ಆರೋಗ್ಯವಾಗಿರುವುದು ಎಂದಾಗ ಸರಿಯಾದ ತೂಕ ನಿರ್ವಹಣೆ, ಕೂದಲಿನ ಆರೈಕೆ, ಚರ್ಮದ ರಕ್ಷಣೆ ಮತ್ತು ಜೀರ್ಣಕ್ರಿಯೆಯ ಬಗ್ಗೆ ಯೋಚಿಸುತ್ತೇವೆ. ಆದರೆ ನಮಗಾಗಿ ದಣಿವಿಲ್ಲದೆ ದುಡಿಯುವ ಶ್ವಾಸಕೋಶಗಳ ಬಗ್ಗೆ ಯೋಚಿಸುವುದು ಕಡಿಮೆ.

ಪ್ರತಿ ವರ್ಷ ಚಳಿಗಾಲದ ಆರಂಭದಲ್ಲಿ ನಮ್ಮ ಶ್ವಾಸಕೋಶಗಳು ಉಸಿರಾಟದ ತೊಂದರೆಗೆ ಸಿಲುಕುತ್ತವೆ. ಪಟಾಕಿಗಳ ಹೊಗೆ, ಕೃಷಿ ತ್ಯಾಜ್ಯ ಸುಡುವಿಕೆ, ಅತಿಯಾದ ಮದ್ಯಪಾನ, ತಾಪಮಾನದ ಏರುಪೇರು ಮತ್ತು ನಗರಗಳಲ್ಲಿ ಆಗುತ್ತಿರುವ ನಿರಂತರ ಮಾಲಿನ್ಯ (ಕೆಲವು ನಗರಗಳಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ ಅಥವಾ ಎಕ್ಯೂಐ 500 ದಾಟಿರುವುದು ಗಮನಿಸಬಹುದು) ಇವೆಲ್ಲವೂ ಸೇರಿ ಶ್ವಾಸಕೋಶಗಳ ಮೇಲೆ ಒತ್ತಡ ಉಂಟಾಗುತ್ತದೆ.

ಚಿಕಿತ್ಸೆಗಿಂತ ಮುನ್ನೆಚ್ಚರಿಕೆ ಉತ್ತಮ

ಸಾಮಾನ್ಯವಾಗಿ 20ರ ಹರೆಯದಲ್ಲಿ ಶ್ವಾಸಕೋಶಗಳ ಸಾಮರ್ಥ್ಯವು ಜಾಸ್ತಿ ಇರುತ್ತದೆ. ದೈನಂದಿನ ಅಭ್ಯಾಸಗಳ ಮೇಲೆ ಶ್ವಾಸಕೋಶಗಳ ಸಾಮರ್ಥ್ಯ ಅವಲಂಬಿಸಿರುತ್ತದೆ. ಮಹಾನಗರಗಳಲ್ಲಿ ವಾಯು ಮಾಲಿನ್ಯ ಸಾಮಾನ್ಯವಾಗಿದ್ದು, ಈಗಾಗಲೇ ಅಸ್ತಮಾ ಮತ್ತು ಸಿಒಪಿಡಿಯಂತಹ ಸಮಸ್ಯೆ ಉಲ್ಬಣಗೊಂಡಿದೆ. ಮಾಲಿನ್ಯ ಹೆಚ್ಚಿರುವ ದಿನಗಳಲ್ಲಿ ಹೊರಗೆ ಹೋಗುವುದು ಅನಿವಾರ್ಯವಾದಾಗ ಎನ್95 ಅಥವಾ ಎನ್99 ಮಾಸ್ಕ್ ಧರಿಸುವುದು ಒಳ್ಳೆಯದು.

ಶ್ವಾಸಕೋಶಗಳನ್ನು ಆರೋಗ್ಯವಾಗಿ ಇರಿಸಿಕೊಳ್ಳಲು ವ್ಯಾಯಾಮವನ್ನು ಅಭ್ಯಾಸ ಮಾಡಿಕೊಳ್ಳಿ. ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ನಡಿಗೆ ಮಾಡಿ, ಸೈಕ್ಲಿಂಗ್, ಈಜು ಹಾಗೂ ಏರೋಬಿಕ್ ವ್ಯಾಯಾಮಗಳನ್ನು ಮಾಡಿ. ಇದು ಶ್ವಾಸಕೋಶಗಳನ್ನು ಆರೋಗ್ಯವಾಗಿಡುವುದಲ್ಲದೆ ಅದರ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ.

ನಿಮ್ಮ ನಗು ನಿಮ್ಮನ್ನು ಆರೋಗ್ಯವಾಗಿರಿಸಬಲ್ಲದು

ನಗು ಕೂಡ ಒಂದು ಸಣ್ಣ ವ್ಯಾಯಾಮವಿದ್ದಂತೆ. ಇದು ಶ್ವಾಸಕೋಶಗಳಲ್ಲಿನ ಅನಗತ್ಯ ಗಾಳಿಯನ್ನು ಹೊರಹಾಕಿ, ತಾಜಾ ಗಾಳಿಯು ಶ್ವಾಸಕೋಶದ ಅಂಗಾಂಶಗಳಿಗೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಉಸಿರಾಟದ ವ್ಯವಸ್ಥೆಗೆ ನೀಡಬಹುದಾದ ಅತ್ಯಂತ ಆನಂದದಾಯಕ ವ್ಯಾಯಾಮ ಎಂದರೆ ನಗು ಆಗಿದೆ.

ನಗು ಒತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಎಂಡಾರ್ಫಿನ್ಗಳ (ನೈಸರ್ಗಿಕ ನೋವು ನಿವಾರಕಗಳು) ಬಿಡುಗಡೆಗೆ ಬೆಂಬಲ ನೀಡುತ್ತದೆ. ರಕ್ತದ ಹರಿವನ್ನು ಸರಾಗಗೊಳಿಸುತ್ತದೆ. ಒತ್ತಡ ಕಡಿಮೆಯಾದಾಗ ನರ ಮಂಡಲ ಶಾಂತಗೊಳ್ಳುತ್ತದೆ. ಅದರಿಂದ ಶ್ವಾಸನಾಳಗಳು ಸಡಿಲಗೊಳ್ಳುತ್ತವೆ. ನಗು ಅದಕ್ಕೆ ನೈಸರ್ಗಿಕ ಪ್ರತಿರೋಧವನ್ನು ಒಡ್ಡುತ್ತದೆ. ಹೀಗಾಗಿ ಖುಷಿಯಾಗಿರಿ.

ನೀರು ಶ್ವಾಸಕೋಶಗಳಿಗೂ ಅಮೃತ

ದೇಹದ ಒಟ್ಟಾರೆ ಆರೋಗ್ಯಕ್ಕೆ ಮಾತ್ರವಲ್ಲದೆ ಶ್ವಾಸಕೋಶಗಳಿಗೂ ನೀರು ಅಮೃತದಂತೆ. ಚಳಿಗಾಲದಲ್ಲಿ ಅನೇಕರು ನೀರಿನ ಸೇವನೆಯನ್ನು ಕಡಿಮೆ ಮಾಡುತ್ತಾರೆ. ಇದು ದೇಹದ ನಿರ್ಜಲೀಕರಣಕ್ಕೆ ಕಾರಣವಾಗಿ ಶ್ವಾಸನಾಳದಲ್ಲಿನ ಲೋಳೆಯನ್ನು ದಪ್ಪವಾಗಿಸುತ್ತದೆ.

ಉಸಿರಾಟಕ್ಕೆ ಲೋಳೆಯು ತೆಳುವಾಗಿರುವುದು ಅಗತ್ಯ. ದೇಹದಲ್ಲಿ ನೀರಿನಾಂಶ ಕಡಿಮೆಯಾದಾಗ ಈ ಲೋಳೆಯು ದಪ್ಪವಾಗುತ್ತದೆ. ಇದರಿಂದ ಶ್ವಾಸನಾಳದ ಸಿಲಿಯಾ ಎಂಬ ಅಂಗಾಶಗಳಿಗೆ ಆ ಲೋಳೆಯನ್ನು ಹೊರಹಾಕಲು ಕಷ್ಟವಾಗುತ್ತದೆ. ಆಗಾಗಿ ಶ್ವಾಸಕೋಶದಲ್ಲಿ ಕಫ ಸಂಗ್ರಹವಾಗುತ್ತದೆ. ಇದು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ದಾರಿಯಾಗಿ ನ್ಯುಮೋನಿಯಾದಂತಹ ಸೋಂಕುಗಳ ಅಪಾಯವನ್ನು ಹೆಚ್ಚಿಸುತ್ತದೆ.

ಶ್ವಾಸಕೋಶಗಳಿಗೂ ಬೇಕು ಪೌಷ್ಟಿಕ ಆಹಾರ

ಶ್ವಾಸಕೋಶಗಳ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಆಹಾರಗಳ ಸೇವನೆ ಕಡೆಗೆ ಗಮನ ಹರಿಸಬೇಕು. ಬೆರ್ರಿ ಹಣ್ಣು, ಅರಿಸಿನ, ಹಸಿರು ಎಲೆಗಳ ತರಕಾರಿ ಮತ್ತು ಒಮೆಗಾ-3 ಸಮೃದ್ಧವಾಗಿರುವ ಆಹಾರಗಳು (ಮೀನು, ಆಕ್ರೋಟ್) ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಅಸ್ತಮಾ ಮತ್ತು ಸಿಓಪಿಡಿ ಹೆಚ್ಚಾಗುವುದನ್ನು ತಡೆಯುತ್ತದೆ. ಗಿಡಮೂಲಿಕೆಗಳ ಚಹಾ ಅಥವಾ ಉಗುರು ಬೆಚ್ಚಗಿನ ದ್ರವ ಪದಾರ್ಥಗಳು ಕಫವನ್ನು ಕರಗಿಸಲು ಸಹಾಯ ಮಾಡುತ್ತವೆ. ಮಾಲಿನ್ಯಯುಕ್ತ ಪ್ರದೇಶಗಳಲ್ಲಿ ಚಹಾ ಅಥವಾ ಕಾಫಿ, ಮದ್ಯಪಾನ ಸೇವನೆ ತಪ್ಪಿಸಿ.

ವೈದ್ಯರನ್ನು ಭೇಟಿಯಾಗಿ

ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದುಗಳ ಮೊರೆ ಹೋಗುತ್ತೇವೆ. ಆದರೆ ಆರೋಗ್ಯವು ಹದಗೆಟ್ಟಾಗ ಮನೆ ಮದ್ದಿಗಿಂತ ವೈದ್ಯರನ್ನು ಭೇಟಿ ಮಾಡುವುದು ಬಹಳ ಮುಖ್ಯ. ಎಂಟು ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ಇರುವ ಕೆಮ್ಮು, ದೈನಂದಿನ ಕೆಲಸಗಳ ಸಮಯದಲ್ಲಿ ಉಸಿರಾಟದ ತೊಂದರೆ, ಕೆಮ್ಮಿದಾಗ ರಕ್ತ ಅಥವಾ ಲೋಳೆ ಬರುವುದು, ನ್ಯುಮೋನಿಯಾದಂತಹ ಎದೆಯ ಸೋಂಕುಗಳು ಕಾಣಿಸಿಕೊಳ್ಳುವುದು ಅಪಾಯದ ಮುನ್ಸೂಚನೆಗಳಾಗಿವೆ. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.

ಶ್ವಾಸಕೋಶಗಳು ಶಕ್ತಿಯುತವಾಗಿರುತ್ತವೆ ಎನ್ನುವುದೇನೋ ನಿಜ, ಆದರೆ ಅವು ಕೂಡ ದುರ್ಬಲಗೊಳ್ಳಬಹುದು. ಆದ್ದರಿಂದ ನಿಮ್ಮ ಉಸಿರಾಟದ ಗುಣಮಟ್ಟವು ಆರೋಗ್ಯಯುತ ಜೀವನವನ್ನು ನಿರ್ಧರಿಸುತ್ತದೆ.

ಲೇಖಕರು: ಡಾ. ಸಾಗರ್ ಸಿ, ಕನ್ಸಲ್ಟೆಂಟ್ ಪಲ್ಮನಾಲಜಿಸ್ಟ್, ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು