ದಿನ ಭವಿಷ್ಯ: ಅಭದ್ರತೆಯ ಭಾವ ಬಿಟ್ಟು ಹೋಗಲಿದೆ
Published 21 ನವೆಂಬರ್ 2025, 0:28 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸ್ನೇಹಿತರ ಭರವಸೆಯ ಮಾತುಗಳು ಸೋಲುಗಳನ್ನು ಮೆಟ್ಟಿ ಆಶಾ ಭಾವನೆಯನ್ನು ತರುತ್ತದೆ. ಉದ್ಯಮದ ವಿಚಾರದಲ್ಲಿ ಹಿತಶತ್ರುಗಳ ಭಯ ಬಹಳವಾಗಿ ಕಾಡುತ್ತದೆ. ಕೃಷಿ ಕೆಲಸಗಳಿಗೆ ಸಮಯ ಸಿಗುವುದು.
ವೃಷಭ
ಸಂಪರ್ಕ ಸಂಬಂಧಿತ ಸಾಧನಗಳ ನಿರ್ವಹಣೆಯ ಕೊರತೆಯಿಂದ ಕೈಕೊಡುವ ಸಾಧ್ಯತೆ ಇದೆ. ಗುರುಗಳ ಮನಸ್ಸಿಗೆ ನೋವು ಉಂಟುಮಾಡುವಂಥ ಕೆಲಸ ಮಾಡದಿರಿ. ಸಂಗೀತ ಮತ್ತು ಕಲೆಯಲ್ಲಿ ಅಭಿರುಚಿ ಹೆಚ್ಚಲಿದೆ.
ಮಿಥುನ
ವೃತ್ತಿರಂಗದಲ್ಲಿ ಅನಿಶ್ಚಿತ ಸ್ಥಾನವು ನಿಷ್ಠೆಯ ನಡೆಯಿಂದಾಗಿ ನಿಶ್ಚಯವಾಗುತ್ತದೆ. ಪಾಲುದಾರಿಕೆಯನ್ನು ಮುಂದುವರಿಸುವ ಯೋಚನೆಯನ್ನು ಮಾಡಬಹುದು. ಅದರ ಬಗ್ಗೆ ಋಣಾತ್ಮಕವಾಗಿ ಚಿಂತಿಸದಿರಿ.
ಕರ್ಕಾಟಕ
ಹೂಡಿಕೆ ವಿಚಾರದಲ್ಲಿ ಆಳವಾಗಿ ಯೋಚಿಸಿ ತೀರ್ಮಾನ ಕೈಗೊಳ್ಳುವಂತೆ ಸಲಹೆ ಬರುವುದು. ದೈನಂದಿನ ಆಗುಹೋಗುಗಳ ಬಗ್ಗೆ ಗಮನಹರಿಸಿ. ಕ್ರೀಡೆಯಲ್ಲಿ ಜಯದ ಜತೆಗೆ ನೆಮ್ಮದಿ ನಿಮ್ಮದಾಗುತ್ತದೆ.
ಸಿಂಹ
ಮನುಷ್ಯ ಪ್ರಯತ್ನದ ಜತೆಯಲ್ಲಿ ದೇವರ ಕೃಪೆಗೆ ಪಾತ್ರರಾಗುವ ರೀತಿಯಲ್ಲಿ ನೆಡೆದುಕೊಂಡಾಗ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುವುದು. ಪರಿಚಯವೇ ಇಲ್ಲದ ವ್ಯಕ್ತಿಯು ಸಹಕಾರ ನೀಡುವರು.
ಕನ್ಯಾ
ಕಟ್ಟಡದ ಕಂಟ್ರಾಕ್ಟರ್‌ಗಳಿಗೆ ಕೆಲಸಗಾರರ ಕೊರತೆ ಕಾಣಲಿದೆ ಅಥವಾ ಪರಿಣತ ಕೆಲಸಗಾರರ ಗೈರುಹಾಜರಿಯಿಂದ ನಷ್ಟ ಸಂಭವಿಸುವುದು. ಪೊಲೀಸ್ ಸಿಬ್ಬಂದಿಗೆ ಕೆಲಸವಿರಲಿದೆ.
ತುಲಾ
ಕುಟುಂಬದವರೊಡನೆ ಸಂಜೆಯನ್ನು ಸಂತೋಷದಿಂದ ಕಳೆಯುವಂತಾಗಲಿದೆ. ತಾಳ್ಮೆಯಿಂದ ವರ್ತಿಸಿದಲ್ಲಿ ಉತ್ತಮ ಫಲಿತಾಂಶ ಪಡೆಯುವಿರಿ. ಕಣ್ಣು, ಕಿವಿಗೆ ಸಂಬಂಧಿಸಿದ ಸಮಸ್ಯೆ ಇದ್ದಲ್ಲಿ ವೈದ್ಯರನ್ನು ಭೇಟಿ ಮಾಡಿರಿ.
ವೃಶ್ಚಿಕ
ಗುರಿ ಸಾಧಿಸಲು ಅನಿವಾರ್ಯವಾಗಿರುವ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಉತ್ತಮ. ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಯೋಚಿಸಿ ಮುಂದಿನ ಹೆಜ್ಜೆ ಇಡುವುದು ಸೂಕ್ತ.
ಧನು
ಸಂಗಾತಿಯ ಅಗಲುವಿಕೆಯು ತಾತ್ಕಾಲಿಕವಾದುದು ಎಂಬುದನ್ನು ಅರಿತುಕೊಳ್ಳಿ. ಉತ್ಪ್ರೇಕ್ಷೆ ಎನ್ನಿಸುವ ಕೆಲವು ಹೊಗಳಿಕೆಯ ಮಾತುಗಳಿಗೆ ಮರುಳಾಗದಿರಿ. ಲೇವಾದೇವಿ ವ್ಯವಹಾರ ನಡೆಸುವವರು ವಿಶ್ರಾಂತಿ ಪಡೆಯಿರಿ.
ಮಕರ
ಮನೆ ನಿರ್ಮಾಣದ ಕೆಲಸ ಕಾರ್ಯಗಳಿಗೆ ಬೇಕಾದ ಸೂಕ್ತ ವ್ಯಕ್ತಿಯನ್ನು ಹುಡುಕುವಲ್ಲಿ ವಿಫಲರಾಗಲಿದ್ದೀರಿ. ಸ್ವಂತ ಊರಿನಲ್ಲಿ ಸ್ಥಾನಮಾನದಿಂದಾಗಿ ಹೆಚ್ಚಿನ ಗೌರವ ದೊರೆಯುವುದು.
ಕುಂಭ
ಜೀವನ ಶೈಲಿಯಲ್ಲಿ ಯಾವುದೇ ಬದಲಾವಣೆ ಬೇಡವೆಂದು ನಿಶ್ಚಯಿಸುವುದು ಉತ್ತಮ. ಸಂಗೀತ ಕಚೇರಿ, ನೃತ್ಯ ಕಾರ್ಯಕ್ರಮ ನೀಡುವ ಕಲಾವಿದರಿಗೆ ಬೇಡಿಕೆ ಹೆಚ್ಚಲಿದೆ. ಅಭದ್ರತೆಯ ಭಾವ ಬಿಟ್ಟು ಹೋಗಲಿದೆ.
ಮೀನ
ಅನಿರೀಕ್ಷಿತ ಘಟನೆಗಳಿಂದ ಇತರರ ಎದುರು ತಲೆತಗ್ಗಿಸಬೇಕಾದ ಪರಿಸ್ಥಿತಿ ಬರುವುದು. ಎಣ್ಣೆಯಲ್ಲಿ ಕರಿದ ಖಾದ್ಯಗಳ ಸೇವನೆಯಿಂದ ಅನಾರೋಗ್ಯ ಎದುರಾಗಬಹುದು.