ಸಾಮಾನ್ಯವಾಗಿ ಉಳಿದ ಆಹಾರವನ್ನು ರೆಫ್ರಿಜರೇಟರ್ನಲ್ಲಿ ಇಟ್ಟು ಮರುದಿನ ಸೇವಿಸುತ್ತೇವೆ. ಇದನ್ನು ಕೆಲವರು ಉತ್ತಮ ಎಂದರೆ, ಇನ್ನೂ ಕೆಲವರು ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಹಾಗಾದರೆ ಇದು ಒಳ್ಳೆಯಾದಾ? ಅಲ್ವಾ? ಎಂಬುದನ್ನು ನೋಡೋಣ.

ರೆಫ್ರಿಜರೇಟರ್ನಲ್ಲಿ ಆಹಾರ ಇಡುವುದರ ಪ್ರಯೋಜನಗಳು:

ಆಹಾರದ ತಾಜಾತನ ಕಾಪಾಡುವಿಕೆ: ತಣ್ಣನೆಯ ತಾಪಮಾನವು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ. ಇದರಿಂದ ಆಹಾರವು ಹೆಚ್ಚು ದಿನ ತಾಜಾವಾಗಿರುತ್ತದೆ ಮತ್ತು ಅದರಲ್ಲಿನ ಪೌಷ್ಟಿಕಾಂಶಗಳು ಸಂರಕ್ಷಿತವಾಗುತ್ತವೆ.

ಆಹಾರದಲ್ಲಿ ವಿಷಬಾಧೆ ತಡೆಗಟ್ಟುವಿಕೆ: ಸರಿಯಾದ ಶೈತ್ಯೀಕರಣವು ಸಾಲ್ಮೊನೆಲ್ಲಾ, ಇ.ಕೋಲಿ ಮುಂತಾದ ಹಾನಿಕಾರಕ ಸೂಕ್ಷ್ಮಜೀವಿಗಳ ವೃದ್ಧಿಯನ್ನು ನಿಯಂತ್ರಿಸುತ್ತದೆ.

ಪೌಷ್ಟಿಕಾಂಶಗಳ ಸಂರಕ್ಷಣೆ: ತರಕಾರಿಗಳು ಮತ್ತು ಹಣ್ಣುಗಳಲ್ಲಿರುವ ‘ವಿಟಮಿನ್’ಗಳು ಮತ್ತು ‘ಖನಿಜಗಳು’ ತಣ್ಣನೆಯ ತಾಪಮಾನದಲ್ಲಿ ಉತ್ತಮವಾಗಿ ಸಂರಕ್ಷಿತವಾಗುತ್ತವೆ.

ಸಂಭಾವ್ಯ ಆರೋಗ್ಯ ಅಪಾಯಗಳು:

ಆಹಾರ ಇಡುವ ಕ್ರಮ: ಆಹಾರವನ್ನು ಸರಿಯಾಗಿ ಮುಚ್ಚದೆ ಅಥವಾ ಹೆಚ್ಚು ದಿನ ಇಟ್ಟರೆ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಇರುತ್ತದೆ. ಆಗ ಆಹಾರ ವಿಷವಾಗಬಹುದು.

ಅಸಮರ್ಪಕವಾಗಿ ಆಹಾರ ಇಡುವುದು: ಬೇಯಿಸದೆ ಮಾಂಸ ಇಡುವುದು ಹಾಗೂ ಮೊಟ್ಟೆಗಳನ್ನು ಬೇಯಿಸಿದ ಆಹಾರದೊಂದಿಗೆ ಸೇರಿಸಿ ಇಟ್ಟರೆ ರೋಗಗಳಿಗೆ ಕಾರಣವಾಗಬಹುದು.

ತಣ್ಣನೆಯ ಆಹಾರದ ಹೆಚ್ಚು ಸೇವನೆ: ನೇರವಾಗಿ ರೆಫ್ರಿಜರೇಟರ್ನಿಂದ ತೆಗೆದು ತಣ್ಣನೆಯ ಆಹಾರ ತಿನ್ನುವುದರಿಂದ ಕೆಲವರಿಗೆ ಗಂಟಲು ನೋವು, ಜೀರ್ಣಾಂಗ ಸಮಸ್ಯೆಗಳು ಉಂಟಾಗಬಹುದು.

ಅನೇಕ ದಿನದ ಆಹಾರ: ಹೆಚ್ಚು ದಿನಗಳ ಕಾಲ ಆಹಾರವನ್ನು ರೆಫ್ರಿಜರೇಟರ್ನಲ್ಲಿ ಇರಿಸಿ ಸೇವಿಸುವುದು ಅನಾರೋಗ್ಯಕ್ಕೆ ಕಾರಣವಾಗಬಹುದು.

ಆರೋಗ್ಯಕರ ಬಳಕೆಗೆ ಸೂಚನೆಗಳು:

ಸರಿಯಾದ ತಾಪಮಾನ ನಿರ್ವಹಣೆ: ರೆಫ್ರಿಜರೇಟರ್ ಅನ್ನು 4°C (40°F) ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಇರಿಸಿ.

ಮುಚ್ಚಿದ ಪಾತ್ರೆಗಳು: ಆಹಾರವನ್ನು ಯಾವಾಗಲೂ ಮುಚ್ಚಿದ ಪಾತ್ರೆಗಳಲ್ಲಿ ಸಂಗ್ರಹಿಸಿ.

ಪ್ರತ್ಯೇಕ ಸಂಗ್ರಹಣೆ: ಹಸಿ ಮತ್ತು ಬೇಯಿಸಿದ ಆಹಾರವನ್ನು ಪ್ರತ್ಯೇಕಿಸಿ ಇರಿಸಿ.

ಬೇಯಿಸಿದ ಆಹಾರ: 3-4 ದಿನಗಳೊಳಗೆ ಸೇವಿಸಿ.

ತರಕಾರಿಗಳು: 5-7 ದಿನಗಳೊಳಗೆ ಬಳಸಿ.

ಹಾಲು ಉತ್ಪನ್ನಗಳು: ಮುಕ್ತಾಯ ದಿನಾಂಕದೊಳಗೆ ಸೇವಿಸಿ.

ಮರುಬಿಸಿ ಮಾಡುವಿಕೆ: ರೆಫ್ರಿಜರೇಟರ್ನಿಂದ ತೆಗೆದ ಆಹಾರವನ್ನು ಚೆನ್ನಾಗಿ ಬಿಸಿ ಮಾಡಿ ನಂತರ ಸೇವಿಸಿ. (ವಿಶೇಷವಾಗಿ ಮಾಂಸ ಮತ್ತು ಮೊಟ್ಟೆಗಳು).

ನಿಯಮಿತ ಶುಚಿಗೊಳಿಸುವಿಕೆ: ರೆಫ್ರಿಜರೇಟರ್ ಅನ್ನು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಿ.

ಸರಿಯಾದ ಮುನ್ನೆಚ್ಚರಿಕೆಗಳೊಂದಿಗೆರೆಫ್ರಿಜರೇಟರ್ನಲ್ಲಿ ಆಹಾರ ಇಟ್ಟು ಸೇವಿಸಿದರೆ ಸಂಪೂರ್ಣವಾಗಿ ಸುರಕ್ಷಿತ ಮತ್ತು ಆರೋಗ್ಯಕರವಾಗಿರುತ್ತದೆ. ಆಹಾರ ನೈರ್ಮಲ್ಯ, ಸರಿಯಾದ ಸಂಗ್ರಹಣೆ ಮತ್ತು ಸಮಯವನ್ನು ಖಾತರಿಪಡಿಸಿಕೊಂಡರೆ, ರೆಫ್ರಿಜರೇಟರ್ ನಿಮ್ಮ ಆರೋಗ್ಯಕ್ಕೆ ಉಪಯುಕ್ತವಾದ ಸಾಧನವಾಗಿದೆ.

(ಎಡ್ವಿನಾ ರಾಜ್, ಮುಖ್ಯಸ್ಥೆ – ಕ್ಲಿನಿಕಲ್ ನ್ಯೂಟ್ರಿಷನ್ , ಅಸ್ಟರ್ ಸಿಎಂಐ ಆಸ್ಪತ್ರೆ, ಬೆಂಗಳೂರು).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.