ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
Today's Horoscope | ದಿನ ಭವಿಷ್ಯ 09 ಜೂನ್ 2023
Published 8 ಜೂನ್ 2023, 23:17 IST
ಪ್ರಜಾವಾಣಿ ವಿಶೇಷ
author
ಮೇಷ
ಮನೆಯಲ್ಲಿ ಶಾಂತ ವಾತಾವರಣವಿದ್ದು ನಿಧಾನಗತಿ ಕೆಲಸ ಕಾರ್ಯಗಳು ಚುರುಕಾಗಿ ಮನಸ್ಸಿಗೆ ತುಸು ನೆಮ್ಮದಿ ಬರುವುದು. ರಾಜಕೀಯ ಸೇರ್ಪಡೆಗೆ ಆಹ್ವಾನ ಬರಲಿದೆ. ದೂರ ಉಳಿಯುವುದು ಕ್ಷೇಮ ಉಂಟುಮಾಡುತ್ತದೆ.
ವೃಷಭ
ಭವಿಷ್ಯದ ದೃಷ್ಟಿಯಿಂದ ಯಾವುದೇ ವಿಷಯವನ್ನು ದೊಡ್ಡದು ಸಣ್ಣದು ಎಂಬ ಭೇದ ಮಾಡದೇ ತಕ್ಷಣ ಕಾರ್ಯೋನ್ಮುಖರಾಗುವುದು ಉತ್ತಮ. ಚಿಂತೆ ಮತ್ತು ಭಯ ಇವೆರಡನ್ನೂ ದೂರ ಮಾಡಿಕೊಳ್ಳುವ ಪ್ರಯತ್ನಿಸಿ.
ಮಿಥುನ
ಸಂಗೀತದಲ್ಲಿ ಪರಿಣತಿ ಹೊಂದಿರುವವರಿಗೆ ಉತ್ತಮ ಅವಕಾಶಗಳು ಅರಸಿ ಬರಲಿದೆ. ದೈನಂದಿನ ಬದುಕಿನ ವಿಚಾರಗಳಲ್ಲಿ ನಡೆದಿರುವ ಸಣ್ಣ ಪುಟ್ಟ ಬದಲಾವಣೆಯಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುವಿರಿ.
ಕರ್ಕಾಟಕ
ದವಸ ಧಾನ್ಯ ಹಾಗೂ ಮಸಾಲಾ ಸಾಮಗ್ರಿಗಳ ಸಗಟು ಹಾಗೂ ರಫ್ತು ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಹೆಚ್ಚಿನ ಅನುಕೂಲವಾಗುವುದು. ಗೃಹದಲ್ಲಿ ಸಂಭ್ರಮಾಚರಣೆಯ ಸಲುವಾಗಿ ಖರ್ಚು ಸಂಭವಿಸಲಿದೆ.
ಸಿಂಹ
ಕೃಷಿ ಕ್ಷೇತ್ರದಲ್ಲಿ ಇರುವವರಿಗೆ ಅಧಿಕವಾದ ಲಾಭ ಅದರಲ್ಲೂ ತರಕಾರಿ ಮಾರಾಟಗಾರರಿಗೆ ಕುಬೇರನ ಅನುಗ್ರಹವು ಸಿಗಲಿದೆ. ವಿದ್ಯಾರ್ಥಿಗಳ ಮನೋಕಾಮನೆಗಳು ಪೂರ್ಣಗೊಳ್ಳುವುದು. ಸಮ್ಮಿಶ್ರ ಫಲವನ್ನು ಕಾಣುವಿರಿ.
ಕನ್ಯಾ
ಸ್ವಯಂಕೃತ ಅಪರಾಧದಿಂದ ಜೀವನದಲ್ಲಿ ಉಲ್ಲಾಸ ಕಳೆದುಕೊಳ್ಳುವ ಸಮಯ ಎದುರಾಗಲಿದೆ. ಸ್ವಂತವಾಗಿ ಉದ್ಯೋಗ ಮಾಡುವವರು ಪ್ರಗತಿ ಕಾಣಲಿದ್ದೀರಿ. ಷೇರು ವ್ಯವಹಾರಗಳಲ್ಲಿ ಹೆಚ್ಚು ಹಣ ತೊಡಗಿಸಬಹುದು.
ತುಲಾ
ಅಧಿಕಾರಿ ವರ್ಗದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಜನಸಾಮಾನ್ಯರಿಂದ ಹೆಚ್ಚಿನ ಪ್ರೋತ್ಸಾಹ ಹಾಗೂ ಸಹಕಾರ ದೊರಕುತ್ತವೆ. ಸುಖ ಸಂಪತ್ತಿನ ಚಿತೆಯು ನಿದ್ದೆಗೆಡಿಸುತ್ತದೆ. ಶುಭಕಾರ್ಯಗಳಿಗೆ ಹಣ ವಿನಿಯೋಗಿಸುವಿರಿ.
ವೃಶ್ಚಿಕ
ಭೂಮಿಯ ಖರೀದಿಯ ವಿಚಾರದಲ್ಲಿ ಮೋಸವಾಗುವ ಸಾಧ್ಯತೆಗಳಿದೆ, ಎಚ್ಚರವಹಿಸಿ. ಹೊಸ ವ್ಯವಹಾರಗಳ ಚಾಲನೆಗೆಂದು ಉತ್ತಮ ಮಾರ್ಗದರ್ಶನ ಹೊಂದುವಿರಿ. ಉತ್ತಮವಾಗಿ ಬಳಸಿದ ಹಣದ ಬಗ್ಗೆ ಚಿಂತಿಸಿದಿರಿ.
ಧನು
ಗೃಹ ನಿರ್ಮಾಣದಂತಹ ಕಾರ್ಯ ಕೈಗೊಂಡವರಿಗೆ ಆರ್ಥಿಕತೆ ಸ್ವಲ್ಪ ಮಟ್ಟಿನ ತೊಂದರೆಯನ್ನು ಸೃಷ್ಟಿ ಮಾಡುವುದು. ಮನೆಯ ದಾಖಲೆ ಪತ್ರಗಳನ್ನು, ಲೆಕ್ಕ ಪತ್ರಗಳನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳಿ.
ಮಕರ
ಗೃಹ ನಿರ್ಮಾಣದಂತಹ ಕಾರ್ಯ ಕೈಗೊಂಡವರಿಗೆ ಆರ್ಥಿಕತೆ ಸ್ವಲ್ಪ ಮಟ್ಟಿನ ತೊಂದರೆಯನ್ನು ಸೃಷ್ಟಿ ಮಾಡುವುದು. ಮನೆಯ ದಾಖಲೆ ಪತ್ರಗಳನ್ನು, ಲೆಕ್ಕ ಪತ್ರಗಳನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳಿ.
ಕುಂಭ
ಈ ದಿನದಲ್ಲಿ ಗೃಹಿಣಿಯರು ಆಹಾರ ತಯಾರಿಕೆಯ ವಿಚಾರದಲ್ಲಿ ಉತ್ತಮ ಹೊಗಳಿಕೆಯ ಮಾತುಗಳನ್ನು ಎದುರು ನೋಡಬಹುದು. ಸತ್ಯ, ಧರ್ಮ, ನೀತಿ, ನಡವಳಿಕೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿರಿ.
ಮೀನ
ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶ ಬರುವುದು. ನಿಮ್ಮ ಸಾಮರ್ಥ್ಯ, ದಕ್ಷತೆ ಹಾಗೂ ಸೇವಾ ಮನೋಭಾವಗಳಿಂದಾಗಿ ಸಂಸ್ಥೆಯಲ್ಲಿ ಜವಾಬ್ದಾರಿಯುತ ಹುದ್ದೆ ನಿಮ್ಮದಾಗಿಸಿಕೊಳ್ಳುವಿರಿ.
ADVERTISEMENT
ADVERTISEMENT