ಅನೇಕರು ಎದುರಿಸುವ ಸಾಮಾನ್ಯ ಕಾಯಿಲೆಗಳಲ್ಲಿ ಮೂತ್ರನಾಳದ ಸೋಂಕು ಒಂದು. ವಿಶೇಷವಾಗಿ, ಮಧುಮೇಹ ಇರುವವರಲ್ಲಿ ಇದು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಭಾರತದಲ್ಲಿ ವಾರ್ಷಿಕವಾಗಿ 1 ಸಾವಿರ ವ್ಯಕ್ತಿಗಳಲ್ಲಿ ಸುಮಾರು 150 ರಿಂದ 200 ಮಂದಿ ಈ ಸೋಂಕಿಗೆ ಒಳಗಾಗುತ್ತಿದ್ದಾರೆ. ಮಹಿಳೆಯರಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದ್ದು, ಶೇ 50 ರಿಂದ 60ರಷ್ಟು ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಕನಿಷ್ಠ ಒಂದು ಬಾರಿಯಾದರೂ ಮೂತ್ರನಾಳದ ಸೋಂಕಿಗೆ ತುತ್ತಾಗುತ್ತಾರೆ. ಪ್ರಾಸ್ಟೇಟ್ ಸಂಬಂಧಿತ ಸಮಸ್ಯೆಗಳಿಂದಾಗಿ 50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಲ್ಲಿ ಈ ಸೋಂಕಿನ ಪ್ರಮಾಣ ಅಧಿಕವಾಗಿರುತ್ತದೆ. ನೊಸೊಕೊಮಿಯಲ್ (ಆಸ್ಪತ್ರೆಯ ಅವ್ಯವಸ್ಥೆಯಿಂದ ಹರಡುವ ಸೋಂಕುಗಳು) ಮೂತ್ರನಾಳದ ಸೋಂಕಿನ ಪ್ರಮಾಣ ಶೇ 20 ರಿಂದ 30ರಷ್ಟಿದೆ.

E. ಕೊಲಿ ಎಂಬ ಬ್ಯಾಕ್ಟಿರಿಯಾವು ಸಾಮಾನ್ಯವಾದ ರೋಗಕಾರಕ ಜೀವಿಯಾಗಿದ್ದು, ಶೇ 50ರಿಂದ80% ರಷ್ಟು ಸೋಂಕಿನ ಪ್ರಕರಣಗಳಿಗೆ ಕಾರಣವಾಗಿದೆ. ಸುಮಾರು ಶೇ 25–30 ಮಹಿಳೆಯರಲ್ಲಿ ಮೂತ್ರನಾಳದ ಸೋಂಕು ಪುನರಾವರ್ತನೆಗೊಳ್ಳುತ್ತದೆ. (6 ತಿಂಗಳಲ್ಲಿ 2 ಕ್ಕಿಂತ ಹೆಚ್ಚು ಸಲ ಅಥವಾ ಒಂದು ವರ್ಷದಲ್ಲಿ 3 ಸಲ).
.Health Tips | ಅಸ್ತಮಾ ನಿಯಂತ್ರಣಕ್ಕೆ ಇಲ್ಲಿವೆ ಸರಳ ಮಾರ್ಗೋಪಾಯಗಳು.
ಪ್ರಮುಖ ಕಾರಣಗಳು

ಪ್ರತಿಜೀವಕ (ಸೋಂಕುಗಳನ್ನು ನಿವಾರಿಸಲು ಬಳಸುವ ಔಷಧ) ದುರುಪಯೋಗದಿಂದ ಇ.ಕೋಲಿ ಮತ್ತು ಕ್ಲೆಬ್ಸಿಯೆಲ್ಲಾ (Klebsiella)ದಂಥ ಬ್ಯಾಕ್ಟಿರಿಯಾಗಳು ಉತ್ಪತ್ತಿಯಾಗುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಮಾಹಿತಿ ಹಾಗೂ ಆರೈಕೆ ಲಭ್ಯತೆ ಕೊರತೆ, ಮಳೆಗಾಲದಲ್ಲಿ ನೈರ್ಮಲ್ಯ ಸಮಸ್ಯೆ, ಮಧುಮೇಹ

ಮಳೆಗಾಲದಲ್ಲಿ ಸೋಂಕು ಯಾಕೆ ಹೆಚ್ಚು?

1.ಆರ್ದ್ರತೆ ಹೆಚ್ಚಳ: ತೇವಾಂಶವುಳ್ಳ ವಾತಾವರಣ ಬ್ಯಾಕ್ಟೀರಿಯಾ (ವಿಶೇಷವಾಗಿ E. coli) ಮೂತ್ರನಾಳದ ಬಳಿ ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡುತ್ತದೆ.

2. ಒದ್ದೆಯಾದ ಬಟ್ಟೆಗಳು ಮತ್ತು ಒಳ ಉಡುಪುಗಳು: ಒದ್ದೆಯಾದ ಬಟ್ಟೆಗಳು, ವಿಶೇಷವಾಗಿ ಸಿಂಥೆಟಿಕ್ ಒಳ ಉಡುಪುಗಳು, ಬ್ಯಾಕ್ಟೀರಿಯಾ ಮತ್ತು ಯೀಸ್ಟ್ಗೆ ಸಂತಾನೋತ್ಪತ್ತಿಯ ಸ್ಥಳ ಒದಗಿಸುತ್ತದೆ.

3. ಮಳೆನೀರಿಗೆ ಒಡ್ಡಿಕೊಳ್ಳುವುದರಿಂದ: ಕೊಳಕು ಅಥವಾ ಮಾಲಿನ್ಯಕಾರಕಗಳೊಂದಿಗೆ ಬೆರೆತ ಮಳೆನೀರು ಚರ್ಮ ಮತ್ತು ಮೂತ್ರನಾಳದ ಕಿರಿಕಿರಿ ಉಂಟುಮಾಡಬಹುದು.

4. ಕಡಿಮೆ ನೀರು ಸೇವನೆ: ತಂಪಾದ ವಾತಾವರಣದಲ್ಲಿ ಜನರು ಹೆಚ್ಚಾಗಿ ನೀರನ್ನು ಕಡಿಮೆ ಕುಡಿಯುತ್ತಾರೆ, ಇದು ಮೂತ್ರ ವಿಸರ್ಜನೆಯ ಆವರ್ತನವನ್ನು ಕಡಿಮೆ ಮಾಡುತ್ತದೆ ಮತ್ತು ಬ್ಯಾಕ್ಟೀರಿಯಾಗಳು ಸಂಗ್ರಹಗೊಳ್ಳಲು ಅನುವು ಮಾಡಿಕೊಡುತ್ತದೆ.

5. ಸಾರ್ವಜನಿಕ ಶೌಚಾಲಯಗಳು ಮತ್ತು ಪ್ರಯಾಣ

ಮಾನ್ಸೂನ್ ಪ್ರವಾಸಗಳು ಮತ್ತು ಪ್ರಯಾಣಗಳು ಸ್ವಚ್ಛವಾಗಿರದ ಸಾರ್ವಜನಿಕ ಶೌಚಾಲಯಗಳ ಬಳಕೆಯೊಂದಿಗೆ, ಸೋಂಕಿನ ಅಪಾಯದ ಹೆಚ್ಚಳಕ್ಕೆ ಕಾರಣವಾಗಿದೆ.

ಮಹಿಳೆಯರಲ್ಲಿ ಈ ಸಮಸ್ಯೆಗೆ ಕಾರಣಗಳು

ಮಹಿಳೆಯರ ದೇಹ ರಚನೆಯಲ್ಲಿ ಬಾಹ್ಯ ಜನನಾಂಗಗಳು ಪರಸ್ಪರ ಹತ್ತಿರದಲ್ಲಿವೆ. ಹೀಗಾಗಿ ಗುದನಾಳದಿಂದ ಯೋನಿಯವರೆಗೆ ಮತ್ತು ಸುತ್ತಮುತ್ತಲಿನ ಚರ್ಮದಿಂದ ಮೂತ್ರನಾಳದವರೆಗೆ ಸೋಂಕಿನ ಹರಡುವಿಕೆ ತುಂಬಾ ಸಾಮಾನ್ಯವಾಗಿದೆ. ಮಹಿಳೆಯರ ಚರ್ಮ ಮತ್ತು ಕರುಳಿನಲ್ಲಿ ಇ ಕೋಲಿ ವಾಸಿಸುವುದು ಕೂಡ ಪ್ರಮುಖ ಕಾರಣ. ಪ್ರತಿಜೀವಕಗಳನ್ನು ಅನುಚಿತವಾಗಿ ಬಳಸಿ ಅವುಗಳನ್ನು ನಾಶಪಡಿಸುವುದು ಪ್ರತಿಜೀವಕಗಳ ಪ್ರತಿರೋಧ ಉಂಟಾಗುತ್ತದೆ.

ಭಾರತದಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಸುಮಾರು ಶೇ 32ರಷ್ಟು ಮಂದಿ ಇ ಕೋಲಿಯಿಂದಾದ ಮೂತ್ರನಾಳ ಸೋಂಕಿನಿಂದ ಬಳಲುತ್ತಿದ್ದಾರೆ.

ರೋಗ ಲಕ್ಷಣಗಳು

● ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿ ಅಥವಾ ನೋವು

● ಅನೇಕ ಬಾರಿ ಮೂತ್ರ ವಿಸರ್ಜಿಸಲು ಪ್ರಚೋದನೆ

● ಮಂಜಾದ ಅಥವಾ ದುರ್ವಾಸನೆಯಿಂದ ಕೂಡಿದ ಮೂತ್ರ

● ಹೊಟ್ಟೆಯ ಕೆಳಭಾಗ ಅಥವಾ ಶ್ರೋಣಿಯ ಭಾಗದಲ್ಲಿ ನೋವು

● ಜ್ವರ

● ಮೂತ್ರದಲ್ಲಿ ರಕ್ತ

ತಡೆಗಟ್ಟುವ ಮಾರ್ಗಗಳು

1. ಶುಷ್ಕ (ತೇವಾಂಶ ಇಲ್ಲದಂತೆ) ಮತ್ತುಗುಪ್ತಾಂಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು: ಒದ್ದೆಯಾದ ಬಟ್ಟೆಗಳನ್ನು ಬೇಗನೆ ಬದಲಾಯಿಸಿ. ಗಾಳಿಯಾಡುವ ಹತ್ತಿ ಒಳ ಉಡುಪುಗಳನ್ನು ಬಳಸಿ.

2. ನಿಯಮಿತವಾಗಿ ಹೈಡ್ರೇಟ್ ಆಗಿ: ಬ್ಯಾಕ್ಟೀರಿಯಾವನ್ನು ಹೊರಹಾಕಲು ಪ್ರತಿದಿನ ಕನಿಷ್ಠ 2–3 ಲೀಟರ್ ನೀರನ್ನು ಕುಡಿಯಿರಿ.

3. ಜನನಾಂಗದ ನೈರ್ಮಲ್ಯ ಕಾಪಾಡಿ: ಜನನಾಂಗಗಳನ್ನು ಸ್ನಾನದ ಬಳಿಕ ಸರಿಯಾಗಿ ಒರೆಸಿ, ಮೂತ್ರ ವಿಸರ್ಜನೆ ಬಳಿಕ ಸ್ವಚ್ಛಗೊಳಿಸಿ. ಈ ಭಾಗದಲ್ಲಿ ಕಠಿಣವಾದ ಸಾಬೂನು ಅಥವಾ ಪರಿಮಳಯುಕ್ತ ಉತ್ಪನ್ನಗಳನ್ನು ತಪ್ಪಿಸಿ.

4. ಸಂಭೋಗದ ನಂತರ ಮೂತ್ರ ವಿಸರ್ಜಿಸಿ: ಇದು ಮೂತ್ರನಾಳಕ್ಕೆ ಪ್ರವೇಶಿಸಿರಬಹುದಾದ ಯಾವುದೇ ಬ್ಯಾಕ್ಟೀರಿಯಾವನ್ನು ಹೊರಹಾಕಲು ಸಹಾಯ ಮಾಡುತ್ತದೆ.

5. ಮೂತ್ರವನ್ನು ಹಿಡಿದಿಟ್ಟುಕೊಳ್ಳುವುದನ್ನು ತಪ್ಪಿಸಿ: ಬ್ಯಾಕ್ಟೀರಿಯಾದ ಸಂಗ್ರಹವನ್ನು ತಡೆಗಟ್ಟಲು ನಿಮ್ಮ ಮೂತ್ರಕೋಶವನ್ನು ಆಗಾಗ್ಗೆ ಖಾಲಿ ಮಾಡಿ.

ಮಧುಮೇಹ ಮತ್ತು ಮೂತ್ರನಾಳದ ಸೋಂಕು:

ಭಾರತವು ಮಧುಮೇಹದ ವಿಶ್ವ ರಾಜಧಾನಿಯಾಗಿ ವೇಗವಾಗಿ ಹೊರಹೊಮ್ಮುತ್ತಿರುವುದರಿಂದ, ಮೂತ್ರನಾಳ ಸೋಂಕು ಮತ್ತು ಯುರೋಸೆಪ್ಸಿಸ್ (ಚಿಕಿತ್ಸೆ ನೀಡದಿದ್ದರೆ ಸಾವಿನ ಹೊಸ್ತಿಲಿಗೆ ತೆಗೆದುಕೊಂಡು ಹೋಗುವ ಕಾಯಿಲೆ) ಸಮಸ್ಯೆಗಳು ಹೆಚ್ಚಾಗುತ್ತಿವೆ. ಐಸಿಯುಗೆ ದಾಖಲಾಗುವ ಸುಮಾರು 10-12% ರಷ್ಟು ಮಂದಿ ಯುರೋಸೆಪ್ಸಿಸ್ ಸಮಸ್ಯೆಗೆ ಒಳಗಾಗಿರುತ್ತಾರೆ. ಮಧುಮೇಹವು 20 ವರ್ಷಗಳಿಗಿಂತ ಹೆಚ್ಚು ಇದ್ದರೆ, ಸುಮಾರು 69% ಜನರು ತಮ್ಮ ಜೀವಿತಾವಧಿಯಲ್ಲಿ ಯುರೋಸೆಪ್ಸಿಸ್ನಿಂದ ಬಳಲುತ್ತಾರೆ ಮತ್ತು ಪುನರಾವರ್ತಿತ ಹೊಟ್ಟೆ ನೋವು ಕಾಣಿಸಿಕೊಂಡರೆ ಅದು 89% ಕ್ಕೆ ಹೆಚ್ಚಾಗುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಮೂತ್ರನಾಳಗಳಿಗೆ ಸ್ಟಂಟ್ ಹಾಕುವುದು ಮತ್ತು ಮೂತ್ರಪಿಂಡಗಳಿಂದ ಸತ್ತ ಅಂಗಾಂಶವನ್ನು ತೆಗೆದುಹಾಕುವಂತಹ ನವೀನ ಚಿಕಿತ್ಸೆಗಳು ಆರಂಭಿಕ ಮೂತ್ರಪಿಂಡದ ಹಾನಿಯನ್ನು ತಡೆಗಟ್ಟುತ್ತವೆ. ಮೂತ್ರಪಿಂಡದ ಸಮಸ್ಯೆಯ ಆರಂಭಿಕ ಗುರುತಿಸುವಿಕೆ ಮತ್ತು ಚಿಕಿತ್ಸೆಯು ದೀರ್ಘಕಾಲದ ಸಮಸ್ಯೆಯನ್ನು ತಡೆಯುತ್ತದೆ ಮತ್ತು ಶಾಶ್ವತ ಮೂತ್ರಪಿಂಡ ವೈಫಲ್ಯವನ್ನು ತಡೆಯಲು ಸಹಾಯ ಮಾಡುತ್ತದೆ.

ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಲ್ಲಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದನ್ನು ಶಿಫಾರಸ್ಸು ಮಾಡಲಾಗುತ್ತದೆ.

(ಲೇಖಕರು: ನಿರ್ದೇಶಕರು ಮತ್ತು ಮುಖ್ಯಸ್ಥರು-ಮೂತ್ರಶಾಸ್ತ್ರ ವಿಭಾಗ, ಅಪೋಲೋ ಇನ್ಸ್ಟಿಟ್ಯೂಟ್ ಆಫ್ ಯುರೋ ಸೈನ್ಸಸ್, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.