* ಮಕ್ಕಳಿರುವ ವಿವಾಹಿತ ಹೆಣ್ಣನ್ನು ಪ್ರೀತಿಸಿ ತಪ್ಪು ಮಾಡಿದ್ದೇನೆ. ಅವಳ ಪತಿ ವಿಚ್ಚೇದನಕ್ಕೆ ಒಪ್ಪುತ್ತಿಲ್ಲ. ನಮ್ಮ ಪ್ರೀತಿಯ ವಿಷಯ ತಿಳಿದು ಅವಳಿಗೆ ಹಿಂಸೆ ನೀಡಿ ಮನೆಯಲ್ಲಿ ಬಂಧಿಸಿದ್ದಾನೆ. ನನಗೂ ಮನೆಯಲ್ಲಿ ಮದುವೆಯಾಗಲು ಒತ್ತಾಯಿಸುತ್ತಿದ್ದಾರೆ. ಆದರೆ ಅವಳ ಜೀವನವನ್ನು ಹಾಳುಮಾಡಿದ್ದೇನೆ ಎಂದು ಧರ್ಮಸಂಕಟವಾಗುತ್ತಿದೆ. ಸಹಾಯ ಮಾಡಿ.
-ಹರ್ಷ, ಊರಿನ ಹೆಸರಿಲ್ಲ.

ಉತ್ತರ: ಮದುವೆಯಾದವಳ ಆಕರ್ಷಣೆಗೆ ಒಳಗಾಗಿದ್ದು ವಾಸ್ತವದ ದೃಷ್ಟಿಯಿಂದ ತಪ್ಪಾಗಿತ್ತು ಎಂದು ನಿಮಗೆ ಈಗ ಅನ್ನಿಸುತ್ತಿದೆಯಲ್ಲವೇ? ಆಕರ್ಷಣೆ ಪರಸ್ಪರವಾಗಿತ್ತಲ್ಲವೇ? ವಿವಾಹಿತೆಯೂ ಕೂಡ ತನ್ನ ಜವಾಬ್ದಾರಿಗಳ ಕುರಿತು ಯೋಚಿಸಬೇಕಾಗಿತ್ತಲ್ಲವೇ? ವಿಚ್ಚೇದನ ಪಡೆದುಕೊಳ್ಳುವುದು ಅವಳ ಜವಾಬ್ದಾರಿ. ಅದನ್ನು ಅವಳಿಗೆ ನಿಭಾಯಿಸಲಾಗದಿದ್ದರೆ ನೀವೇನು ಮಾಡಲು ಸಾಧ್ಯ? ಕಾನೂನಿನ ತೊಡಕನ್ನು ನಿಭಾಯಿಸಲು ಅವಳು ಮುಂದೆ ಬಂದಾಗ ನಿಮಗೆ ಅವಳ ಮೇಲೆ ಪ್ರೀತಿಯಿದ್ದರೆ ಸಹಾಯ ಮಾಡಬಹುದು. ಆದರೆ ಅದಕ್ಕಾಗಿ ಅನಿರ್ದಿಷ್ಟ ಸಮಯದವರೆಗೆ ಹೇಗೆ ಕಾಯುತ್ತೀರಿ? ನಿಮ್ಮ ಬದುಕಿನ ದಾರಿಯ ಬಗ್ಗೆ ಸ್ಪಷ್ಟ ಕಲ್ಪನೆಗಳನ್ನು ಇಟ್ಟುಕೊಂಡು ನಿರ್ಧಾರಗಳನ್ನು ಮಾಡಿ. ತನ್ನ ಜೀವನದ ಬಗೆಗೂ ಇದೇ ರೀತಿಯ ನಿರ್ಧಾರ ಮಾಡುವ ಅಗತ್ಯ ಶಕ್ತಿ, ಯೋಗ್ಯತೆ, ಜವಾಬ್ದಾರಿ ಎಲ್ಲವೂ ಆ ಮಹಿಳೆಗೂ ಇದೆ ಎನ್ನುವುದನ್ನು ಮರೆಯಬೇಡಿ.

ವಯಸ್ಸು 19, ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇನೆ. ಓದುವುದು ನನಗೆ ಇಷ್ಟ. ಆದರೆ ಓದಿರುವುದು ನೆನಪಿನಲ್ಲಿ ಉಳಿಯುತ್ತಿಲ್ಲ. ಸಲಹೆ ನೀಡಿ.
–ಹೆಸರಿಲ್ಲ, ಜೇವರ್ಗಿ

ಉತ್ತರ: ನಿಮಗೆ ಓದಬೇಕೆಂದು ಆಸೆಯಿದೆ ಎನ್ನುವುದು ನಿಜವಾದರೂ ಮೆದುಳು ಅದನ್ನು ಆಸಕ್ತಿಯಾಗಿ ಸ್ವೀಕರಿಸುತ್ತಿಲ್ಲ. ನಮಗೆಲ್ಲರಿಗೂ ತೀವ್ರವಾಗಿ ಆಸಕ್ತಿ ಇರುವ ವಿಷಯಗಳನ್ನು ಮೆದುಳು ಸಹಜವಾಗಿ ನೆನಪಿಟ್ಟುಕೊಳ್ಳುತ್ತದೆ. ಹಾಗಾಗಿ ಓದಿನ ವಿಷಯವನ್ನು ಆಸಕ್ತಿಯಾಗಿಸಿಕೊಳ್ಳುವ ದಾರಿ ಹುಡುಕಿ. ವಿಷಯಗಳು ನಿಮ್ಮ ಸುತ್ತಲೂ ಎಲ್ಲೆಲ್ಲಿ ಹೇಗೆ ಉಪಯೋಗವಾಗುತ್ತಿದೆ? ನೀವು ಕಲಿತಿದ್ದನ್ನು ಹೇಗೆ ಬಳಸಬೇಕೆಂದಿದ್ದೀರಿ? ಅಧ್ಯಾಪಕರಾದರೆ ವಿದ್ಯಾರ್ಥಿಗಳಿಗೆ ಇದನ್ನು ಹೇಗೆ ಕಲಿಸುತ್ತಿದ್ದಿರಿ? ಪರೀಕ್ಷೆಗಳ ಅಗತ್ಯಕ್ಕಿಂತ ಹೆಚ್ಚಿನ ಜ್ಞಾನ ಹೇಗೆ ಪಡೆಯುವುದು? ಹೀಗೆ ಪ್ರಶ್ನಿಸಿಕೊಳ್ಳುತ್ತಾ ವಿಷಯಗಳ ಆಳಕ್ಕೆ ಹೋದರೆ ನೆನಪು ತಾನಾಗಿಯೇ ಉಳಿಯುತ್ತದೆ.

* ನನಗೆ ಪೊಲೀಸ್ ಆಫೀಸರ್ ಆಗಬೇಕೆಂದಿದೆ. ಅದರೆ ನಾನು ಪ್ರೀತಿಸುತ್ತಿರುವ ಹುಡುಗಿ ನನಗಾಗಿ ಕಾಯಬೇಕು ಎನ್ನುತ್ತಿದ್ದಾಳೆ. ಹಾಗಾಗಿ ಓದಲು ಆಸಕ್ತಿಯೇ ಬರುತ್ತಿಲ್ಲ. ಸಲಹೆ ನೀಡಿ.
–ಹೆಸರು, ಊರು ಬೇಡ

ಹುಡುಗಿಯ ಕುರಿತ ಆಕರ್ಷಣೆ ವಯಸ್ಸಿಗೆ ಸಹಜವಾದದ್ದು. ನಿಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯ ಬಂದಾಗ ಅದನ್ನು ಪ್ರೀತಿಯಾಗಿ ಬದಲಾಯಿಸಲು ಸಾಧ್ಯ. ಅದಕ್ಕೂ ಮೊದಲು ಪ್ರೀತಿಯನ್ನು ಗಳಿಸಲು ಮತ್ತು ಉಳಿಸಿಕೊಳ್ಳಲು ನಿಮ್ಮೊಳಗೆ ಒಂದು ಗಟ್ಟಿ ವ್ಯಕ್ತಿತ್ವ ಇರಬೇಕಲ್ಲವೇ? ಅದನ್ನು ಹೇಗೆ ಪಡೆದುಕೊಳ್ಳುವುದು ಎಂದು ಯೋಚಿಸಿದ್ದೀರಾ? ಪೊಲೀಸ್ ಆಗುವುದು ನನ್ನ ಆಸೆ ಮಾತ್ರವೇ ಅಥವಾ ಆಳವಾದ ಆಸಕ್ತಿಯೇ ಎಂದು ಪರೀಕ್ಷಿಸಿಕೊಳ್ಳಿ. ತೀವ್ರವಾದ ಆಸಕ್ತಿಯಾಗುವುದು ಸಾಧ್ಯವಾದಾಗ ಮಾತ್ರ ಓದಿನಲ್ಲಿ ಏಕಾಗ್ರತೆ ಸಾಧ್ಯ. ‘ನನಗೆ ನನ್ನ ಕುರಿತು ಸಂತೋಷವಾಗಬೇಕಾದರೆ 5 ವರ್ಷಗಳ ನಂತರ ನಾನು ಹೇಗಿರಬೇಕು?’ ಎನ್ನುವುದನ್ನು ಕಲ್ಪಿಸಿಕೊಂಡು ಪ್ರಯತ್ನವನ್ನು ಹಂತಹಂತವಾಗಿ ಪ್ರಾರಂಭಿಸಿ.

* ವಯಸ್ಸು 24. ನನಗೆ ನೆನಪಿನ ಶಕ್ತಿ ಕಡಿಮೆಯಾಗುತ್ತಿದೆ. ಯಾರಾದರೂ ಮುಂದೆ ನಿಂತರೆ ಭಯವಾಗಿ ಬರೆಯಲು ಆಗುವುದಿಲ್ಲ. ಲೈಂಗಿಕ ಆಸಕ್ತಿ ಹೆಚ್ಚಾಗುತ್ತಿದೆ. ಸಲಹೆ ನೀಡಿ.
–ಈರಣ್ಣ, ಊರಿನ ಹೆಸರಿಲ್ಲ.

ಉತ್ತರ: ಹೆಚ್ಚಿನ ವಿವರಗಳಿದ್ದರೆ ಸಹಾಯವಾಗುತ್ತಿತ್ತು. ನೀವು ತುಂಬಾ ಆತಂಕದಲ್ಲಿರುತ್ತೀರಿ. ಮೆದುಳಿನ ತುಂಬಾ ಆತಂಕವೇ ಆವರಿಸಿಕೊಂಡಾಗ ನೆನಪು ಕಡಿಮೆಯಾಗುವುದು ಸಹಜ. ಇಂತಹ ಆತಂಕ ನಿಮ್ಮ ಬಗ್ಗೆ ನಿಮ್ಮೊಳಗೆ ಬಹಳ ಕಾಲದಿಂದ ಇರುವ ಹಿಂಜರಿಕೆ, ಕೀಳರಿಮೆಗಳಿಂದ ಬಂದಿರಬಹುದು. ನಿಮ್ಮ ಲೈಂಗಿಕ ಆಸಕ್ತಿ ಸಹಜವಾದದ್ದು. ಆತಂಕವನ್ನು ನಿಭಾಯಿಸುವುದು ಕಷ್ಟವಾದಾಗ ಅದರ ಆಕರ್ಷಣೆ ಹೆಚ್ಚುವ ಸಾಧ್ಯತೆಗಳಿರುತ್ತವೆ. ನಿಮ್ಮ ಕುರಿತು ನಿಮಗೇನೆನ್ನಿಸುತ್ತಿದೆ ಎನ್ನುವುದನ್ನು ಗಮನಿಸಿದರೆ ಸಮಸ್ಯೆಯ ಮೂಲ ತಿಳಿಯುತ್ತದೆ. ಲಭ್ಯವಿದ್ದರೆ ತಜ್ಞ ಮನೋಚಿಕಿತ್ಸಕರ ಸೇವೆಯನ್ನು ಬಳಸಿಕೊಳ್ಳಿ.

ಏನಾದ್ರೂ ಕೇಳ್ಬೋದು
ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್ ಉತ್ತರಿಸಲಿದ್ದಾರೆ. bhoomika@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.