ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ವ್ಯವಹಾರಿಕ ತಯಾರಿ ಸದಾಕಾಲ ಸಿದ್ಧವಿರಲಿ
Published 16 ಫೆಬ್ರುವರಿ 2024, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬದುಕಿನ ಸಾರ ತಿಳಿಯುವುದು ಕಷ್ಟಕರ ವಿಷಯವಾದರೂ ಅದರ ಬಗ್ಗೆ ಹೆಚ್ಚಿನ ಆಲೋಚನೆಯಲ್ಲಿ ತೊಡಗುವಿರಿ. ಸಂಜೆಯ ತಿಳಿ ವಾತಾವರಣ ಮನಸ್ಸಿನ ಹಾಗೂ ದೇಹದ ಆಯಾಸವನ್ನು ಇಂಗಿಸಲಿದೆ.
ವೃಷಭ
ಮಿತ್ರರಿಂದ ಉತ್ತಮ ಸಹಾಯ ದೊರೆಯುವ ಶುಭ ಸೂಚನೆಯೊಂದಿಗೆ ಪ್ರಾರಂಭವಾಗುವ ಈ ದಿನವು ನಿಮ್ಮ ಜೀವನದಲ್ಲಿ ಮಹತ್ವಪೂರ್ಣ ದಿನವಾಗಿ ಪರಿಣಮಿಸಲಿದೆ. ವ್ಯವಹಾರಿಕ ತಯಾರಿ ಸದಾಕಾಲ ಸಿದ್ಧವಿರಲಿ.
ಮಿಥುನ
ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಹೆಚ್ಚಿನ ತಯಾರಿ ನಡೆಸುವುದರಿಂದ ಮನೋಲ್ಲಾಸ ಪ್ರತಿಫಲ ಸಿಗುತ್ತದೆ. ವಿವಾಹಕ್ಕೆ ಸೋದರಿಕೆಯಲ್ಲಿ ಸಂಬಂಧ ಪ್ರಸ್ತಾಪ ನಡೆಸಬಹುದು. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ.
ಕರ್ಕಾಟಕ
ಸೃಜನಶೀಲ ಯೋಜನೆಗಳಲ್ಲಿ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವಿರಿ. ಎಲ್ಲವೂ ನಿಮ್ಮ ನಿರೀಕ್ಷೆಯಂತೆ ನಡೆಯಲಿದೆ. ಸ್ತ್ರೀಯರು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದ ನಿರುತ್ಸಾಹಿಯಾಗಿರುತ್ತೀರಿ.
ಸಿಂಹ
ಅನಿವಾರ್ಯತೆಗೆ ಬಂಧು ಮಿತ್ರರಿಂದ ಸಹಕಾರ ಲಭ್ಯವಾಗುವುದು. ಕುಟುಂಬದ ಶುಭ ಕಾರ್ಯಗಳಿಗಾಗಿ ಪ್ರಯಾಣ ಮಾಡಬೇಕಾಗುವುದು. ಮಗನ ಜವಾಬ್ದಾರಿಯುತ ನಡವಳಿಕೆ ಹೆಮ್ಮೆ ಎನಿಸುವುದು.
ಕನ್ಯಾ
ಇತ್ತೀಚಿನ ನಿರ್ಧಾರದ ಬಗ್ಗೆ ಪುನರ್ ಪರಿಶೀಲಿಸಲು ಸ್ವಲ್ಪ ಸಮಯ ಮೀಸಲಿಡಿ. ಸಾಧ್ಯವಾದಷ್ಷು ಸಮಾಧಾನ ತಾಳ್ಮೆಯಿಂದ ಮುಂದುವರಿದಲ್ಲಿ ಮಾನಸಿಕ ನೆಮ್ಮದಿ ಕಾಣುವಿರಿ. ಅನಿವಾರ್ಯಕ್ಕಾಗಿ ವಾಹನ ಕೊಳ್ಳುವಿರಿ.
ತುಲಾ
ಪ್ರಯತ್ನಗಳು ವ್ಯರ್ಥವಾಗದೆ ಸರಿಯಾಗಿ ಫಲಿತಾಂಶವನ್ನು ಪಡೆಯಲು ಮನೆ ದೇವರ ಹಾಗೂ ಗುರುಹಿರಿಯರ ಆರ್ಶೀವಾದ ಪಡೆಯಿರಿ. ಮಧ್ಯವರ್ತಿಗಳ ಸಹಾಯದಿಂದಾಗಿ ವ್ಯಾಪಾರದ ವಿಷಯದಲ್ಲಿ ಅನುಕೂಲವಾಗಲಿದೆ.
ವೃಶ್ಚಿಕ
ಎದುರಾಗುವ ಅವಕಾಶಗಳಿಂದ ನಿಮ್ಮ ಜೀವನದ ಉತ್ಸಾಹದ ಚಿಲುಮೆ ಇಮ್ಮಡಿಗೊಳ್ಳಲಿದೆ. ಮೊದಲು ಪ್ರಯತ್ನ ಸಫಲವಾಗಿದ್ದರಿಂದ ಉತ್ಸಾಹ ಗರಿಗೆದರಿದೆ. ಸಗಟು ವ್ಯಾಪಾರಿಗಳಿಗೆ ಹೇರಳ ಲಾಭ ದೊರಕಲಿದೆ.
ಧನು
ವಿಶೇಷ ವ್ಯಕ್ತಿಗಳ ಭೇಟಿ ಈ ದಿನ ನಿಮಗೆ ಸಂತೋಷ ತರುವುದಲ್ಲದೆ, ನಿಮ್ಮ ಹೊಸ ಯೋಜನೆಗಳಿಗೆ ಚೈತನ್ಯ ತುಂಬುವುದು. ಮಾತು ಮಿತವಾಗಿ ಮತ್ತು ಸತ್ಯವಾಗಿರಲಿ. ಹೊಗಳಿಕೆಯ ಮಾತುಗಳಿಗೆ ಮರಳಾಗಬೇಡಿ.
ಮಕರ
ಜೀವನದಲ್ಲಿ ಬಯಸಿದ ನೆಲೆಯನ್ನು ಗಟ್ಟಿಗೊಳಿಸಿಕೊಂಡ ಸಂತೃಪ್ತಿ ತುಂಬಿರುತ್ತದೆ. ರೈತರಿಗೆ ಕಾಡು ಪ್ರಾಣಿಗಳ ಕಾಟದಿಂದಾಗಿ ನಷ್ಟ ಸಂಭವಿ ಸಬಹುದು. ಮನೆಯವರ ಸಲಹೆಯಂತೆ ಪ್ರಯಾಣ ಕೈಗೊಳ್ಳಬೇಕಾಗುವುದು.
ಕುಂಭ
ಕೆಲಸ ಕಾರ್ಯಗಳು ಈಡೇರಿದರೂ ಅದಕ್ಕಾಗಿ ಬಹಳ ಹಣ ವ್ಯಯಿಸಬೇಕಾಗಬಹುದು. ಪ್ರಯತ್ನ ಬಲಕ್ಕೆ ಉತ್ತಮ ಫಲ ದೊರೆಯುವುದು. ಇಂದು ಶರೀರದಲ್ಲಿ ಉಲ್ಲಾಸ ಹಾಗೂ ಕಾರ್ಯಪ್ರವೃತ್ತಿಯನ್ನು ಹೊಂದುತ್ತೀರಿ.
ಮೀನ
ರಫ್ತು ಮಾರಾಟದಲ್ಲಿ ಹಿನ್ನಡೆ ಎದುರಾದರೂ, ಆದಾಯಕ್ಕೇನೂ ತೊಂದರೆಯಿಲ್ಲ. ಬದುಕಿನ ತಿರುವಿಗೆ ಸ್ನೇಹಿತರ ಕೊಡುಗೆ ಬಹಳವಾದುದು ಎಂದು ತಿಳಿದುಕೊಳ್ಳುವಿರಿ. ಅನಾರೋಗ್ಯ ಭೀತಿ ಉಂಟಾಗುವುದು.