ದಿನ ಭವಿಷ್ಯ: ಸೌಜನ್ಯತೆ ವ್ಯಕ್ತಿತ್ವಕ್ಕೆ ಮತ್ತಷ್ಟು ಮೆರುಗು
Published 25 ಸೆಪ್ಟೆಂಬರ್ 2023, 18:30 IST
ಪ್ರಜಾವಾಣಿ ವಿಶೇಷ
ಮೇಷ
ಸೌಜನ್ಯತೆ ವ್ಯಕ್ತಿತ್ವಕ್ಕೆ ಮತ್ತಷ್ಟು ಮೆರುಗು ನೀಡಲಿದೆ. ಕೋರ್ಟಿನಲ್ಲಿರುವ ಹಳೆಯ ವಾಜ್ಯಗಳು ಇಂದು ಮುಕ್ತಾಯಗೊಳ್ಳುವ ಸಂಭವ ಹೆಚ್ಚಾಗಿರುವುದು. ಮಕ್ಕಳಿಗೆ ವಿದೇಶದಲ್ಲಿ ಶಿಕ್ಷಣ ಕೊಡಿಸಲು ಸಂಘಗಳು ನೆರವಾಗುವುದು.
ವೃಷಭ
ಬಹಳ ದಿನದ ಉಳಿತಾಯದ ಹಣವನ್ನು ಸುವ್ಯವಸ್ಥಿತವಾಗಿ ಇರಿಸಲು ಬೇಕಾದ ಮಾರ್ಗ ತಿಳಿದುಕೊಳ್ಳಿ. ನಿಶ್ಚಿತ ಗುರಿ ಸಾಧಿಸಲು ಬಹಳ ಶ್ರಮಪಡಬೇಕಾಗಿಲ್ಲ. ಮಕ್ಕಳೊಡನೆ ಉಪಯುಕ್ತ ಸಮಯ ಕಳೆಯುವಿರಿ.
ಮಿಥುನ
ತೋಟ ಮತ್ತು ಎಸ್ಟೇಟ್ ಕೆಲಸಗಾರರಿಗೆ ಉದ್ಯೋಗದಲ್ಲಿ ಭಯ ಹುಟ್ಟುವಂಥ ಘಟನೆ ಈ ದಿನ ನಡೆಯಬಹುದು. ಯತ್ನಿಸಿದ ಕಾರ್ಯಗಳೆಲ್ಲ ಸಿದ್ಧಿಸುವುದರಿಂದ ಸಂತೋಷ ಇರಲಿದೆ. ಆರ್ಥಿಕ ಕಷ್ಟ ನಿವಾರಣೆಯಾಗಲಿದೆ.
ಕರ್ಕಾಟಕ
ಸೂಕ್ಷ್ಮವಾಗಿ ಯೋಚಿಸಿ ಅಥವಾ ಮಾರ್ಗದರ್ಶನ ಪಡೆದು ಕಾರ್ಯದಲ್ಲಿ ಮುನ್ನುಗ್ಗಿ. ಮಿತ್ರರೊಡನೆ ಸಂತಸ ಕ್ಷಣಗಳನ್ನು ಹಂಚಿಕೊಳ್ಳುವಿರಿ. ದುರ್ಗಾಪರಮೇಶ್ವರಿಯ ದರ್ಶನದಿಂದ ಎಲ್ಲಾ ಒಳ್ಳೆಯದಾಗುವುದು.
ಸಿಂಹ
ಲೇವಾದೇವಿ ವ್ಯವಹಾರ ಮಾಡುವವರು ಸಾಲ ಕೊಡುವ ಬಗ್ಗೆ ಯೋಚಿಸಿ ಮುಂದುವರಿಯುವುದು ಉತ್ತಮವೆನಿಸುವುದು. ಸತ್ಫಲಗಳನ್ನು ಅನುಭವಿಸಲು ಶ್ರೀಲಕ್ಷ್ಮಿನರಸಿಂಹಸ್ವಾಮಿಯ ಸೇವೆಯು ಅನುಕೂಲವಾಗಲಿದೆ.
ಕನ್ಯಾ
ಮಿತ್ರರಲ್ಲಿ ಸ್ನೇಹವೂ, ಬಂಧುಗಳಲ್ಲಿ ಸಂಬಂಧವನ್ನು ಉಳಿಸಿಕೊಂಡು ಹೋಗುವುದು ಇಹಕ್ಕೂ ಹಾಗೂ ಪರಕ್ಕೂ ಒಳಿತು ಉಂಟು ಮಾಡುತ್ತದೆ. ಬ್ಯಾಂಕಿನ ಕೆಲಸಗಾರರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ.
ತುಲಾ
ಕಾರ್ಖಾನೆ ಮತ್ತು ಭೂ ಸಂಬಂಧಿತ ವ್ಯವಹಾರ ನಡೆಸುವವರಿಗೆ ಕಾರ್ಯ ಚುರುಕು ಗತಿಯಲ್ಲಿ ಸಾಗಲಿದೆ. ಬಂಧುಮಿತ್ರರೊಡನೆ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳುವ ಅವಕಾಶ ಸಿಗಲಿದೆ. ರೇಷ್ಮೆ ಬೆಳೆಗಾರರಿಗೆ ಲಾಭ ಆಗುತ್ತದೆ.
ವೃಶ್ಚಿಕ
ಲೇಖನ ಬರಹಗಾರರಿಗೆ ಕೀರ್ತಿ ಅರಸಿ ಬರುವುದು, ಆದರೂ ಬದುಕಿನಲ್ಲಿ ಸ್ಥಿರತೆಯ ಅಭಾವ ಕಾಣಲಿದೆ. ವ್ಯಾಪಾರ ವಾಣಿಜ್ಯ ಸಂಬಂಧ ಹೆಚ್ಚಿಸಿಕೊಳ್ಳಲು ಪ್ರಯಾಣ ಬೆಳೆಸುವಿರಿ. ವೈವಾಹಿಕ ಜೀವನದಲ್ಲಿ ನೆಮ್ಮದಿ ಇರಲಿದೆ.
ಧನು
ರಾಜಕೀಯ ಭವಿಷ್ಯಕ್ಕೆ ಪಕ್ಷದ ಧುರೀಣರ ಮಾತಿನಂತೆ ನಡೆಯು ವುದರಿಂದ ಅನುಕೂಲ ಕಾಣುವಿರಿ. ಕೋರ್ಟು ಕಚೇರಿಗಳಲ್ಲಿ ಕೆಲಸಗಳಿಗೆ ಅಲೆದಾಟ ಕಡಿಮೆಯಾಗುವುದು.
ಮಕರ
ಪಾತ್ರೆ ಮಾರಾಟ ಮಾಡುವವರಿಗೆ, ಅದರಲ್ಲೂ ತಾಮ್ರ, ಹಿತ್ತಾಳೆಯ ದೇವರ ಪೂಜಾ ಪಾತ್ರೆಯ ಮಾರಾಟಗಾರರಿಗೆ ಅಧಿಕ ಲಾಭವಿರುವುದು. ಕ್ರೀಡಾಪಟುಗಳಿಗೆ ಅಭ್ಯಾಸದ ಕೊರತೆಯು ವೈಫಲ್ಯಕ್ಕೆ ಕಾರಣವಾಗುವುದು.
ಕುಂಭ
ರಾಜಕೀಯದಲ್ಲಿ ತಮ್ಮವರಿಂದಲೇ ತೋರಿ ಬರುವ ವಿರೋಧಗಳನ್ನು ಜಾಣ್ಮೆಯಿಂದ ನಿವಾರಿಸಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಸೂಕ್ತ. ನೂತನ ವಾಹನ ಕೊಳ್ಳುವುದನ್ನು ಮುಂದೂಡಿ.
ಮೀನ
ಕುಟುಂಬದಲ್ಲಿ ನೆಮ್ಮದಿ ಕಾಪಾಡಿಕೊಳ್ಳಲು ಹೆಂಡತಿಯ ಮಾತುಗಳಿಗೆ ಪ್ರಾಮುಖ್ಯ ನೀಡಿರಿ. ಉದ್ಯೋಗದಲ್ಲಿ ನಿಮ್ಮ ಕ್ರಿಯಾಶೀಲತೆಯಿಂದ ಹೆಚ್ಚು ಮೆರೆಯುವಿರಿ. ಪ್ರವೃತ್ತಿಯಾಗಿ ಕೃಷಿ ಮಾಡುವ ಬಗ್ಗೆ ಒಲವು ಹೆಚ್ಚಲಿದೆ.