ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆ ಇಡಿ
Published 10 ಜುಲೈ 2024, 23:54 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿಮ್ಮದೆ ತಪ್ಪುಗಳಿರುವಾಗ ಅದನ್ನು ಸರಿಪಡಿಸುವವರ ಮೇಲೆ ಬೇಸರ ಮಾಡಿಕೊಳ್ಳುವುದು ಸೂಕ್ತವಲ್ಲ. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಲಾಭದ ದಿನ. ಆಸ್ತಿಗಾಗಿ ಆಸೆ ಪಡುವುದು ಸರಿಯಲ್ಲ.
ವೃಷಭ
ಆತ್ಮವಿಶ್ವಾಸ ಹೆಚ್ಚಲಿದೆ. ದೃಢ ನಿಶ್ಚಯ ಮತ್ತು ಸಾಧಿಸಲೇಬೇಕೆಂಬ ಛಲದ ಮನೋಭಾವ ಯಶಸ್ಸಿಗೆ ಕಾರಣವೆನಿಸಲಿದೆ. ಕೇಶವಿನ್ಯಾಸಗಾರರು ಇತರರರೊಂದಿಗೆ ಸ್ಪರ್ಧಿಸಬೇಕಾಗುತ್ತದೆ.
ಮಿಥುನ
ಸಾಂಸಾರಿಕವಾಗಿ ಅಥವಾ ವೈಯಕ್ತಿಕವಾಗಿ ಕೆಲವು ಮುಖ್ಯ ನಿರ್ಧಾರಗಳನ್ನು ಕೈಗೊಳ್ಳುವಿರಿ. ಎಂಜಿನಿಯರ್‌ಗಳಿಗೆ ಬಿಡುವಿಲ್ಲದ ದಿನ‌. ಸಾಕುಪ್ರಾಣಿಯ ಸಂಖ್ಯೆ ಹೆಚ್ಚಾಗುವುದು.
ಕರ್ಕಾಟಕ
ಅದ್ದೂರಿಯ ಮದುವೆಯಲ್ಲಿ ಮಕ್ಕಳು ಮಾಡಿದ ಖರ್ಚು–ವೆಚ್ಚಗಳು ದುಂದುವೆಚ್ಚದಂತೆ ಕಾಣುತ್ತದೆ. ಅನಿರೀಕ್ಷಿತವಾಗಿ ಅಸಮಾಧಾನಗಳೆಲ್ಲವೂ ಮಾತಿನಲ್ಲಿ ಹೊರ ಬರುವವು.
ಸಿಂಹ
ಕಣ್ಣಿನ ಆರೋಗ್ಯದ ವಿಚಾರವಾಗಿ ಕಾಳಜಿ ವಹಿಸಿದರೂ ವೈದ್ಯರ ಭೇಟಿ ನಿಯಮಿತವಾಗಿ ಮಾಡುವುದು ತಪ್ಪದು. ಕೆಲವರು ಮಾಡುವ ಅನಾಹುತವನ್ನು ನೀವು ನಿಲ್ಲಿಸದೇ ಬೇರೆಯ ಹಾದಿ ಇಲ್ಲವಾಗಿರುತ್ತದೆ.
ಕನ್ಯಾ
ಮಧ್ಯವರ್ತಿಗಳ ಅತಿ ಆಸೆಯಿಂದ ರೈತರಿಗೆ ಲಾಭವಿರುವುದಿಲ್ಲ. ಜಾಗರೂಕತೆಯಿಂದ ಹೆಜ್ಜೆ ಇಡಿ. ಮಂಗಳ ಕಾರ್ಯಗಳು ಜರಗುವಾಗ ಅಸಾಂದರ್ಭಿಕ ಮಾತುಗಳನ್ನು ಆಡದಿರಿ.
ತುಲಾ
ಸಹೋದ್ಯೋಗಿಯ ನೆರವಿನಿಂದ ಕಾರ್ಯಗಳು ಅಚ್ಚುಕಟ್ಟಾಗಿ ಮನಸ್ಸಿಗೆ ಹಿತ ಕೊಡುವ ರೀತಿಯಲ್ಲಿ ಪೂರ್ಣಗೊಳ್ಳಲಿವೆ. ತಿಳಿಯದೇ ನಿಮ್ಮಿಂದಾದ ತಪ್ಪುಗಳಿಗಾಗಿ ಜೀವನ ಪರ್ಯಂತ ಸಮಸ್ಯೆ ಪಡುವಂತಾಗುತ್ತದೆ.
ವೃಶ್ಚಿಕ
ಕೆಲವು ಸಮಸ್ಯೆಗಳನ್ನು ಹಿರಿಯರಲ್ಲಿ ಹೇಳುವುದರಿಂದಾಗಿ ಸಮಾಧಾನವಾಗುವುದು. ಇತರರ ಮೇಲಿನ ಜವಾಬ್ದಾರಿಗಳು ಹೆಚ್ಚಾದ ಕಾರಣ ಅನಾರೋಗ್ಯವನ್ನು ನಿರ್ಲಕ್ಷಿಸಬೇಕಾಗುತ್ತದೆ.
ಧನು
ಕುಟುಂಬದಲ್ಲಿ ಹಿಂದೆ ನಡೆದ ಕೆಟ್ಟ ವಿಚಾರಗಳ ಬಗ್ಗೆ ಮಾತನಾಡುವುದು ಭಿನ್ನಾಭಿಪ್ರಾಯ ಬೆಳೆಯಲು ಕಾರಣವಾಗುತ್ತದೆ. ಬರೀಯ ಮೃದು ಮಾತುಗಳಿಂದ ಸಮಸ್ಯೆ ಪರಿಹಾರವಾಗುವುದಿಲ್ಲ.
ಮಕರ
ಶಿಬಿರಗಳಲ್ಲಿ ಭಾಗವಹಿಸಿದ ಕಾರಣ ಚಟುವಟಿಕೆಯಿಂದಿರುವ ಮಕ್ಕಳು ನಿಮ್ಮ ಮನಸ್ಸಂತೋಷಕ್ಕೆ ಕಾರಣವಾಗಿರುತ್ತಾರೆ. ನ್ಯಾಯಾಲಯದ ಕಾರ್ಯ ಕಲಾಪಗಳಲ್ಲಿ ಹೊಸತನವನ್ನು ಕಂಡುಕೊಳ್ಳುವಿರಿ.
ಕುಂಭ
ಚಕ್ರವ್ಯೂಹದಲ್ಲಿ ಸಿಲುಕಿದ ನಿಮಗೆ ಅದನ್ನು ಭೇದಿಸುವ ಉಪಾಯವೂ ಮಿತ್ರರಿಂದ ಸಿಗುತ್ತದೆ. ನಿರೀಕ್ಷೆಯಲ್ಲಿರುವ ಕುಟುಂಬದ ವ್ಯಕ್ತಿಗಳು ಬಿಗುವಿನ ದಿನಚರಿಯಿಂದಾಗಿ ಬೇಸರಗೊಳ್ಳುವರು.
ಮೀನ
ಮುಕ್ತ ಭಾವನೆಯಿಂದ ನೀವಾಡಿದ ಮಾತುಗಳು ಉಳಿದವರಿಗೆ ಅಧಿಕ ಪ್ರಸಂಗದಂತೆ ತೋರುವುದರಲ್ಲಿ ಸಂಶಯವಿಲ್ಲ. ತಿಳಿವಳಿಕೆಯ ಮಾತು ಒಬ್ಬರ ಜೀವನವನ್ನು ಉದ್ಧರಿಸುತ್ತದೆ.