ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ
Published 28 ಮಾರ್ಚ್ 2024, 22:24 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವಾಣಿಜ್ಯ ಸಂಸ್ಥೆಯೊಂದರಲ್ಲಿ ಕೆಲಸ ಕೊಡಿಸಿಕೊಡಲು ಅಣ್ಣನ ಸಹಾಯ ಪಡೆಯುವುದರಿಂದ ಯಶಸ್ವಿಯಾಗುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ. ಪಾನೀಯ ಮಾರಾಟಗಾರರಿಗೆ ಶುಭ ದಿನ.
ವೃಷಭ
ಎಣ್ಣೆ ಮತ್ತು ಬೇಳೆ ಕಾಳು ವ್ಯಾಪಾರದಲ್ಲಿ ಮಾರಾಟ ಜೋರಾಗಿರುವುದು. ಜೀವನದಲ್ಲಿ ಸ್ಥಿರತೆ ಹಾಗೂ ಅಭಿವೃದ್ಧಿ ಸಾಧಿಸುವ ದಿನವೆನಿಸಲಿದೆ. ಪ್ರೀತಿ ಪಾತ್ರರೊಡನೆ ಆತ್ಮೀಯ ಒಡನಾಟ ಉಳಿಸಿಕೊಳ್ಳಿರಿ.
ಮಿಥುನ
ಜವಾಬ್ದಾರಿ ಕೆಲಸಗಳು ಒದಗಿ ಬಂದು ಅವುಗಳನ್ನು ಮುಗಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ವೈದ್ಯರಿಗೆ ತುರ್ತು ಕೆಲಸಗಳಿಂದ ಬಿಡುವಿಲ್ಲದಂತಾಗುವುದು. ಧಾರ್ಮಿಕ ಆಚರಣೆಯ ಬಗ್ಗೆ ಆಸಕ್ತಿ ಮೂಡಲಿದೆ.
ಕರ್ಕಾಟಕ
ವರ್ಗಾವಣೆಯಿಂದಾಗಿ ದೂರದ ಊರಿನಲ್ಲಿ ವಾಸಿಸುವ ಸಂದರ್ಭ ಬರಲಿದೆ. ಕೌಟುಂಬಿಕ ವಿಚಾರಗಳತ್ತ ಸಂಪೂರ್ಣ ಗಮನ ನೀಡಬೇಕಾಗುತ್ತದೆ. ಧರ್ಮದಲ್ಲಿ ಶ್ರದ್ಧೆ ಹೆಚ್ಚಲಿದೆ, ಧಾರ್ಮಿಕ ಕೆಲಸಗಳಲ್ಲಿ ತೊಡಗುತ್ತೀರಿ.
ಸಿಂಹ
ರಾಜಕಾರಣಿಗಳ ಮಾತಿನ ಪ್ರಭಾವದಿಂದ ಅಥವಾ ಹಣಬಲದಿಂದ ಕೆಲಸ ನೆರವೇರುತ್ತದೆ. ಯೋಜನೆಯ ಮೇಲೆ ಹಿಡಿತ ಸಾಧಿಸಲು ಸ್ನೇಹಿತರ ಬೆಂಬಲ ಸಕಾಲದಲ್ಲಿ ಸಿಗಲಿದೆ. ಮಂಜುನಾಥನ ದರ್ಶನ ಪಡೆದುಕೊಳ್ಳಿರಿ.
ಕನ್ಯಾ
ಬಾಲ್ಯ ಜೀವನ, ನಡೆದು ಬಂದ ದಾರಿಯತ್ತ ಒಮ್ಮೆ ಕಣ್ಣು ಹಾಯಿಸುವುದು ಉತ್ತಮ. ಅನುಭವಿಗಳ ಸಲಹೆಗಳನ್ನು ಪಡೆದು ಸರಿಯಾದ ಮಾರ್ಗದಲ್ಲಿ ಸಾಗಿರಿ. ಹೆಂಡತಿ ಮಕ್ಕಳ ಆರೋಗ್ಯ ಉತ್ತಮವಾಗಿರುವುದು.
ತುಲಾ
ವೈಯಕ್ತಿಕ ಅಥವಾ ದಾಂಪತ್ಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಸಣ್ಣ ಪುಟ್ಟ ಬದಲಾವಣೆಗಳಿಂದ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುವಂತೆ ಆಗಬಹುದು. ಕುಲ ಕಸುಬುಗಳು ಅಭ್ಯುದಯಕ್ಕೆ ಕಾರಣವಾಗುತ್ತದೆ.
ವೃಶ್ಚಿಕ
ಭಾಷಾ ಅಧ್ಯಾಪಕರಿಗೆ ಮತ್ತು ನಾಟಕ ಕಲಾವಿದವರಿಗೆ ಹೆಚ್ಚಿನ ಮನ್ನಣೆ ಸಿಗುವುದು. ಕಟ್ಟಡದ ನಿರ್ಮಾಣ ಸಾಮಗ್ರಿಗಳ ಖರೀದಿಗಾಗಿ ಹೆಚ್ಚಿನ ಖರ್ಚು ಉಂಟಾಗುವುದು. ಹಿರಿಯರಿಂದ ಆರ್ಥಿಕ ಸಹಾಯ ಒದಗಲಿದೆ.
ಧನು
ಗೌರವ ಮತ್ತು ಸ್ಥಾನಲಾಭ ಈ ದಿನ ನಿಮಗಿದೆ. ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಹೊಸ ವಿಷಯ ತಿಳಿದುಕೊಳ್ಳುವ ಉತ್ತಮ ಅವಕಾಶಗಳು ಬರಲಿವೆ. ಸಮಾಲೋಚಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತ.
ಮಕರ
ಚರ್ಮದ ವಸ್ತುಗಳ ಮಾರಾಟಗಾರರಿಗೆ ವಿದೇಶದಿಂದ ಹೆಚ್ಚಿನ ಕೆಲಸದ ಅವಕಾಶಗಳು ಅಥವಾ ರಫ್ತು ವ್ಯವಹಾರದಲ್ಲಿ ಅತ್ಯಂತ ಲಾಭ ಇರಲಿದೆ. ಚಾಲಕ ವೃತ್ತಿಯನ್ನು ನಡೆಸುವವರು ಈ ದಿನ ಜಾಗ್ರತರಾಗಿರಿ.
ಕುಂಭ
ವೃತ್ತಿಯಲ್ಲಿ ಅಭಿಪ್ರಾಯಗಳು ಬೇರೆಯವರ ಆಲೋಚನೆಗೆ ಹೊಂದಿಕೊಳ್ಳುವುದರಿಂದ ಪರಸ್ಪರ ಮಿತ್ರತ್ವ ಅಭಿವೃದ್ಧಿಯಾಗಲಿದೆ. ವಾಹನ ಚಾಲನೆಯ ಕಲಿಕೆಯ ಆಸಕ್ತಿಯನ್ನು ಹೊಂದಿದವರು ಆರಂಭಿಸಬಹುದು.
ಮೀನ
ಶತ್ರುಗಳ ಬಣ್ಣ ಬಯಲಾಗುವುದು. ಮಕ್ಕಳ ಮಾತುಗಳು ಮನಸ್ಸಿಗೆ ಚುಚ್ಚಿ ನೋವಾಗುವಂತೆ ಆಗಬಹುದು. ಪತ್ರಿಕೆಯವರ ಸಹಕಾರದಿಂದ ನಿಮ್ಮ ಕೆಲಸಕ್ಕೆ ಹೆಚ್ಚಿನ ಪ್ರಚಾರ ಲಭಿಸುವುದು.