ಬೆನ್ನುಹುರಿಯ ಮಧ್ಯಭಾಗದಲ್ಲಿ ಬಿಲ್ಲೆಯಂಥ ಗಟ್ಟಿಯಾದ ಮಾಂಸಖಂಡವಿದ್ದು ಇದನ್ನು ಡಿಸ್ಕ್ ಎನ್ನಲಾಗುತ್ತದೆ. ಕಶೇರುಖಂಡಗಳ ನಡುವೆ ಇರುವ ಈ ಡಿಸ್ಕ್ಗಳು ಕುಶನ್ಗಳಂತೆ ಕಾರ್ಯನಿರ್ವಹಿಸುತ್ತವೆ. ಒಟ್ಟಾರೆ ಮನುಷ್ಯನ ಚಲನೆ ಹಾಗೂ ಬಾಗುವಿಕೆಯಲ್ಲಿ ಮಹತ್ತದ ಪಾತ್ರವನ್ನು ವಹಿಸುತ್ತದೆ.

ಬೆನ್ನುಹುರಿಯ ಮೇಲೆ ಬೀಳುವ ಒತ್ತಡದಿಂದಾಗಿ ಈ ಡಿಸ್ಕ್ ತುಸು ಆಚೀಚೆಯಾದರೆ ಅದನ್ನು ಸ್ಲಿಪ್ಡ್ ಅಥವಾ ಹರ್ನಿಯೇಟೆಡ್ ಡಿಸ್ಕ್ ಎಂದೂ ಕರೆಯಲಾಗುತ್ತದೆ. ಸುಮಾರು 30 ರಿಂದ 60 ವಯೋಮಿತಿಯಲ್ಲಿರುವ ಶೇ 790ರಷ್ಟು ಮಂದಿಗೆ ಇಂಥ ಸ್ಲಿಪ್ಡ್ ಡಿಸ್ಕ್ ಸಮಸ್ಯೆ ಕಾಣಿಸಿಕೊಳ್ಳಬಹುದು.

ಸ್ಲಿಪ್ಡ್ ಡಿಸ್ಕ್ಗೆ ಕಾರಣವೇನು?

ಏನಾದರೂ ಪೆಟ್ಟಾದರೆ, ದೈಹಿಕ ಹಾಗೂ ಮಾನಸಿಕ ಒತ್ತಡದಿಂದಾಗಿ, ವಯೋಸಂಬಂಧಿತ ಸಮಸ್ಯೆಗಳಿಂದ, ಕಾಲು, ಬೆನ್ನು ಹಾಗೂ ಕುತ್ತಿಗೆ ನೋವಿನ ಕಾರಣಗಳಿಂದಾಗಿಯೂ ಸ್ಲಿಪ್ಡ್ ಡಿಸ್ಕ್ ಆಗುವ ಸಾಧ್ಯತೆ ಹೆಚ್ಚು. ಈ ರೀತಿ ಸ್ಲಿಪ್ಡ್ ಡಿಸ್ಕ್ಗೆ ಒಳಗಾಗುವವರಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚು.

ನರಗಳಲ್ಲಿ ಉಂಟಾಗುವ ತೊಂದರೆಯಿಂದಲೂ ಇಂಟವರ್ಟೇಬ್ರಲ್ ಡಿಸ್ಕ್ನಂಥ ಸಮಸ್ಯೆ ಉಂಟಾಗಬಹುದು. ಡಿಸ್ನ್ನಲ್ಲಿರುವ ಮೃದುವಾದ ಜೆಲ್ನಂಥ ಅಂಗಾಂಶಗಳು ತೀವ್ರ ಒತ್ತಡದಿಂದ ಹೊರಗೆ ಚಾಚುವಂತೆ ತೋರುತ್ತದೆ. ಕುತ್ತಿಗೆ ಅಥವಾ ಮಧ್ಯದ ಬೆನ್ನಿನ ಮೇಲೆ ಬೀಳುವ ಒತ್ತಡವೂ ಸ್ಲಿಪ್ಡ್ ಡಿಸ್ಕ್ ಕಾರಣವಾಗಿವೆ.

ಕುಳಿತುಕೊಳ್ಳುವ ಭಂಗಿ ಸರಿಯಾಗಿ ಇಲ್ಲದೇ ಇರುವುದು, ಮನಸೋಚ್ಛೆ ಕುಳಿತುಕೊಳ್ಳುವುದು, ಭಾರವನ್ನು ಎತ್ತುವಿಕೆ, ಅನಾರೋಗ್ಯಕರ ಜೀವನಶೈಲಿಯಿಂದಲೂ ಆಗಾಗ್ಗೆ ಸ್ಲಿಪ್ಡ್ ಡಿಸ್ಕ್ ಸಮಸ್ಯೆ ಕಾಣಿಸಿಕೊಳ್ಳಬಹುದು.

ಹರ್ನಿಯಾ ಮತ್ತು ಸ್ಲಿಪ್ಡ್ ಡಿಸ್ಕ್ನ ನೋವು ಒಂದೇ ಬಗೆಯದ್ದಾಗಿದ್ದು, ದೇಹದ ಮೇಲೆ ವಿಭಿನ್ನ ಬಗೆಯ ಪರಿಣಾಮಗಳನ್ನು ಉಂಟು ಮಾಡುತ್ತದೆ. ಸಾಮಾನ್ಯವಾಗಿ ಹರ್ನಿಯಾ ಹೊಟ್ಟೆ ಅಥವಾ ತೊಡೆಸಂದುಗಳಲ್ಲಿ ಕಾಣಿಸಿಕೊಂಡರೆ, ಸ್ಲಿಪ್ಡ್ ಡಿಸ್ಕ್ ಬೆನ್ನುಮೂಳೆಯ ಮೇಲೆ ಪರಿಣಾಮ ಬೀರುತ್ತದೆ.

ಗುರುತಿಸುವುದು ಹೇಗೆ?

ಬೆನ್ನಹುರಿಯಲ್ಲಿ ವಿಪರೀತ ನೋವು ಕಾಣಿಸಿಕೊಂಡರೆ ವೈದ್ಯರನ್ನು ಕಾಣುವುದು ಒಳಿತು. ಅಸಾಧ್ಯ ನೋವು ಸ್ಲಿಪ್ಡ್ ಡಿಸ್ಕ್ನ ಪ್ರಮುಖ ಲಕ್ಷಣವೂ ಆಗಿರುತ್ತದೆ. ಇದಲ್ಲದೇ ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸಲಾಗುತ್ತದೆ. ದೈಹಿಕ ತಪಾಸಣೆ ನಡೆಸಿ, ನೋವಿನ ತೀವ್ರತೆಯನ್ನು ನಿರ್ಧರಿಸಲು ಕ್ಷ ಕಿರಣ, ಎಂಆರ್ಐ ಅಥವಾ ಸಿಟಿ ಸ್ಕ್ಯಾನ್ಂಥ ಇಮೇಜಿಂಗ್ ಪರೀಕ್ಷೆಗಳನ್ನು ಮಾಡಿಸುವುದು ಒಳಿತು.

ಪರಿಹಾರವೇನು?

ಒಮ್ಮೆ ಸ್ಲಿಪ್ಡ್ ಡಿಸ್ಕ್ ಸಮಸ್ಯೆ ಕಾಣಿಸಿಕೊಂಡರೆ ವಿಶ್ರಾಂತಿ ಪಡೆಯುವುದು ಬಹುಮುಖ್ಯ. ಚಟುವಟಿಕೆ ಇಲ್ಲದೇ ಸಾಧ್ಯವಾದಷ್ಟು ವಿಶ್ರಾಂತಿ ಪಡೆಯುವುದು. ತೀವ್ರ ನೋವು ಇದ್ದರೆ ನೋವಿನ ಗುಳಿಗೆಯನ್ನು ನುಂಗಬಹುದು. ಈ ಸಂಪ್ರದಾಯಿಕ ಕ್ರಮಗಳಿಂದ ನೋವು ಕಡಿಮೆಯಾಗದೇ ಇದ್ದರೆ ಲ್ಯಾಮಿನೆಕ್ಟಮಿ ಅಥವಾ ಮೈಕ್ರೋಡಿಸ್ಸೆಕ್ಟಮಿಯಂಥ ಅತ್ಯಾಧುನಿಕ ತಂತ್ರಜ್ಞಾನವಿರುವ ಶಸ್ತ್ರಚಿಕಿತ್ಸೆಯನ್ನು ಪಡೆಯಬಹುದು. ಇದು ನರಗಳ ಮೇಲಿನ ಒತ್ತಡವನ್ನು ನಿವಾರಿಸಿ, ಬೆನ್ನಮೂಳೆಯನ್ನು ಸ್ಥಿರಗೊಳಿಸಲು ಬೇಕಾಗುವ ಶಕ್ತಿಯನ್ನು ಒದಗಿಸುತ್ತದೆ. ಇದರ ಜತೆಗೆ ಎಪಿಡ್ಯೂರಲ್ ಸ್ಟೆರಾಯ್ಡ್ ಚುಚ್ಚುಮದ್ದು ತೆಗೆದುಕೊಂಡರೆ ತಕ್ಷಣಕ್ಕೆ ನೋವಿನಿಂದ ಪರಿಹಾರ ಸಿಗುತ್ತದೆ.

ಲೇಖಕರು: ಡಾ. ಹರ್ಷವರ್ಧನ್ ಬಿ.ಆರ್. ರಾಮಕೃಷ್ಣ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.