ದಿನ ಭವಿಷ್ಯ: ಈ ರಾಶಿಯವರಿಗೆ ನೆಮ್ಮದಿ ಇರುವುದು
Published 18 ನವೆಂಬರ್ 2025, 0:20 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅದ್ಭುತವಾದ ಉಪನಿಷತ್ ವಾಕ್ಯಗಳ ಬಳಕೆಯನ್ನು ಮಾಡಿ ಪತ್ರಿಕೆಗೆ ಬರೆದ ಲೇಖನಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ಪಡೆಯುವಿರಿ. ಮೇಲಧಿಕಾರಿಗಳು ನಿರ್ಧಾರಗಳನ್ನು ಕೈಗೊಳ್ಳಲು ನಿಮ್ಮ ಇಚ್ಛೆಗೆ ಬಿಡುವರು.
ವೃಷಭ
ಕೆಲಸಗಳು ಸುಲಭವಾಗಿಸಲು ಸ್ನೇಹಿತರೊಬ್ಬರು ಆರ್ಥಿಕವಾಗಿ ನೆರವಾಗಲಿದ್ದಾರೆ. ಕರಕುಶಲ ವಸ್ತುಗಳ ತಯಾರಕರು ಉತ್ತಮ ಕೆಲಸಗಳಿಂದ ಆದಾಯ ಹೆಚ್ಚಿಸಿಕೊಳ್ಳಬಹುದು.
ಮಿಥುನ
ಹಿರಿಯರ ಆಶೀರ್ವಾದದ ಮೇರೆಗೆ ವೈದ್ಯ ವೃತ್ತಿಯನ್ನು ಆರಂಭಿಸುವ ಸಲುವಾಗಿ ಸ್ನೇಹಿತರೊಂದಿಗೆ ಸ್ಥಳದ ಅನ್ವೇಷಣೆ ಮಾಡುವಿರಿ. ಬಂಧುಗಳು ಮತ್ತು ಸ್ನೇಹಿತರಿಂದ ಮಾರ್ಗದರ್ಶನಕ್ಕೆ ಕೊರತೆ ಇರದು.
ಕರ್ಕಾಟಕ
ಅಂದುಕೊಂಡಿರುವ ಕೆಲಸಗಳು ಉತ್ತಮವಾಗಿ ನೆರವೇರುವುದರಿಂದ ನೆಮ್ಮದಿ ಇರುವುದು. ಪದವಿ ವಿದ್ಯಾರ್ಥಿಗಳ ಅತಿರೇಕದ ವರ್ತನೆಗಳನ್ನು ಹಲವು ಬಾರಿ ಶಿಕ್ಷಕರು ಗಮನಿಸಿ ಕಠಿಣ ಕ್ರಮವನ್ನು ಕೈಗೊಳ್ಳುವ ಸಾಧ್ಯತೆ ಇದೆ.
ಸಿಂಹ
ನ್ಯಾಯಾಂಗ ವಿಭಾಗದ ವಿದ್ಯಾರ್ಥಿಗಳಿಗೆ ಓದಿನಲ್ಲಿ ಇಂದಿನಿಂದ ವಿಶೇಷ ಆಸಕ್ತಿ ಮೂಡುವುದು. ಮುಗ್ಧವಾದ ಮಕ್ಕಳಂತಹ ನಿಮ್ಮ ವರ್ತನೆಯಿಂದಾಗಿ ಇಂದು ಹಲವರಿಗೆ ಸಹಾಯವಾಗುವುದು.
ಕನ್ಯಾ
ದಾಂಪತ್ಯದಲ್ಲಿ ಬಿರುಕು ಬಾರದಂತೆ ಅನ್ಯೋನ್ಯತೆ ಕಾಪಾಡಿಕೊಳ್ಳುವು ಜವಾಬ್ದಾರಿಯಾಗಿರುತ್ತದೆ. ಹೊಸ ಜಾಗಕ್ಕೆ ಬಂದು ಸಾಮಾಜಿಕ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ಆಗುತ್ತದೆ.
ತುಲಾ
ಯೋಜನೆಗಳು ಕಾರ್ಯಗತಗೊಳ್ಳಲು ಪ್ರಯತ್ನ ನಡೆಸಬೇಕಾಗುವುದು. ಕಾರ್ಯಕ್ಷೇತ್ರದಲ್ಲಿ ಸಹವರ್ತಿಗಳ ಜತೆ ಉತ್ತಮ ಸಂಪರ್ಕವನ್ನು ಬೆಳೆಸಿಕೊಳ್ಳುವುದು ಸುಲಭ ಸಾಧ್ಯವಾಗುವುದು.
ವೃಶ್ಚಿಕ
ಮನುಷ್ಯ ಪ್ರಯತ್ನದ ಜತೆ ಮಹಾಗಣಪತಿಯ ಮೊರೆ ಹೋಗುವುದರಿಂದ ಕಾರ್ಯಸಿದ್ಧಿಯಾಗಲಿದೆ. ನೀವೇ ವಿಮರ್ಶಿಕೊಂಡರೆ ನಿಮ್ಮ ನಡವಳಿಕೆಯ ತಪ್ಪುಗಳ ಅರಿವಾಗುವುದು.
ಧನು
ಸಂಗೀತ ಕ್ಷೇತ್ರದಲ್ಲಿ ನೀವಂದುಕೊಂಡ ಸಾಧನೆಯನ್ನು ಮಾಡಲಾಗದೆ ಮನಸ್ಸಿನಲ್ಲಿ ದುಃಖವನ್ನು ಅನುಭವಿಸುವಿರಿ. ಮನೆಯಲ್ಲಿ ಶುಭ ಕಾರ್ಯಗಳ ತಯಾರಿ ಉತ್ತಮ ರೀತಿಯಲ್ಲಿ ನಡೆಯುವುದು.
ಮಕರ
ದನ, ಕರುಗಳ ಅಥವಾ ಮನೆಯಲ್ಲಿ ಸಾಕಿರುವ ಪ್ರಾಣಿಗಳ ಆರೋಗ್ಯ ತಪಾಸಣೆ ಮಾಡಿಸುವಿರಿ. ಮಂದಿರದ ಭೇಟಿ ಹಾಗೂ ದೇವರ ದರ್ಶನವನ್ನು ಮಾಡುವಿರಿ. ಕುಟುಂಬ ನಿರ್ವಹಣೆಗೆ ಒಡಹುಟ್ಟಿದವರಿಂದ ಸಹಕಾರ .
ಕುಂಭ
ಸಮಸ್ಯೆಗಳು ಏನೇ ಇದ್ದರೂ ಸಮಾಧಾನವಾಗಿ ಎಲ್ಲರ ಬಳಿ ನಗು ಮೊಗದಿಂದ ವರ್ತಿಸಿ. ವ್ಯವಹಾರದಲ್ಲಿ ತಪ್ಪುಗಳಾಗದಂತೆ ಜಾಗರೂಕತೆ ವಹಿಸಿರಿ.
ಮೀನ
ಹವಾಮಾನ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಕೆಲಸವನ್ನು ಉಳಿಸಿಕೊಳ್ಳಲು ಸಾಹಸ ಮಾಡಬೇಕಾಗಬಹುದು. ಹವ್ಯಾಸಿ ಬರಹಗಾರರಿಗೆ ಉತ್ತಮ ವೇದಿಕೆ ದೊರಕುವುದು.