ಕೋಲ್ಕತ್ತ: ಭಾರತ ತಂಡದ ಸಾರಥ್ಯ ವಹಿಸಿದ್ದ ಅವಧಿಯಲ್ಲಿ ಸಾಕಷ್ಟು ಹೆಸರು ಮಾಡಿದ್ದರೂ ವಿರಾಟ್ ಕೊಹ್ಲಿ ಅವರು ಒಂದು ವಿಷಯದಲ್ಲಿ ಅಪಥ್ಯವಾಗುವ ನಡೆ ಅನುಸರಿಸಿದ್ದರು. ಅದು– ನಾಯಕರಾಗಿದ್ದ 38 ಟೆಸ್ಟ್ಗಳಲ್ಲಿ ಅವರು ಸತತ ಎರಡು ಪಂದ್ಯಗಳಲ್ಲಿ ಒಮ್ಮೆಯೂ ಒಂದೇ ತಂಡ ಉಳಿಸಿಕೊಂಡಿರಲಿಲ್ಲ.

ಪರಿಸ್ಥಿತಿಗೆ ಅನುಗುಣವಾಗಿ, ಎದುರಾಳಿ ತಂಡದ ಸಾಮರ್ಥ್ಯ, ದೌರ್ಬಲ್ಯಗಳನ್ನು ಗಮನಿಸಿ ತಂಡ ಆಯ್ಕೆ ಮಾಡುವುದು ಸಾಮಾನ್ಯ. ಆದರೆ ಕೊಹ್ಲಿ ಅವರ ವರ್ತನೆ ಆಟಗಾರರಲ್ಲಿ ಪ್ರಶ್ನಾರ್ಥಕ ಚಿಹ್ನೆ ಮೂಡಿಸುತ್ತಿತ್ತು. ಕೆಲವೊಮ್ಮೆ ಅದು ಮೂಢನಂಬಿಕೆ ಎನಿಸಿದ್ದೂ ಇದೆ. ಇದರಿಂದ ಅವರ ಅವಧಿಯಲ್ಲಿ ಟೆಸ್ಟ್ ಪಂದ್ಯ ನಡೆಯುವ ಮೊದಲು ಅಭಿಮಾನಿಗಳಿಗೆ ಕುತೂಹಲ ಇರುತ್ತಿತ್ತು.

ಈಗ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರಕರ್ ಅವರ ಅವಧಿಯಲ್ಲೂ ಆಟಗಾರರು ತಮ್ಮ ಮುಂದಿನ ಪಂದ್ಯ ಅಥವಾ ಸರಣಿ ಯಾವಾಗ ಎಂದು ಆತಂಕದಿಂದ ಕಾಯುವಂತಾಗಿದೆ.

ವರ್ಷದಿಂದ ಆಡುವ ಇಲೆವೆನ್ನಲ್ಲಿ ಪದೇ ಪದೇ ಬದಲಾವಣೆಗಳಾಗುತ್ತಿವೆ. ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ; ಬೆಂಚ್ಗೆ ಸೀಮಿತಗೊಳಿಸಲಾಗುತ್ತಿದೆ.
ಸ್ಪಷ್ಟತೆಯಿಲ್ಲದೇ ಕೈಬಿಡಲಾಗುವ ಪರಿಪಾಟ ಹೆಚ್ಚುತ್ತಿದೆ. ಹಾಗೆ ನೋಡಿದರೆ, ಗಂಭೀರ್ ಮತ್ತು ಅಗರಕರ್ ಇಬ್ಬರೂ ಅಂತರರಾಷ್ಟ್ರೀಯ ಆಟಗಾರರಾಗಿ ಹೆಸರು ಮಾಡಿದವರು. ಆದರೆ ಅವರು ತಮ್ಮ ಪಾತ್ರಗಳನ್ನು ನಿರ್ವಹಿಸುತ್ತಿರುವ ರೀತಿ ನೋಡಿದರೆ, ತಂಡದೊಳಗಿರುವ ಮತ್ತು ತಂಡದ ಕದ ತಟ್ಟುತ್ತಿರುವ ಆಟಗಾರರಿಗೆ ಸ್ಥಾನದ ಖಚಿತತೆ ಇಲ್ಲ. ಭವಿಷ್ಯದಲ್ಲಿ ತಮ್ಮ ಸ್ಥಾನವೇನು ಎಂಬ ಅಭದ್ರತೆಯೂ ಕಾಡುತ್ತಿದೆ. ತಂಡದ ಆಡಳಿತ ನೀಡುವ ಸಂದೇಶಗಳೂ ಒಂದೇ ರೀತಿ ಇರುವುದಿಲ್ಲ.

ನಿತೀಶ್ ಕುಮಾರ್ ರೆಡ್ಡಿ ಅವರು ವೇಗದ ಬೌಲಿಂಗ್ ಆಲ್ರೌಂಡರ್ ಆಗಿ ಸ್ಥಾನ ಪಡೆದಿದ್ದರು. ಆದರೆ ಅವರಿಗೆ ಯಾವುದೇ ವಿಭಾಗಗಳಲ್ಲಿ ಪಾತ್ರ ನಿಭಾಯಿಸುವ ಅವಕಾಶ ದೊರೆಯಲಿಲ್ಲ. ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಅವರ ಬಗ್ಗೆ ಅನುಕಂಪ ತೋರಿದ್ದರು. ಆದರೆ ಗಂಭೀರ್ ಅಂಥ ವ್ಯಕ್ತಿಯಲ್ಲ. ತಂಡದ ಭಾಗವಾಗಿದ್ದರೂ ಅದರಿಂದ ಬೆಳವಣಿಗೆ ಕಂಡುಕೊಳ್ಳಬಹುದು ಎನ್ನುವ ಅನಿಸಿಕೆಯುಳ್ಳವರು.

ಪರಿಣತ ಸ್ಪಿನ್ನರ್ ಕುಲದೀಪ್ ಯಾದವ್ ಅವರಿಗೆ ಇಂಗ್ಲೆಂಡ್ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಅವಕಾಶವೇ ಸಿಗಲಿಲ್ಲ. ಅವರನ್ನು ನಿರ್ಲಕ್ಷಿಸಿ, ಎರಡು ಮತ್ತು ನಾಲ್ಕನೇ ಟೆಸ್ಟ್ಗಳಲ್ಲಿ ದಿಢೀರನೇ ಶಾರ್ದೂಲ್ ಠಾಕೂರ್ ಅವರಿಗೆ ಅವಕಾಶ ಕೊಟ್ಟರೂ, ಸರಿಯಾಗಿ ದುಡಿಸಿಕೊಳ್ಳಲಿಲ್ಲ.

ತಂಡದ ಚಿಂತಕರ ಚಾವಡಿಯ ಯೋಚನಾ ಕ್ರಮ ಮತ್ತು ನಿರ್ಧಾರಗಳು ನಿರಂಕುಶ ರೀತಿಯಲ್ಲಿದ್ದು, ಆಟಗಾರರಲ್ಲಿ ಅನಿಶ್ಚಿತತೆಯ ವಾತಾವರಣ ಮೂಡಿಸಿದೆ. 34ರ ವಯಸ್ಸಿನಲ್ಲಿ ಕರುಣ್ ನಾಯರ್ ಅವರು ದೀರ್ಘಾವಧಿಯ ಆಯ್ಕೆಯಾಗಿರಲಿಲ್ಲ. ಆದರೆ ಅವರನ್ನು ಆಡಿಸುವಾಗಲೂ ಅವರ ಕ್ರಮಾಂಕಗಳನ್ನು ಪದೇ ಪದೇ ಬದಲಾಯಿಸಲಾಯಿತು. ಕೊನೆಯ ಅವಕಾಶದಲ್ಲಿ ಅವರು ಅರ್ಧ ಶತಕ ಹೊಡೆದರೂ ಅಷ್ಟರಲ್ಲಿ ತಡವಾಗಿತ್ತು. ರಾಜ್ಯ ತಂಡಕ್ಕೆ ಮರಳಿದ ನಂತರ ಅವರು ಮತ್ತೆ ಶತಕಗಳನ್ನು ಬಾರಿಸುತ್ತಿದ್ದಾರೆ.

ಸಾಯಿ ಸುದರ್ಶನ್ ಕಥೆ ಬೇರೆ ಯಲ್ಲ. ಅವರು ಮೂರನೇ ಕ್ರಮಾಂಕಕ್ಕೆ ಯೋಗ್ಯ ಆಟಗಾರ ಎಂದು ಅವರಿಗೆ ವೆಸ್ಟ್ ಇಂಡೀಸ್ ವಿರುದ್ಧದ ಈ ಹಿಂದಿನ ಸರಣಿಯವರೆಗೆ ಅವಕಾಶ ನೀಡ ಲಾಯಿತು. ಆದರೆ ಕೋಲ್ಕತ್ತದಲ್ಲಿ ಅವರು ಆಡುವ ತಂಡದಿಂದ ಹೊರಬಿದ್ದರು. ಕೋಲ್ಕತ್ತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ನಲ್ಲಿ ತಂಡದ ಆಡಳಿತವು ನಾಲ್ವರು ಸ್ಪಿನ್ನರ್ಗಳನ್ನು ಆಡಿಸಲು ತೀರ್ಮಾನಿಸಿತು. ನಾಲ್ಕನೇ ಸ್ಪಿನ್ನರ್– ಆಲ್ರೌಂಡರ್ ಆಗಿ ಅವಕಾಶ ಪಡೆದ ವಾಷಿಂಗ್ಟನ್ ಸುಂದರ್ ಅವರು ಇಡೀ ಪಂದ್ಯದಲ್ಲಿ ಮಾಡಿದ್ದು ಒಂದೇ ಓವರ್! ಬಯಸಿದಂಥ ಪಿಚ್ನಲ್ಲಿ ನಾಲ್ವರು ಸ್ಪಿನ್ನರ್ ಗಳನ್ನು ನೀಡಿದರೆ, ನಾಯಕನಾದವರು ಏನು ತಾನೇ ಮಾಡಬಹುದು?

ಇನ್ನು ಸರ್ಫರಾಜ್ ಖಾನ್ ಅವರನ್ನು ಆಸ್ಟ್ರೇಲಿಯಾ ಪ್ರವಾಸದಲ್ಲಿ ಒಂದೂ ಪಂದ್ಯ ಆಡಿಸದೇ ಹೊರಗಿಡಲಾಯಿತು. ಶಮಿ ಅವರ ಅಂತರರಾಷ್ಟ್ರೀಯ ಪುನರಾಗಮನ ಬಗ್ಗೆಯೂ ತಂಡ ಏನೂ ಹೇಳುತ್ತಿಲ್ಲ. ಆಗುಹೋಗುಗಳು ಒಬ್ಬಿಬ್ಬರ ಮರ್ಜಿಯಲ್ಲಿದ್ದರೆ, ಅದು ಭಾರತದ ಕ್ರಿಕೆಟ್ ಭವಿಷ್ಯದ ದೃಷ್ಟಿಯಿಂದ ಸಕಾರಾತ್ಮಕ ಬೆಳವಣಿಗೆಯಲ್ಲ.

ಟೆಸ್ಟ್ ಕ್ರಿಕೆಟ್ನ ನಾಶ: ಹರಭಜನ್ ಕಿಡಿ

ಈಡನ್ಗಾರ್ಡನ್ನಲ್ಲಿ ಬಳಕೆಯಾದ ಪೂರ್ಣವಾಗಿ ಸಿದ್ಧಪಡಿಸದಂಥ ಮತ್ತು ಬೌಲರ್ ಸ್ನೇಹಿ ಪಿಚ್ಗಳು, ಆಟಗಾರರ ನೈಜ ಅಭಿವೃದ್ಧಿಗೆ ತಡೆಯಾಗುತ್ತವೆ ಎಂದು ಭಾರತ ತಂಡದ ಮಾಜಿ ಸ್ಪಿನ್ನರ್ ಹರಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ‘ಇದು ಟೆಸ್ಟ್ ಕ್ರಿಕೆಟ್ನ ವಿನಾಶ’ ಎಂದೂ ಟೀಕಿಸಿದ್ದಾರೆ.

ಇಂಥ ಪಿಚ್ ಸಿದ್ಧಪಡಿಸಿ ‘ಅವರು ಟೆಸ್ಟ್ ಕ್ರಿಕೆಟ್ಅನ್ನು ಸಂಪೂರ್ಣ ನಾಶಗೊಳಿಸಿದ್ದಾರೆ. ರೆಸ್ಟ್ ಇನ್ ಪೀಸ್ (ಚಿರವಿಶ್ರಾಂತಿ) ಟೆಸ್ಟ್ ಕ್ರಿಕೆಟ್’ ಎಂದು ಸಿಂಗ್ ಯೂಟ್ಯೂಬ್ ಚಾನೆಲ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಹಲವು ವರ್ಷಗಳಿಂದ ಈ ರೀತಿಯಾಗುತ್ತಿದೆ. ಇದನ್ನುನೋಡುತ್ತ ಬಂದಿದ್ದೇನೆ. ತಂಡ ಗೆಲ್ಲುತ್ತಿದ್ದ ಕಾರಣ, ಬೌಲರ್ಗಳು ವಿಕೆಟ್ ಪಡೆಯುತ್ತಿದ್ದ ಕಾರಣ ಯಾರೂ ಇದರ ವಿರುದ್ಧ ಮಾತನಾಡುತ್ತಿಲ್ಲ. ಇಂಥ ಪಿಚ್ಗಳಲ್ಲಿ ವಿಕೆಟ್ಗಳನ್ನು ಪಡೆಯುವ ಮೂಲಕ ಬೌಲರ್ ಮಹಾನ್ ಎನಿಸಿಕೊಳ್ಳುತ್ತಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.