತ್ರವನ್ನು ವಿಸರ್ಜನೆ ಮಾಡುವಾಗ ದೇಹದ ಹೊರಗಡೆ ಹೋಗಬಲ್ಲವು. ಹತ್ತು ಮಿಲಿಮೀಟರ್ ಗಾತ್ರಕ್ಕಿಂತ ದೊಡ್ಡದಿರುವ ಕಲ್ಲುಗಳನ್ನು ದೇಹದಿಂದ ಹೊರಹಾಕಲು ಶಸ್ತ್ರಚಿಕಿತ್ಸೆ ಅಥವಾ ಲೇಸರ್ ಚಿಕಿತ್ಸೆಯ ಅಗತ್ಯ ಉಂಟಾಗಬಹುದು.

ದಿನಕ್ಕೆ ಕನಿಷ್ಠ ಪಕ್ಷ ಎರಡು ಲೀಟರ್ ನೀರನ್ನು ಕುಡಿಯುವ ಮೂಲಕ ಮತ್ತು ಹಣ್ಣು-ತರಕಾರಿಗಳನ್ನು ಹೆಚ್ಚು ಸೇವಿಸುವ ಮೂಲಕ ಮೂತ್ರಪಿಂಡದಲ್ಲಿ ಕಲ್ಲುಗಳು ಹುಟ್ಟಿಕೊಳ್ಳದಂತೆ ಮುನ್ನೆಚ್ಚರಿಕೆಯನ್ನು ವಹಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.