ಋತುಚಕ್ರದ ಸಮಯದಲ್ಲಿ ಹೆಣ್ಣು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾಳೆ. ಹೊಟ್ಟೆ ನೋವು, ಬೆನ್ನು ನೋವು, ಕಾಲು ನೋವು ಇವು ಆಕೆಯನ್ನು ಸತಾಯಿಸುತ್ತವೆ. ಜೊತೆಗೆ, ಆಕೆ ಬಳಸುವ ಬಟ್ಟೆ ಅಥವಾ ನ್ಯಾಪ್‌ಕಿನ್ಸ್ ಕೂಡ ಆಕೆ ಮುಕ್ತ ಮನಸ್ಸಿನಿಂದ ಇರಲು ಸಹಕಾರಿ. ಹೆಣ್ಣಿನ ಬದುಕಿನಲ್ಲಿ ನಡೆಯುವ ಈ ಸಹಜ ಕ್ರಿಯೆಗೆ ಮುಜುಗರ ಬೇಡ, ಹಳ್ಳಿಗಾಡಿನ ಹೆಣ್ಣುಮಕ್ಕಳು ಆ ದಿನಗಳಲ್ಲಿ ಬಟ್ಟೆ, ಮರದ ಹೊಟ್ಟಿನಿಂದ ಮಾಡುವ ವಿವಿಧ ರೀತಿಯ ವಸ್ತುಗಳನ್ನು ಉಪಯೋಗ ಮಾಡುವುದೂ ಉಂಟು. ಆದರೆ ಇದು ಅಪಾಯಕಾರಿ. ಗರ್ಭಕೋಶದ ತೊಂದರೆಯೂ ಉಂಟಾಗಬಹುದು. ಹೀಗಾಗಿ ಆದಷ್ಟು ಆರಾಮದಾಯಕ ಅದರಲ್ಲೂ ಹತ್ತಿಯ ಬಟ್ಟೆ ಉಪಯೋಗಿಸುವುದು ಒಳಿತು ಎನ್ನುತ್ತಾರೆ ವೈದ್ಯೆ ಡಾ.ಜ್ಯೋತಿ ಜೈನ್.

ಹಿಂದೆಲ್ಲಾ ಮಹಿಳೆಯರು ಮನೆಯ ಮೂಲೆಯಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದರು. ಆದರೆ, ಈಗ ಕೆಲಸಕ್ಕೆ ಹೋಗುವ ಮಹಿಳೆ, ಕಾಲೇಜಿಗೆ ತೆರಳುವ ಯುವತಿ, ಶಾಲೆಗೆ ಹೋಗುವ ಮಕ್ಕಳೂ ಸೇರಿದಂತೆ ಪ್ರತಿ ಹೆಣ್ಣು ಋತುಚಕ್ರದ ಸಮಯದಲ್ಲಿ ನಿರ್ಭೀತಿಯಿಂದ ಇರಲು ಇಚ್ಛಿಸುತ್ತಾಳೆ. ಹಾಗಾಗಿ ಬಟ್ಟೆ ಬಳಸುವ ಕಾಲ ಹೋಗಿದೆ. ಈಗ ಏನಿದ್ದರೂ ಬಳಸಿ ಬಿಸಾಡುವ ಕಾಲ. ಈ ಹಿನ್ನೆಲೆಯಲ್ಲಿ, ಆ ದಿನಗಳಿಗೆಂದೇ ಅದಿರಾ ಪ್ಯಾಂಟಿಯನ್ನು ವಿನ್ಯಾಸಗೊಳಿಸಲಾಗಿದೆ. ಇದು ‘ಕಲೆ’ ಸೋರಿ ತನ್ನಿಂದಾಚೆ ಹೋಗದಂತೆ ತಡೆಯಬಲ್ಲದು. ಇದರಿಂದ ಹಾಕಿದ ಡ್ರೆಸ್‌ಗಾಗಲೀ ಅದರಾಚೆಯಾಗಲೀ ಏನೂ ಕಾಣಿಸದೇ ಇದ್ದುಬಿಡಲು ಸಾಧ್ಯವಾಗುತ್ತದೆ ಎಂಬುದು ಉತ್ಪಾದಕರ ವಕಾಲತ್ತು.

ಹತ್ತಿಯ ಬಟ್ಟೆಯಿಂದ ತಯಾರಾದ, ತ್ವಚೆಯ ಉಸಿರಾಟಕ್ಕೆ ಅಡ್ಡಿಯಾಗದ ಸ್ವಚ್ಛ ತ್ವಚೆ ಸ್ನೇಹಿ ಸಂಗಾತಿಯಿದು. ಮುಖ್ಯವಾಗಿ ಧರಿಸಿದ ಸ್ಯಾನಿಟರಿ ನ್ಯಾಪ್‌ಕಿನ್ ಆಚೀಚೆ ಸರಿಯದಂತೆ ಒಂದೆಡೆ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಬಲ್ಲದು. ಉನ್ನತ ತಂತ್ರಜ್ಞಾನವನ್ನೊಳಗೊಂಡ ಇದು ಪೇಟೆಂಟ್‌ಗಾಗಿ ಕಾದಿದೆ.

ಪ್ರಯಾಣ ಸಂದರ್ಭದಲ್ಲಿ, ಹದಿಹರೆಯದ ಶಾಲಾ ಮಕ್ಕಳಿಗೆ ಹಾಗೂ ಹೆರಿಗೆ ನಂತರದ ಸನ್ನಿವೇಶಗಳಿಗೂ ಸೂಕ್ತ. ಇತರ ಒಳ ಉಡುಪುಗಳಂತೆಯೇ ತೊಳೆದು ಮತ್ತೆ ಉಪಯೋಗಿಸಬಹುದು. ಆದರೆ ಸ್ಯಾನಿಟರಿ ನ್ಯಾಪಕಿನ್‌ನಂತಹ ಸುರಕ್ಷೆಯ ಜತೆಗೇ ಬಳಸುವಂಥದ್ದು ಇದು ಎನ್ನುತ್ತಾರೆ ‘ಯಶ್‌ರಾಮ್ ಲೈಫ್‌ಸ್ಟೈಲ್’ನ ಸಂಸ್ಥಾಪಕಿ ದೀಪಾ ಕುಮಾರ್. ಇದರಲ್ಲಿ ಬಾಕ್ಸರ್ ಹಾಗೂ ಹಿಪ್ಸ್‌ಟರ್ ಎಂಬ ಎರಡು ವಿಧಗಳಿದ್ದು ಬಾಕ್ಸರ್ ಹೆಚ್ಚು ದಿನಗಳು ಸ್ರಾವವಾಗುವವರಿಗೆ ಅನುಕೂಲಕರ. ಹೆಚ್ಚಿನ ಮಾಹಿತಿಗೆ: www.adira.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.