ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ಆಫೀಸಿನ ತೊಂದರೆಗಳು ತನ್ನಿಂತಾನೆ ಬಗೆಹರಿಯಲಿವೆ
Published 1 ಏಪ್ರಿಲ್ 2024, 22:33 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಶತ್ರುಗಳು ವಂಚನೆ ಮಾಡುವ ಸಲುವಾಗಿ ಮಿತ್ರರಾಗುವಂತೆ ನಟನೆ ಮಾಡಿಯಾರು. ಸ್ವಪ್ನದಲ್ಲಿ ಕೂಡಾ ಅಂಥವರ ಬಗ್ಗೆ ಜಾಗ್ರತರಾಗಿರಿ. ನೂತನ ಅಧಿಕಾರಿಗಳ ಆಗಮನದಿಂದ ಕಚೇರಿಯಲ್ಲಿ ಕೆಲಸಗಳು ತೋರಿಬರಲಿದೆ.
ವೃಷಭ
ಎಲೆಕ್ಟ್ರಾನಿಕ್ಸ್‌ ಉಪಕರಣ ವ್ಯಾಪಾರಿಗಳಿಗೆ ಒಳ್ಳೆಯ ಲಾಭ ಪ್ರಾಪ್ತಿಯಾಗುತ್ತದೆ. ಲೆಕ್ಕಪತ್ರಗಳನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳುವ ಕಾರ್ಯದ ಬಗ್ಗೆ ಯೋಚನೆ ಮಾಡಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚುವುದು.
ಮಿಥುನ
ಸಾಂಸಾರಿಕವಾಗಿ ಹಾಗೂ ಸಾಮಾಜಿಕವಾಗಿ ವರ್ತನೆಯಲ್ಲಿ ಸಮತೋಲನವನ್ನು ಹಾಗೂ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಉತ್ತಮ. ಕೆಲಸಗಳ ಬಗ್ಗೆ ನಿಗಾ ಕೊಡುವಂತೆ ಅಧಿಕಾರಿಗಳಿಂದ ಆದೇಶವಾಗುವುದು.
ಕರ್ಕಾಟಕ
ಮಕ್ಕಳ ಹೊಸ ವ್ಯವಹಾರದಲ್ಲಿ ತಂದೆ-ತಾಯಿಯ ಆಶೀರ್ವಾದ ಮತ್ತು ಸಹಕಾರ ದೊರೆಯಲಿದೆ. ಆಲೋಚನೆಯಂತೆಯೇ ನೂತನ ಮನೆ ಕೊಳ್ಳಲು ಹಣದ ವ್ಯವಸ್ಥೆಯಾಗಲಿದೆ.
ಸಿಂಹ
ಉತ್ತಮ ಗುಣಗಳು ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಹಾಯ ಮಾಡುವುದು. ಸಮಾಜದಲ್ಲಿ ಗೌರವ ಕಾಪಾಡಿಕೊಳ್ಳುವ ಬಗ್ಗೆ ಗಮನಹರಿಸಿ. ಹಣಕಾಸಿನ ಹೊಸ ಮೂಲವೊಂದು ಸೃಷ್ಟಿಯಾಗುವುದು
ಕನ್ಯಾ
ನೂತನ ಕಾರ್ಯವನ್ನು ಆರಂಭಿಸಲು ಸಮಯಾವಕಾಶ ಒದಗಿ ಬರುವುದು. ಕಬ್ಬಿಣ, ಸಿಮೆಂಟ್ ವ್ಯಾಪಾರಿಗಳಿಗೆ ಒಳ್ಳೆಯ ಆದಾಯವು ದೊರೆಯುತ್ತದೆ.
ತುಲಾ
ಸಾಲದ ಹಣ ಮರುಪಾವತಿ ಮಾಡುವುದರಿಂದ ಆತ್ಮಾಭಿಮಾನವನ್ನು ಕಾಪಾಡಿಕೊಳ್ಳಬಹುದು. ಕೆಲಸವನ್ನು ಆಲಸ್ಯದಿಂದಾಗಲಿ ಅಥವಾ ತಾಂತ್ರಿಕ ದೋಷದಿಂದಾಗಲಿ ಮುಂದೂಡುವುದು ಸರಿಯಲ್ಲ.
ವೃಶ್ಚಿಕ
ನಿಂತಿರುವ ಕಾರ್ಯಗಳನ್ನು ಬೇರೆ ಬೇರೆ ಪರ್ಯಾಯ ಮಾರ್ಗವನ್ನು ಹುಡುಕಿಕೊಂಡು ಕೆಲಸವನ್ನು ಸಂಪೂರ್ಣವಾಗಿ ಮುಗಿಸುವ ಪ್ರಯತ್ನ ನಡೆಸಿ. ಕಳೆದು ಹೋಗಿದ್ದ ವಸ್ತುಗಳು ಪತ್ತೆಯಾಗಿ ಕೈ ಸೇರುವುದು.
ಧನು
ಮನೋಬಲದಿಂದಾಗಿ ನಡೆಯಬೇಕಾದ ಕೆಲಸ ಕಾರ್ಯಗಳು ಚುರುಕಾಗಿ ನಡೆಯುವುದು. ಹೈನುಗಾರಿಕೆಯಲ್ಲಿ ಆದಾಯ ಹೆಚ್ಚಿಸಿಕೊಳ್ಳುವಿರಿ. ಅವಿವಾಹಿತರಿಗೆ ಕಂಕಣ ಭಾಗ್ಯ ದೊರೆಯುವುದು.
ಮಕರ
ಬೌದ್ಧಿಕ ಚಟುವಟಿಕೆಗಳ ಬೆಳವಣಿಗೆಗೆ ಬೇಕಾದ ಪ್ರತಿಭಾನ್ವಿತರ ಸಮಾಗಮ ಆಗಲಿದೆ. ಉಪಯೋಗಿಸಿಕೊಳ್ಳುವುದು ಸ್ವಂತಿಕೆಯ ವಿಚಾರವಾಗಿರುತ್ತದೆ. ಕೃಷಿಕರಿಗೆ ಕೆಲಸದಲ್ಲಿ ಬಿಡುವಿಲ್ಲದಂತೆ ಆಗುವುದು.
ಕುಂಭ
ನಿರಾಳವಾಗಲಿದೆ. ನಿರುದ್ಯೋಗಿಗಳಿಗೆ ಅನಿರೀಕ್ಷಿತ ಉದ್ಯೋಗ ಪ್ರಾಪ್ತಿಯಾಗುತ್ತದೆ. ತಂಗಿಗಾಗಿ ಖರ್ಚು ಮಾಡಬೇಕಾದ ಸಂದರ್ಭ ಬರುವುದು.
ಮೀನ
ಉದ್ಯೋಗಕ್ಕೆ ಸಂಬಂಧಿಸಿದ ಸಂಶೋಧನಾತ್ಮಕ ಪ್ರಯತ್ನಗಳು ಫಲಕಾರಿಯಾಗಿ ಆರ್ಥಿಕಾನುಕೂಲದ ಜೊತೆಗೆ ಸಾಮಾಜಿಕವಾಗಿ ತೂಕದ ವ್ಯಕ್ತಿಯಾಗುವಿರಿ. ಕಬ್ಬಿಣದ ಕೆಲಸ ಮಾಡುವವರು ಕೆಲಸದಲ್ಲಿ ಜಾಗ್ರತರಾಗಿರಿ.