ನಾವೆಲ್ಲರೂ ಒಂದು ವಿಧದಲ್ಲಿ ಕರ್ಣರೇ! ರಣರಂಗದಲ್ಲಿ ಅವನ ಚಕ್ರ ಹೂತಂತೆ ನಮ್ಮ ಮನದ ಚಕ್ರವೂ ಆಗಾಗ ಸಿಕ್ಕಿಬೀಳುತ್ತದೆ. ಅತಿಯಾದ ಆಲೋಚನೆಯ ಕೆಸರೇ ಇದಕ್ಕೆ ಕಾರಣ. ಜೀವನದ ಪಯಣದಲ್ಲಿ ‘ಹೀಗಾಯಿತಲ್ಲ’ ಎಂಬ ಭಯ ಮತ್ತು ‘ಏನಾಗಬಹುದು’ ಎಂಬ ಆತಂಕ ನಮ್ಮನ್ನು ಮುಂದುವರೆಯದಂತೆ ನಿಲ್ಲಿಸುತ್ತದೆ. ಅದೇ ಅತಿ ಯೋಚನೆ ಅಥವಾ ‘ಓವರ್ ಥಿಂಕಿಂಗ್’. ಸಮಸ್ಯೆಗೆ ಪರಿಹಾರ ಹುಡುಕುವ ಬದಲು, ‘ಹಾಗಾಗಿದ್ದರೆ’, ‘ಇನ್ನೊಮ್ಮೆ ಹೀಗಾದರೆ’ ಮತ್ತು ‘ಹೀಗೆ ಮಾಡಬಹುದಾಗಿತ್ತು’ ಎಂಬ ಅನಂತಚಕ್ರದಲ್ಲಿ ಸಿಕ್ಕಿ, ನಾವು ಗೊಂದಲದ ಆಳಕ್ಕೆ ಇಳಿಯುತ್ತೇವೆ. ಸೂಕ್ಷ್ಮವಾಗಿ ಯೋಚಿಸುವುದು ಒಳ್ಳೆಯ ಗುಣವಾದರೂ, ಅತಿಯಾದ ಯೋಚನೆ ನಮ್ಮ ಮಾನಸಿಕ ಶಕ್ತಿಯನ್ನು ಹೀರಿ, ಜೀವನದ ಸಂತೋಷಗಳಿಂದ ನಮ್ಮನ್ನು ವಂಚಿತರನ್ನಾಗಿಸುತ್ತದೆ. ಹೂತ ಮನದ ಚಕ್ರವನ್ನು ಎತ್ತುವ ಬಗೆ ಹೇಗೆ?

ಅತಿಯಾದ ಆಲೋಚನೆ ಚಕ್ರವು ನಮ್ಮ ಮಾನಸಿಕ ಶಕ್ತಿಯನ್ನು ಸಂಪೂರ್ಣವಾಗಿ ಸೋಸಿಬಿಡುತ್ತದೆ. ದೇಹವು ದಣಿದಿರದಿದ್ದರೂ, ಕೇವಲ ಯೋಚಿಸುತ್ತ ಕುಳಿತಾಗ ಸುಸ್ತಾಗುವುದು ಈ ಕಾರಣದಿಂದಲೇ. ಆಗ ವ್ಯಕ್ತಿಯ ಸೃಜನಶೀಲತೆ ಸೊರಗುತ್ತದೆ. ಸಮಸ್ಯೆಯ ಪರಿಹಾರಕ್ಕೆ ಬೇಕಾದ ಶಕ್ತಿ, ಉಪಯೋಗವಿಲ್ಲದ ಕಳವಳಗಳಲ್ಲಿ ವ್ಯಯವಾಗುತ್ತದೆ. ಇದು ದೀರ್ಘಕಾಲ ಮುಂದುವರೆದರೆ ಮಾನಸಿಕ ಆಯಾಸ ಮತ್ತು ಮನೋರೋಗಕ್ಕೂ ಕಾರಣವಾಗುತ್ತದೆ. ಇದರಿಂದಾಗಿ ಅನಗತ್ಯ ಒತ್ತಡ ಮೂಡುತ್ತದೆ.

ಅತಿ ಆಲೋಚನೆಯ ಪರಿಣಾಮವೆಂದರೆ ‘ವಿಶ್ಲೇಷಣಾ ಪಕ್ಷಾಘಾತ’ (Analysis Paralysis). ಚಿಕ್ಕದಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗದೆ, ಅವಕಾಶಗಳು ನಮ್ಮ ಕೈಬಿಟ್ಟುಹೋಗುತ್ತವೆ. ಸಣ್ಣ ಸಮಸ್ಯೆಯನ್ನು ಪರ್ವತದಷ್ಟು ದೊಡ್ಡದಾಗಿ ಕಾಣಿಸುವ ಈ ಅಭ್ಯಾಸ, ಆತ್ಮವಿಶ್ವಾಸವನ್ನು ಸಹ ಕುಗ್ಗಿಸುತ್ತದೆ. ನಮ್ಮ ಸ್ವಂತ ಸಾಮರ್ಥ್ಯದ ಬಗ್ಗೆ ಸಂದೇಹ ಮೂಡಿಸುತ್ತದೆ. ‘ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ’ - ಮನಸ್ಸೇ ಮನುಷ್ಯರಿಗೆ ಬಂಧನ ಮತ್ತು ಮೋಕ್ಷಕ್ಕೆ ಕಾರಣ. ಯಾವ ಹೆಜ್ಜೆಯ ಬಳಿಕ ಯಾವ ಹೆಜ್ಜೆ ಮುಂದೆ ಬರುತ್ತದೆ ಎಂಬ ಅತಿ ಯೋಚನೆಯಿಂದ ಮುಂದಡಿಯಿಡಲಾಗದ ಸಹಸ್ರಪದಿಯಂತೆ ನಾವು ಚಿಂತೆಯ ಕೊಳ್ಳದಲ್ಲಿ ಬೀಳುತ್ತೇವೆ. ಅತಿ ಯೋಚನೆ ಮಾಡುವವರಿಗೆ ರಾತ್ರಿಗಳು ಅತ್ಯಂತ ಕಠಿಣವಾಗುತ್ತವೆ. ನಿದ್ರಾಹೀನತೆ ಉಂಟಾಗಿ ಶರೀರ ಮತ್ತು ಮನಸ್ಸುಗಳನ್ನು ದುರ್ಬಲಗೊಳಿಸುತ್ತದೆ. ಕಾರ್ಯಕ್ಕೆ ಬೇಕಾದ ಶಕ್ತಿ, ಯೋಚನೆಗೇ ವ್ಯಯವಾಗುತ್ತದೆ. ಇದರಿಂದ ನಮ್ಮೊಂದಿಗೆ ಇರುವವರ ಜೊತೆಗಿನ ಸಂಬಂಧಗಳ ಮೇಲೂ ಪರಿಣಾಮವಾಗುತ್ತದೆ.

ಅತಿ ಯೋಚನೆಯ ಅತ್ಯಂತ ಹಾನಿಕಾರಕ ಪರಿಣಾಮವೆಂದರೆ, ಅದು ನಮ್ಮ ‘ವರ್ತಮಾನ’ವನ್ನು ಕದಿಯುತ್ತದೆ. ಇದಕ್ಕೆ ಉತ್ತಮ ಉದಾಹರಣೆ; ಪ್ರವಾಸಕ್ಕೆ ಹೋದ ನಾವು ಆ ಕ್ಷಣದ ಸುಂದರ ಅನುಭವವನ್ನು ಆಸ್ವಾದಿಸುವ ಬದಲು ಅದನ್ನು ನಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿದು ನಮ್ಮ ದಾಖಲೆಗೆ ಉಳಿಸಿಕೊಳ್ಳುವ, ಇತರರ ಜೊತೆ ಹಂಚಿಕೊಳ್ಳುವ ಕಾತರದಲ್ಲಿ ಇರುವುದು. ಆಗ ಆ ಕ್ಷಣದ ಅನಭೂತಿಯಿಂದ ನಾವು ವಂಚಿತರಾಗುತ್ತೇವೆ. ಮಸಾಲೆದೋಸೆಯನ್ನು ತಿನ್ನಲು ಕುಳಿತಾಗ ಕೈಜಿಡ್ಡಾಗುವುದೆಂದು ಚಿಂತಿಸಬಾರದು! ಭವಿಷ್ಯದ ಚಿಂತೆ ಅಥವಾ ಭೂತಕಾಲದ ಪಶ್ಚಾತ್ತಾಪದಲ್ಲಿ ಸಿಲುಕಿ, ಇಂದಿನ ಸುಂದರ ಕ್ಷಣಗಳನ್ನು ಕಳೆದುಕೊಳ್ಳಬಾರದು. ಮಗುವಿನ ನಗೆ, ಪ್ರಕೃತಿಯ ಸೌಂದರ್ಯ, ಶಾಂತಿಯುತ ಊಟ – ಇಂಥವನ್ನು ಅನುಭವಿಸುವುದನ್ನು ಕಲಿಯಬೇಕು; ಇಲ್ಲದಿದ್ದರೆ ಬದುಕು ಭಾರವಾಗಿಬಿಡುತ್ತದೆ.

ಅತಿಯಾದ ಆಲೋಚನೆಯನ್ನು ಹೀಗೆ ನಿಯಂತ್ರಿಸಬಹುದು:
1. ಮನಸ್ಸನ್ನು ಪ್ರಸ್ತುತಕ್ಕೆ ತರುವ ಸತತ ಅಭ್ಯಾಸ ಮಾಡಬೇಕು. ಸುತ್ತುವ ಮನಸ್ಸು ತನ್ನ ಹರಿವಿನಲ್ಲಿ ನಮ್ಮನ್ನು ಸೆಳೆದುಕೊಂಡು ಹೋಗದಂತೆ ಅದಕ್ಕೆ ಚೌಕಟ್ಟು ಕಟ್ಟಬೇಕು. ಆದರೆ ಹೇಳಿದಷ್ಟು ಸುಲಭವಲ್ಲ ಅದು. ಕ್ಷಣಕ್ಷಣವೂ ಹಾರುವ ಮನಸ್ಸನ್ನು ಹಿಡಿಯಲು ಬಲವಾದ ಸಂಕಲ್ಪವೇ ಬೇಕು.

2. ನಾವು ತಳೆಯಬೇಕಾದ ನಿರ್ಧಾರಗಳಿಗೆ ಅವಧಿಯನ್ನು ನಿಗದಿ ಮಾಡಿಕೊಳ್ಳಬೇಕು. ಅಂದರೆ ಯಾವುದಾದರೊಂದು ವಿಷಯದಲ್ಲಿ ನಿರ್ಧಾರ ಕೈಗೊಳ್ಳಬೇಕಾದರೆ ಅದನ್ನು ಇಂತಿಷ್ಟು ದಿನಗಳಲ್ಲಿ, ಗಂಟೆಗಳಲ್ಲಿ ಕೈಗೊಳ್ಳುತ್ತೇನೆ ಎಂದು ನಿರ್ಧರಿಸಿ ಅಂತೆಯೇ ನಡೆದುಕೊಳ್ಳಬೇಕು.

3. ಆಲೋಚನೆಗಳನ್ನು ಬರೆದಿಡುವುದು ಕೂಡ ಒಂದು ಉತ್ತಮ ಉಪಾಯ. ಅಟ್ಟದ ಮೇಲಿನ ಕಳ್ಳನನ್ನು ಹಿಡಿದಂತೆ ಇದು. ಯಾವಾಗ ನಾವು ಆಲೋಚನೆಗಳನ್ನು ಬರೆದಿಡಲು ಆರಂಭಿಸುತ್ತೇವೋ ಆಗ, ಅವು ಹೆಚ್ಚು ಸ್ಪಷ್ಟಗೊಳ್ಳುತ್ತ, ಅನವಶ್ಯಕ ಆಲೋಚನೆಗಳು ಕಂಬಿಕೀಳುತ್ತವೆ.

4. ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು. ವ್ಯಾಯಾಮದಿಂದ ಅನೇಕ ಪ್ರಯೋಜನಗಳುಂಟು. ಮೈ ಬೆವರುವಂತೆ ಪ್ರತಿನಿತ್ಯ ವ್ಯಾಯಾಮ ಮಾಡಿದಾಗ ಮನಸ್ಸು ತನ್ನಿಂತಾನೆ ಹಗುರಾಗುತ್ತದೆ. ದೇಹ ಗಟ್ಟಿಗೊಂಡಾಗ ಮನಸ್ಸೂ ಗಟ್ಟಿಯಾಗುತ್ತದೆ.

5. ಪ್ರತಿಯೊಬ್ಬರಿಗೂ ವಿಶ್ವಾಸಾರ್ಹ ಸ್ನೇಹಿತರು, ಬಂಧುಗಳು ಇರುತ್ತಾರೆ. ಅವರೊಂದಿಗೆ ಮಾತನಾಡಿ ಅತಿ ಆಲೋಚನೆಯಿಂದ ಪಾರಾಗಬಹುದು.

ಬದುಕೆಂಬುದು ಅತಿ ಆಲೋಚನೆಯ ವೃತ್ತದಲ್ಲಿ ತಿರುತಿರುಗಿ ದಣಿಯುವ ಲೊಳಲೊಟ್ಟೆಯಲ್ಲ. ಅದು ಪ್ರತಿ ಕ್ಷಣದ ಆನಂದವನ್ನು ಆಸ್ವಾದಿಸುವ ಅಸ್ತಿತ್ವ. ಆದುದರಿಂದ ಅತಿ ಆಲೋಚನೆಯನ್ನು ಬದಿಗಿಟ್ಟು ಜೀವನವನ್ನು ಆನಂದಿಸೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.