ಪ್ರತಿ ವರ್ಷ ಆಗಸ್ಟ್ 3ರ ದಿನ ತುಮಕೂರಿನ ರೈಲೊಂದು ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತದೆ. ಮಾವಿನ ತೋರಣ, ಹೂ ಮಾಲೆ, ಬಲೂನ್ ಕಟ್ಟಿಕೊಂಡು ಬೀಗುತ್ತದೆ. ರೈಲು ನಿಲ್ದಾಣದಲ್ಲೆಲ್ಲ ಆ ದಿನ ಹಬ್ಬದ ವಾತಾವರಣ. ಬೆಳಗಿನ 7.30ರ ಸಮಯಕ್ಕೆ ಕೇಕ್ ಕತ್ತರಿಸಿ, ಇತರರಿಗೂ ಹಂಚಿ ತನ್ನ ಬಂಧುಗಳನ್ನು ತುಂಬಿಸಿಕೊಂಡು ಬೆಂಗಳೂರು ತಲುಪಿಸುತ್ತದೆ. ಈ ರೈಲಿಗೆ ಈಗ 5 ವರ್ಷ, 5 ತಿಂಗಳು.

‘ಇದೇನಿದು ರೈಲಿಗೂ ವಯಸ್ಸಾಗುತ್ತದೆಯೇ’ ಎಂದು ಹುಬ್ಬೇರಿಸಬೇಡಿ. ತುಮಕೂರಿನಿಂದ ನಿತ್ಯ ಬೆಳಿಗ್ಗೆ 8ಕ್ಕೆ ಹೊರಡುವ ‘ತುಮಕೂರು– ಬೆಂಗಳೂರು ಫಾಸ್ಟ್ ಪ್ಯಾಸೆಂಜರ್’ ರೈಲು ಪ್ರತಿ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತದೆ. ಇತರ ರೈಲುಗಳಿಗೆ ಸಿಗದ ಭಾಗ್ಯ ಈ ರೈಲಿಗೆ ಮಾತ್ರವೇ ಸಿಕ್ಕಿದೆ. ಅಂದಹಾಗೆ ಈ ರೈಲಿನ ಹುಟ್ಟುಹಬ್ಬ ಆಚರಣೆಗಾಗೇ ತುಮಕೂರಿನ ರೈಲು ಪ್ರಯಾಣಿಕರೇ ಸೇರಿ ಒಂದು ಸಂಘವನ್ನೂ ರಚಿಸಿಕೊಂಡಿದ್ದಾರೆ. ಅದೇ ‘ತುಮಕೂರು– ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ’. ಇದೇ ವೇದಿಕೆ ಈ ರೈಲಿನ ಜನ್ಮದಿನವನ್ನು ಆಚರಿಸುತ್ತದೆ. ಲೋಕೋಪೈಲಟ್ (ರೈಲು ಚಾಲಕ) ಅವರಿಂದ ಕೇಕ್ ಕತ್ತರಿಸಿ ಪ್ರಯಾಣಿಕರು ಸಂಭ್ರಮಿಸುತ್ತಾರೆ. ಇದನ್ನು ನೋಡಲೆಂದೇ ಜನರು ಜಮಾಯಿಸುತ್ತಾರೆ.

ಈ ಜನ್ಮದಿನವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಲು ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ನೇತ್ರ ಮತ್ತು ಕೀಲು– ಮೂಳೆ ತಪಾಸಣೆ, ರೈಲು ಪ್ರಯಾಣಿಕರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಉದ್ಯೋಗ ನಿಮಿತ್ತ ರೈಲಿನಲ್ಲಿ ಸಂಚರಿಸಿ ನಿವೃತ್ತರಾದವರಿಗೆ ಅಭಿನಂದನೆ... ಹೀಗೆ ಹಲವು ಕಾರ್ಯಕ್ರಮಗಳೂ ನಡೆಯುತ್ತವೆ. ಇವೆಲ್ಲವೂ ಪ್ರತಿವರ್ಷ ಆಗಸ್ಟ್ 3ರ ನಂತರ ಬರುವ ಭಾನುವಾರದಂದು ರೈಲು ನಿಲ್ದಾಣದ ಆವರಣದಲ್ಲೇ ಆಯೋಜಿಸಲಾಗುತ್ತದೆ.

ರಾಜ್ಯೋತ್ಸವ ದಿನ ಆಚರಿಸುವ ವೇದಿಕೆ, ಕನ್ನಡ ಸಾಹಿತ್ಯದಲ್ಲಿ ಗುರುತಿಸಿಕೊಂಡಿರುವ ರೈಲು ಪ್ರಯಾಣಿಕರಿಗೆ ಸನ್ಮಾನ ಮಾಡುತ್ತದೆ. ಇನ್ನು ಅಕ್ಟೋಬರ್2ರಂದು ನಿಲ್ದಾಣ ಹಾಗೂ ‘ತಮ್ಮ ರೈಲಿನ’ ಸ್ವಚ್ಛತಾ ಕಾರ್ಯ ಮಾಡಲಾಗುತ್ತದೆ. ರೈಲ್ವೆ ಇಲಾಖೆ ಆಯೋಜಿಸುವ ಸ್ವಚ್ಛತಾ ಕಾರ್ಯಕ್ರಮಗಳಿಗೂ ವೇದಿಕೆ ಸದಸ್ಯರು ಕೈ ಜೋಡಿಸುತ್ತಾರೆ. ಪ್ರಯಾಣಿಕರಿಗೆ ಅನುಕೂಲವಾಗಲು ರೈಲು ಸಂಚಾರದ ವೇಳಾಪಟ್ಟಿ ಹೊಂದಿದ ಪಾಕೆಟ್ ಕ್ಯಾಲೆಂಡರ್ ಅನ್ನು ವೇದಿಕೆ ಉಚಿತವಾಗಿ ವಿತರಿಸುತ್ತಿದೆ.

ರೈಲು ಹುಟ್ಟಿದ ಕಥೆ
ಇಷ್ಟೆಲ್ಲ ಕಾರ್ಯಗಳು ಈ ರೈಲಿನಿಂದಾಗಿಯೇ ಹುಟ್ಟಿಕೊಂಡಿವೆ ಎಂದರೆ, ಈ ರೈಲು ಹುಟ್ಟಿಗೂ ಒಂದು ಹಿನ್ನಲೆ ಇರದಿರಲು ಸಾಧ್ಯವೇ?

ತುಮಕೂರಿನಿಂದ ಬೆಂಗಳೂರಿಗೆ ಉದ್ಯೋಗ, ಶಿಕ್ಷಣಕ್ಕಾಗಿ ಸಾವಿರಾರು ಜನ ನಿತ್ಯ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಅದು ಬೆಳಗಿನ 8 ಗಂಟೆಗೆ ಪ್ರಯಾಣ ಬೆಳೆಸುವವರ ಸಂಖ್ಯೆ ಹೆಚ್ಚು. ಈ ಸಮಯಕ್ಕೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುವ ‘ಸೊಲ್ಲಾಪುರ ಎಕ್ಸ್ಪ್ರೆಸ್ ರೈಲು’ ಬರುತ್ತಿತ್ತು. ಬಹುತೇಕ ಉದ್ಯೋಗಸ್ಥರು ಈ ರೈಲನ್ನೇ ಅವಲಂಬಿಸಿದ್ದರು. ಆದರೆ, 2013ರ ಜೂನ್ ತಿಂಗಳ ಅಂತ್ಯದಲ್ಲಿ ಈ ರೈಲನ್ನು ಮೈಸೂರಿನವರೆಗೂ ವಿಸ್ತರಿಸಿದ್ದರಿಂದ ತುಮಕೂರಿಗೆ ಬೆಳಿಗ್ಗೆ 6.30ಕ್ಕೆ ಬರುವಂತಾಯಿತು.

ಇದರಿಂದ ತುಮಕೂರಿನ ಬಹಳಷ್ಟು ಪ್ರಯಾಣಿಕರಿಗೆ ತೊಂದರೆಯಾಯಿತು. ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ರೈಲು ಪ್ರಯಾಣಿಕರೇ ಒಂದಷ್ಟು ಮಂದಿ ನಿಯೋಗ ರಚಿಸಿಕೊಂಡು ಅಂದಿನ ಕೇಂದ್ರ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು. ಹೀಗೆ ಜುಲೈ ತಿಂಗಳಲ್ಲಿ ಮೂರ್ನಾಲ್ಕು ಬಾರಿ ರೈಲ್ವೆ ಅಧಿಕಾರಿಗಳನ್ನು ಹಾಗೂ ಸಚಿವರನ್ನು ಎಡತಾಕಿದ ಬಳಿಕ ಆಗಸ್ಟ್ 3ರಂದು ತುಮಕೂರು– ಬೆಂಗಳೂರಿಗೆ ಪ್ರತ್ಯೇಕ ರೈಲು ಓಡಲು ಸಚಿವರು ಹಸಿರು ನಿಶಾನೆ ತೋರಿಸಿದರು. ಆ ದಿನ ಪ್ರಯಾಣಿಕರಿಗೆ ಎಲ್ಲಿಲ್ಲದ ಸಂಭ್ರಮ.

ಈ ಸಂಭ್ರಮವನ್ನು ಹಸಿರಾಗಿಸಲು ಯೋಚಿಸಿದ ಕೆಲ ಪ್ರಯಾಣಿಕರು 22 ಜನರನ್ನೊಳಗೊಂಡ ವೇದಿಕೆಯೊಂದನ್ನು ರಚಿಸಿಕೊಂಡರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹಾ.ರಮಾಕುಮಾರಿ ಇದರ ಗೌರವ ಅಧ್ಯಕ್ಷರಾದರು.

ಈ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರೆಲ್ಲರೂ ‘ಇದು ನಮ್ಮ ರೈಲು’ ಎಂತಲೇ ಬೀಗುತ್ತಾರೆ. ಪ್ರತಿಯೊಬ್ಬರಲ್ಲೂ ಭಾವನಾತ್ಮಕ ಸಂಬಂಧವನ್ನು ಈ ರೈಲು ಬಿತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.