ದೇಹದ ಅಂಗಾಂಗಗಳಲ್ಲಿ ಹೃದಯದ ನಂತರ ಯಕೃತ್ತಿಗೆ ಎರಡನೇ ಸ್ಥಾನ. ಹಲವು ಕಾರಣಗಳಿಂದಾಗಿ ಹೆಪಟೈಟಿಸ್ನಂಥ ಗಂಭೀರ ಕಾಯಿಲೆಗೆ ಅದು ತುತ್ತಾಗುತ್ತಿದೆ.

ಆಧುನಿಕ ಜೀವನಶೈಲಿಯು ದೈನಂದಿನ ಬದುಕಿನಲ್ಲಿ ಮಹತ್ತರ ಬದಲಾವಣೆ ತಂದಿದೆ. ಇದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಜಡ ಜೀವನಶೈಲಿ, ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡದೇ ಇರುವುದು, ಕಳಪೆ ಆಹಾರ, ಬೊಜ್ಜು, ಮದ್ಯಪಾನ ಸೇರಿದಂತೆ ಹಲವು ಕಾರಣಗಳು ಯಕೃತ್ತಿನ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು.

ನಾನ್-ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ (ಎನ್ಎಎಫ್ಎಲ್ಡಿ) ಒಂದು ಪ್ರಮುಖ ಸಮಸ್ಯೆಯಾಗಿದೆ. ದೇಹದಲ್ಲಿನ ಒಂದು ಮುಖ್ಯ ಅಂಗವಾದ ಯಕೃತ್ತು ಚಯಾಪಚಯ (ಮೆಟಬಾಲಿಸಂ), ವಿಷರಹಿತ ಸ್ಥಿತಿ (ಡಿಟಾಕ್ಸಿಫಿಕೇಶನ್) ಮತ್ತು ಪೋಷಕಾಂಶಗಳ ಸಂಗ್ರಹದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬಹುಬೇಗನೆ ತೂಕ ಇಳಿಸಿಕೊಳ್ಳಲು ಅನುಸರಿಸುವ ಆಹಾರ ಕ್ರಮ, ಅತಿಯಾದ ಉಪವಾಸ ಅಥವಾ ಕಡಿಮೆ ಕ್ಯಾಲೊರಿಯುಳ್ಳ ಆಹಾರ ಸೇವನೆಯಿಂದ ಕೊಬ್ಬಿನಾಂಶ ಶೇಖರಣೆಯಾಗುತ್ತದೆ. ಇದು ಕೊಬ್ಬಿನಾಮ್ಲಗಳ ಬಿಡುಗಡೆಗೆ ಕಾರಣವಾಗುತ್ತದೆ. ಯಕೃತ್ತಿನಲ್ಲಿ ಸಂಗ್ರಹಗೊಂಡ ಕೊಬ್ಬಿನಾಂಶದಿಂದ ಆರೋಗ್ಯದ ಮೇಲೆ ಇನ್ನಷ್ಟು ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಅತ್ಯಂತ ಹಾನಿಕಾರಕ ಆಹಾರ ಪದ್ಧತಿಗಳಲ್ಲಿ ಸಕ್ಕರೆ ಮತ್ತು ಸಂಸ್ಕರಿಸಿದ (ಪ್ರೋಸೆಸ್ಡ್) ಆಹಾರದ ಅತಿಯಾದ ಸೇವನೆಯೂ ಒಂದು. ಇವು ಆಕ್ಸಿಡೇಟಿವ್ ಒತ್ತಡವನ್ನು ಹೆಚ್ಚಿಸುವುದಲ್ಲದೆ, ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆ ಮತ್ತು ಉರಿಯೂತವನ್ನು ಉಂಟು ಮಾಡುತ್ತವೆ. ಅತಿಯಾದ ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬಿನಾಂಶವುಳ್ಳ ಪದಾರ್ಥಗಳ ಸೇವನೆಯು ದೀರ್ಘಕಾಲದ ಉರಿಯೂತಕ್ಕೆ ಕಾರಣವಾಗಬಹುದು. ಇದು ಕಾಲಾನಂತರದಲ್ಲಿ ಯಕೃತ್ತಿನ ಜೀವಕೋಶಗಳನ್ನು ಹಾನಿಗೊಳಿಸುತ್ತದೆ.

ಯಕೃತ್ತಿನ ಆರೋಗ್ಯದ ವಿಷಯದಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ, ಅಡುಗೆ ಎಣ್ಣೆಯನ್ನು ಪದೇಪದೇ ಬಳಸುವುದು. ವಿಶೇಷವಾಗಿ ಡೀಪ್ ಫ್ರೈ ಮಾಡಿದ ಎಣ್ಣೆಯನ್ನು ಮತ್ತೆ ಬಳಸುವುದು. ಮನೆಗಳಲ್ಲಿ ಅಥವಾ ಹೋಟೆಲ್ಗಳಲ್ಲಿ ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸುತ್ತಾರೆ. ಇದು ಟ್ರಾನ್ಸ್ ಕೊಬ್ಬು ಮತ್ತು ಯಕೃತ್ತಿಗೆ ವಿಷಕಾರಿಯಾದ ಸಂಯುಕ್ತಗಳನ್ನು ಉತ್ಪಾದಿಸುತ್ತದೆ. ಕಪ್ಪಾದ, ಗಾಢವಾದ ಅಥವಾ ಸುಟ್ಟ ವಾಸನೆಯುಳ್ಳ ಎಣ್ಣೆಯು ಅಪಾಯಕಾರಿ.

ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮತೋಲಿತ ಆಹಾರವನ್ನು ಸೇವಿಸಬೇಕು. ನಮ್ಮ ದೈನಂದಿನ ಆಹಾರವು ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನ ಪ್ರೋಟೀನ್ಗಳಿಂದ ಕೂಡಿರಬೇಕು. ಮದ್ಯ, ಸಂಸ್ಕರಿಸಿದ ಆಹಾರ ಮತ್ತು ಸಕ್ಕರೆಸಹಿತ ಪಾನೀಯಗಳನ್ನು ತ್ಯಜಿಸಬೇಕು. ಆರೋಗ್ಯಕರ ಅಡುಗೆ ವಿಧಾನಗಳನ್ನು ಅಳವಡಿಸಿಕೊಳ್ಳ ಬೇಕು. ಉದಾಹರಣೆಗೆ, ಹುರಿಯುವ ಬದಲು ಸ್ಟೀಮಿಂಗ್, ಬೇಯಿಸುವುದು, ಗ್ರಿಲ್ಲಿಂಗ್ ಅಥವಾ ಸಾಟಿಂಗ್ ಮಾಡುವುದು ಉತ್ತಮ.

ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಯಾವಾಗಲೂ ತಾಜಾ ಎಣ್ಣೆ ಬಳಸುವುದು ಮತ್ತು ಅದನ್ನು ನಿಯಮಿತವಾಗಿ ಬದಲಾಯಿಸುವುದು ಒಳಿತು (ಉದಾಹರಣೆಗೆ, ಸಾಸಿವೆ, ನೆಲಗಡಲೆ, ಸೂರ್ಯಕಾಂತಿ ಅಥವಾ ಅಕ್ಕಿಹೊಟ್ಟು ಎಣ್ಣೆ). ದೇಹದಲ್ಲಿ ಶಕ್ತಿ ಉತ್ಪಾದನೆಗಾಗಿ ಅಗತ್ಯವಾದ ಕಾರ್ಬೋಹೈಡ್ರೇಟ್ಗಳು, ಅಂಗಾಂಗಗಳ ಆರೋಗ್ಯ ಮತ್ತು ಬೆಳವಣಿಗೆಗಾಗಿ ಪ್ರೋಟೀನ್ಗಳು, ಸಮತೋಲಿತವಾದ ಆರೋಗ್ಯಕರ ಕೊಬ್ಬಿನಾಂಶ, ಚಯಾಪಚಯ ಸಮತೋಲನ ಮತ್ತು
ರೋಗನಿರೋಧಕಶಕ್ತಿಯನ್ನು ಕಾಪಾಡಿಕೊಳ್ಳಲು ಅಗತ್ಯವಾದ ವಿಟಮಿನ್ಗಳನ್ನು ಒಳಗೊಂಡ ಆರೋಗ್ಯಕರ ಆಹಾರವನ್ನು ಸೇವಿಸಬೇಕು.

ಮೊದಲನೆಯದಾಗಿ, ಊಟವನ್ನು ಎಂದಿಗೂ ಬಿಡಬಾರದು. ನಿಯಮಿತವಾಗಿ ಆಹಾರವನ್ನು ಸೇವಿಸುವುದು ಮುಖ್ಯ. ಜೊತೆಗೆ ದ್ರವಾಹಾರದ ಮೂಲಕ ದೇಹವನ್ನು ಹೈಡ್ರೇಟೆಡ್ ಆಗಿ ಇಟ್ಟುಕೊಳ್ಳಬೇಕು. ತಾಜಾ ಹಣ್ಣು ಮತ್ತು ತರಕಾರಿಗಳು, ಒಣಹಣ್ಣು ಮತ್ತು ಬೀಜಗಳು, ಮೊಳಕೆಕಾಳು ಮತ್ತು ಧಾನ್ಯಗಳು, ಸಿಟ್ರಸ್ ಹಣ್ಣುಗಳ ಸೇವನೆ ಒಳಿತು. ಕರುಳಿನ ಆರೋಗ್ಯಕ್ಕಾಗಿ ಪ್ರೀ-ಬಯೋಟಿಕ್ಸ್ ಮತ್ತು ಪ್ರೋ-ಬಯೋಟಿಕ್ಸ್, ನಿಯಮಿತ ವ್ಯಾಯಾಮ, ತೂಕ ನಿಯಂತ್ರಣ, ಸಾಕಷ್ಟು ನಿದ್ರೆ, ಒತ್ತಡ ನಿರ್ವಹಣೆ ಮತ್ತು ವಾರ್ಷಿಕ ಆರೋಗ್ಯ ತಪಾಸಣೆ ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.