ಒಂದು ಮದುವೆಯ ಸಮಾರಂಭ. ಬೆಳಗಿನ ಉಪಾಹಾರ ಸಮಯ. ಉಪಾಹಾರಕ್ಕೆ ಹುಳಿ ಗೊಜ್ಜವಲಕ್ಕಿ ಸಿದ್ಧವಾಗಿತ್ತು. ಬಹಳ ರುಚಿ ಇತ್ತು. ಒಂಬತ್ತರ ಹರೆಯದ ಬಾಲಕ ಪಕ್ಕದಲ್ಲಿ ಕುಳಿತಿದ್ದ. ಅವರಮ್ಮ ಪಕ್ಕದಲ್ಲಿದ್ದರು. ಹುಡುಗ ಮೊದಲ ತುತ್ತು ಬಾಯಿಗಿಡುತ್ತಲೇ ಖಾರ, ಖಾರ ಎಂದು ಒದರಿದ. ಅಮ್ಮನಿಗೆ ಗದರಿದ. ಆಹಾರದ ಸರಿಯಾದ ಸವಿಯರಿಯದ ಸಂಗತಿ ಕೂಡ ರುಚಿಗೆಡುವುದರ ರೂಪಾಂತರ ತಾನೇ? ಹಾಗೂ ಹೀಗೂ ಸುಮಾರು ಇಪ್ಪತ್ತು ನಿಮಿಷದಲ್ಲಿ ಅರೆ ತಟ್ಟೆ ಗೊಜ್ಜವಲಕ್ಕಿ ಬಾಲಕನ ಉದರ ಸೇರಲು ಅಮ್ಮನ ಹರ ಸಾಹಸ ಕಾರಣ. ಒಂದು ತಾಸು ಕಳೆಯುತ್ತಲೆ ದೂರವಾಣಿ ಕರೆಯೊಂದರಲ್ಲಿ ಒಬ್ಬ ಮಾತೆಯ ದೂರು ಸಲ್ಲಿಕೆ. ಮಗಳಿಗೆ ಹತ್ತರ ಹರೆಯ. ಏನು ಕೊಟ್ಟರೂ ಮಗಳು ಖಾರ ಖಾರ ಎನ್ನುತ್ತಾಳೆ!? ಯಾಕೆ ಹೀಗೆ ಡಾಕ್ಟ್ರೆ?

ಅನ್ನವೇ ಬ್ರಹ್ಮ – ಎನ್ನುತ್ತದೆ, ಚರಕ ಸಂಹಿತೆ. ಸೃಷ್ಟಿ, ಸ್ಥಿತಿಗೆ ಅನ್ನವೇ ಪರಮ ಮತ್ತು ಚರಮ ವಸ್ತು. ಅದುವೇ ವಿಷ ಮತ್ತು ವಿಷಮ ರೂಪದ್ದಾಯಿತೆ? ಲಯವೂ ಅದರಿಂದಲೇ. ಅಗ್ಗದ ಕುರುಕು ತಿಂಡಿಯ ಬಣ್ಣ ಬಣ್ಣದ ಪ್ಯಾಕೆಟ್ ತೋರಣ ಕಂಡಿದ್ದೀರಿ. ಹಸುಗೂಸಿನ ಎಳೆಯ ನಾಲಿಗೆಗೆ ಇಂತಹ ಕುರುಕು ರುಚಿ ಹತ್ತಿದರೆ ಮತ್ತೆ ಬಿಡಿಸಲಾಗದ ಬಂಧ. ‘ಜುವೆನೈಲ್ ಡಯಾಬಿಟಿಸ್‘ ಎಂದರೆ ಬಾಲ್ಯದ ಮಧುಮೇಹದ ಹೆದ್ದಾರಿಗೆ ಕ್ರಮೇಣ ಮಕ್ಕಳು ಸಾಗುವ ದೊಡ್ಡ ದುರಂತದ ಮೂಲ ನಾಲಗೆಯ ಚಪಲ.

ನಾಲಗೆಯ ರುಚಿ ಗ್ರಂಥಿಗಳು ‘ಬೋಧಕ ಕಫ’ ಎಂಬ ಸ್ರಾವಾಧೀನ. ಮಧುರ, ಅಮ್ಲ, ಲವಣ, ಖಾರ, ಕಹಿ ಮತ್ತು ಒಗರು ಎಂಬ ಷಡ್ರಸಗಳು ನಮ್ಮ ನಾಲಗೆಗೆ ಪರಿಚಿತ. ತುದಿ, ನಡು, ಮುಂಬದಿ ಮತ್ತು ಹಿಂಬದಿ ಅಕ್ಕಪಕ್ಕ – ಹೀಗೆ ಆರು ವಲಯಗಳಲ್ಲಿ ನಾಲಗೆಯ ವಿಭಾಗ ಊಹಿಸಿಕೊಳ್ಳಿರಿ. ಸುಮಾರು ಹತ್ತು ಸಾವಿರ ರಸಗ್ರಂಥಿಗಳು! ಪ್ರತಿ ಹದಿನೈದು ದಿನಕ್ಕೊಮ್ಮೆ ಇದು ಹೊಸದಾಗಿ ರೂಪುಗೊಳ್ಳುತ್ತದೆ. ಹಳೆಯ ಸವಕಲು ಗ್ರಂಥಿ ತಳಕ್ಕಿಳಿಯುತ್ತದೆ. ಮರಗಿಡದ ಬೇರಿನ ರಚನೆ ಊಹಿಸಿಕೊಳ್ಳಿರಿ. ಆದರೆ ಈ ಬೇರಿನ ರಚನೆಗಳು ಮಿದುಳಿನ ನಾನಾ ಕಣಗಳೊಂದಿಗೆ ಸಂಪರ್ಕ. ಆಗಲೇ ನಮಗೆ ರುಚಿಯ ಬೋಧೆ. ಆಯುರ್ವೇದದ ರೀತ್ಯಾ ಇದು ಬೋಧಕ ಕಫ. ಚೆನ್ನಾಗಿ ಜಗಿದು ನುಂಗುವಾ. ಆಗಲೇ ಜೊಲ್ಲಿನ ರಸದೊಡನೆ ಗೊಜ್ಜವಲಕ್ಕಿ ಮಿಳಿತ. ಮಿದುಳಿಗೆ ರುಚಿಯ ಬೋಧನೆ. ಆದರೆ ಪಕ್ಕದಲ್ಲಿ ಕುಳಿತ ಒಂಬತ್ತರ ಹರೆಯದ ಬಾಲಕನ ಎದುರು ಮೊಬೈಲ್ ಆಟವಿತ್ತು. ಏಕಕಾಲಕ್ಕೆ ಮಿದುಳು ಎರಡು ಕೆಲಸದಲ್ಲಿ ತೊಡಗಲು ದುಸ್ಸಾಧ್ಯ. ಅವನು ತಿಂದ ಅರೆಬರೆ ಅವಲಕ್ಕಿ ಅಜೀರ್ಣ. ‘ಆಮ’ ಎಂಬ ಸ್ವರೂಪ. ಕುಂಠಿತ ಬೆಳವಣಿಗೆ, ಮಾನಸಿಕ ವಿಕೃತಿಗೆ ಅದು ಮುಂದೆ ಕಾರಣ. ಇಂತಹ ಪ್ರಸಂಗ ಎದುರಿಸುವ ಹೊಸ ಪೀಳಿಗೆ ಬಾಲಕರ ಭವಿಷ್ಯ ರೂಪಿಸಲು ಹೆತ್ತವರು ಹೆಣಗಾಡಲೇಬೇಕು.

ನಾಲಗೆಯ ಮೇಲಿನ ದಪ್ಪ ಪದರ ಶುಚಿಗೊಳಿಸುವುದು ನಿತ್ಯದ ಅಗತ್ಯ. ಪ್ಲಾಸ್ಟಿಕ್, ಲೋಹದ ಟಂಗ್ ಕ್ಲೀನರ್ ಏಕೆ? ಮಾವು, ಗೇರೆಲೆಯ ನಡುನರ (ಮಿಡ್ ರಿಬ್), ಹೊಂಗೆಕಡ್ಡಿಗಳನ್ನೂ ಬಳಸಬಹುದು. ಬಾಯಿಗೆ ಎಳ್ಳೆಣ್ಣೆ ಅಥವಾ ತೆಂಗಿನೆಣ್ಣೆಯ ಕವಳ ಗಂಡೂಷ (ಮುಕ್ಕುಳಿಕೆ) ಉತ್ತಮ ವಿಧಾನ. ಅನಂತರ ಹದ ಬಿಸಿ ನೀರಿನ ಗಂಡೂಷ. ಜ್ಯೇಷ್ಠಮಧು ಪುಡಿ ಎಲ್ಲೆಡೆ ಲಭ್ಯ. ಅದರ ಹದ ಬಿಸಿ ಕಷಾಯದ ಗಂಡೂಷ ಅತ್ಯಂತ ಸರಳ ಮತ್ತು ಪರಿಣಾಮಕಾರಿ ವಿಧಾನ. ಸತತ ಆ್ಯಂಟಿಬಯಾಟಿಕ್ ಸೇವನೆಯ ದುಷ್ಪರಿಣಾಮದಿಂದ ನಾಲಿಗೆ ರುಚಿ ಕೆಡುವ ಸ್ಥಿತಿಗೆ ಇದು ಪರಿಹಾರ. ಜೇನು ಅಥವಾ ತುಪ್ಪವನ್ನು ನಾಲಗೆಗೆ ಸವರಿಕೊಳ್ಳಿ; ನಾಲಗೆಯ ರುಚಿಪದರಗಳನ್ನು ಸಂತೈಸಿಕೊಳ್ಳಿರಿ.

ಶುಂಠಿ, ಕಾಳುಮೆಣಸು ಮತ್ತು ಹಿಪ್ಪಲಿ ಪುಡಿಯನ್ನೋ ಕಷಾಯವನ್ನೋ ಬಳಸಿ ಬಾಯಿಯನ್ನು ತೊಳೆದುಕೊಳ್ಳುವ ವಿಧಾನವೂ ಇದೆ. ಅಳಲೆ, ತಾರೆ ಮತ್ತು ನೆಲ್ಲಿಯ ಅದ್ಭುತ ಮಿಶ್ರಣವಂತೂ ಸರ್ವರೋಗ ಸಂಜೀವಿನಿ. ಮಲಪ್ರವೃತ್ತಿಗೆ ಸರಾಗ ಸಹ. ಸೇವನೆಗೆ, ನಾಲಗೆಗೆ ಹಚ್ಚಲು, ಕಷಾಯ ಗಂಡೂಷಕ್ಕಿದು ಸುಲಭದ ದಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.